ಐಆರ್ಸಿಟಿಸಿ
ಚಿತ್ರ:IRCTC Logo.svg | |
ಸಂಸ್ಥೆಯ ಪ್ರಕಾರ | Subsidiary of the Indian Railways |
---|---|
ಮುಖ್ಯ ಕಾರ್ಯಾಲಯ | ನವ ದೆಹಲಿ, ಭಾರತ |
ವ್ಯಾಪ್ತಿ ಪ್ರದೇಶ | ಭಾರತ |
ಉದ್ಯಮ | Railways |
ಸೇವೆಗಳು | Catering, Tourism and Online Ticketing |
ಪೋಷಕ ಸಂಸ್ಥೆ | Indian Railways |
ಜಾಲತಾಣ | IRCTC website |
ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್ (IRCTC) (ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಯೋಜಿತ ಪ್ರವಾಸ)ಎಂಬುದು ಭಾರತೀಯ ರೈಲ್ವೆ ಇಲಾಖೆಯ ಅಂಗ ಸಂಸ್ಥೆಯಾಗಿದ್ದು, ಇದು ರೈಲ್ವೆ ಇಲಾಖೆಗೆ ಸಂಬಂಧಿಸಿದ ಆಹಾರ ಸರಬರಾಜು, ಪ್ರವಾಸ ಮತ್ತು ಆನ್ ಲೈನ್ ಟಿಕೆಟ್ ಕಾದಿರಿಸುವ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತದೆ.
ಸೇವೆಗಳು
[ಬದಲಾಯಿಸಿ]ಆಹಾರ ಸರಬರಾಜು
[ಬದಲಾಯಿಸಿ]IRCTC1, ರೈಲು ಗಾಡಿಗಳ ಮೇಲೆ ಮತ್ತು ಭಾರತದೆಲ್ಲೆಡೆ ಇರುವ ರೈಲ್ವೆ ನಿಲ್ದಾಣಗಳ ಮೇಲೆ ಒದಗಿಸುವ ಆಹಾರ ಪೂರೈಕೆ ಸೇವೆಯ ಮೇಲ್ವಿಚಾರಕನಾಗಿದೆ. ರೈಲು ಕ್ರಮಿಸುವ ದೂರವನ್ನು ಮತ್ತು ಕನಿಷ್ಠ ಪ್ರಯಾಣಿಕರ ಲೋಡ್ ಫ್ಯಾಕ್ಟರ್ ಅನ್ನು ಅನುಸರಿಸಿ, ರೈಲ್ವೆ ಇಲಾಖೆ ಅದರದೇ ಆದ ಭೋಜನ ವಸ್ತುಗಳ ಕೋಣೆಯೊಂದಿಗೆ ರೈಲು ಗಾಡಿಯನ್ನು ಸಜ್ಜುಗೊಳಿಸಬಹುದು ಅಥವಾ ಮಾರ್ಗದಲ್ಲಿ ಬರುವ ಆಯ್ದ ನಿಲ್ದಾಣಗಳಲ್ಲಿ ಆಹಾರವನ್ನು ಒದಗಿಸಬಹುದು.
ಆನ್ ಲೈನ್ ನ ಮೂಲಕ ಟಿಕೆಟ್ ಕಾದಿರಿಸುವುದು
[ಬದಲಾಯಿಸಿ]IRCTC, ಭಾರತದಲ್ಲಿ ರೈಲ್ವೆ ಟಿಕೆಟ್ ಕಾದಿರಿಸುವ ವ್ಯವಸ್ಥೆಯನ್ನು ಬದಲಾಯಿಸಿದ್ದಾಕ್ಕಾಗಿ ಹೆಸರುವಾಸಿಯಾಗಿದೆ. ಇದು ಮೊದಲ ಬಾರಿಗೆ ಅದರ ವೆಬ್ ಸೈಟ್ ನ ಮೂಲಕ, ಹಾಗು GPRS ಅಥವಾ SMS ನ ಮೂಲಕ ಮೊಬೈಲ್ ಫೋನ್ ಗಳಿಂದ, ಅಂತರಜಾಲ-ಆಧಾರಿತ ರೈಲ್ವೆ ಟಿಕೆಟ್ ಕಾದಿರಿಸುವ ವ್ಯವಸ್ಥೆಯನ್ನು ಆರಂಭಿಸಿತು. ಟಿಕೆಟ್ ನ ರದ್ದುಪಡಿಸುವಿಕೆ ಅಥವಾ ಇತರ ಮಾರ್ಪಾಡುಗಳನ್ನು ಕೂಡ ಆನ್ ಲೈನ್ ನ ಮೂಲಕ ಮಾಡಬಹುದು. ಇ-ಟಿಕೆಟ್ ಗಳ ಜೊತೆಯಲ್ಲಿ, IRCTC ಐ-ಟಿಕೆಟ್ ಗಳ ಅವಕಾಶವನ್ನು ಕೂಡ ನೀಡುತ್ತದೆ. ಇವುಗಳು ಆನ್ ಲೈನ್ ನಲ್ಲಿ ಕಾದಿರಿಸಿದಂತಹ ಮತ್ತು ಅಂಚೆಯ ಮೂಲಕ ರವಾನಿಸಿದಂತಹವುಗಳನ್ನು ಹೊರತುಪಡಿಸಿದಂತಹ ಕಾಯಂ ಟಿಕೆಟ್ ಗಳಂತಿರುತ್ತವೆ. ಟಿಕೆಟ್ ಗಳ PNR ಸ್ಥಿತಿಗತಿಯ ಮಾಹಿತಿಯನ್ನು ಕೂಡ ಇತ್ತೀಚೆಗೆ ಇಲ್ಲಿಯೇ ದೊರೆಯುವಂತೆ ಮಾಡಲಾಗಿದೆ. ಮುಂಬಯಿ ನ ಉಪನಗರ ರೈಲ್ವೆ ಯಲ್ಲಿರುವ ಕಂಪ್ಯೂಟರ್ ಗಳು, IRCTC ವೆಬ್ ಸೈಟ್ ನ ಮೂಲಕ ಸೀಸನ್ ಟಿಕೆಟ್ ಗಳನ್ನು ಕೂಡ ಕಾದಿರಿಸಬಲ್ಲವು. IRCTC ಇತ್ತೀಚೆಗೆ ಪದೇ ಪದೇ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿ "ಸುಬಹ್ ಯಾತ್ರ" ಎಂದು ಕರೆಯಲಾಗುವ ಲಾಯಲ್ಟಿ(ಪ್ರಯಾಣ ದರ ವಿನಾಯಿತಿ) ಕಾರ್ಯಾಕ್ರಮವನ್ನು ಪ್ರಾರಂಭಿಸಿತು. ಈ ಕಾರ್ಯಾಕ್ರಮದ ಮೂಲಕ, ಮುಗಂಡ ವಾರ್ಷಿಕ ಶುಲ್ಕ ವನ್ನು ಪಾವತಿಸುವುದರೊಂದಿಗೆ, ಪ್ರಯಾಣಿಕರು ವರ್ಷವಿಡೀ ಕಾದಿರಿಸುವ ಎಲ್ಲಾ ಟಿಕೆಟ್ ಗಳ ಮೇಲೆ ವಿನಾಯಿತಿಯ ಪ್ರಯೋಜನವನ್ನು ಪಡೆಯಬಹುದಾಗಿದೆ.[೧]
ಪ್ರವಾಸೋದ್ಯಮ
[ಬದಲಾಯಿಸಿ]IRCTC ಸ್ಥಳೀಯ ಮತ್ತು ವಿದೇಶದ ಪ್ರವಾಸಿಗರಿಗಾಗಿ,ಮಿತವ್ಯಯದ ಮತ್ತು ಡೀಲಕ್ಸ್ ಪ್ಯಾಕೇಜ್ ಪ್ರವಾಸವನ್ನು ಕೂಡ ಏರ್ಪಡಿಸುತ್ತದೆ. ಮಿತವ್ಯಯದ ಪ್ರವಾಸಿಗರಿಗೆ ಭಾರತದ ಜನಪ್ರಿಯ ಪ್ರವಾಸಿ ಸ್ಥಳಗಳನ್ನೆಲ್ಲಾ ಒಳಗೊಂಡಿರುವ, ಪ್ರಸಿದ್ಧ ಪ್ರವಾಸ ಪ್ಯಾಕೇಜ್ ಎಂದರೆ ಭಾರತ್ ದರ್ಶನ್ ಆಗಿದೆ.[೨] ಐಶಾರಾಮಿ ಪ್ರವಾಸದ ಪ್ಯಾಕೇಜ್ ಗಳು ಕೂಡ ಲಭ್ಯವಿದೆ. ಇವುಗಳು ಕೆಳಕಂಡಂತಹ ವಿಶೇಷವಾದ ಐಶಾರಾಮಿ ರೈಲುಗಾಡಿಗಳನ್ನು ಒಳಗೊಂಡಿರುತ್ತವೆ:
- ಪ್ಯಾಲೆಸ್ ಆನ್ ವೀಲ್ಸ್
- ರಾಯಲ್ ಒರಿಯಂಟ್ ಎಕ್ಸ್ ಪ್ರೆಸ್
- ಗೋಲ್ಡನ್ ಚಾರಿಯಟ್
- ಡೆಕನ್ ಓಡಿಸ್ಸೆ
- ರಾಯಲ್ ರಾಜಸ್ಥಾನ್ ಆನ್ ವೀಲ್ಸ್
- ಬುದ್ಧಿಸ್ಟ್ ಸರ್ಕ್ಯೂಟ್ ಟ್ರ್ಯೇನ್
ಅಲ್ಲದೇ , IRCTC ಮಹಾರಾಜ ಎಕ್ಸ್ ಪ್ರೆಸ್ ಕಾರ್ಯಾಚರಣೆಯಲ್ಲಿ ಪಾಲುದಾರನಾಗಿದೆ.[೩] ಯಾರು ಬೇಕಾದರು railtourismindia.com.[೪] ಅನ್ನು ಪ್ರವೇಶಿಸಬಹುದು. ಅಲ್ಲದೇ ರೈಲು ಗಾಡಿ ಪ್ರವಾಸದ ಪ್ಯಾಕೇಜ್, ರಜಾಕಾಲದ ಪ್ಯಾಕೇಜ್, ಹೋಟೆಲ್ ಗಳು , ಕ್ಯಾಬ್ ಗಳು(ಬಾಡಿಗೆ ಮೋಟಾರು ಗಾಡಿ), ಪ್ರವಾಸಿಗರ ರೈಲುಗಾಡಿ ಆನ್ ಲೈನ್ ಗಳನ್ನು ಕಾದಿರಿಸಬಹುದು. ರೂಢಿಯಲ್ಲಿರುವ ಪ್ರವಾಸದ ಹೊರತಾಗಿ, IRCTC ಜಲ ಕ್ರೀಡೆಗಳನ್ನು, ಸಾಹಸ ಮತ್ತು ವಾನ್ಯಜೀವಿತಾಣಕ್ಕೆ ಪ್ರಯಾಣಗಳು ಇತ್ಯಾದಿಯನ್ನು ಒಳಗೊಂಡಂತಹ, ಸಾಹಸಮಯ ಪ್ರವಾಸ ಪ್ಯಾಕೇಜ್ ನ ಅವಕಾಶವನ್ನು ಒದಗಿಸಿದೆ. ಅಲ್ಲದೇ ನಿರ್ದಿಷ್ಟ ಅಗತ್ಯತೆಗಳಿಗೆ ಅನುಸಾರವಾಗಿ ರೂಢಿಯಲ್ಲಿರುವ ಪ್ರವಾಸಗಳಿಗೆ ಅನುಕೂಲತೆಗಳನ್ನು ಮಾಡಿಕೊಡುವುದು ಕೂಡ ಅಧಿಕ ಆಕರ್ಷಣೆಯಾಗಿದೆ.
ಪ್ರಶಸ್ತಿಗಳು ಮತ್ತು ಸಾಧನೆಗಳು
[ಬದಲಾಯಿಸಿ]ಆನ್ ಲೈನ್ ವ್ಯವಸ್ಥೆಯನ್ನು ಪ್ರಾರಂಭಿಸಿದ ಸ್ವಲ್ಪ ಕಾಲದಲ್ಲೆ IRCTC ವೆಬ್ ಸೈಟ್, 2003 ರಲ್ಲಿ ಸುಮಾರು ಆರು ಲಕ್ಷ ನೋಂದಣಿಗೊಂಡ ಬಳಕೆದಾರರನ್ನು ಹೊಂದಿತಲ್ಲದೇ, ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಮತ್ತು ಅತ್ಯಂತ ವೇಗವಾಗಿ ಬೆಳೆದ ಇ-ಕಾಮರ್ಸ್ ವೆಬ್ ಸೈಟ್ ಆಗಿದೆ.[೫] IRCTC ಗಳಿಸಿದಂತಹ ಇತರ ಪ್ರಶಸ್ತಿಗಳು:
- ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ, ನ್ಯಾಷನಲ್ ಟೂರಿಸಂ ಅವಾರ್ಡ್ ಆಫ್ ಎಕ್ಸಲೆನ್ಸ್ (ಶ್ರೇಷ್ಠತೆಯ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿ) ಅನ್ನು ನೀಡಿ ಗೌರವಿಸಿತು.
- ಹರಿಯಾಣ ಸರ್ಕಾರ ಮತ್ತು ಭಾರತದ ಸರ್ಕಾರದ IT ವಿಭಾಗ ಒಟ್ಟಾಗಿ, 2007-08 ನೇ ಸಾಲಿನ ನ್ಯಾಷನಲ್ ಅವಾರ್ಡ್ ಫಾರ್ ಇ-ಗವರ್ನೆನ್ಸ್ (ಇ-ಗವರ್ನೆನ್ಸ್ ಗಾಗಿ ರಾಷ್ಟ್ರೀಯ ಪ್ರಶಸ್ತಿ) ಅನ್ನು ನೀಡಿ ಗೌರವಿಸಿತು.
- CNBC ನಿಂದ "ಅತ್ಯುತ್ತಮ ಇ-ಗವರ್ನೆನ್ಸ್ PSU ಸೈಟ್" ಗಾಗಿ ಜೀನಿಯಸ್ ಆಫ್ ದಿ ವೆಬ್ ಅವಾರ್ಡ್ 2007 ಅನ್ನು ನೀಡಲಾಯಿತು.
- ಪಶ್ಚಿಮ ವಲಯದ IRCTC ಪ್ರವಾಸ ಘಟಕವನ್ನು, ಮುಂಬಯಿನಲ್ಲಿ 2008 ರ ಫೆಬ್ರವರಿ 9 ರಿಂದ 11 ರ ವರೆಗೆ ನಡೆದ, ಭಾರತದ ಪ್ರಯಾಣ ಮತ್ತು ಪ್ರವಾಸದ ಪ್ರದರ್ಶನ (TTF & OTM 2008)ದಲ್ಲಿ ಬೆಸ್ಟ್ ವ್ಯಾಲ್ಯೂ ಲೀಷರ್ ಪ್ರಾಡೆಕ್ಟ್ ವರ್ಗದಲ್ಲಿ ವಿಜೇತ ಎಂದು ಘೋಷಿಸಲಾಯಿತು.
- 2007-08 ನೇ ಸಾಲಿನ "ಅತ್ಯುತ್ತಮ ನಾಗರಿಕ ಕೇಂದ್ರೀಯ ಅನ್ವಯಿಕೆ"ಗಾಗಿ ನೀಡುವ ನ್ಯಾಷನಲ್ ಅವಾರ್ಡ್ ಫಾರ್ ಇ-ಗವರ್ನೆನ್ಸ್ (ಇ-ಗವರ್ನೆನ್ಸ್ ಗಾಗಿ ರಾಷ್ಟ್ರೀಯ ಪ್ರಶಸ್ತಿ)ಅನ್ನು ಗೆದ್ದುಕೊಂಡಿತು.
- IRCTC ಪ್ರವಾಸ ಘಟಕವನ್ನು, ಮುಂಬಯಿನಲ್ಲಿ 2007 ರ ಫೆಬ್ರವರಿ 10 ರಿಂದ 12 ರ ವರೆಗೆ ನಡೆದ ಭಾರತದ ಪ್ರಯಾಣ ಮತ್ತು ಪ್ರವಾಸ ಪ್ರದರ್ಶನ (TTF & OTM 2007)ದಲ್ಲಿ ಅತ್ಯಂತ ನಾವಿನ್ಯವನ್ನುಂಟು ಮಾಡುವ ಉತ್ಪನ್ನ ದ ವರ್ಗದಲ್ಲಿ ವಿಜೇತ ಎಂದು ಘೋಷಿಸಲಾಯಿತು.
- 2007 ರಲ್ಲಿ "ಅತ್ಯುತ್ತಮ ಇ-ಗವರ್ನೆನ್ಸ್ ಯೋಜನೆಗಾಗಿ", CSI-ನಿಹಿಲೆಂಟ್ ಇ-ಗವರ್ನೆನ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
- 2005 ರಲ್ಲಿ ICICI ಬ್ಯಾಂಕ್ ರೀಟೇಲ್ ಎಕ್ಸಲೆನ್ಸ್ ಪ್ರಶಸ್ತಿ ಯನ್ನು ಗೆದ್ದುಕೊಂಡಿತು.
- 2003 ಮತ್ತು 2004ರಲ್ಲಿ ಡೇಟಾಕ್ವೆಸ್ಟ್ ನಿಂದ ಪಾತ್ ಬ್ರೇಕರ್ ಪ್ರಶಸ್ತಿ ಯನ್ನು ಗೆದ್ದುಕೊಂಡಿತು.
- ಭಾರತ ಸರ್ಕಾರದ ರೈಲ್ವೆ ಸಚಿವಾಲಯದಿಂದ, ಮಿನಿ ರತ್ನ ಕ್ಯಾಟಗರಿ-1 ಯನ್ನು ನೀಡಲಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ "ಸುಬಹ್ ಯಾತ್ರ ಲಾಯಲ್ಟಿ ಪ್ರೋಗ್ರಾಂ". Archived from the original on 2010-11-25. Retrieved 2011-01-24.
- ↑ "ಭಾರತ್ ದರ್ಶನ್". Archived from the original on 2011-07-15. Retrieved 2011-01-24.
- ↑ http://timesofindia.indiatimes.com/city/kolkata-/Rs-1-lakh-a-night-on-Maharajas-Express/articleshow/5700045.cms
- ↑ "ಆರ್ಕೈವ್ ನಕಲು". Archived from the original on 2011-02-02. Retrieved 2011-01-24.
- ↑ "At your doorstep". The Hindu.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- IRCTC ವೆಬ್ ಸೈಟ್ Archived 2007-03-03 ವೇಬ್ಯಾಕ್ ಮೆಷಿನ್ ನಲ್ಲಿ.
- ಅಫೀಷಿಯಲ್ ಇಂಡಿಯನ್ ರೇಲ್ ಟೂರಿಸಮ್ ವೆಬ್ ಸೈಟ್ Archived 2011-02-02 ವೇಬ್ಯಾಕ್ ಮೆಷಿನ್ ನಲ್ಲಿ.