ವಿಷಯಕ್ಕೆ ಹೋಗು

ಕಜಂಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಜಂಬು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ನಲ್ಲಿ ನಡೆಯುವ ಉಳ್ಳಾಲ್ತಿ ದೇವಿಯ ಹಬ್ಬವನ್ನು ಕಜಂಬು ಎಂದು ಕರೆಯಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಾರಾಧನೆ ಮತ್ತು ಭೂತಾರಾಧನೆಗೆ ವಿಶೇಷ ಸ್ಥಾನವಿದ್ದು, ಈ ಜಿಲ್ಲೆಯ ಪ್ರತಿಯೊಂದು ಭಾಗದಲ್ಲೂ ವಿಶೇಷ ಆಚರಣೆಗಳು ಚಾಲ್ತಿಯಲ್ಲಿವೆ. ಇಂತಹ ವಿಚಿತ್ರ ಆಚರಣೆಗಳಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೇಪು ಉಳ್ಳಾಲ್ತಿ ದೇವಸ್ಥಾನದ ಪೂಜೆಯೂ ಪ್ರಮುಖವಾಗಿದೆ. ಇಲ್ಲಿ "ಕಜಂಬು ಉತ್ಸವ" ಎಂಬ ವಿಶೇಷ ಹಬ್ಬವಿದೆ. ಈ ಹಬ್ಬದಲ್ಲಿ ಮಧ್ಯರಾತ್ರಿ ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ದೇವರಿಗೆ ಅರ್ಪಿಸುವ ಪದ್ಧತಿ ಸುತ್ತಮುತ್ತಲಿನ ಸಮುದಾಯಗಳಲ್ಲಿ ಆಚರಣೆಯಲ್ಲಿದೆ. ಈ ಆಚರಣೆಯಲ್ಲಿ ಸಾವಿರಾರು ಮಕ್ಕಳನ್ನು ದೇವರಿಗೆ ಸಮರ್ಪಿಸಲಾಗಿದೆ. ಇದು ದಕ್ಷಿಣ ಕನ್ನಡದ ಭೂತಾರಾಧನೆ ಮತ್ತು ದೈವಾರಾಧನೆಗೆ ಸಂಬಂಧಿಸಿದ ವಿಭಿನ್ನ ಕಾರ್ಯಕ್ರಮವಾಗಿದ್ದು, ಪ್ರಾಚೀನ ಕಾಲದಿಂದಲೂ ಈ ಜಿಲ್ಲೆಯ ಜನರು ತಮ್ಮ ಪ್ರಾಚೀನ ಆಚರಣೆಗಳನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ.[] ಕೇಪು ಗ್ರಾಮದ ಗ್ರಾಮ ದೇವತೆ ಉಳ್ಳಾಲ್ತಿ, ಅವಳಿಗೆ ಧನು ಸಂಕ್ರಾಂತಿಯ ದಿನದಂದು ನಡೆಯುವ ಹಬ್ಬವೇ ಕೇಪು ಕಜಂಬು. ಈ ದಿನ, ಚಿಕ್ಕ ಮಕ್ಕಳನ್ನು ದೇವರಿಗೆ ಅರ್ಪಿಸಿ ಆ ಬಳಿಕ ದೇವಿಯಿಂದ ಮಕ್ಕಳಿಗೆ ನೈವೇದ್ಯವನ್ನು ಸ್ವೀಕರಿಸಲಾಗುತ್ತದೆ. ಮಗುವಿನಿಂದ ತಾಯಿಯು ಕಜಂಬು ಸ್ವೀಕರಿಸುವ ಮೂಲಕ ಮಕ್ಕಳಿಗೆ ಅದೃಷ್ಟವನ್ನು ನೀಡುತ್ತಾಳೆ ಎಂದು ನಂಬಲಾಗಿದೆ. 16 ಗ್ರಾಮಗಳ 16 ದೈವಗಳ ಸಮೇತ ಕೇಪುವಿನ ಉಳ್ಳಾಲ್ಡಿ ತಾಯಿಯ ಗುಡಿಯು 800 ವರ್ಷಗಳಷ್ಟು ಹಳೆಯದು. ಇದು ವಿಟ್ಲ ಅರಮನೆಯ ರಾಜನ ಆಶ್ರಯದಲ್ಲಿ ನಡೆಯುತ್ತಿದೆ.[]

ಇತಿಹಾಸ

[ಬದಲಾಯಿಸಿ]

ಸುಮಾರು ವರ್ಷಗಳ ಹಿಂದೆ ಇಟ್ಟೆಲಿನ ಅರಮನೆಯಲ್ಲಿ ಎಲ್ಯಕ್ಕೆ ನೆಲ್ಯಕ್ಕೆ ಎಂಬ ವ್ಯಕ್ತಿ ಇದ್ದ. ಈಗ ದೇವಾಲಯವಿರುವ ಪ್ರದೇಶವು ಈ ಅರಮನೆಯ ಆಳ್ವಿಕೆಗೆ ಒಳಪಟ್ಟಿತ್ತು. ಆದರೆ ಈ ಸ್ಥಳದಲ್ಲಿ ನಿಧಿ ಇದೆ ಎಂದು ತಿಳಿದ ಅಬ್ಬರ್ಲು ತಮ್ಮ ನಲವತ್ತು ಮಂದಿ ಮುಖ್ಯಸ್ಥರನ್ನು ನಿಧಿ ಕದಿಯಲು ಕಳುಹಿಸಿದರು. ಆಗ ನಿಧಿಗೆ ಬಂದ ನಲವತ್ತು ಜನರು ನಿಧಿಯನ್ನು ಕಾವಲು ಕಾಯುತ್ತಿದ್ದ ವನದುರ್ಗೆಯ ಕಾರಣದಿಂದ ಮಾಯವಾದರು. ಅಬ್ಬರ್ಲೆ ಸ್ವತಃ ಸ್ಥಳಕ್ಕೆ ಬಂದಾಗ, ದೇವರಿಂದಾಗಿ ಅವನೂ ಮಾಯವಾದನು ಎಂದು ಕಥೆ ನಮಗೆ ಹೇಳುತ್ತದೆ. ಆದುದರಿಂದ ಅರಮನೆಯಲ್ಲಿ ಹುಟ್ಟುವ ಪ್ರತಿ ಮಗುವನ್ನು ದೇವರಿಗೆ ಒಪ್ಪಿಸಿ ಪ್ರಸಾದ ರೂಪದಲ್ಲಿ ಮರಳಿ ಸ್ವೀಕರಿಸಬೇಕೆಂಬ ಪದ್ಧತಿಯನ್ನು ಅಂದಿನ ರಾಜರು ರೂಢಿಸಿಕೊಂಡಿದ್ದರು. ಹೀಗೆ ಆರಂಭದಲ್ಲಿ ಇಟ್ಟೆಲ್ ಅರಮನೆಯ ಮಕ್ಕಳಿಗಾಗಿಯೇ ಮೀಸಲಾಗಿದ್ದ ಕಜಂಬು ಆಚರಣೆ ಸಮಾಜದ ಎಲ್ಲ ವರ್ಗದವರಿಗೂ ಹಬ್ಬಿ ಬೆಳೆಯಿತು. ಇಂದು, ಮಕ್ಕಳ ಆರೋಗ್ಯ ಮತ್ತು ಉತ್ತಮ ಬೆಳವಣಿಗೆಯ ಆಶಯದಲ್ಲಿ ಇದನ್ನು ಮಾಡಲಾಗುತ್ತದೆ.

ನಂಬಿಕೆ

[ಬದಲಾಯಿಸಿ]
  • ದೇವರ ನೇಮದ ಸಮಯದಲ್ಲಿ ಮತ್ತು ನೆರಿಯನ್ನು ಇಳಿಸುವ ಸಮಯದಲ್ಲಿ ಸ್ತ್ರೀಯರನ್ನು ನೋಡಬೇಡಿ.
  • ದೇವರ ಸೇವಕರು ಬಹಳ ಜಾಗರೂಕರಾಗಿರಬೇಕು
  • ಉಳ್ಳಾಲ್ದಿನ ಸಂಭಂದ ಪಟ್ಟ ಜಾಗದಲ್ಲಿ ಸಂತೆ ವ್ಯಾಪಾರ ಆಗುವಂತಿಲ್ಲ.
  • ಬೇರೆ ಕಡೆಯಿಂದಲೇ ಮಲ್ಲಿಗೆ ಹೂ ತರಬೇಕು

[]

ಉಳ್ಳಾಲ್ತಿ ಸ್ಥಳಗಳು

[ಬದಲಾಯಿಸಿ]

ಉಳ್ಳಾಲ್ದಿಗೆ ಐವರು ಸಹೋದರಿಯರಿದ್ದಾರೆ. ಬಂಟ್ವಾಳದ ಮಾಣಿ, ಕೆಲಿಂಜ, ಅನಂತಾಡಿ ಮತ್ತು ಬಲ್ನಾಡಿನಲ್ಲಿ ಇವರ ದೇವಾಲಯಗಳಿವೆ. ಕೇಪುವಿನ ಉಳ್ಳಾಲ್ದಿಎರಡನೇ ಸಹೋದರಿ ಎಂದು ನಂಬಲಾಗಿದೆ. ಇಲ್ಲಿ ಉಳ್ಳಾಲ್ಡಿ ತಾಯಿಯ ಜೊತೆ ಮಲರಾಯ, ಪಿಲಿಚಂಡಿ ದೈವಗಳು ಬಹಳ ಕಲೆ ಕಾರ್ಣಿಕವನ್ನು ತೋರಿಸುತ್ತಾ ಇದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "ಹಸುಳೆಗಳನ್ನು ದೈವಗಳಿಗೆ ಸಮರ್ಪಿಸುವ ವಿಶಿಷ್ಟ ಆಚರಣೆಯ ಕಜಂಬು ಉತ್ಸವ". News18 ಕನ್ನಡ. 17 December 2021.
  2. "ಕೇಪು: ದೇವರಿಗೆ ಸಹಸ್ರಾರು ಮಕ್ಕಳ ಹರಕೆ 'ಕಜಂಬು' ಸಂದಾಯ". Vijay Karnataka.
  3. "ಕೇಪು ಕಜಂಬು ಜಾತ್ರೋತ್ಸವ ಸಂಪನ್ನ: ಸಹಸ್ರಾರು ಮಕ್ಕಳು ಹರಕೆ ರೂಪದಲ್ಲಿ ದೇವಿಗೆ ಸಾಂಕೇತಿಕ ಸಮರ್ಪಣೆ". 19 December 2019.
"https://kn.wikipedia.org/w/index.php?title=ಕಜಂಬು&oldid=1244552" ಇಂದ ಪಡೆಯಲ್ಪಟ್ಟಿದೆ