ಓವ್ರೆಗಾನಿಯ

ವಿಕಿಪೀಡಿಯ ಇಂದ
Jump to navigation Jump to search
ಓವ್ರೆಗಾನಿಯ

ಕ್ಯಾಕ್ಟೇಸಿ ಕುಟುಂಬಕ್ಕೆ[೧] ಸೇರಿದ ಒಂದು ಸಸ್ಯಜಾತಿ,[೨] ಇದರ ಪರಿಶೋಧನೆ ಈಚಿನದು. ಮೆಕ್ಸಿಕೋದ ಮೂಲವಾಸಿ. ಮೆಕ್ಸಿಕೋದ ಹೆಸರಾಂತ ಅಧ್ಯಕ್ಷ ಡಾನ್ ಅಲ್ವಾರೊ ಓವ್ರೆಗಾನ್ ಎಂಬಾತನ ಗೌರವಾರ್ಥವಾಗಿ ಇದಕ್ಕೆ ಈ ಹೆಸರು ಕೊಡಲಾಗಿದೆ.

ಸಸ್ಯದ ತೋರಿಕೆ[ಬದಲಾಯಿಸಿ]

ಫಲವತ್ತಾಗಿರುವ ಸುಣ್ಣಕಲ್ಲುಗಳ ಮಧ್ಯದಲ್ಲಿ ಬೆಳೆದಿದ್ದ ಈ ಸಸ್ಯವನ್ನು ನೋಡಿದವ ಫ್ರಿಕ್ (1925). ಬಾಹ್ಯರೂಪದಲ್ಲಿ ಇದು ಎನ್ಸೆಫಲೊಕಾರ್ಪಸ್ ಸಸ್ಯವನ್ನು ಹೋಲುತ್ತದೆ. ಆದರೆ ಇದರ ಗಿಣ್ಣುಗಳು ಎಲೆಗಳಂತೆ ದಪ್ಪ ಮತ್ತು ಉದ್ದ. ಇವುಗಳಲ್ಲಿ ರಂಧ್ರಗಳಿವೆ (ಏರಿಯೋಲ್). ಓವೆಗ್ರಾನಿಯ ಡಿನಿಗ್ರಿ ಎಂಬ ಪ್ರಭೇದಕ್ಕೆ ದಪ್ಪವಾದ ತಾಯಿಬೇರು ಇದೆ. ಇದರ ಗಿಣ್ಣುಗಳು ತ್ರಿಕೋನಾಕಾರದ ಬಿಲ್ಲೆಯಂತಿವೆ; ಬಣ್ಣ ಬೂದಿಮಿಶ್ರಿತ ಹಸಿರು; ಹಿಂಭಾಗದಲ್ಲಿ ಉಬ್ಬುಗಳಿವೆ. ಅವುಗಳ ತುದಿಯಲ್ಲಿ ದೃಢವಲ್ಲದ, ಹಿಂದಕ್ಕೆ ಬಾಗಿದ ಮುಳ್ಳುಗಳಿವೆ. ಬಿಳುಪು ಅಥವಾ ನಸುಗುಲಾಬಿ ಬಣ್ಣದ ಹೂಗಳು ಮುಕುಟದ ಮೇಲುಭಾಗದಲ್ಲಿ ಅರಳುತ್ತವೆ

ಉಲ್ಲೇಖಗಳು[ಬದಲಾಯಿಸಿ]

  1. http://www.iucnredlist.org/details/40968/0
  2. https://books.google.co.in/books?id=u2n5vusQ1DEC&pg=PA169&redir_esc=y#v=onepage&q&f=false