ವಿಷಯಕ್ಕೆ ಹೋಗು

ಐಲ್ಹಾರ್ಡ್ ಮಿಟ್ಶೆಲ್ವಿಚ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐಲ್ಹಾರ್ಡ್ ಮಿಟ್ಶೆಲ್ವಿಚ್
ಜನನ
ಐಲ್ಹಾರ್ಡ್ ಮಿಟ್ಶೆಲ್ವಿಚ್

1794 ಜನವರಿ 17
ಜರ್ಮನಿ
ರಾಷ್ಟ್ರೀಯತೆಜರ್ಮನಿ

ಜರ್ಮನಿಯ ರಸಾಯನವಿಜ್ಞಾನಿಯಾಗಿದ್ದ ಐಲ್ಹಾರ್ಡ್ ಮಿಟ್ಶೆಲ್ವಿಚ್ರವರು 1794ರ ಜನವರಿ 17ರಂದು (ಈಗ ಪಶ್ಚಿಮ ಜರ್ಮನಿಯಲ್ಲಿರುವ) ಜೆವೆರ್ನ ನ್ಯೂಯೆಂಡೆಯಲ್ಲಿ ಜನಿಸಿದರು. ಲಿಂಕ್ಸ್ ಪ್ರಯೋಗಾಲಯದಲ್ಲಿ ಮಿಟ್ಶೆಲ್ವಿಚ್ರವರು 1818ರಲ್ಲಿ ಹರಳುಗಳ ಮೇಲೆ ಪ್ರಯೋಗಗಳನ್ನು ನಡೆಸುತ್ತಿದ್ದಾಗ, ಪೊಟ್ಯಾಸಿಯಂ ಫಾಸ್ಫೇಟ್ ಮತ್ತು ಪೊಟ್ಯಾಸಿಯಂ ಆರ್ಸನೇಟ್ ಎರಡೂ ರೂಪದಲ್ಲಿ ಒಂದೇ ತರಹವಿದ್ದುದನ್ನು ಗಮನಿಸಿದರು. ಇದರ ಮಹತ್ವವನ್ನು ಗುರುತಿಸಿದ ಬೆರ್ಝೆಲಿಯಸ್ರವರು (1779-1848) ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು 27 ಧಾತುಗಳ ಪರಮಾಣು ತೂಕಗಳಲ್ಲಿದ್ದ ತಪ್ಪುಗಳನ್ನು ತಿದ್ದಿದರು. ಹಾಗಾಗಿ ಮಿಟ್ಶೆಲ್ವಿಚ್ರವರು ಫಾಸ್ಫೇಟ್ಗಳು, ಆರ್ಸನೇಟ್ಗಳು ಮತ್ತು ಕಾರ್ಬೋನೇಟ್ಗಳ ಬಗ್ಗೆ ತಮ್ಮ ಪ್ರಯೋಗಗಳನ್ನು ಮುಂದುವರಿಸಿ, 1822ರಲ್ಲಿ ಕಸಮರೂಪತೆಕಿ (isomorphism) ಎಂಬ ಪದವನ್ನು ಹುಟ್ಟುಹಾಕಿದರು.

ಮಿಟ್ಶೆಲ್ವಿಚ್ರವರು 1827ರಲ್ಲಿ ಸೆಲೆನಿಕ್ ಆಮ್ಲ|ಸೆಲೆನಿಕ್ ಆಮ್ಲವನ್ನು (selenic acid) ಕಂಡುಹಿಡಿದರು. 1834ರಲ್ಲಿ ಅವರು ಬೆಂಝೀನ್ನನ್ನು ಸಂಶ್ಲೇಷಿಸಿ, ಅದಕ್ಕೆ ಆ ಹೆಸರನ್ನು ಹುಟ್ಟುಹಾಕಿದರು. 1836ರಲ್ಲಿ ಅವರು ನೈಟ್ರೋಬೆಂಝೀನ್ನನ್ನು ಸಂಶ್ಲೇಷಿಸಿ, ನಂತರ ಅವರು ಅಝೋಬೆಂಝೀನ್, ಬೆನ್ಝೋಫಿನೋನ್ (benzophenone) ಮತ್ತು ಬೆಂಝೀನ್ ಸಲ್ಫೋನಿಕ್ ಆಮ್ಲವನ್ನು ಸಂಶ್ಲೇಷಿಸಿದರು. ಮಿಟ್ಶೆಲ್ವಿಚ್ರವರ ಕೊನೆಯ ಮಗ ಕೂಡ ರಸಾಯನವಿಜ್ಞಾನಿಯಾದ. ಅವನು ತನ್ನ ತಂದೆಯವರ ಜೊತೆ ಸೇರಿಕೊಂಡು ಮರದ ಮೆತು ಪದಾರ್ಥದಿಂದ (wood pulp) ಸೆಲುಲೋಸ್ (cellulose) ತಯಾರಿಸುವ ಕಮಿಟ್ಶೆಲ್ವಿಚ್ರವರ ಪ್ರಕ್ರಿಯೆಕಿಯನ್ನು (Mitscherlich process) ಅಭಿವೃದ್ಧಿಪಡಿಸಿದ. ಮಿಟ್ಶೆಲ್ವಿಚ್ರವರು 1863ರ ಆಗಸ್ಟ್ 28ರಂದು ಬರ್ಲಿನ್ನಲ್ಲಿ ನಿಧನರಾದರು.[೧]

ಉಲ್ಲೇಖಗಳು[ಬದಲಾಯಿಸಿ]