ಒಕ್ಕಲು ಜಮೀನು
ಒಕ್ಕಲು ಜಮೀನು (ಕೃಷಿಕ್ಷೇತ್ರ, ಹೊಲ, ಗದ್ದೆ) ಪ್ರಧಾನವಾಗಿ ಕೃಷಿ ಪ್ರಕ್ರಿಯೆಗಳಿಗೆ ಮೀಸಲಿಡಲಾದ ಭೂಪ್ರದೇಶ. ಆಹಾರ ಮತ್ತು ಇತರ ಬೆಳೆಗಳನ್ನು ಉತ್ಪಾದಿಸುವುದು ಇವುಗಳ ಪ್ರಧಾನ ಉದ್ದೇಶವಾಗಿದೆ; ಆಹಾರ ಉತ್ಪಾದನೆಯಲ್ಲಿ ಇದು ಮೂಲಭೂತ ಸೌಕರ್ಯವಾಗಿದೆ.[೧] ಈ ಪದವನ್ನು ವಿಶೇಷೀಕೃತ ಘಟಕಗಳಿಗೆ ಬಳಸಲಾಗುತ್ತದೆ, ಉದಾಹರಣೆಗೆ, ಕೃಷಿಯೋಗ್ಯ ಜಮೀನು, ತರಕಾರಿ ಜಮೀನುಗಳು, ಹಣ್ಣಿನ ಜಮೀನುಗಳು, ಮತ್ತು ನೈಸರ್ಗಿಕ ನಾರುಗಳು, ಜೈವಿಕ ಇಂಧನಗಳು ಮತ್ತು ಇತರ ದ್ರವ್ಯಗಳ ಉತ್ಪಾದನೆಗೆ ಬಳಸಲಾದ ಜಮೀನು. ಈ ಪದವು ಜಾನುವಾರು ಕ್ಷೇತ್ರಗಳು, ಗೋಮಾಳಗಳು, ಹಣ್ಣುತೋಟಗಳು, ನೆಡುತೋಪುಗಳು ಹಾಗೂ ಎಸ್ಟೇಟುಗಳು, ಸಣ್ಣ ಜಮೀನುಗಳು ಹಾಗೂ ಹವ್ಯಾಸ ಜಮೀನುಗಳು, ಮತ್ತು ತೋಟದ ಮನೆ ಹಾಗೂ ಕೃಷಿ ಕಟ್ಟಡಗಳನ್ನು ಒಳಗೊಳ್ಳುತ್ತದೆ.
ಒಕ್ಕಲು ಜಮೀನುಗಳ ಪ್ರಕಾರಗಳು
[ಬದಲಾಯಿಸಿ]ಒಕ್ಕಲು ಜಮೀನು ಒಬ್ಬನೇ ವ್ಯಕ್ತಿ, ಕುಟುಂಬ, ಸಮುದಾಯ, ನಿಗಮ ಅಥವಾ ಕಂಪನಿಯ ಒಡೆತನದಲ್ಲಿರಬಹುದು ಮತ್ತು ನಿರ್ವಹಿಸಲ್ಪಡಬಹುದು. ಒಕ್ಕಲು ಜಮೀನು ಒಂದು ಅಥವಾ ಹಲವು ಪ್ರಕಾರಗಳ ಬೆಳೆಗಳನ್ನು ಉತ್ಪಾದಿಸಬಹುದು, ಮತ್ತು ಹೆಕ್ಟೇರಿನ ಅಲ್ಪಭಾಗದಿಂದ ಹಿಡಿದು ಹಲವು ಸಾವಿರ ಹೆಕ್ಟೇರುಗಳವರೆಗೆ ಯಾವುದೇ ಗಾತ್ರದ ಹಿಡುವಳಿಯಾಗಿರಬಹುದು.[೨]
ಉಲ್ಲೇಖಗಳು
[ಬದಲಾಯಿಸಿ]- ↑ Gregor, 209; Adams, 454.
- ↑ Winterbottom, Jo; Jadhav, Rajendra (June 20, 2011). "SPECIAL REPORT - India's food chain in deep change". Reuters. Archived from the original on 24 ಜುಲೈ 2015. Retrieved 12 July 2011.
The average size of farms in India is a mere 1.77 hectares -- about the size of two soccer pitches