ವಿಷಯಕ್ಕೆ ಹೋಗು

ಏಷ್ಯನ್ ಫುಟ್ಬಾಲ್ ಒಕ್ಕೂಟ (ಎಎಫ್‍ಸಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Asian Football Confederation
ಚಿತ್ರ:Asian Football Confederation (logo).svg
ಸಂಕ್ಷಿಪ್ತ ಹೆಸರುAFC
ಧ್ಯೇಯವಾಕ್ಯONE ASIA ONE GOAL
ಸ್ಥಾಪನೆ8 ಮೇ 1954; 25603 ದಿನ ಗಳ ಹಿಂದೆ (1954-೦೫-08)
ಶೈಲಿSport organisation
ಪ್ರಧಾನ ಕಚೇರಿBukit Jalil, Kuala Lumpur, Malaysia
ಪ್ರದೇಶ served
Asia and Australia
Membership
47 member associations
ಅಧಿಕೃತ ಭಾಷೆ
English and Arabic
Salman Al-Khalifa
Vice-president
See list
General Secretary
Windsor Paul John (Acting)[೧]
ಪೋಷಕ ಸಂಸ್ಥೆz
FIFA
ಅಧಿಕೃತ ಜಾಲತಾಣwww.the-afc.com
World Map FIFA2

ಎಎಫ್‍ಸಿ[ಬದಲಾಯಿಸಿ]

 • ಏಷ್ಯನ್ ಫುಟ್ಬಾಲ್ ಒಕ್ಕೂಟವು(ಎಎಫ್‍ಸಿ) ಏಷ್ಯಾ ಮತ್ತು ಆಸ್ಟ್ರೇಲಿಯಾದ ಫುಟ್ಬಾಲ್ ಅಸೋಷಿಯೇಷನ್ ಆಡಳಿತದ ಮಂಡಳಿಯಾಗಿದೆ. ಇದು 47 ದೇಶಗಳನ್ನು ಹೊಂದಿದೆ; ಹೆಚ್ಚಾಗಿ ಏಷ್ಯನ್ ಮತ್ತು ಆಸ್ಟ್ರೇಲಿಯಾ ಖಂಡದ ಸದಸ್ಯ ದೇಶಗಳು ಇದರಲ್ಲಿವೆ. ಅಜರ್ಬೈಜಾನ್, ಜಾರ್ಜಿಯಾ, ಕಝಾಕಿಸ್ತಾನ್, ರಶಿಯಾ, ಮತ್ತು ಟರ್ಕಿ -ಇವು ಯುಇಎಪ್ಎ (UEFA)ಯ ಸದಸ್ಯರು, ಇವು ಯುರೋಪ್ ಮತ್ತು ಏಷ್ಯಾ ಪ್ರಾಂತ್ಯಗಳಲ್ಲಿ ಅಂತರ್ಖಂಡ ದೇಶಗಳಲ್ಲಿ ಸೇರಿವೆ. ಆದ್ದರಿಂದ ಎಎಫ್‍ಸಿಗೆ ಸೇರಿಲ್ಲ.[೨]

ಎಎಫ್‌ಸಿ ಕಪ್‌ ಬಗ್ಗೆ ವಿವರ[ಬದಲಾಯಿಸಿ]

 • ಎಎಫ್‌ಸಿ ಕಪ್‌ ಶುರುವಾಗಿದ್ದು 1956ರಲ್ಲಿ. ಇದು ವಿಶ್ವದ ಎರಡನೇ ಹಳೆಯ ಕಾಂಟಿನೆಂಟಲ್‌ ಫುಟ್‌ಬಾಲ್‌ ಟೂರ್ನಿ ಎಂಬ ಹಿರಿಮೆ ಹೊಂದಿದೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ತಂಡ ಫಿಫಾ ಕಾನ್ಫೆಡರೇಷನ್ಸ್‌ ಕಪ್‌ಗೆ ನೇರ ಅರ್ಹತೆ ಗಳಿಸಲಿದೆ.
 • ಎಎಫ್‌ಸಿ ಕಪ್‌ ಟೂರ್ನಿಯನ್ನು ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. 1956ರ ಚೊಚ್ಚಲ ಟೂರ್ನಿ ಹಾಂಕಾಂಗ್‌ ನಲ್ಲಿ ನಡೆದಿತ್ತು. ಆ ಕೂಟದಲ್ಲಿ ಏಷ್ಯಾದ ವಿವಿಧ ವಲಯಗಳಿಂದ ಅರ್ಹತೆ ಗಳಿಸಿದ್ದ ಏಳು ತಂಡಗಳು ಪ್ರಶಸ್ತಿಗಾಗಿ ಸೆಣಸಿದ್ದವು. 2007ರಲ್ಲಿ ಇಂಡೊನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್‌ ಮತ್ತು ವಿಯೆಟ್ನಾಂ ದೇಶಗಳ ಜಂಟಿ ಆತಿಥ್ಯದಲ್ಲಿ ಟೂರ್ನಿ ನಡೆದಿತ್ತು.
 • ಆರಂಭದಲ್ಲಿ ದಕ್ಷಿಣ ಕೊರಿಯಾ ಮತ್ತು ಇರಾನ್‌ ತಂಡಗಳು ಟೂರ್ನಿಯ ಯಶಸ್ವಿ ತಂಡಗಳೆನಿಸಿದ್ದವು. ಇರಾನ್‌ ತಂಡ ಟೂರ್ನಿಯಲ್ಲಿ ‘ಹ್ಯಾಟ್ರಿಕ್‌ ಪ್ರಶಸ್ತಿ’ ಗೆದ್ದ ಸಾಧನೆಗೂ ಭಾಜನವಾಗಿದೆ. ಈ ತಂಡ 1968, 1972 ಮತ್ತು 1976ರಲ್ಲಿ ಚಾಂಪಿಯನ್‌ ಆಗಿತ್ತು. 1984ರ ಬಳಿಕ ಜಪಾನ್‌ ಮತ್ತು ಸೌದಿ ಅರೇಬಿಯಾ ತಂಡಗಳು ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದವು. ಸೌದಿ ಅರೇಬಿಯಾ ಮೂರು ಬಾರಿ ಪ್ರಶಸ್ತಿ ಗೆದ್ದರೆ, ಜಪಾನ್‌ ಈ ಟೂರ್ನಿಯ ಅತ್ಯಂತ ಯಶಸ್ವಿ ತಂಡ ಅನಿಸಿದೆ. ಈ ತಂಡ ನಾಲ್ಕು ಬಾರಿ ಟ್ರೋಫಿಗೆ ಮುತ್ತಿಕ್ಕಿದೆ.
 • ಇರಾಕ್‌ (2007), ಕುವೈತ್‌ (1980) ಮತ್ತು ಇಸ್ರೇಲ್‌ (1964) ಮತ್ತು ಆಸ್ಟ್ರೇಲಿಯಾ (2015) ತಂಡಗಳೂ ಎಎಫ್‌ಸಿ ಕಪ್‌ನಲ್ಲಿ ತಲಾ ಒಮ್ಮೆ ಟ್ರೋಫಿ ಎತ್ತಿಹಿಡಿದಿವೆ. ಕುವೈತ್‌ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಅರಬ್‌ ದೇಶದ ಮೊದಲ ತಂಡ ಎಂಬ ಹಿರಿಮೆ ಹೊಂದಿದೆ.
 • 2007ರಲ್ಲಿ ಆಸ್ಟ್ರೇಲಿಯಾವು ಏಷ್ಯನ್‌ ಕಾನ್ಫೆಡರೇಷನ್‌ಗೆ ಸೇರ್ಪಡೆ ಯಾಯಿತು. 2015ರಲ್ಲಿ ಕಾಂಗರೂಗಳ ನೆಲದಲ್ಲಿ ಎಎಫ್‌ಸಿ ಕಪ್‌ನ ಫೈನಲ್‌ ನಡೆದಿತ್ತು. ಆ ಟೂರ್ನಿಯಲ್ಲಿ ಆತಿಥೇಯ ತಂಡ ಪ್ರಶಸ್ತಿ ಗೆದ್ದಿತ್ತು. 2019ರ ಟೂರ್ನಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಆಯೋಜನೆ ಯಾಗಿದ್ದು ಇದರಲ್ಲಿ ಭಾಗವಹಿಸುವ ತಂಡ ಗಳ ಸಂಖ್ಯೆಯನ್ನು 16ರಿಂದ 24ಕ್ಕೆ ಹೆಚ್ಚಿಸಲಾಗಿದೆ.

ಎರಡು ಹಂತದಲ್ಲಿ ಪಂದ್ಯ[ಬದಲಾಯಿಸಿ]

AFC regional federations
 • ಎಎಫ್‌ಸಿ ಟೂರ್ನಿಯು ಗುಂಪು ಮತ್ತು ನಾಕೌಟ್‌ ಹಂತಗಳಲ್ಲಿ ನಡೆಯುತ್ತದೆ. ಪ್ರತಿ ಗುಂಪಿನಲ್ಲಿ ನಾಲ್ಕು ತಂಡಗಳು ಇರಲಿದ್ದು, ಈ ಹಂತದಲ್ಲಿ ಪ್ರತಿ ತಂಡ ತಲಾ ಮೂರು ಪಂದ್ಯಗಳನ್ನು ಆಡುತ್ತದೆ. ಗುಂಪಿನಲ್ಲಿ ಪ್ರಶಸ್ತಿ ಗೆಲ್ಲುವ ಮತ್ತು ರನ್ನರ್ಸ್‌ ಅಪ್‌ ಆಗುವ ತಂಡಗಳು ನಾಕೌಟ್‌ ಹಂತಕ್ಕೆ ಅರ್ಹತೆ ಗಿಟ್ಟಿಸಲಿವೆ.
 • ನಾಕೌಟ್‌ ಹಂತದಲ್ಲಿ ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 2019ರ ಆವೃತ್ತಿಯಲ್ಲಿ ಒಟ್ಟು 24 ತಂಡಗಳು ಭಾಗವಹಿಸುವ ಕಾರಣ ಈ ನಿಯಮದಲ್ಲಿ ಕೆಲ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.

ಸದಸ್ಯರು[ಬದಲಾಯಿಸಿ]

 • ಎ ಎಫ್ ಸಿ ಪ್ರಾದೇಶಿಕ ಒಕ್ಕೂಟಗಳು
 • ಎಎಫ್ಸಿ ಐದು ಪ್ರದೇಶಗಳಾಗಿ ವಿಭಜಿಸಲಾಗಿದೆ 47 ಸದಸ್ಯ ಸಂಘಗಳು ಹೊಂದಿದೆ.
 • ಪಶ್ಚಿಮ ಏಷ್ಯಾ 12
 • ಮಧ್ಯ ಏಷ್ಯಾದಿಂದ 6
 • ದಕ್ಷಿಣ ಏಷಿಯಾದ 7
 • ಪೂರ್ವ ಏಷ್ಯಾ 10
 • ಆಗ್ನೇಯ ಏಷ್ಯಾದಿಂದ 12

ಪ್ರತಿಷ್ಠೆಯ ಟೂರ್ನಿ[ಬದಲಾಯಿಸಿ]

 • "ವಿಶ್ವಕಪ್‌ ಹಾದಿ ಬಹು ದೂರವಿದೆ. ಅದರ ಬಗ್ಗೆ ಚಿಂತಿಸುವ ಸಮಯ ಇದಲ್ಲ. ಈಗೇನಿದ್ದರೂ ನಾವು ಎಎಫ್‌ಸಿ ಟೂರ್ನಿಗೆ ಅರ್ಹತೆ ಗಳಿಸುವತ್ತ ಚಿತ್ತ ಹರಿಸಬೇಕು. ಸದ್ಯದ ಮಟ್ಟಿಗೆ ನಮ್ಮ ಗುರಿ ಇದೊಂದೇ ಆಗಿರಬೇಕು." ಭಾರತ ಫುಟ್‌ಬಾಲ್‌ ತಂಡದ ಆಟಗಾರ ಸುನಿಲ್‌ ಚೆಟ್ರಿ ಹೇಳಿದರು. ಸುನಿಲ್‌ ಅವರು ಆ ರೀತಿ ಹೇಳಲು ಕಾರಣವೂ ಇತ್ತು. ಏಷ್ಯಾದ ಮಟ್ಟಿಗೆ ಎಎಫ್‌ಸಿ ಕಪ್‌ ಬಹಳ ಪ್ರತಿಷ್ಠೆಯ ಟೂರ್ನಿ. ಇದರಲ್ಲಿ ಭಾರತ ಇದುವರೆಗೆ ಒಮ್ಮೆಯೂ ಪ್ರಶಸ್ತಿ ಜಯಿಸಿಲ್ಲ.
 • 1964 ರಲ್ಲಿ ಏಷ್ಯಾದ ಪಶ್ಚಿಮ ವಲಯದಿಂದ ಟೂರ್ನಿಗೆ ಅರ್ಹತೆ ಗಳಿಸಿದ್ದ ತಂಡ ರನ್ನರ್ಸ್‌ ಅಪ್‌ ಸ್ಥಾನ ಗಳಿಸಿ ಹೊಸ ಮೈಲುಗಲ್ಲು ನೆಟ್ಟಿತ್ತು. ಅದಾಗಿ 47 ವರ್ಷಗಳ ಬಳಿಕ (2011ರಲ್ಲಿ) ತಂಡ ಮತ್ತೆ ಅರ್ಹತೆ ಗಳಿಸಿತ್ತಾದರೂ ಗುಂಪು ಹಂತದಲ್ಲಿಯೇ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಈಗ ಮತ್ತೊಮ್ಮೆ ಚೊಚ್ಚಲ ಪ್ರಶಸ್ತಿಯ ಬೇಟೆಗೆ ಸನ್ನದ್ಧವಾಗಿದೆ.
 • ಈ ಹಾದಿ ಅಷ್ಟು ಸುಲಭ ದ್ದಲ್ಲವಾದರೂ ಗುರುಪ್ರೀತ್ ಸಿಂಗ್‌ ಸಂಧು ಪಡೆ ಖಂಡಿತವಾಗಿಯೂ ಟ್ರೋಫಿ ಎತ್ತಿಹಿಡಿಯುವ ತಾಕತ್ತು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ತಂಡದಿಂದ ಮೂಡಿಬಂದಿರುವ ಸಾಮರ್ಥ್ಯ ಇದಕ್ಕೆ ನಿದರ್ಶನದಂತಿದೆ. ಹೋದ ವಾರ ನಡೆದ ಕಾಂಬೋಡಿಯಾ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ತಂಡ ಗೆಲುವಿನ ಸಿಹಿ ಸವಿದು ಚಾರಿತ್ರಿಕ ಸಾಧನೆ ಮಾಡಿತ್ತು. ಹೀಗಾಗಿ ಭಾರತದ ಫುಟ್‌ಬಾಲ್‌ ಲೋಕಕ್ಕೆ 12 ವರ್ಷಗಳಿಂದ ಕಾಡುತ್ತಿದ್ದ ಬಹುದೊಡ್ಡ ಕೊರಗೊಂದು ದೂರವಾಗಿತ್ತು. 2005 ರಲ್ಲಿ ಪಾಕಿಸ್ತಾನವನ್ನು ಅದರದ್ದೇ ನೆಲದಲ್ಲಿ ಮಣಿಸಿದ್ದ ಭಾರತ ಆ ನಂತರ ವಿದೇಶಿ ನೆಲ ದಲ್ಲಿ ಗೆದ್ದ ಮೊದಲ ಪಂದ್ಯ ಇದಾಗಿತ್ತು .
 • 2017 ಮಾರ್ಚ್‌ 28 ರಂದು ನಡೆಯುವ ಏಷ್ಯನ್‌ ಕಪ್‌ ಗುಂಪು ಹಂತದ ತನ್ನ ಮೊದಲ ಪಂದ್ಯದಲ್ಲಿ ಭಾರತ, ಬಲಿಷ್ಠ ಮ್ಯಾನ್ಮಾರ್‌ ವಿರುದ್ಧ ಸೆಣಸಬೇಕಿದೆ. ಇದಕ್ಕೂ ಮುನ್ನ ಪೂರ್ವಭಾವಿ ಸಿದ್ಧತೆಗೆ ಅನುವಾಗಲೆಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಕಾಂಬೋಡಿಯಾ ವಿರುದ್ಧ ಪಂದ್ಯ ಆಯೋಜಿಸಿತ್ತು. ಈ ಪರೀಕ್ಷೆಯಲ್ಲಿ ಗೆದ್ದಿರುವ ಆಟಗಾರರಲ್ಲಿ ಈಗ ಹೊಸ ಹುರುಪು ಮೂಡಿದ್ದು ಭಾರತದ ಫುಟ್‌ಬಾಲ್‌ ಪ್ರಿಯರಲ್ಲೂ ಹೊಸ ಕನಸು ಚಿಗುರೊಡೆದಿದೆ.[೩]

ಭಾರತದ ಆಟಗಾರರು[ಬದಲಾಯಿಸಿ]

 • QUALIFICATION-೨೦೧೭:ASIAN CUP QUALIFICATION
 • ಪ್ರಸ್ತುತ ತಂಡ:(India national football team)
 • ಮಾರ್ಚ್ 2017ರಲ್ಲಿ ಈ ಕೆಳಗಿನ 24 ಆಟಗಾರರನ್ನು ಕಾಂಬೋಡಿಯಾ ಮತ್ತು ಮಯನ್ಮಾರ್ ವಿರುದ್ಧ ಎಎಪ್‍ಸಿ/AFC ಏಷಿಯನ್ ಕಪ್ ಅರ್ಹತಾ ಸೌಹಾರ್ದ ಅಭ್ಯಾಸ ಪಂದ್ಯದಲ್ಲಿ ಮದಲಿಗೆ ಕರೆಸಲಾಯಿತು.
 • ಕ್ಯಾಪ್ಸ್ ಮತ್ತು ಗೋಲ್‍ಗಳನ್ನು ಕಾಂಬೋಡಿಯ ಪಂದ್ಯದ ಬಳಿಕ ಮಾರ್ಚ್ 2017 23 ನವೀಕರಿಸಲಾಗುತ್ತದೆ.

ಆಟಗಾರರ ವಿವರ[ಬದಲಾಯಿಸಿ]

ಸರಣಿ ಸಂ ಸ್ಥಾನ ಆಟಗಾರ ಹುಟ್ಟಿದ ದಿನಾಂಕ (ವಯಸ್ಸು) ನಾಯಕ ಗೋಲುಗಳು ಕ್ಲಬ್
1 FW ಸುನಿಲ್ ಚೆಟ್ರಿ 3 -8-1984 (age 32) 92 52 ಬೆಂಗಳೂರು FC
2 GK ಸುಬ್ರತಾ ಪಾಲ್ 24-12- 1986 (age 30) 64 0 DSK ಶಿವಾಜಿಯನ್ಸ್
3 FW ಜೇಜೆ ಲಾಲ್ ಫೇಕ್ಲುವಾ 7 -1- 1991 (age 26) 38 17 ಮೋಹನಬಾಗಾನ್
4 DF ಅಮಾಬ್ ಮಂಡಲ್ 25 -9- 1989 (age 27) 26 1 ಪೂರ್ವ ಬಂಗಾಳ
5 FW ರಾಬಿನ್ ಸಿಂಗ್ 9 -5- 1990 (age 26) 25 4 ಬೆಂಗಳೂರು FC
6 MF ಯೂಜಿನೇಸನ್ ಲಿಂಗಧೊ 10 -9- 1986 (age 30) 16 0 ಬೆಂಗಳೂರು FC
7 DF ನಾರಾಯಣ ದಾಸ್ 25 -9- 1993 (age 23) 15 1 ಪೂರ್ವ ಬಂಗಾಳ
8 GK ಗುರುಪ್ರೀತ್ ಸಿಂಗ್ ಸಂಧು 3 -2- 1992 (age 25) 14 0 ಸ್ಟಾಬ್ಯಾಕ್/ Stabæk
9 DF ಪ್ರೀತಮ್ ಕೊತಲ್ ಕದನ 9 -8- 1993 (age 23) 14 0 ಮೋಹನಬಾಗಾನ್
10 DF ಸಂದೇಶ್ ಜಿಂಗನ್ 21 -7- 1993 (age 23) 13 3 ಬೆಂಗಳೂರು FC
11 MF ರಾಲಿನ್ ಬೋರ್ಗೇಸ್ 5 -6-1992 (age 24) 12 1 ಪೂರ್ವ ಬಂಗಾಳ
12 MF ಜಾಕಿಚಂದ್ ಸಿಂಗ್ 17 -3- 1992 (age 25) 9 1 ಪೂರ್ವ ಬಂಗಾಳ
13 MF ಹೋಲಿಚರನ್ ನರ್ಜರಿ 10 -5- 1994 (age 22) 8 0 DSK ಶಿವಾಜಿಯನ್ಸ್
14 MF ಸಿ.ಕೆ.ವಿನೀತ್ 28 -2-1988 (age 29) 7 0 ಬೆಂಗಳೂರು FC
15 DF ಧನಪಾಲ್ ಗಣೇಶ್ 13 -6- 1994 (age 22) 5 0  Chennai City
16 MF ಉದಾಂತ್ ಸಿಂಗ್ 14 -6- 1996 (age 20) 5 0 ಬೆಂಗಳೂರು FC
17 MF ಮೊಹಮದ್ರಫೀಕ್ 20 -9-1992 (age 24) 4 1 ಪೂರ್ವ ಬಂಗಾಳ
18 DF ಫಲಗಂಕೊ ಕಾರ್ಡೊಜೊ 23 -1- 1988 (age 29) 2 1  ಚರ್ಚ್ ಹಿಲ್ ಬ್ರದರ್ಸ್
19 DF ಅನಾಸ್ ಎಡತೋಡಿಕ 15 -2-1987 (age 30) 1 0 ಮೋಹನಬಾಗಾನ್
20 MF ಮಿಲನ್ ಸಿಂಗ್ 15 -5- 1992 (age 24) 1 0 DSK ಶಿವಾಜಿಯನ್ಸ್
21 FW ಡೇನಿಯಲ್ ಲಾಲ್ ಲಿಂಪುಇಯ 12 -9-1997 (age 19) 1 0 ಬೆಂಗಳೂರು FC
22 GK ರೆಹನೇಶ್ ಟಿಪಿ 13 -2 1993 (age 24) 0 0 ಪೂರ್ವ ಬಂಗಾಳ
23 DF ನಿಶುಕುಮಾರ್ 1 -1-1997 (age 20) 0 0  ಬೆಂಗಳೂರು FC
24 DF ಜೆರ್ರಿ ಲಾಲ್ ರಿಂಜುಆಲ 13 -7- 1998 (age 18) 0 0 DSK ಶಿವಾಜಿಯನ್ಸ್

[೪]

ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಟೂರ್ನಿ ೨೦೧೬-೧೭[ಬದಲಾಯಿಸಿ]

ತವರಿನ ಅಂಗಳದಲ್ಲಿ ಆಡಲಿರುವ ಮ್ಯಾನ್ಮಾರ್ ಬಳಗವನ್ನು ಮಣಿಸುವ ಮೂಲಕ ಭಾರತ ಫುಟ್‌ಬಾಲ್‌ ತಂಡ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಟೂರ್ನಿಯಲ್ಲಿ ದಿ.೨೮-೩-೨೦೧೭ ಮಂಗಳವಾರ ಗೆಲುವಿನ ಆರಂಭ ಪಡೆಯುವ ನಿರೀಕ್ಷೆಯಲ್ಲಿದೆ. ಭಾರತಕ್ಕೆ ಮ್ಯಾನ್ಮಾರ್ ಸುಲಭದ ಎದುರಾಳಿ ಅಲ್ಲ. ಫಿಫಾ ರ್‍ಯಾಂಕಿಂಗ್‌ನಲ್ಲಿ ಈ ತಂಡ ಭಾರತಕ್ಕಿಂತ 40 ಸ್ಥಾನಗಳಲ್ಲಿ ಕೆಳಗಿದೆ. ಆದರೆ ಎರಡೂ ತಂಡಗಳ ನಡುವೆ 2013ರಲ್ಲಿ ನಡೆದ ಪಂದ್ಯದಲ್ಲಿ ಭಾರತ 0–1 ಗೋಲುಗಳಲ್ಲಿ ಸೋಲು ಕಂಡಿತ್ತು.

 • ಕೊಲಂಬಿಯಾ ವಿರುದ್ಧ ಹೋದ ವಾರ ನಡೆದ ಸೌಹಾರ್ದ ಪಂದ್ಯದಲ್ಲಿ ಭಾರತ 3–2ರಲ್ಲಿ ಜಯಗಳಿಸಿರುವುದು ಭಾರತ ತಂಡದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಸುನಿಲ್ ಚೆಟ್ರಿ ಬಳಗ ಈ ಪಂದ್ಯವನ್ನು ಗೆದ್ದುಕೊಂಡರೆ ಮೂರು ಪಾಯಿಂಟ್ಸ್ ಗಳಿಸಲಿದೆ.[೫]
 • 28-Mar-2017 : ಎಎಫ್‌ಸಿ ಏಷಿಯನ್ ಕಪ್ 2019 ಅರ್ಹತಾ ಪಂದ್ಯ: ಮ್ಯಾನ್ಮಾರ್ 0-1 ಇಂಡಿಯಾ: ಸುನಿಲ್ ಚೆಟ್ರಿ ಸಂರಕ್ಷಕ.[೬]

ಛಾಂಪಿಯನ್ ಇತಿಹಾಸ[ಬದಲಾಯಿಸಿ]

ಟೂರ್ನಿಯಲ್ಲಿ ಇರಾನ್ ಮತ್ತದಕ್ಷಿಣ ಕೊರಿಯಾ ಆಡಿದ ಪಂದ್ಯಗಳು 62
ಚೀನಾತಂಡ ಸೋತ ಪಂದ್ಯಗಳು 18
ಇರಾನ್ ಮಾಡಿದ ಗೋಲುಗಳು –ಟೂರ್ನಿಯಲ್ಲಿ ದಾಖಲೆಗೋಲುಗಳು 119
ಇರಾನ್ ಹೆಚ್ಚು ಪಂದ್ಯಗಳನ್ನು ಗೆದ್ದಿದೆ. ಪಂದ್ಯಗಳು 37
ಇರಾನ್ ಡ್ರಾ ಮಾಡಿಕೊಂಡ ಪಂದ್ಯಗಳು 18
ದಕ್ಷಿಣ ಕೊರಿಯಾ ಎದುರಾಳಿಗಳಿಗೆ ಬಿಟ್ಟು ಕೊಟ್ಟ ಗೋಲುಗಳು 62

ಗೋಲುಗಳ ಇತಿಹಾಸ[ಬದಲಾಯಿಸಿ]

 • ಪ್ರಾದೇಶಿಕವಾರು ಚಾಂಪಿಯನ್ನರ ವಿವರ
ಫೆಡರೇಶನ್ (ಪ್ರಾದೇಶಿಕ) ಛಾಂಪಿಯನ್ ಒಟ್ಟು ಪ್ರಶಸ್ತಿ
ಈಸ್ಟ್ ಏಷ್ಯಾ ಜಪಾನ್ (4), ದಕ್ಷಿಣ ಕೊರಿಯಾ (2) 6
ವೆಸ್ಟ್ ಏಷ್ಯಾ ಸೌದಿ ಅರೇಬಿಯಾ (3), ಕುವೈತ್ (1), ಇರಾಕ್ (1) 5
ಸೆಂಟ್ರಲ್ ಏಷ್ಯಾ ಇರಾನ್ (3), 3
ಸೌತ್ ಈಸ್ಟ್ ಏಷ್ಯಾ ಆಸ್ಟ್ರೇಲಿಯಾ (1) 1

ಟೂರ್ನಿಯಲ್ಲಿ ಪ್ರಮುಖ ತಂಡಗಳ ಸಾಧನೆ[ಬದಲಾಯಿಸಿ]

ತಂಡ ಪ್ರಶಸ್ತಿ ರನ್ನರ್ಸ್ ಅಪ್ ಮೂರನೇ ಸ್ಥಾನ ನಾಲ್ಕನೇ ಸ್ಥಾನ
ಜಪಾನ್ 4(1992;2000;2004;2010) = - 1(2010)
ಸೌದಿ ಅರೇಬಿಯಾ 3(1968;1988;1996 3(1992;2000;2007) - -
ಇರಾನ್ 3(1968;1972;1976) - 4(1980;1988;1996;2004) 1(1984)
ದಕ್ಷಿಣ ಕೊರಿಯಾ 2(1956;1980) 4(1972;1980;1988;2015) 4(1964;2000;2007;2011)
ಇಸ್ರೇಲ್ 1(1964) 2(1956;1960) 1(1968)
ಕುವೈತ್ 1(1980) 1(1976) 1(1984) 1(1996)
ಆಸ್ಟ್ರೇಲಿಯಾ 1(2015) 1(2011)
ಇರಾಕ್ 1(2007) 2(1976;2015)
ಚೀನಾ 2(1984 -;2004) 2(1976;1992) 2(1988;2000)
ಯುನೈಟೆಡ್ ಅರಬ್ ಎಮಿರೇಟ್ಸ್ 1(1996) 1(2015) 1(1992)
ಭಾರತ 1(1964)

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. http://www.thestar.com.my/metro/scoreboard/2015/12/03/prime-choice-to-lead-fifa-sheikh-salman-is-the-favourite-to-take-over-top-post-of-footballs-governin/ The Star (Malaysia)|The Star;3 December 2015-25 March 2016
 2. "Asian Sports Net". Archived from the original on 2016-04-03. Retrieved 2017-03-27.
 3. "ಅರ್ಹತೆ ಗಳಿಸುವತ್ತ ಚಿತ್ತ;ಎಎಫ್‌ಸಿ ಫುಟ್‌ಬಾಲ್‌: ಹೊಸ ಕನಸು;ಜಿ. ಶಿವಕುಮಾರ;27 Mar, 2017". Archived from the original on 2017-06-26. Retrieved 2017-03-27.
 4. All India Football Federation. AIFF. 18 March 2017. Retrieved 18 March 2017.
 5. ಮ್ಯಾನ್ಮಾರ್ ಎದುರು ಪಂದ್ಯ;ಏಷ್ಯನ್‌ ಕಪ್‌ ಫುಟ್‌ಬಾಲ್‌ ಅರ್ಹತಾ ಟೂರ್ನಿ: ಶುಭಾರಂಭದ ನಿರೀಕ್ಷೆಯಲ್ಲಿ ಭಾರತ;ಪ್ರಜಾವಾಣಿ ವಾರ್ತೆ;28 Mar, 2017
 6. India's talisman Sunil Chhetri scored a goal[ಶಾಶ್ವತವಾಗಿ ಮಡಿದ ಕೊಂಡಿ]