ಐಕಳ ಹರೀಶ್ ಶೆಟ್ಟಿ

ವಿಕಿಪೀಡಿಯ ಇಂದ
Jump to navigation Jump to search

ಐಕಳ [೧] ಹರೀಶ್ ಶೆಟ್ಟಿ[1]ಯವರು, ದಕ್ಷಿಣ ಕನ್ನಡ ಜಿಲ್ಲೆಯ 'ಕಿನ್ನಿಗೋಳಿ'[೨] ಊರಿನವರು.'ಬಂಟ್ಸ್ ಫೆಡರೇಷನ್,ಮುಂಬಯಿಯ ವೈಸ್ ಪ್ರೆಸಿಡೆಂಟ್', 'ವರ್ಲ್ಡ್ ಸನ್ ಶೈನ್ ಹೋಟೆಲ್ ನ ಡೈರೆಕ್ಟರ್', 'ಸಂಧ್ಯಾ ಆರ್ಟ್ಸ್ ಸಂಸ್ಥೆಯ ಅಧ್ಯಕ್ಷ'ರಾಗಿ ಕೆಲಸಮಾಡುತ್ತಿದ್ದಾರೆ. ಯಕ್ಷಗಾನದಲ್ಲಿ ಆಪಾರ ಆಸಕ್ತರು. ಅದನ್ನು ಪ್ರಚಾರಮಾಡಲು ಅಪಾರ ಶ್ರಮವಹಿಸುತ್ತಾ ಬಂದಿದ್ದಾರೆ. ಮುಂಬಯಿ ಮಹಾನಗರದ ಹಲವಾರು ಸಂಘ-ಸಂಸ್ಥೆಗಳಲ್ಲಿ ತಮ್ಮ ಸಹಕಾರ, ಸಹಾಯ, ಯೋಗದಾನ ಮಾಡುತ್ತಾ ಬಂದಿದ್ದಾರೆ. ಹರೀಶ್ ಶೆಟ್ಟಿಯವರು ಒಬ್ಬ ಕುಶಲ ಹಾಗೂ ಸಮರ್ಥ ಸಂಘಟಕರು. ಒಳ್ಳೆಯ ಅಂಗಸೌಷ್ಟವ,ಹಾಗೂ ಕ್ರೀಡಾಸಕ್ತರಾದ ಹರೀಶ್ ರವರು ತಮ್ಮ ಶಾಲಾ ಕಾಲೇಜಿನ ದಿನಗಳಿಂದಲೂ ಹಲವಾರು ಪ್ರಶಸ್ತಿ, ಪದಕಗಳನ್ನು ಸತತವಾಗಿ ಗಳಿಸುತ್ತಾ ಬಂದಿದ್ದಾರೆ.'ಮಿಸ್ಟರ್ ಮ್ಯಾಂಗಲೋರ್ ಯೂನಿವರ್ಸಿಟಿ ಪ್ರಶಸ್ತಿ', ೩ ವರ್ಷ ಸತತವಾಗಿ ಗಳಿಸಿದ್ದಾರೆ. 'ವಿಜಯ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್ ಗೆ ಅಧ್ಯಕ್ಷರು', ಅವರ ವಿದ್ಯಾರ್ಥಿ ಜೀವನದಲ್ಲೇ 'ಮುಲ್ಕಿ ಹಾಗೂ ಅಲ್ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್ ಗೆ ಅಧ್ಯಕ್ಷರಾಗಿದ್ದರು'.

ವ್ಯಕ್ತಿತ್ವ[ಬದಲಾಯಿಸಿ]

ಮನೆತನ,ಜನನ ಹಾಗೂ ವಿದ್ಯಾಭ್ಯಾಸ[ಬದಲಾಯಿಸಿ]

ಹರೀಶ್ ರವರು, ಯಳತೂರು ಗುಥು ರಾಮಣ್ಣ ಶೆಟ್ಟಿ, ಹಾಗೂ ಐಕಳ ಕೂರಂಬಿ ಗುಥು ದೇವಕಿ ಆರ್ ಶೆಟ್ಟಿ ಪರಿವಾರದಲ್ಲಿ ೧೯, ಏಪ್ರಿಲ್,೧೯೬೧ ರಲ್ಲಿ ಜನಿಸಿದರು. ತಮ್ಮ ಆರಂಭಿಕ ಶಿಕ್ಷಣವನ್ನು ಶಿಮಂತೂರ್ ಶಾರದಾ ಹೈ ಸ್ಕೂಲಿನಲ್ಲಿ ಹಾಗು ಮುಲ್ಕಿಯ ವಿಜಯ ಕಾಲೇಜಿನಲ್ಲಿ ಪದವಿ ಗಳಿಸಿದರು. ಬಾಲ್ಯದ ದಿನಗಳಲ್ಲೇ ಸಮಾಜ ಸೇವೆ, ಸಂಘಟನಾ ಕೌಶಲ್ಯ ಅವರಿಗೆ ಮೈಗೂಡಿತ್ತು. ೧೯೮೩-೮೪ ರಲ್ಲಿ ಮುಲ್ಕಿಯ ವಿಜಯಾ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್ ಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಮುಂಬಯಿಗೆ ಪಾದಾರ್ಪಣೆ[ಬದಲಾಯಿಸಿ]

ಹರೀಶ್ ಶೆಟ್ಟಿಯವರು, ತಮ್ಮ ವಿದ್ಯಾಭ್ಯಾಸ ಮುಗಿದ ಮೇಲೆ, ಮುಂಬಯಿ ನಗರಕ್ಕೆ ಆಗಮಿಸಿ, ಹೋಟೆಲ್ ಉದ್ಯಮವನ್ನು ಶುರು ಮಾಡಿದರು.,ಮುಂಬಯಿ ಮಹಾನಗರದ ಸಾಂಸ್ಕತಿಕ ಹಾಗೂ ಸಂಘ-ಸಂಸ್ಥೆಗಳ ಜೊತೆ ತಮ್ಮನ್ನು ತೊಡಗಿಸಿಕೊಂಡರು. ಹಲವಾರು ದೇವಸ್ಥಾನಗಳಿಗೆ ದೇಣಿಗೆಹಣ ಸಂಗ್ರಹಿಸಿ,ತಾವೂ ದಾನಮಾಡುತ್ತಾ ಬಂದಿದ್ದಾರೆ. ದುರ್ಗಾಪರಮೇಶ್ವರಿ ಅಮ್ಮನವರ ಪರಮ ಭಕ್ತರು. ಶ್ರೀಕ್ಷೇತ್ರ ಕಟೀಲಿನ ದುರ್ಗಾಂಬಿಕೆ ದೇವರ ಕೃಪೆಯಿಂದ ಅವರ ಉದ್ಯಮ ಕ್ಷೇತ್ರ ಮುನ್ನಡೆಯುತ್ತಾ ಬಂದಿದೆಯೆಂದು ಅವರು ಪ್ರಬಲವಾಗಿ ನಂಬುತ್ತಾರೆ.

ಅಬಿನಂದನಾ ಸಮಾರಂಭ[ಬದಲಾಯಿಸಿ]

 1. ವರ್ಷ ೨೦೧೧ ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರು. [೩] ಹರೀಶ್ ಐಕಳರ ಅಭಿನಂದನಾ ಕಾರ್ಯಕ್ರಮವನ್ನು, ೬ ನೇ ನವೆಂಬರ್, ೨೦೧೧ ರಲ್ಲಿ ಮುಂಬಯಿ ನಗರದ ಉಪನಗರ ಕುರ್ಲಾ ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ತರಂಗ ವಾರಪತ್ರಿಕೆಯ ರುವಾರಿ, ಶ್ರೀಮತಿ ಸಂಧ್ಯಾ. ಎಸ್. ಪೈ. ಆದಿಯಾಗಿ ಹಲವಾರು ಗಣ್ಯವ್ಯಕ್ತಿಗಳು ಆಗಮಿಸಿದ್ದರು.

ಪ್ರಶಸ್ತಿಗಳು[ಬದಲಾಯಿಸಿ]

 1. ೧೯೮೨-೮೩,ರಲ್ಲಿ 'ಆಲ್ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್ ಜಂಟಿ ಕಾರ್ಯದರ್ಶಿ'ಯಾಗಿದ್ದರು. ಕಾಲೇಜಿನ ದಿನಗಳಲ್ಲಿ ಹಲವಾರು ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು.  
 2. 'ಮಿಸ್ಟರ್ ಮ್ಯಾಂಗಲೋರ್ ಯುನಿವರ್ಸಿಟಿ ಪ್ರಶಸ್ತಿ' (Best Physique Contest) ಸತತವಾಗಿ (1982-83 ಹಾಗೂ 1983-84 ರಲ್ಲಿ) ಗಳಿಸಿದರು. 
 3. 'ಮಿಸ್ಟರ್ ಸೌತ್ ಕೆನರಾ ಪ್ರಶಸ್ತಿ' ವಿಜೇತರು (1982)
 4. 'ಮಿಸ್ಟರ್ ಕರ್ನಾಟಕ ಕಿಶೋರ್' (1982)
 5. 'ಭಾರತ್ ಕಿಶೋರ್ ರಜತ ಪದಕ ವಿಜೇತರು',ನ್ಯಾಷನಲ್ ಬಾಡಿ ಬಿಲ್ಡಿಂಗ್ ಪ್ರತಿಯೋಗೀತೆಯಲ್ಲಿ.(ಜಮ್ ಶೇಡ್ ಪುರದಲ್ಲಿ 1983).
 6. '೩ ಸ್ಟಾರ್ ಗಳನ್ನು ಗಳಿಸಿದ್ದಾರೆ'. (ಮೆರಿಟ್ ಸರ್ಟಿಫಿಕೇಟ್ ನ್ಯಾಷನಲ್ ಫಿಸಿಕಲ್ ಎಫಿಶಿಯೆನ್ಸಿ ಟೆಸ್ಟ್ ಸ್ಪರ್ಧೆಯಲ್ಲಿ ಭಾರತ ಸರಕಾರದ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇಮಾಭಿವೃದ್ದಿ ಮಂತ್ರಾಲಯದ ಇಲಾಖೆಯ ವತಿಯಿಂದ). 
 7. ಮೆರಿಟ್ ಸರ್ಟಿಫಿಕೇಟ್ ನ್ಯಾಷನಲ್ ಫಿಸಿಕಲ್ ಎಫಿಶಿಯೆನ್ಸಿ ಟೆಸ್ಟ್, (ಭಾರತ ಸರಕಾರ ಆಯೋಜಿಸಿದ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇಮಾಭಿವೃದ್ದಿ ಮಂತ್ರಾಲಯದ ಇಲಾಖೆಯ ವತಿಯಿಂದ)

ಹರೀಶರ ಹಲವು ಜನಪರ ಕೊಡುಗೆಗಳು ಹೀಗಿವೆ[ಬದಲಾಯಿಸಿ]

 1. ಶ್ರೀ ಕ್ಷೇತ್ರ ಕಟೀಲಿನಲ್ಲಿ ಮಹಾದ್ವಾರ ನಿರ್ಮಾಣ,  
 2. ಬಪ್ಪನಾಡು ಶ್ರೀ ಕ್ಷೇತ್ರದಲ್ಲಿ ಮಹಾದ್ವಾರ ನಿರ್ಮಾಣ, 
 3. ಕಟೀಲ್ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದ ಸಮಿತಿ ಅಧ್ಯಕ್ಷ, ಬ್ರಹ್ಮಕಲಶೋತ್ಸವದ ಮುಂಬೈ ನಗರದ ಕಟೀಲು, ಮುಂಬಯಿನ ಮಹಾಮಾಯಿ ಮೂರೂ ಕಾವೇರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ದುಡಿದಿದ್ದಾರೆ. 
 4.  ಮುಂಬಯಿನ ಎಳತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ.ಕಂಜಂಗಢ ಶ್ರೀ ನಿತ್ಯಾನಂದ ಎಜ್ಯುಕೇಶನ್ ಟ್ರಸ್ಟ್ ನ ಡೈರೆಕ್ಟರ್, 
 5. ೧೯೯೪ ನಿಂದಲೇ ಮುಂಬೈನ ಕುರ್ಲಾ ಜಿಲ್ಲೆಯಲ್ಲಿರುವ ಬಂಟ್ಸ್ ಸಂಘ ಮುಂಬಯಿ ಜೊತೆ ಒಡನಾಟವಿತ್ತು. ಆ ಸಂಸ್ಥೆಯ ವೈಸ್ ಚೇರ್ಮನ್ ಅಲ್ಲದೆ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಬಂಟ್ಸ್ ಸಂಘದ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ[ಬದಲಾಯಿಸಿ]

 1. ಎಸ್.ಎಂ.ಶೆಟ್ಟಿ. ಸ್ಕೂಲ್ ಪಾವಾಯಿಯ ವೈಸ್ ಚೇರ್ಮನ್,
 2. ಸ್ಪೋರ್ಟ್ಸ್ ಸಮಿತಿ ಚೇರ್ಮನ್, (೭ ವರ್ಷಗಳಿಂದ),
 3.  ಶಿಕ್ಷಣ ಸಮಿತಿ ಚೇರ್ಮನ್,
 4. ಬಂಟ್ಸ್ ಸಂಘದ ಅಧ್ಯಕ್ಷ, (೪ ಬಾರಿ ಸತತವಾಗಿ ಬಂಗಾರದ ಪದಕ ವಿಜೇತರು)
 5. , ಬೆಸ್ಟ್ ವರ್ಕರ್ ಟ್ರೋಫಿ ವಿಜೇತರು,

ಪರಿವಾರ[ಬದಲಾಯಿಸಿ]

ಶ್ರೀಮತಿ ಚಂದ್ರಿಕಾ ಎಚ್.ಶೆಟ್ಟಿಯವರನ್ನು ಮದುವೆಯಾಗಿ, ಅರ್ಜುನ್ ಎಚ್. ಶೆಟ್ಟಿ ಎಂಬ ಮಗ, ಹಾಗೂ ಸನ್ನಿಧಿ ಎಚ್. ಶೆಟ್ಟಿ ಎಂಬ ಮಗಳನ್ನು  ಪಡೆದಿದ್ದಾರೆ. ಐಕಳ ದಂಪತಿಗಳ ರಜತ ವಿವಾಹೋತ್ಸವ ಕಟೀಲಿನ ಭ್ರಮರಾಂಬ ದೇವಾಲಯದಲ್ಲಿ ಜರುಗಿತು.[೪]

ದಣಿವರಿಯದ,ಉತ್ಸಾಹಿ ಪ್ರವೃತ್ತಿ[ಬದಲಾಯಿಸಿ]

ಹರೀಶ್, ಸರಳ ವ್ಯಕ್ತಿತ್ವದ ಅತ್ಯುತ್ತಮ ಆಡಳಿತಗಾರ. ಒಂದು ಕಾರ್ಯವನ್ನು ಕೈಗೆತ್ತಿಕೊಂಡರೆ ಅದು ಸಂಪೂರ್ಣವಾಗಿ ಯಶಸ್ಸನ್ನು ಪಡೆದಮೇಲೆಯೇ ಅವರು ವಿಶ್ರಮಿಸುವುದು. ಅವರ ತರಹದ ಸಮಾನ ಆಸಕ್ತಿಗಳ ಜೊತೆಗಾರರಿಂದಲೂ ಅತರಹದ ಕಾಳಜಿ ಜವಾಬ್ದಾರಿಯನ್ನು ನಿರೀಕ್ಷಿಸುತ್ತಾರೆ. ಬಂಟ್ಸ್ ಸಂಘ , ಮುಂಬಯಿನ ಅಧ್ಯಕ್ಷರಾಗಿ ತಮ್ಮ ದಿನದ ಪ್ರಮುಖ ಸಮಯವನ್ನು ಅದಕ್ಕಾಗಿ ಮೀಸಲಾಗಿಟ್ಟಿದ್ದಾರೆ. ಅವರು ಕೈಗೊಂಡಿರುವ ಹಲವಾರು ಸಮಾಜ-ಮುಖಿ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಅವರ ಪತ್ನಿ, ಹಾಗೂ ಮಗ ಅರ್ಜುನ್, ರವರ ಪಾಲು ಹೆಚ್ಚಿನದಾಗಿದೆ.

ಉಲ್ಲೇಖಗಳು[ಬದಲಾಯಿಸಿ]

 1. ಐಕಳ ಊರಿನ ವಿವರ
 2. ಕಿನ್ನಿಗೋಳಿ ಪೋಸ್ಟಲ್ ಡಿಸ್ಟ್ರಿಕ್ಟ್
 3. Rons Bantwal, ಐಕಳ ಹರೀಶ್ ಶೆಟ್ಟಿಯವರ ಅಭಿನಂದನಾ ಸಮಾರಂಭ,ಮುಂಬಯಿ, Kemmannu News Network, 08-11-2011 15:14:27
 4. karnavali karnaataka, ಕಟೀಲು ಭ್ರಮರಾಂಬೆಗೆ ರಂಗಪೂಜೆ, ಚಿನ್ನದ ರಥೋತ್ಸವ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]