ವಿಷಯಕ್ಕೆ ಹೋಗು

ಐಬಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐಬಿಸ್
Black-headed ibis (Threskiornis melanocephalus)
Scientific classification e
Unrecognized taxon (fix): Threskiornithinae
Genera

ಐಬಿಸ್ ಕ್ರೌಂಚ (ಹೆರಾನ್) ಮತ್ತು ಕೊಕ್ಕರೆಯ (ಸ್ಟಾರ್ಕ್) ಕುಟುಂಬಕ್ಕೆ ಸೇರಿದ ಒಂದು ನೀರುಹಕ್ಕಿ. ಇದರಲ್ಲಿ ಅನೇಕ ಪ್ರಭೇದಗಳಿವೆ. ಇವು ಪ್ರಪಂಚದ ನಾನಾ ಭಾಗಗಳಲ್ಲಿ ಹರಡಿವೆ. ಭಾರತದ ಹಲವೆಡೆಗಳಲ್ಲಿ ಕರ್ನಾಟಕ ರಾಜ್ಯದ ಅನೇಕ ಭಾಗಗಳಲ್ಲಿ ಹರಡಿವೆ. ಭಾರತದ ಹಲವೆಡೆಗಳಲ್ಲಿ ಕರ್ನಾಟಕ ರಾಜ್ಯದ ಅನೇಕ ಭಾಗಗಳಲ್ಲಿ ಬಿಳಿ ಮತ್ತು ಕರಿಯ ಎರಡು ಪ್ರಭೇದಗಳು ಕಾಣಸಿಗುತ್ತವೆ.

ವಿವರಣೆ[ಬದಲಾಯಿಸಿ]

ಐಬಿಸ್ ಹಕ್ಕಿ ಗಾತ್ರದಲ್ಲಿ ದೊಡ್ಡದು. ಕೊಕ್ಕು ಉದ್ದವಾಗಿ ಪಿಕಾಸಿಯ ಅಲಗಿನಂತೆ ಮುಂದಕ್ಕೆ ಬಾಗಿರುತ್ತದೆ. ಅನೇಕ ಬಗೆಯವಕ್ಕೆ ತಲೆಯ ಮೇಲೆ ಪುಕ್ಕಗುಚ್ಛವಿದೆ. ಬಿಳಿ ಮತ್ತು ಕರಿ ಐಬಿಸುಗಳಿಗೆ ಬಣ್ಣದಲ್ಲಿ ಮಾತ್ರ ವ್ಯತ್ಯಾಸವುಂಟು. ಅಮೆರಿಕದ ಉಷ್ಣವಲಯ ಪ್ರದೇಶಗಳಲ್ಲಿ ಕೆಂಪು ಐಬಿಸ್ ಇದೆ. ಕೆಂಪು ರೆಕ್ಕೆ ಪುಕ್ಕಗಳಿಗಾಗಿ ಈ ಹಕ್ಕಿಯನ್ನು ಎರಡು ಶತಮಾನ ಬೇಟೆಯಾಡಿದರಾಗಿ ಇದರ ವಂಶ ತೀರ ನಶಿಸಿಹೋಗಿದೆ. ಅಳಿದುಳಿದ ಕೆಲವು ಕುಟುಂಬಗಳನ್ನು ಕಾನೂನಿನ ಬಂಧನ ಹಾಕಿ ಈಗ ಕಾಪಾಡಲಾಗಿದೆ.

ಪ್ರಭೇದಗಳು[ಬದಲಾಯಿಸಿ]

There are 29 extant species and 4 extinct species of ibis.

Image Genus Living species
ಥ್ರೆಸ್ಕಿಯೊರ್ನಿಸ್ ಜಿ.ಆರ್. ಗ್ರೇ, 1842
Pseudibis Hodgson, 1844
Geronticus Wagler, 1832
Nipponia Reichenbach, 1850
Bostrychia G.R. Gray, 1847
Theristicus Wagler, 1832
Cercibis Wagler, 1832
Mesembrinibis J.L. Peters, 1930
Phimosus Wagler, 1832
Eudocimus Wagler, 1832
Plegadis Kaup, 1829
Lophotibis L. Reichenbach, 1853
Apteribis Olson & Wetmore, 1976
  • A. glenos Olson & Wetmore, 1976 Molokai flightless ibis
  • A. brevis Olson & James, 1991 Maui flightless ibis

ಅಳಿವಿನಂಚಿನಲ್ಲಿರುವ ಪ್ರಭೇದವಾದ ಜಮೈಕಾದ ಐಬಿಸ್ ಅಥವಾ ಕ್ಲಬ್-ವಿಂಗ್ ಐಬಿಸ್ (ಕ್ಸೆನಿಸಿಬಿಸ್ xympithecus) ಅನ್ನು ಅದರ ಕ್ಲಬ್ ತರಹದ ರೆಕ್ಕೆಗಳಿಂದ ಅನನ್ಯವಾಗಿ ನಿರೂಪಿಸಲಾಗಿದೆ. ಅಳಿವಿನಂಚಿನಲ್ಲಿರುವ ಐಬಿಸ್ ಪ್ರಭೇದಗಳು ಈ ಕೆಳಗಿನವುಗಳನ್ನು ಒಳಗೊಂಡಿವೆಃ

  • ಜೆರೊಂಟಿಕಸ್ ಪರ್ಪ್ಲೆಕ್ಸಸ್ . ಫ್ರಾನ್ಸ್ನಲ್ಲಿ ಕಂಡುಹಿಡಿಯಲಾಯಿತು. ಮಧ್ಯ ಮಯೋಸೀನ್ ಬಂಡೆಗಳಲ್ಲಿ ಸ್ಯಾನ್ಸನ್ ಫ್ರಾನ್ಸ್‌ನಲ್ಲಿ ಕಂಡುಬರುವ ದೂರದ ಬಲ ಹ್ಯೂಮರಸ್‌ನ ತುಣುಕಿನಿಂದ ಮಾತ್ರ ಇದು ತಿಳಿದಿದೆ. ಇದು ಜೆರೊಂಟಿಕಸ್ ವಂಶಾವಳಿಯ ಪುರಾತನ ಸದಸ್ಯನನ್ನು ಪ್ರತಿನಿಧಿಸುತ್ತದೆ ಎಂದು ತೋರುತ್ತದೆ, ಹೆಚ್ಚಿನ ಜೀವಂತ ಐಬಿಸ್ ಕುಲಗಳು 15 ಮಿಲಿಯನ್ ವರ್ಷಗಳ ಹಿಂದೆ (ಮ್ಯಾ) ವಿಕಸನಗೊಂಡಿವೆ ಎಂದು ತೋರುತ್ತದೆ. [೪]
  • ಜೆರೊಂಟಿಕಸ್ ಅಪೆಲೆಕ್ಸ್ . ದಕ್ಷಿಣ ಆಫ್ರಿಕಾದಲ್ಲಿ ಕಂಡುಹಿಡಿಯಲಾಯಿತು. [೫]
  • ಜೆರೊಂಟಿಕಸ್ ಬಾಲ್ಕನಿಕಸ್ . ಬಲ್ಗೇರಿಯಾದಲ್ಲಿ ಕಂಡುಹಿಡಿಯಲಾಯಿತು. [೬]
  • ಥೆರಿಸ್ಟಿಕ್ಸ್ ವೆಟ್ಮೊರಿ . ಪೆರುವಿನಲ್ಲಿ ಕಂಡುಹಿಡಿಯಲಾಯಿತು.
  • ಯುಡೋಡ್ಮಸ್ ಪೆರುವಿಯಾನಸ್ . ಪೆರುವಿನಲ್ಲಿ ಕಂಡುಹಿಡಿಯಲಾಯಿತು.
  • ಗೆರಾಂಡಿಬಿಸ್ ಪಗಾನಾ . ಫ್ರಾನ್ಸ್ನಲ್ಲಿ ಕಂಡುಹಿಡಿಯಲಾಯಿತು. [೭] ಇದು ಈ ಜಾತಿಗೆ ಹೆಸರುವಾಸಿಯಾದ ಏಕೈಕ ಜಾತಿಯಾಗಿದೆ. [೮]
  • ಆಪ್ಟರ್ಬಿಸ್ ಗ್ಲೆನೋಸ್ . ಹವಾಯಿಯಲ್ಲಿ ಕಂಡುಹಿಡಿಯಲಾಯಿತು.
  • Xenicibis xympithecus . ಜಮೈಕಾದಲ್ಲಿ ಕಂಡುಹಿಡಿಯಲಾಯಿತು.

ಜೀವನ ಕ್ರಮ[ಬದಲಾಯಿಸಿ]

ಐಬಿಸ್ ಹಕ್ಕಿಯ ಜೀವನ ಕ್ರಮವೆಲ್ಲ ಕ್ರೌಂಚ, ಬಕಗಳಂತೆಯೆ. ಇದು ಗುಂಪಿನಲ್ಲಿ ವಾಸಿಸುತ್ತದೆ. ಕೆಲವೇಳೆ ಒಂದು ಗುಂಪಿನಲ್ಲಿ ಸಾವಿರ ಹಕ್ಕಿಗಳಿರುವುದೂ ಉಂಟು. ನೀರಿನ ಆಶ್ರಯದಲ್ಲಿದ್ದು ಮೀನು, ಏಡಿ, ಕಪ್ಪೆ ಮೊದಲಾದುವನ್ನು ಇದು ಹಿಡಿದು ತಿನ್ನುತ್ತದೆ. ದೊಡ್ಡ ಮರದ ಕವೆಗೊಂಬಿನಲ್ಲಿ ಕಡ್ಡಿಗಳಿಂದ ಗೂಡು ಕಟ್ಟಿಕೊಂಡು ಇದು ವಾಸಿಸುತ್ತದೆ. ವಾಡಿಕೆಯಾಗಿ ಒಂದು ಬಾರಿಗೆ ಎರಡರಿಂದ ನಾಲ್ಕು ಮೊಟ್ಟೆ ಇಡುತ್ತದೆ.

ಐತಿಹ್ಯ[ಬದಲಾಯಿಸಿ]

ಈ ಹಕ್ಕಿ ಓಸಿರಿಸ್ ದೇವತೆಯ ದೂತವಾಗಿದ್ದುಕೊಂಡು ಮಾನವರು ಮಾಡುವ ತಪ್ಪುಗಳನ್ನೆಲ್ಲ ಎಣಿಕೆಹಾಕಿ ವರದಿ ಒಪ್ಪಿಸುತ್ತದೆಂದು ಈಜಿಪ್ಟಿನವರು ನಂಬಿದ್ದರು. ಪ್ರ.ಶ.ಪು. 3ನೆಯ ಶತಮಾನದಲ್ಲಿದ್ದ ಪ್ರಾಚೀನ ಗ್ರೀಕ್ ಕವಿ ಕಲ್ಲಿಮಾಕಸ್ ಮತ್ತು ಆತನ ಸ್ಪರ್ಧಿ ಅಪೊಲೋನಿಯಸ್-ಇವರ ಮಧ್ಯೆ ನಡೆದ ವಿರಸದಲ್ಲಿ ಜನಿಸಿದ ಪದ್ಯವೊಂದಕ್ಕೆ ಐಬಿಸ್ ಎಂಬ ಹೆಸರಿದೆ. ಇದರ ಪ್ರತಿ ಈಗ ಸಿಕ್ಕಿಲ್ಲದಿದ್ದರೂ ಓವಿಡ್ ಮತ್ತು ಸುಯಿದಾಸ್ ಕವಿಗಳು ಇದರ ಬಗ್ಗೆ ಹೇಳಿದ್ದಾರೆ. ಈ ಪದ್ಯದ ವಸ್ತು ಅಪೊಲೋನಿಯಸ್ ಮೇಲಿನ ಟೀಕೆ. ಐಬಿಸ್ ಎಂಬುದು ಈಜಿಪ್ಟಿನ ಹಕ್ಕಿ. ಅದು ನೋಡಲು ಅಂದವಿಲ್ಲ. ಕರ್ಕಶ ಧ್ವನಿಯೇ ಅದರ ಸ್ವರ. ಅದರ ಸ್ವಭಾವಗಳು ಬೇಸರ ತರಿಸುವಂಥವು. ಕಲ್ಲಿಮಾಕಸ್ ಅಪೊಲೋನಿಯಸನನ್ನು ಐಬಿಸ್ ಹಕ್ಕಿಗೆ ಹೋಲಿಸಿದ್ದಾನೆ. ಅಲ್ಲದೆ ಈ ಪದ್ಯಗಳ ಹಲವು ಭಾಗಗಳು ಸಮಸ್ಯಾತ್ಮಕವಾಗಿವೆಯೆಂದು ಹೇಳುತ್ತಾರೆ.

ಈ ವಿವರದಿಂದ ಐಬಿಸ್ ಹಕ್ಕಿಯ ವಿಷಯದಲ್ಲಿ ಈಜಿಪ್ಟಿನವರಿಗಿದ್ದ ಅಭಿಪ್ರಾಯ ಇನ್ನೂ ಸ್ಪಷ್ಟವಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. David, Normand; Gosselin, Michel (2011). "Gender agreement of avian species-group names under Article 31.2. 2 of the ICZN Code" (PDF). Bulletin of the British Ornithologists' Club. 131 (2): 102–115. Retrieved 10 August 2017.
  2. Schodde, Richard; Bock, Walter (2016). "Conflict resolution of grammar and gender for avian species-group names under Article 31.2. 2 of the ICZN Code: is gender agreement worth it?". Zootaxa. 4127 (1): 161–170. doi:10.11646/zootaxa.4127.1.9. PMID 27395618.
  3. Dickinson, Edward C.; David, Normand; Alonso-Zarazaga, Miguel A. (2017). "Some comments on Schodde & Bock (2016) on gender agreement" (PDF). Bulletin of the British Ornithologists' Club. 137 (2): 142–144. doi:10.25226/bboc.v137i2.2017.a2. S2CID 125994321. Retrieved 10 August 2017.
  4. Mlíkovský, Jirí (2002). Cenozoic Birds of the World (Part 1: Europe) (in ಇಂಗ್ಲಿಷ್). Ninox Press, Prague. ISBN 80-901105-3-3.
  5. Olson, S. L. (1985). "Early Pliocene ibises (Aves, Plataleidae) from south-western Cape Province, South Africa". Annals of the South African Museum. 97 (3): 57–69.
  6. Boev, Zlatozar (1998). "Presence of Bald Ibises (Geronticus Wagler, 1832) (Threskionithidae - Aves) in the Late Pliocene of Bulgaria" (PDF). Geologica Balcanica. 28 (1–2): 45–52. doi:10.52321/GeolBalc.28.1-2.45.
  7. Olson, Storrs L. (1981). "The generic allocation of Ibis pagana Milne-Edwards, with a review of fossil ibises (Aves: Threskiornithidae)". Journal of Vertebrate Paleontology (in ಇಂಗ್ಲಿಷ್). 1 (2): 165–170. Bibcode:1981JVPal...1..165O. doi:10.1080/02724634.1981.10011888. ISSN 0272-4634.
  8. De Pietri, Vanesa L. (2013). Collinson, Martin (ed.). "Interrelationships of the Threskiornithidae and the phylogenetic position of the Miocene ibis ' Plegadis ' paganus from the Saint-Gérand-le-Puy area in central France". Ibis (in ಇಂಗ್ಲಿಷ್). 155 (3): 544–560. doi:10.1111/ibi.12062.


ಉಲ್ಲೇಖ ದೋಷ: <ref> tags exist for a group named "note", but no corresponding <references group="note"/> tag was found

"https://kn.wikipedia.org/w/index.php?title=ಐಬಿಸ್&oldid=1230112" ಇಂದ ಪಡೆಯಲ್ಪಟ್ಟಿದೆ