ವಿಷಯಕ್ಕೆ ಹೋಗು

ಒಪ್ಪೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುವಾಂಗ್‌ಡಾಂಗ್ ಒಪ್ಪೋ ಮೊಬೈಲ್ ಟೆಲಿಕಮ್ಯುನಿಕೇಶನ್ಸ್ ಕಾರ್ಪೊರೇಷನ್ ಲಿಮಿಟೆಡ್.
ಸಂಸ್ಥೆಯ ಪ್ರಕಾರಖಾಸಗಿ ಕಂಪನಿ
ಪೂರ್ವಾಧಿಕಾರಿಬಿಬಿಕೆ ಎಲೆಕ್ಟ್ರಾನಿಕ್ಸ್
ಸ್ಥಾಪನೆ೧೦ ಅಕ್ಟೋಬರ್ ೨೦೦೪
ಸಂಸ್ಥಾಪಕ(ರು)ಟೋನಿ ಚೆನ್(陈明永)
ಮುಖ್ಯ ಕಾರ್ಯಾಲಯಡಾಂಗ್‌ಗುವಾನ್, ಗುವಾಂಗ್‌ಡಾಂಗ್, ಚೀನಾ
ವ್ಯಾಪ್ತಿ ಪ್ರದೇಶವಿಶ್ವಾದ್ಯಂತ
ಪ್ರಮುಖ ವ್ಯಕ್ತಿ(ಗಳು)ಟೋನಿ ಚೆನ್ (ಸಿಇಓ
ಉದ್ಯಮಗ್ರಾಹಕ ಎಲೆಕ್ಟ್ರಾನಿಕ್ಸ್
ಉತ್ಪನ್ನಹೋಮ್ ಸಿನಿಮಾ,ಆಡಿಯೋವಿಶುಯಲ್,ಟ್ಯಾಬ್ಲೆಟ್ ಕಂಪ್ಯೂಟರ್,ಸ್ಮಾರ್ಟ್‌ಫೋನ್
ಉದ್ಯೋಗಿಗಳು೪೦೦೦೦
ಉಪಸಂಸ್ಥೆಗಳುಒನ್‌ಪ್ಲಸ್
ರಿಯಲ್ಮೆ
ಇಯರ್‌ಫೋನ್‌ಗಳು

ಒಪ್ಪೋವು ಚೈನೀಸ್ ಗ್ರಾಹಕ ಎಲೆಕ್ಟ್ರಾನಿಕ್ಸ್‌ನಲ್ಲಿ ತಯಾರಿಸಲಾಗಿದ್ದು, ಇದರ ಪ್ರಧಾನ ಕಚೇರಿ ಗುವಾಂಗ್‌ಡಾಂಗ್‌ಡಾಂಗ್‌ಗುವಾನ್‌ನಲ್ಲಿ ಇದೆ. ಇದರ ಪ್ರಮುಖ ಉತ್ಪನ್ನ ಸಾಲುಗಳಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಸಾಧನಗಳು, ಆಡಿಯೊ ಸಾಧನಗಳು, ಪವರ್ ಬ್ಯಾಂಕ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿವೆ.

ಬಿಬಿಕೆ ಎಲೆಕ್ಟ್ರಾನಿಕ್ಸ್ ಇದರ ಮೇಲ್ವಿಚಾರಣೆಯನ್ನು ೨೦೨೩ ರವರೆಗೆ ನೋಡಿಕೊಂಡಿತು.[೧]

ಇತಿಹಾಸ

[ಬದಲಾಯಿಸಿ]

೨೦೦೧ ರಲ್ಲಿ "ಒಪ್ಪೋ" ಎಂಬ ಬ್ರ್ಯಾಂಡ್ ಹೆಸರನ್ನು ಚೀನಾದಲ್ಲಿ ನೋಂದಾಯಿಸಲಾಯಿತು ಮತ್ತು ೨೦೦೪ ರಲ್ಲಿ ಟೋನಿ ಚೆನ್ ಅವರು ಚೀನಾದ ಡೊಂಗುವಾನ್‌ನಲ್ಲಿ ಪ್ರಾರಂಭಿಸಿದರು. ೨೦೦೫ ರಲ್ಲಿ, ಅವರು ತಮ್ಮ ಮೊದಲ ಸಾಧನ ಒಪ್ಪೋ ಸ್೩ ಎಂಪಿ೩ ಅನ್ನು ಅಂತರಾಷ್ಟ್ರೀಯವಾಗಿ ಪರಿಚಯಿಸಿದರು.[೨]

ಜೂನ್ ೨೦೧೬ ರಲ್ಲಿ, ಒಪ್ಪೋ ತನ್ನ ಫೋನ್‌ಗಳನ್ನು ೨೦೦೦೦೦ ಕ್ಕಿಂತ ಹೆಚ್ಚುನ ಚಿಲ್ಲರೆ ಮಳಿಗೆಗಳಲ್ಲಿ ಮಾರಾಟ ಮಾಡಿತ್ತು. ಇದರ ಮೂಲಕ ಅವರು ಚೀನಾದಲ್ಲಿ ಅತಿ ದೊಡ್ಡ ಸ್ಮಾರ್ಟ್‌ಫೋನ್ ತಯಾರಕರಾದರು.[೩][೪] ೨೦೧೮ ರಲ್ಲಿ, ಒಪ್ಪೋ ಡಿಜಿಟಲ್ ಅವರು ಪ್ರಮುಖ ಮಾರುಕಟ್ಟೆಗಳಲ್ಲಿ ತಮ್ಮ ಡಿಸ್ಕ್ ಪ್ಲೇಯರ್ ವ್ಯವಹಾರವನ್ನು ನಿಲ್ಲಿಸುತ್ತಿದ್ದೇವೆ ಮತ್ತು ಮೊಬೈಲ್ ಸಾಧನಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ ಎಂದು ಘೋಷಿಸಿದರು. ೨೦೧೯ ರಲ್ಲಿ ಒಪ್ಪೋ ಚೀನಾದಲ್ಲಿ ಅಗ್ರ ಸ್ಮಾರ್ಟ್‌ಫೋನ್ ಬ್ರಾಂಡ್ ಆಯಿತ್ತು ಮತ್ತು ಇದು ವಿಶ್ವಾದ್ಯಂತ ಮಾರುಕಟ್ಟೆ ಷೇರಿನಲ್ಲಿ ಐದನೇ ಸ್ಥಾನದಲ್ಲಿದೆ.[೫]

೨೦೨೧ ರಲ್ಲಿ, ಒಪ್ಪೋ ಅವರು ಪ್ರಮುಖ ಫೋನ್ ತಯಾರಕರಾದ ಒನ್‍ಪ್ಲಸ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂದು ಘೋಷಿಸಿದರು. ಈ ಒಪ್ಪಂದವನ್ನು ೨೦೨೨ ರಲ್ಲಿ ವಿಸ್ತರಿಸಲಾಯಿತು. ಒನ್‍ಪ್ಲಸ್ ಒಪ್ಪೋ ನ ಅಂಗಸಂಸ್ಥೆಗಳಲ್ಲಿ ಒಂದಾಗಿದೆ.

ಬ್ರ್ಯಾಂಡಿಂಗ್

[ಬದಲಾಯಿಸಿ]
ಒಪ್ಪೋ ಫೈಂಡ್ ಎಕ್ಸ್೭ ಅಲ್ಟ್ರಾ ೨೦೨೪ ರ ಕಂಪನಿಯ ಪ್ರಮುಖ ಫೋನ್

೨೦೧೦ ರಲ್ಲಿ ದಕ್ಷಿಣ ಕೊರಿಯಾದ ಬಾಯ್ ಬ್ಯಾಂಡ್ ಥೈಲ್ಯಾಂಡ್‌ನಲ್ಲಿ ತನ್ನ ಬ್ರ್ಯಾಂಡ್ ಅನ್ನು ಪ್ರಾರಂಭಿಸಲು ಒಪ್ಪೋ ನೊಂದಿಗೆ ಪ್ರಚಾರದ ಒಪ್ಪಂದದಲ್ಲಿ "ಫಾಲೋ ಯುವರ್ ಸೋಲ್" ಎಂದು ಕರೆಯಲ್ಪಡುವ ಹಾಡನ್ನು ಸಿದ್ಧಪಡಿಸಿತು.[೬] ಜೂನ್ ೨೦೧೫ ರಲ್ಲಿ, ಕಂಪನಿಯು ಸ್ಪ್ಯಾನಿಷ್ ಫುಟ್ಬಾಲ್ ಕ್ಲಬ್‌ನ ಪ್ರಾಯೋಜಕರಾಗಲು ಎಫ್‍ಸಿ ಬಾರ್ಸಿಲೋನಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.[೭][೮][೯]

೨೦೧೬ ರಲ್ಲಿ, ಫಿಲಿಪೈನ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ​​ಈ ಕಂಪನಿಯೊಂದಿಗೆ ತನ್ನ ಅಧಿಕೃತ ಸ್ಮಾರ್ಟ್‌ಫೋನ್ ಪಾಲುದಾರನಾಗಿ ಒಪ್ಪಂದ ಮಾಡಿಕೊಂಡಿತು. ಇದು ೨೦೧೬ರಲ್ಲಿ ಪಿ.ಬಿ.ಎ ಕಮಿಷನರ್ ಕಪ್‌ನಿಂದ ಪ್ರಾರಂಭವಾಗುತ್ತದೆ.

೨೦೧೭ ರಲ್ಲಿ, ಒಪ್ಪೋ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರಾಯೋಜಿಸುವ ಬಿಡ್ ಅನ್ನು ಗೆದ್ದಿತು. ಇದು ೨೦೧೭ ರಿಂದ ೨೦೧೯ ರವರೆಗೆ ತಂಡದ ಕಿಟ್‌ಗಳಲ್ಲಿ ಅವರ ಲೋಗೋವನ್ನು ಬಳಸಲು ಅವಕಾಶ ಮಾಡಿಕೊಟ್ಟಿತು.[೧೦][೧೧]

೨೦೧೯ ರಲ್ಲಿ, ಪ್ಯಾರಿಸ್‌ನ ರೋಲ್ಯಾಂಡ್-ಗ್ಯಾರೋಸ್‌ನಲ್ಲಿ ನಡೆದ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪ್ರಾಯೋಜಕ ಪಾಲುದಾರರಾದರು. ಅದೇ ವರ್ಷ, ಅವರು ಮೊದಲ ಅಧಿಕೃತ ಸ್ಮಾರ್ಟ್‌ಫೋನ್ ಪಾಲುದಾರರಾಗಿ ೫ ವರ್ಷಗಳ ಕಾಲ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ಪ್ರಾಯೋಜಕ ಪಾಲುದಾರರಾದರು.[೧೨]

ಉತ್ಪನ್ನಗಳು

[ಬದಲಾಯಿಸಿ]

ಸ್ಮಾರ್ಟ್ ವಾಚ್

[ಬದಲಾಯಿಸಿ]

ಒಪ್ಪೋ ತನ್ನ ಮೊದಲ ಸ್ಮಾರ್ಟ್ ವಾಚ್ ಅನ್ನು ಮಾರ್ಚ್ ೬ ೨೦೨೦ ರಂದು ಚೀನಾದ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ನಂತರ ೨೦೨೨ ರಲ್ಲಿ ವಾಚ್ ೩ಪ್ರೊ ಮತ್ತು ೨೦೨೪ ರಲ್ಲಿ ವಾಚ್ ೪ಪ್ರೊ ಅನ್ನು ಬಿಡುಗಡೆ ಮಾಡಿತು.[೧೩]

ಫೋನ್‌ಗಳು

[ಬದಲಾಯಿಸಿ]

ಚೀನಾದ ಕಂಪನಿ ಒಪ್ಪೋ ಸ್ಮಾರ್ಟ್‌ಫೋನ್‌ಗಳನ್ನು ತಮ್ಮ ಎ ಸರಣಿ, ಫೈಂಡ್ ಸರಣಿ, ಎಫ್ ಸರಣಿ, ಎನ್ ಸರಣಿ ಮತ್ತು ಆರ್ ಸರಣಿಗಳಲ್ಲಿ ಫೋನ್‌ಗಳನ್ನು ಉತ್ಪಾದಿಸುತ್ತಾರೆ. ಒಪ್ಪೋ ತನ್ನ ಒಪ್ಪೋ ಡಿಜಿಟಲ್ ಬ್ರಾಂಡ್ ಅಡಿಯಲ್ಲಿ ಹೆಡ್‌ಫೋನ್‌ಗಳು ಮತ್ತು ಬ್ಲೂ-ರೇ ಪ್ಲೇಯರ್‌ಗಳನ್ನು ಸಹ ಉತ್ಪಾದಿಸುತ್ತದೆ.

ಸಂಶೋಧನೆ ಮತ್ತು ಅಭಿವೃದ್ಧಿ

[ಬದಲಾಯಿಸಿ]

ವಿಓಓಸಿ

[ಬದಲಾಯಿಸಿ]

೨೦೧೪ ರಲ್ಲಿ ವಿಓಓಸಿ (ವೋಲ್ಟೇಜ್ ಓಪನ್ ಲೂಪ್ ಮಲ್ಟಿ-ಸ್ಟೆಪ್ ಕಾನ್ಸ್ಟಂಟ್-ಕರೆಂಟ್ ಚಾರ್ಜಿಂಗ್) ಒಪ್ಪೋ ನಿಂದ ಅನಾವರಣಗೊಂಡೆ. ಇದು ಒಂದು ರೀತಿಯ ಚಾರ್ಜಿಂಗ್ ವಿಧಾನವಾಗಿದೆ. ಇದು ಪ್ರಾಥಮಿಕವಾಗಿ ಅದರ ಮೂಲ ಕಂಪನಿ ಬಿಬಿಕೆ ಎಲೆಕ್ಟ್ರಾನಿಕ್ಸ್‌ನ ಅಡಿಯಲ್ಲಿ ಮೊಬೈಲ್ ಉತ್ಪನ್ನಗಳ ಬ್ರ್ಯಾಂಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.[೧೪][೧೫] ಫೆಬ್ರವರಿ ೨೦೨೩ ರ ಹೊತ್ತಿಗೆ, ವಿಓಓಸಿಯು ಒಪ್ಪೋನ ನಿಕಟವಾದ ಸಂಯೋಜಿತ ಬ್ರ್ಯಾಂಡ್‌ಗಳೊಂದಿಗೆ ಪ್ರತ್ಯೇಕವಾಗಿದೆ. ಕೆಲವು ಒಪ್ಪೋ ಸಾಧನಗಳು ಯುಎಸ್‍ಬಿ-ಪಿಡಿ ಚಾರ್ಜರ್‌ಗಳನ್ನು ಬೆಂಬಲಿಸುತ್ತವೆ.

೨೦೨೨ ರಿಂದ ವಿಓಓಸಿ ಕೆಲವು ಬದಲಾವಣೆಗಳು:

 • ವಿಓಓಸಿ ೨.೦ (೨೦೧೫), ೨೦೧೪ ರಲ್ಲಿ ಪರಿಚಯಿಸಲಾದ ಮೊದಲ ಆವೃತ್ತಿ. ಇದು ೫ವಿ/೪ಎ ನಲ್ಲಿ ಕಾರ್ಯನಿರ್ವಹಿಸುತ್ತದೆ.
 • ಸೂಪರ್ ವಿಓಓಸಿ (೨೦೧೬), ಇದು ಎರಡು-ಸೆಲ್ ಸರಣಿಯಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಇದು "ಕಡಿಮೆ ವೋಲ್ಟೇಜ್ ಪಲ್ಸ್" ಚಾರ್ಜಿಂಗ್ ಅನ್ನು ಆಧರಿಸಿದೆ, ಹಾಗೂ ಕಸ್ಟಮೈಸ್ ಮಾಡಿದ ಬ್ಯಾಟರಿಯೊಂದಿಗೆ ಕಾರ್ಯನಿರ್ವಹಿಸುತ್ತದೆ.[೧೬]
 • ವಿಓಓಸಿ ೩.೦ (೨೦೧೯), ವಿಓಓಸಿ ೨.೦ ಗಿಂತ ೨೩.೮% ವೇಗವಾಗಿದೆ.[೧೭]
 • ವಿಓಓಸಿ ೪.೦ (೨೦೧೯ ಸೆಪ್ಟೆಂಬರ್), ಇದು ೫ವಿ/೬ಎ ನಲ್ಲಿ ಕಾರ್ಯನಿರ್ವಹಿಸುತ್ತದೆ.[೧೮]
 • ಸೂಪರ್ ವಿಓಓಸಿ ೨.೦ (೨೦೨೦), ಇದರ ಪರ್ಯಾಯ ಹೆಸರು: ವಾರ್ಪ್ ಚಾರ್ಜ್ ೬೫.

ವಿವಾದಗಳು

[ಬದಲಾಯಿಸಿ]

ಜರ್ಮನಿ

[ಬದಲಾಯಿಸಿ]

೨೦೨೨ ರಲ್ಲಿ, ಫಿನ್ನಿಷ್ ದೂರಸಂಪರ್ಕ ಉಪಕರಣಗಳ ಪೂರೈಕೆದಾರ ನೋಕಿಯಾ ಪರವಾನಗಿ ಶುಲ್ಕವನ್ನು ಪಾವತಿಸದೆ ಒಪ್ಪೋ ತನ್ನ ತಂತ್ರಜ್ಞಾನದ ಪೇಟೆಂಟ್‌ಗಳನ್ನು ಬಳಸುತ್ತಿದೆ ಎಂದು ಆರೋಪಿಸಿ ಮೊಕದ್ದಮೆ ಹೂಡಿತು. ಆಗಸ್ಟ್‌ನಲ್ಲಿ, ಜರ್ಮನ್ ನ್ಯಾಯಾಲಯವು ಒಪ್ಪೋ ಸ್ಮಾರ್ಟ್‌ಫೋನ್‌ಗಳ ಮಾರಾಟವನ್ನು ಸ್ಥಗಿತಗೊಳಿಸಿತು.[೧೯]

ಒಪ್ಪೋ ಭಾರತದಲ್ಲಿ ಸವಾಲುಗಳನ್ನು ಎದುರಿಸಿದೆ. ಇದು ೨೦೧೪ ರಲ್ಲಿ ಮಾರುಕಟ್ಟೆಗೆ ವಿಸ್ತರಿಸಿತು. ಜುಲೈ ೨೦೨೨ ರಲ್ಲಿ, ತೆರಿಗೆ ವಂಚನೆಗಾಗಿ ಒಪ್ಪೋನ ಸ್ಥಳೀಯ ಅಂಗಸಂಸ್ಥೆಯ ವಿರುದ್ಧ ಭಾರತ ಸರ್ಕಾರವು ೪೩.೮ ಶತಕೋಟಿ ರೂಪಾಯಿಗಳ ದಂಡವನ್ನು ಘೋಷಿಸಿತು.

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
 1. "SuperVOOC fast charging technology: Everything you need to know". Android Authority (in ಇಂಗ್ಲಿಷ್). 2023-02-12. Retrieved 2023-06-23.
 2. "Technology as an art form". Oppo. Retrieved 29 September 2021.
 3. "TECHNOXMART | OPPO Becomes the Leading Smartphone Brand in China in June 2016". www.technoxmart.com. Archived from the original on 28 July 2016. Retrieved 25 May 2019.
 4. Upstarts on top / How OPPO and Vivo are beating Apple, Xiaomi and the gang. Economist, 4–10 February 2017, page 56.
 5. "Q2 smartphones: Samsung grows, Huawei slows and Apple flows". telecoms.com. Archived from the original on 1 August 2019. Retrieved 7 August 2019.
 6. Hotmaster121 (25 May 2019). "[M/V] TECHNOXMART". Archived from the original on 25 ಮೇ 2019. Retrieved 25 May 2019 – via Web Url.{{cite web}}: CS1 maint: numeric names: authors list (link)
 7. "Launched OPPO F7 with Bezel-Less Display and 25 Megapixel Camera in India; Price, Specification". technoxmart.com. Archived from the original on 25 ಮೇ 2019. Retrieved 25 May 2019.
 8. "OPPO phones". technoxmart.com. Archived from the original on 25 ಮೇ 2019. Retrieved 25 May 2019.
 9. "OPPO Reno Series Launch on May 28 in India: Check Prices, Reno 10x Zoom Edition Models, Reno Specifications". technoxmart.com. Archived from the original on 6 ಆಗಸ್ಟ್ 2020. Retrieved 25 May 2019.
 10. Galaxy, F. T. T. (27 February 2021). "OPPO". FTT World (in ಇಂಗ್ಲಿಷ್). Retrieved 13 October 2021.
 11. "Why Sơn Tùng M-TP is called the 'Prince of V-pop'". South China Morning Post (in ಇಂಗ್ಲಿಷ್). 12 July 2021. Retrieved 13 October 2021.
 12. "Oppo signs up as first Asian sponsor of Wimbledon Championships". The Drum (in ಇಂಗ್ಲಿಷ್). Retrieved 9 June 2020.
 13. "OPPO Watch深度评测:最美安卓手表居然如此面面俱到". smzdm.com (in ಚೈನೀಸ್). 26 March 2020. Retrieved 20 September 2020.
 14. Peter. "Oppo will license its VOOC charging technology to third-party makers". GSMArena.com (in ಅಮೆರಿಕನ್ ಇಂಗ್ಲಿಷ್). Retrieved 2023-06-23.
 15. Tushar, Mehta (2022-04-20). "Fast charging the OnePlus 10 Pro: SuperVOOC vs. USB-C PD". Digital Trends (in ಇಂಗ್ಲಿಷ್). Retrieved 2023-06-23.
 16. "[POWAAAAH] OPPO's Super VOOC Can Fully Charge A 2500mAh Battery In 15 Minutes". Android Police (in ಇಂಗ್ಲಿಷ್). 2016-02-23. Retrieved 2023-06-23.
 17. John, Jed (22 March 2019). "OPPO Reno comes with VOOC 3.0 which improves fast charging speed by 23.8%". Gizmochina. Archived from the original on 1 June 2019. Retrieved 2 June 2019.
 18. Minsheng securities (31 August 2020). "快充新"赛道",行业势不可挡" (PDF) (in ಚೈನೀಸ್). Retrieved 24 August 2022.
 19. Kawakami, Takashi (October 8, 2022). "China's Oppo plots next step after smartphone sales ban in Germany". Nikkei Asia. Retrieved 17 July 2023.
"https://kn.wikipedia.org/w/index.php?title=ಒಪ್ಪೋ&oldid=1218996" ಇಂದ ಪಡೆಯಲ್ಪಟ್ಟಿದೆ