ವಿಷಯಕ್ಕೆ ಹೋಗು

ಕಂದಾವರ ರಘುರಾಮ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ರಾಜ್ಯದ ಯಕ್ಷಗಾನ ರಸಿಕರಿಗೆಲ್ಲಾ ಚಿರಪರಿಚಿತರಾಗಿರುವ, ’ಕಂದಾವರ ರಘುರಾಮ ಶೆಟ್ಟಿ’ ಯವರು, ಒಬ್ಬ ಖ್ಯಾತ ಶಿಕ್ಷಕ, ಯಕ್ಷಗಾನ ಪ್ರಸಂಗ ಕರ್ತ, ಅರ್ಥಧಾರಿ, ಹವ್ಯಾಸಿ ನಾಟಕ ಕಲಾವಿದ, (ವೇಶಧಾರಿ). ಶ್ರೀ. ರಘುರಾಮ ಶೆಟ್ಟಿಯವರು ಯಕ್ಷಗಾನ ವಲಯದಲ್ಲಿ ಕಂದಾವರದವರು ಯೆಂಬ ಹೆಸರಿನಿಂದ ಪ್ರಸಿದ್ಧರು.

ಕಂದಾವರರ ಜನನ ಮತ್ತು ಬಾಲ್ಯ

[ಬದಲಾಯಿಸಿ]

ಕಂದಾವರ ರಘುರಾಮ ಶೆಟ್ಟಿಯವರು ದಕ್ಷಿಣ ಕನ್ನಡದ ಕುಂದಾಪುರ ತಾಲ್ಲೂಕಿನ 'ಬಳ್ಕೂರು ಗ್ರಾಮ'ದ 'ಕಂದಾವರ'ದಲ್ಲಿ ೧೯೩೬ ರಲ್ಲಿ ಜನಿಸಿದರು. ಅವರ ತಂದೆ, ಕರ್ಕಿ ಸದಿಯಣ್ಣ ಶೆಟ್ಟಿಯವರು. ತಾಯಿ ಕಂದಾವರ ಪುಟ್ಟಮ್ಮನವರು. ಈಗ ಶ್ರೀಯುತರು, ತಮ್ಮ ಪತ್ನಿ, ಮಕ್ಕಳು ಮೊಮ್ಮಕ್ಕಳ ಸಂಗದಲ್ಲಿ ನೂಜಾಡಿ ಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ತಮ್ಮ ಆರಂಭದ ಬದುಕಿನಲ್ಲಿ ’ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕರಾಗಿ, ಮುಖ್ಯೋಪಾಧ್ಯರಾಗಿ, ಸುಮಾರು ೩೫ ವರ್ಷಗಳ ಕಾಲ ಸೇವೆ ಮಾಡಿರುವ ಕಂದಾವರ ರಘುರಾಮ ಶೆಟ್ಟಿಯವರು, ’ಮಾದರೀ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಳೆ ಪ್ರಾಯದಿಂದಲೂ ಸಾಹಿತ್ಯ,ಸಂಗೀತ,ಯಕ್ಷಗಾನಗಳಬಗೆಗೆ, ವಿಶೇಷ ಒಲವು ಆಸಕ್ತಿಗಳನ್ನು ತಳೆದ ಕಂದಾವರ ರಘುರಾಮ ಶೆಟ್ಟಿಯವರು ವಿದ್ಯಾರ್ಥಿದೆಶೆಯಲ್ಲೇ ’ಮಕ್ಕಳ ಯಕ್ಷಗಾನಕ್ಕೆ ಭಾಗವತಿಗೆ’ ಮಾಡಿ ’ಬಾಲ ಭಾಗವತ’ನೆಂಬ ಖ್ಯಾತಿಪ್ರಾಪ್ತಿಗೆ ಪಾತ್ರರಾದರು. ದಿವಂಗತ ಎಂ. ಎಂ. ಹೆಗ್ಡೆ ಯವರ ಕೂಟದಲ್ಲಿ ಹವ್ಯಾಸಿ ವೇಶಧಾರಿಯಾಗಿ ಪಾತ್ರನಿರ್ವಹಣೆ ಮಾಡುತ್ತಿದ್ದರು. ಸ್ವತಃ ಉತ್ತಮ ಅರ್ಥಧಾರಿಯಾದ ಕಂದಾವರ ರಘುರಾಮ ಶೆಟ್ಟಿಯವರು, ಬೇರೆ ಅರ್ಥಧಾರಿಗಳ ಜೊತೆಗೂಡಿ ’ತಾಳಮದ್ದಲೆ’ಯಲ್ಲಿ ಪಾಲ್ಗೊಂಡಿದ್ದರು.

'ಯಕ್ಷಗಾನ-ಪ್ರಸಂಗ ರಚನೆಯ ಕೃಷಿ', ಶುರುವಾಗಿದ್ದು ೧೯೭೮ ರಿಂದ

[ಬದಲಾಯಿಸಿ]

೧೯೭೮ ರಿಂದ ಆರಂಭವಾದ ಈ ಪ್ರಸಂಗ -ಕೃಷಿ, ಇದುವರೆಗೆ ೨೮ ಪ್ರಸಂಗಗಳ ಗುಚ್ಛವಾಗಿದೆ. ಕಂದಾವರರು ಇವನ್ನೆಲ್ಲಾ ಒಟ್ಟುಗೂಡಿಸಿಬರೆದು 'ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ'ಯಾಗಿ ಸಮರ್ಪಿಸಿದ್ದಾರೆ.

  • ಚೆಲುವೆ ಚಿತ್ರಾವತಿ
  • ರತಿ ರೇಖಾ
  • ಶ್ರೀ ದೇವಿ ಬನಶಂಕರಿ
  • ಶೂದ್ರ ತಪಸ್ವಿನಿ

ಇವೆಲ್ಲಾ ದಾಖಲೆಯ ಪ್ರದರ್ಶನಗಳನ್ನು ಜನಪ್ರಿಯತೆಯನ್ನೂ ಗಳಿಸಿವೆ. ಮತ್ತೊಂದು ವಿಶೇಷವೆಂದರೆ, 'ಬಡಗು ತಿಟ್ಟಿನ ಎಲ್ಲಾ ಮೇಳಗಳೂ' 'ತೆಂಕುತಿಟ್ಟಿನ ಧರ್ಮ ಸ್ಥಳ, ಕಟೀಲು ಮೇಳದವರು' ಈಗಲೂ ಶ್ರದ್ಧಾಸಕ್ತಿಗಳಿಂದ ಆಡಿ ಸಂಭ್ರಮಿಸುತ್ತಿದ್ದಾರ‍ೆ. ಕಂದಾವರರ ಅಪಾರ ಅನುಭವ ಮತ್ತು ಬುದ್ಧಿಮತ್ತೆಗೆ ಸಾಕ್ಷಿಯಾಗಿ, ಆಯ್ದ ಪ್ರಸಂಗಗಳ ಸಂಕಲನ, ’ದಶಮಿ’ ಪ್ರಕಾಶನಗೊಂಡಿವೆ,

'ರಂಗಭೂಮಿಯಲ್ಲಿ ನಾಟಕಾಭಿನಯ' ರಘುರಾಮಶೆಟ್ಟಿಯವರಿಗೆ ಮುದಕೊಡುವ ಮತ್ತೊಂದು ಹವ್ಯಾಸ

[ಬದಲಾಯಿಸಿ]

ನೂರಾರು ನಾಟಕಗಳಲ್ಲಿ ಹಾಸ್ಯದ ಪಾತ್ರವಹಿಸಿ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಕೆಲವು ಕಂಪೆನಿ ನಾಟಕಗಳಲ್ಲಿ ’ಗೌರವನಟ’ರಾಗಿ ರಂಗಮಂಚದಮೇಲೆ ಕಾಣಿಸಿಕೊಂಡಿದ್ದಾರೆ. ವಿದ್ಯಾರ್ಥಿವೃಂದಕ್ಕಾಗಿಯೇ ವಿಶೇಷ ಕಾಳಜಿವಹಿಸಿ ೭ ಕಿರುನಾಟಕಗಳ ರಚನೆಮಾಡಿದರು. ಅವನ್ನು ತಮ್ಮ ಮುಂದಾಳತ್ವದಲ್ಲಿ ಮಕ್ಕಳನಾಟಕವನ್ನು ನಿರ್ದೇಶಿಸಿ ಯಶಸ್ಸನ್ನು ತಂದುಕೊಟ್ಟಿದ್ದಾರ‍ೆ.

ಕನ್ನಡ ಸಾಹಿತ್ಯ ಸೇವೆ

[ಬದಲಾಯಿಸಿ]

ಕಂದಾವರ ರಘುರಾಮ ಶೆಟ್ಟಿ ಕುಂದಾಪುರ ತಾಲ್ಲೂಕು ’ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ’ ರಾಗಿ ೪ ವರ್ಷಗಳ ಕಾಲ ಸಾರ್ಥಕ ಸೇವೆಯನ್ನು ಮಾಡಿದ್ದಾರೆ. ಪುರಾಣ ಪ್ರವಚನಗಳಲ್ಲಿ ’ಗಮಕಿಯಾಗಿ’ ’ವ್ಯಾಖ್ಯಾನಕಾರರಾಗಿ’ ಭಾಗವಹಿಸಿದ್ದಾರ‍ೆ.

ಸನ್ಮಾನ ಪ್ರಶಸ್ತಿಗಳು

[ಬದಲಾಯಿಸಿ]
  • 'ಮುಂಬಯಿ', 'ಬೆಂಗಳೂರು', 'ಕಾಸರಗೋಡು', 'ಧಾರವಾಡ', 'ದಾವಣಗೆರೆ', ಅಭಿಮಾನ ಬಳಗದವರು, ಗೌರವಿಸಿದ್ದಾರೆ.
  • 'ಮಂಗಳೂರಿನ ಬಂಟರ ಯಾನೆ ನಾಡವರ ಮಾತೃಸಂಘ' ದ ವತಿಯಿಂದ, ’ಬಂಗಾರದ ಪದಕ’
  • 'ಕರ್ನಾಟಕ ಯಕ್ಷಗಾನ ಸಮಿತಿ ಪ್ರಶಸ್ತಿ'
  • 'ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರು'
  • 'ಡಾ. ವೀರೇಂದ್ರ ಹೆಗ್ಗಡೆ', 'ಎಡನೀರು ರಾಮಚಂದ್ರಮಠ,' 'ದಾವಣಗೆರೆ ವಿರಕ್ತಮಠದ ಸ್ವಾಮೀಜಿ'ಯವರು, ಸನ್ಮಾನಿಸಿ ಆಶೀರ್ವದಿಸಿದ್ದಾರ‍ೆ.
  • ’ಪ್ರತಿಶ್ಠಿತ ಸೀತಾನದಿ ಪ್ರಶಸ್ತಿ’
  • ’ಯಕ್ಷಸಾಹಿತ್ಯ ಶ್ರೀ ಪ್ರಶಸ್ತಿ’
  • ’ಇಂದಿನ ರಂಗ ಕಲಾವಿದರು,’ ಹೊತ್ತಿಗೆಯಲ್ಲಿ ರಘುರಾಮ ಶೆಟ್ಟಿಯವರ ಹೆಸರು ದಾಖಲಾಗಿದೆ.(ಕರ್ನಾಟಕ ನಾಟಕ ಅಕ್ಯಾಡೆಮಿಯ ಪ್ರಕಟಣೆ)

’ಪ್ರತಿಶ್ಠಿತ ಕಣಂಜಾರು ಆನಂದ ಶೆಟ್ಟಿ ಸ್ಮಾರಕ ಪ್ರಶಸ್ತಿ’

[ಬದಲಾಯಿಸಿ]

ಖ್ಯಾತ ಯಕ್ಷಗಾನ ಕಲಾವಿದ, ಕಣಂಜಾರು ಆನಂದ ಶೆಟ್ಟಿಯವರ ಕುಟುಂಬದವರು, ಪ್ರತಿವರ್ಷ ನೀಡುತ್ತಿರುವ’ಪ್ರತಿಶ್ಠಿತ ಕಣಂಜಾರು ಆನಂದ ಶೆಟ್ಟಿ ಸ್ಮಾರಕ ಪ್ರಶಸ್ತಿ’ ಈ ವರ್ಷ ಕಂದಾವರರವರಿಗೆ ಸಲ್ಲುತಿದೆ. ಮುಂಬಯಿನ ಬಂಟರ ಭವನದಲ್ಲಿ, ೨೦೧೦ ರ, ಏಪ್ರಿಲ್, ೧೮ ರಂದು, ರವಿವಾರ ಬಂಟರ ಸಂಘದ ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿಯ ವತಿಯಿಂದ ಜರುಗುತ್ತಿರುವ, ’ಬಿಸು ಪರ್ಬ’ ಹಾಗೂ ಬಂಟ ಯಕ್ಷಗಾನ ವೇದಿಕೆಯ ವಾರ್ಷಿಕೋತ್ಸವ ಸಮಾರಂಭದ ದಿನದಂದು ವೇದಿಕೆಯಲ್ಲಿ ಕಂದಾವರ ರಘುರಾಮ ಶೆಟ್ಟಿಯವರಿಗೆ, " ಕಣಂಜಾರು ಆನಂದ ಶೆಟ್ಟಿ ಸ್ಮಾರಕ ಪ್ರಶಸ್ತಿ" ನೀಡಿ ಗೌರವಿಸಲಾಗುತ್ತದೆ. ಸಂಘದ ಅಧ್ಯಕ್ಷರಾಗಿರುವ, ಐಕಳ ಹರೀಶ್ ಶೆಟ್ಟಿಯವರು,ಹಸ್ತದಿಂದ ಈ ಪ್ರಶಸ್ತಿನೀಡುವ ಕಾರ್ಯಕ್ರಮವಿದೆ.

ಇದೇ ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ಇತರ ಯಕ್ಷಗಾನ-ಕಲಾವಿದರು

[ಬದಲಾಯಿಸಿ]
  • ಮಾನಾಡಿ ಸದಾನಂದ ಶೆಟ್ಟಿ
  • ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ
  • ಸಂಪಾಜೆ ಶೀನಪ್ಪ ರೈ