ಕಂಕಾಳ ಜ್ವರ
ಮೂತ್ರದಲ್ಲಿ ರಕ್ತಬಣ್ಣ (ಹಿಮೋಗ್ಲೋಬಿನ್) [೧] ಹೋಗುತ್ತಿರುವ ವಿಷಮ ಬಗೆಯ ಮಲೇರಿಯ ಜ್ವರ (ಬ್ಲ್ಯಾಕ್ ವಾಟರ್ ಫೀವರ್). ಮಲೇರಿಯ ತೀವ್ರವಾಗಿರುವ ಪ್ರದೇಶಗಳಲ್ಲಿ ಈ ಜ್ವರವೂ ಹರಡಿರುವಂತಿದೆ.
ಲಕ್ಷಣಗಳು
[ಬದಲಾಯಿಸಿ]ರೋಗಿಯ ಮೂತ್ರ ಕರಿ ಶಾಯಿಯಂತಿರುವುದರಿಂದ ಈ ಹೆಸರಾಗಿದೆ. ರಕ್ತದಲ್ಲಿ ಸುತ್ತಾಡುತ್ತಿರುವ ಕೆಂಪು ರಕ್ತಕಣಗಳಲ್ಲಿ ಅರೆಪಾಲಿಗೂ ಹೆಚ್ಚಾಗಿ ಒಂದೇ ಬಾರಿ ಇಲ್ಲವೇ ಕೊಂಚಕೊಂಚವಾಗಿ ಮೇಲಿಂದ ಮೇಲೆ ರಕ್ತನಾಳಗಳೊಳಗೇ ಒಡೆದುಕೊಂಡು ಹಾಳಾಗುತ್ತಿರುತ್ತವೆ. ಸಾಮಾನ್ಯವಾಗಿ ಈ ರೋಗ ಹತ್ತಿದವನು ಉಳಿಯುವುದಿಲ್ಲ. ಮೇಲಿಂದ ಮೇಲೆ ಮಲೇರಿಯಗ್ರಸ್ತನಾದ ರೋಗಿ (ಕನಿಷ್ಟ ಪಕ್ಷ ನಾಲ್ಕು ಸಲ) ಅದೇ ಸ್ಥಳದಲ್ಲಿ (ಅಂದರೆ ಮಲೇರಿಯ ಪೀಡಿತ ಸ್ಥಳ) ಆರು ತಿಂಗಳ ಕಾಲ ಇದ್ದಾಗ ಆತನಿಗೆ ಕಂಕಾಳ ಜ್ವರ ಬರುವುದನ್ನು ಗಮನಿಸಿದ್ದಾರೆ.
ಕಾರಣ
[ಬದಲಾಯಿಸಿ]ಕಂಕಾಳ ಜ್ವರ ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ ಕೆಂಪು ರಕ್ತ ಕಣಗಳ ಪರಾವಲಂಬಿಯಿಂದ ಉಂಟಾಗುತ್ತದೆ. ಪ್ಲಾಸ್ಮೋಡಿಯಂ ವೈವ್ಯಾಕ್ಸ್[೨] ಮುಖ್ಯ ಕಾರಣವೆಂದು ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ.
ಚಿಕಿತ್ಸೆ
[ಬದಲಾಯಿಸಿ]ಅನ್ ಟಿ-ಮಲೇರಿಯ ರಾಸಾಯನಿಕ ಚಿಕಿತ್ಸೆ
ಪ್ರಸ್ತುತ ಈ ರೋಗ
[ಬದಲಾಯಿಸಿ]ಇಂದು ಮಲೇರಿಯ ನಿರೋಧ ಸಾಕಷ್ಟು ಪರಿಣಾಮಕಾರಿಯಾಗಿರುವುದರಿಂದಲೂ ಹೊಸ ಮದ್ದುಗಳು ಬಂದಿರುವುದರಿಂದಲೂ ಈ ರೋಗದ ಸುಳಿವೇ ಇಲ್ಲ.
ಉಲ್ಲೇಖಗಳು
[ಬದಲಾಯಿಸಿ]- ↑ Katongole-Mbidde E, Banura C, Kizito A (1988-03-19). "Blackwater fever caused by Plasmodium vivax infection in the acquired immune deficiency syndrome". Br Med J (Clin Res Ed). 296 (6625): 827. doi:10.1136/bmj.296.6625.827. PMC 2545111. PMID 3130932.
- ↑ https://www.ncbi.nlm.nih.gov/pmc/articles/PMC2545111/