ಐಎಸ್ಓ-9000
ಗೋಚರ
ಐಎಸ್ಒ ೯೦೦೦ ಎನ್ನುವುದು ಉತ್ತನ್ನಗಳ ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳಲ್ಲೊಂದು[೧]. ಸಂಸ್ಥೆಗಳು ತಮ್ಮ ಉತ್ಪನ್ನಗಳ ಗುಣಮಟ್ಟ ಗ್ರಾಹಕರ, ಶಾಸನಗಳ ಮಾನದಂಡಗಳಿಗೆ ಅನುಗುಣವಾಗಿರುವಂತೆ ನೋಡಿಕೊಳ್ಳಲು ಇದು ಸಹಕರಿಸುತ್ತದೆ.
ಇತಿಹಾಸ
[ಬದಲಾಯಿಸಿ]ಐಎಸ್ಒ ೯೦೦೧ವನ್ನು ೧೯೮೭ರಲ್ಲಿ ಸ್ಥಾಪಿಸಲಾಯಿತು.ಇದು ಬಿ.ಎಸ್.ಐ([೨])ನ ೫೭೫೦ ಸರಣಿಯ ಮಾನದಂಡಗಳ ಮೇಲೆ ಆಧಾರಿತವಾಗಿದೆ.
ಐಎಸ್ಒ ೯೦೦೦ ಸರಣಿಯ ಗುಣಮಟ್ಟ ನಿರ್ವಹಣಾ ನಿಯಮಗಳು
[ಬದಲಾಯಿಸಿ]ಐ.ಎಸ್.ಓ ೯೦೦೦ ಸರಣಿ ಎಂಟು ನಿರ್ವಹಣಾ ನಿಯಮಗಳನ್ನು ಒಳಗೊಂಡಿದೆ. ಅವೆಂದರೆ
- ಗ್ರಾಹಕ ಕೇಂದ್ರಿತ- ಸಂಸ್ಥೆಗಳು ಗ್ರಾಹಕರ ಇಂದಿನ ಮತ್ತು ಭವಿಷ್ಯದ ಅಗತ್ಯತೆಗಳನ್ನು ಮನಗಂಡು ಅವುಗಳನ್ನು ಪೂರೈಸುವತ್ತ ಗಮನಹರಿಸಬೇಕು.
- ನಾಯಕತ್ವ - ನಾಯಕರು ಸಂಸ್ಥೆಯ ಧ್ಯೇಯ ಮತ್ತು ದಿಕ್ಕುಗಳನ್ನು ನಿರ್ಧರಿಸುತ್ತಾರೆ. ಸಂಸ್ಥೆಯಲ್ಲಿ ಕೆಲಸ ಮಾಡುವವರು ಸಂಸ್ಥೆಯ ಧ್ಯೇಯಕ್ಕನುಗುಣವಾಗಿ ಕೆಲಸ ಮಾಡುವಂತಹ ಉತ್ತಮ ವಾತಾವರಣವನ್ನು ನಿರ್ಮಿಸಬೇಕಾದ್ದು ನಾಯಕರ ಕರ್ತವ್ಯ.
- ಜನರ ಭಾಗವಹಿಸುವಿಕೆ -ಸಂಸ್ಥೆಯ ಎಲ್ಲಾ ಸ್ಥರಗಳ ಜನರು ಭಾಗವಹಿಸುವಿಕೆ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ
- ಪ್ರಕ್ರಿಯೆ - ಸಂಬಂಧಪಟ್ಟ ಸಂಪನ್ಮೂಲ ಮತ್ತು ಚಟುವಟಿಕೆಗಳನ್ನು ಒಂದು ವ್ಯವಸ್ಥಿತ ಪ್ರಕ್ರಿಯೆಯಾಗಿ ನಿರ್ವಹಿಸಿದಾಗ ನಿರೀಕ್ಷಿತ ಉದ್ದೇಶವನ್ನು ಈಡೇರಿಸಲು ಸಾಧ್ಯವಾಗುತ್ತದೆ
- ನಿರ್ವಹಣಾ ವ್ಯವಸ್ಥೆ - ಪರಸ್ಪರ ಸಂಬಂಧಿತ ಚಟುವಟಿಕೆಗಳನ್ನು ಗುರುತಿಸಿ , ಅರ್ಥೈಸುವುದರಿಂದ ಉದ್ದೇಶಿತ ಧ್ಯೇಯಗಳನ್ನು ಸಾಧಿಸೋ ಸಾಮರ್ಥ್ಯವನ್ನು ಉತ್ತಮಪಡಿಸಬಹುದು.
- ನಿರಂತರ ಉನ್ನತೀಕರಣ - ಸಂಸ್ಠೆಯ ಸಾಮರ್ಥ್ಯವನ್ನು ನಿರಂತರವಾಗಿ ಉತ್ತಮಪಡಿಸಿಕೊಳ್ಳುತ್ತಾ ಸಾಗುವುದು ಸಂಸ್ಥೆಯ ಧ್ಯೇಯಗಳಲ್ಲೊಂದಾಗಿರಬೇಕು
- ವಾಸ್ತವಿಕೆ ನೆಲೆಗಟ್ಟಿನ ಮೇಲೆ ನಿರ್ಧಾರ ಕೈಗೊಳ್ಳುವಿಕೆ - ಉತ್ತಮ ನಿರ್ಧಾರಗಳು ಲಭ್ಯ ಮಾಹಿತಿಯ ವ್ಯವಸ್ಠಿತ ಅವಲೋಕನದಿಂದ ಸಾಧ್ಯವಾಗುತ್ತದೆ.
- ಪರಸ್ಪರ ಲಾಭಕರ ಮಾರಾಟಗಾರರ ಸಂಬಂಧ - ಒಂದು ಸಂಸ್ಥೆ ಮತ್ತು ಅದಕ್ಕೆ ಮೂಲವಸ್ತುಗಳನ್ನು ಸರಬರಾಜು ಮಾಡುವ ಸರಬರಾಜುದಾರದ ಸಂಬಂಧ ಪರಸ್ಪರ ಲಾಭಯುತವಾಗಿರಬೇಕು
ಐಎಸ್ಒ ೯೦೦೧ರಲ್ಲಿರುವ ಅಂಶಗಳು
[ಬದಲಾಯಿಸಿ]- ಪುಟ ೪ - ಮುನ್ನುಡಿ
- ಪುಟ ೫-೧೦ - ಪರಿಚಯ
- ಪುಟ ೧೧-೧೪ - ಅಗತ್ಯತೆಗಳು
- ವಿಭಾಗ ೧ - ವ್ಯಾಪ್ತಿ
- ವಿಭಾಗ ೨ - ಪ್ರಮಾಣಕ ಉಲ್ಲೇಖ(normative reference)
- ವಿಭಾಗ ೩ - ನಿಯಮಗಳು ಮತ್ತು ವ್ಯಾಖ್ಯಾನಗಳು(ಐಎಸ್ಒ ೯೦೦೦ರಲ್ಲಿಲ್ಲದ ಐಎಸ್ಒ ೯೦೦೧ರಲ್ಲಿ ಹೊಸದಾಗಿ ಸೇರ್ಪಡೆಯಾದವುಗಳು)
- ವಿಭಾಗ ೪ - ಗುಣಮಟ್ಟ ನಿರ್ವಹಣಾ ವ್ಯವಸ್ಥೆ
- ವಿಭಾಗ ೫ - ನಿರ್ವಹಣಾ ಜವಾಬ್ದಾರಿ
- ವಿಭಾಗ ೬ - ಸಂಪನ್ಮೂಲ ನಿರ್ವಹಣೆ
- ವಿಭಾಗ ೭ - ಉತ್ಪನ್ನ ಪರಿವರ್ತನೆ
- ವಿಭಾಗ ೮ - ಅಳತೆ, ವಿಶ್ಲೇಷಣೆ ಮತ್ತು ನಿರ್ವಹಣೆ
- ಪುಟ ೧೫ - ಇತರ ಮಾನದಂಡಗಳೊಂದಿಗೆ ಹೋಲಿಕೆ
- ಪುಟ ೨೩ - ಗ್ರಂಥಸೂಚಿ
ಐಎಸ್ಒ ೯೦೦೧ ಮಾನದಂಡ ಬೆಳೆದುಬಂದ ರೀತಿ
[ಬದಲಾಯಿಸಿ]೧೯೮೭ರ ಆವೃತ್ತಿ
[ಬದಲಾಯಿಸಿ]ಐ.ಎಸ್.ಓ ೧೯೮೭ ರ ರಚನೆ U.K ಯ BS 5750 ಮಾನದಂಡದಂತೆಯೇ ಇತ್ತು
೧೯೯೪ ರ ಆವೃತ್ತಿ
[ಬದಲಾಯಿಸಿ]1994ರ ಆವೃತ್ತಿಯಲ್ಲಿ ಮುಂಜಾಗೃತ ಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಯಿತು
೨೦೦೦ರ ಆವೃತ್ತಿ
[ಬದಲಾಯಿಸಿ]೨೦೦ರ ಆವೃತ್ತಿಯ ಮೂಲಕ ಹಿಂದಿನ ಮೂರೂ ಆವೃತ್ತಿಗಳನ್ನು ಬದಲಾಯಿಸಲಾಯಿತು.
೨೦೦೮ರ ಆವೃತ್ತಿ
[ಬದಲಾಯಿಸಿ]ಇದರಲ್ಲಿ ೨೦೦ರ ಆವೃತ್ತಿಗೆ ಕೆಲ ಬದವಾವಣೆಗಳನ್ನು ಮತ್ತು ಹೊಸ ಸೇರ್ಪಡೆಗಳನ್ನು ಜೋಡಿಸಲಾಯಿತು
೨೦೧೫ರ ಆವೃತ್ತಿ
[ಬದಲಾಯಿಸಿ]ಅತ್ಯಂತ ನವೀನ ಆವೃತ್ತಿ