ವಿಷಯಕ್ಕೆ ಹೋಗು

ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟವನ್ನು ಪ್ರತೀ ಎರಡು ವರ್ಷಗಳಿಗೊಮ್ಮೆ ಏಷ್ಯನ್ ಅಥ್ಲೆಟಿಕ್ ಅಸೋಸಿಯೇಷನ್(Asian Athletics Association) ವತಿಯಿಂದ ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಏಷ್ಯಾದ ಎಲ್ಲಾ ರಾಷ್ಟ್ರಗಳೂ ಈ ಕ್ರೀಡಾಕೂಟದ ಪ್ರತೀ ವಿಭಾಗಕ್ಕೆ ತಮ್ಮ ದೇಶದಿಂದ ಇಬ್ಬರು ಸ್ಪರ್ಧಿಗಳನ್ನು ಕಳಿಸಬಹುದು. ಕ್ರೀಡಾಕೂಟವನ್ನು ಸಂಘಟಿಸುವ ದೇಶಕ್ಕೆ ಇಬ್ಬರ ಬದಲು ಮೂವರನ್ನು ಕಳಿಸುವ ವಿಶೇಷ ಸೌಲಭ್ಯ ದೊರೆಯುತ್ತದೆ.

ಕ್ರೀಡಾಕೂಟದ ಆವೃತ್ತಿಗಳು

[ಬದಲಾಯಿಸಿ]
ಆವೃತ್ತಿ ವರ್ಷ ನಗರ ದೇಶ ದಿನಾಂಕಗಳು ಸ್ಥಳ ನಡೆದ
ಸ್ಪರ್ಧೆಗಳು
ಭಾಗವಹಿಸಿದ
ದೇಶಗಳು
ಭಾಗವಹಿಸಿದ
ಸ್ಪರ್ಧಾಳುಗಳು
I೧೯೭೩ಮಾರಿಕಿನಫಿಲಿಪ್ಪೀನ್ಸ್ ಫಿಲಿಪೈನ್ಸ್18–23 ನವೆಂಬರ್ರಾರ್ಡಿಗಸ್ ಕ್ರೀಡಾ ಸಂಕೀರ್ಣ37
II೧೯೭೫ಸಿಯೋಲ್ದಕ್ಷಿಣ ಕೊರಿಯಾ ದಕ್ಷಿಣ ಕೊರಿಯ9–14 ಜೂನ್ಡಾಂಗ್ಡೈಮೂನ್ ಕ್ರೀಡಾಂಗಣ39
III೧೯೭೯ಟೋಕಿಯೋJapan ಜಪಾನ್31 ಮೇ – 3 ಜೂನ್ರಾಷ್ಟ್ರೀಯ ಒಲಿಂಪಿಕ್ ಕ್ರೀಡಾಂಗಣ 38
IV೧೯೮೧ಟೋಕಿಯೋJapan ಜಪಾನ್5–7 ಜೂನ್ರಾಷ್ಟ್ರೀಯ ಒಲಿಂಪಿಕ್ ಕ್ರೀಡಾಂಗಣ37
V೧೯೮೩ಕುವೈತ್ಕುವೈತ್ ಕುವೈತ್3–9 ನವೆಂಬರ್ಕುವೈತ್ ರಾಷ್ಟ್ರೀಯ ಕ್ರೀಡಾಂಗಣ38
VI೧೯೮೫ಜಕಾರ್ತಇಂಡೋನೇಷ್ಯಾ ಇಂಡೋನೇಷ್ಯ25–29 ಸೆಪ್ಟೆಂಬರ್ಬುಂಗ್ ಕರ್ಣೋ ಕ್ರೀಡಾಂಗಣ42
VII೧೯೮೭ಸಿಂಗಾಪುರಸಿಂಗಾಪುರ ಸಿಂಗಾಪುರ22–26 ಜುಲೈರಾಷ್ಟ್ರೀಯ ಕ್ರೀಡಾಂಗಣ40
VIII೧೯೮೯ಹೊಸ ದೆಹಲಿIndia ಭಾರತ14–19 ನವೆಂಬರ್ಜವಾಹರ ಲಾಲ್ ನೆಹರೂ ಕ್ರೀಡಾಂಗಣ40
IX೧೯೯೧ಕೌಲಾಲಂಪುರಮಲೇಶಿಯ ಮಲೇಷ್ಯ19–23 ಅಕ್ಟೋಬರ್ ಮರ್ಡೆಕ ಸ್ಟೇಡಿಯಂ40
X೧೯೯೩ಮನೀಲಫಿಲಿಪ್ಪೀನ್ಸ್ ಫಿಲಿಪೈನ್ಸ್30 ನವೆಂಬರ್ – 4 ಡಿಸೆಂಬರ್ ರಿಜಾಲ್ ಮೆಮೊರಿಯಲ್ ಕ್ರೀಡಾಂಗಣ41
XI೧೯೯೫ಜಕಾರ್ತಇಂಡೋನೇಷ್ಯಾ ಇಂಡೋನೇಷ್ಯ20–24 ಸೆಪ್ಟೆಂಬರ್ಬುಂಗ್ ಕರ್ಣೋ ಕ್ರೀಡಾಂಗಣ41
XII೧೯೯೮ಫುಕೌಟJapan ಜಪಾನ್19–22 ಜುಲೈಹಕಟನಮೋರಿ ಅಥ್ಲೆಟಿಕ್ ಕ್ರೀಡಾಂಗಣ43
XIII೨೦೦೦ಜಕಾರ್ತಇಂಡೋನೇಷ್ಯಾ ಇಂಡೋನೇಷ್ಯ28–31 ಆಗಸ್ಟ್ಬುಂಗ್ ಕರ್ಣೋ ಕ್ರೀಡಾಂಗಣ4337441
XIV೨೦೦೨ಕೊಲಂಬೋಶ್ರೀಲಂಕಾ ಶ್ರೀಲಂಕಾ9–12 ಆಗಸ್ಟ್ಸುಗತದಾಸ ಸ್ಟೇಡಿಯಂ43
XV೨೦೦೩ಮನೀಲಫಿಲಿಪ್ಪೀನ್ಸ್ ಫಿಲಿಪೈನ್ಸ್20–23 ಸೆಪ್ಟೆಂಬರ್ ರಿಜಾಲ್ ಮೆಮೊರಿಯಲ್ ಕ್ರೀಡಾಂಗಣ43
XVI೨೦೦೫ಇಂಚಿಯೋನ್ದಕ್ಷಿಣ ಕೊರಿಯಾ ದಕ್ಷಿಣ ಕೊರಿಯ1–4 ಸೆಪ್ಟೆಂಬರ್ಇಂಚಿಯಾನ್ ಮುಹ್ನಕ್ ಕ್ರೀಡಾಂಗಣ4335536
XVII೨೦೦೭ಅಮ್ಮನ್ಜಾರ್ಡನ್ ಜೋರ್ಡಾನ್25–29 ಜುಲೈಅಮ್ಮನ್ ಅಂತರರಾಷ್ತ್ರೀಯ ಕ್ರೀಡಾಂಗಣ4434
XVIII೨೦೦೯ಗ್ವಾಂಗ್ಜೂChina ಚೀನಾ10–14 ನವೆಂಬರ್ಗ್ವಾಂಗ್ ಡಾಂಗ್ ಒಲಿಂಪಿಕ್ ಕ್ರೀಡಾಂಗಣ4437505
XIX೨೦೧೧ಕೋಬೆJapan ಜಪಾನ್7–10 ಜುಲೈಕೋಬೆ ಯೂನಿವರ್ಡಿಡೆ ಕ್ರೀಡಾಂಗಣ4240464
XX೨೦೧೩ಪುಣೆIndia ಭಾರತ3–7 ಜುಲೈಶ್ರೀ ಛತ್ರಪತಿ ಶಿವಾಜಿ ಕ್ರೀಡಾಸಂಕೀರ್ಣ4242522
XXI೨೦೧೫ವುಹಾನ್China ಚೀನಾ3–7 ಜೂನ್ವುಹಾಸ್ ಕ್ರೀಡಾಂಗಣ4240497
XXII೨೦೧೭ ಭುವನೇಶ್ವರIndia ಭಾರತ5–9 ಜುಲೈಕಳಿಂಗ ಕ್ರೀಡಾಂಗಣ4745655
XXIII೨೦೧೯ದೋಹಕತಾರ್ ಕತಾರ್ಇನ್ನೂ ನಿರ್ಧರಿತವಾಗಿಲ್ಲ

೨೧ ನೇ ಆವೃತ್ತಿ

[ಬದಲಾಯಿಸಿ]

೨೦೧೫ರ ಜೂನ್ ಮೂರರಿಂದ ೭ನೇ ತಾರೀಖಿನವರೆಗೆ ಚೀನಾದ ವುಹಾನ್ ನಗರದಲ್ಲಿ ನಡೆದಿತ್ತು.

೨೨ನೇ ಆವೃತ್ತಿ:

[ಬದಲಾಯಿಸಿ]

ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟದ ೨೨ನೇ ಆವೃತ್ತಿಯು ಒಡಿಸ್ಸಾದ ಭುವನೇಶ್ವರದಲ್ಲಿ ನಡೆಯುತ್ತಿದೆ. ಜುಲೈ ೬ ರಿಂದ ೯ರವರೆಗೆ ನಡೆಯಬೇಕಾಗಿದ್ದ ಈ ಕ್ರೀಡಾಕೂಟ ಮೊದಲು ಜಾರ್ಖಂಡಿನ ರಾಂಚಿಯಲ್ಲಿ ನಡೆಯಬೇಕಿತ್ತು. ಆದರೆ ರಾಂಚಿಯು ಕ್ರೀಡಾಕೂಟವನ್ನು ಆಯೋಜಿಸುತ್ತಿರುವ ಅಸಮರ್ಥವಾಗಿದ್ದ ಕಾರಣ ಕ್ರೀಡಾಕೂಟವನ್ನು ನಂತರ ಭುವನೇಶ್ವರದ ಕಳಿಂಗ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು. ಭಾರತದಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿರುವ ಮೂರನೆಯ ನಗರಿ ಭುವನೇಶ್ವರ. ಉಳಿದೆರಡು ನಗರಗಳೆಂದರೆ ದೆಲ್ಲಿ(೧೯೮೯) ಮತ್ತು ಪೂನಾ(೨೦೧೩) ೪೫ ದೇಶಗಳ ಸುಮಾರು ೮೦೦ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.

ಈ ಏಷ್ಯನ್ ಕ್ರೀಡಾಕೂಟದ ವಿಜೇತರಿಗೆ ೨೦೧೭ರ ಲಂಡನ್ನಿನ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸುವ ಅರ್ಹತೆ ದೊರೆಯಲಿದೆ. ವಿಶ್ವ ಅಥ್ಲೆಟಿಕ್ ಕ್ರೀಡಾಕೂಟ ಆಗಸ್ಟ್ ೪ರಿಂದ ೧೩ರ ವರೆಗೆ ನಡೆಯಲಿದೆ.

೨೨ನೇ ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟದ ಲಾಂಛನ

ಕಳಿಂಗ ಕ್ರೀಡಾಂಗಣ, ಒಡಿಸ್ಸಾ

[ಬದಲಾಯಿಸಿ]

ಭುವನೇಶ್ವರದಲ್ಲಿರುವ ಕಳಿಂಗ ಕ್ರೀಡಾಂಗಣದಲ್ಲಿ ೧೫,೦೦೦ ಪ್ರೇಕ್ಷಕರಿಗೆ ಆಸನ ವ್ಯವಸ್ಥೆಯಿದೆ. ೨೦೧೭ರಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟಕ್ಕಾಗಿ ಕ್ರೀಡಾಂಗಣವನ್ನು ಸಿಂಥೆಟಿಕ್ ಟ್ರ್ತಾಕ್ ಮತ್ತು ಫ್ಲಡ್ ಲೈಟ್ ಗಳಿಂದ ನವೀಕರಿಸಲಾಯಿತು.

ಲಾಂಛನ:

[ಬದಲಾಯಿಸಿ]

ಮೇ ೮, ೨೦೧೭ರಲ್ಲಿ ಏಷ್ಯನ್ ಕ್ರೀಡಾಕೂಟದ ೨೨ನೇ ಆವೃತ್ತಿಯ ಲಾಂಛನ "ಓಲಿ" ಅನ್ನು ಬಿಡುಗಡೆ ಮಾಡಲಾಯಿತು.ಓಲಿ ಎಂಬುವ ಅಳಿವನಂಚಿನಲ್ಲಿರುವ ಆಮೆಯ ಪ್ರಬೇಧವು ಒಡಿಸ್ಸಾದ ರುಷಿಕುಲ್ಯ ಮತ್ತು ಗಹಿರ್ಮಾತ ತೀರಗಳಿಗೆ ಸಂತಾನಾಭಿವೃದ್ಧಿಗೆ ಭೇಟಿ ನೀಡುತ್ತದೆ. ಅದರ ಬಗೆಗಿನ ಅರಿವನ್ನು ಹೆಚ್ಚಿಸಿ ಅದರ ಸಂರಕ್ಷಣೆಗೆ ನೆರವಾಗುವ ಉದ್ದೇಶದಿಂದ ಓಲಿ ಅಥವಾ ಓಲಿ ರಿಡ್ಲೆ ಎಂಬುವ ಆ ಆಮೆಯ ಪ್ರಬೇಧವನ್ನು ಈ ವರ್ಷದ ಕ್ರೀಡಾಕೂಟದ ಲಾಂಛನವನ್ನಾಗಿ ಆಯ್ಕೆ ಮಾಡಲಾಗಿದೆ. ಒಡಿಸ್ಸಾದ ೩೦ ಜಿಲ್ಲೆಗಳಲ್ಲಿ ಸಂಚರಿಸಿದ ಕ್ರೀಡಾಕೂಟದ ಲಾಂಛರ್ಯraಲಿಗೆ ಒಡಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಹಸಿರು ನಿಶಾನೆ ತೋರಿದರು

ಉದ್ಘಾಟನಾ ಸಮಾರಂಭ

[ಬದಲಾಯಿಸಿ]

ಜುಲೈ ೫ರಂದು ನಡೆದ ಉದ್ಘಾಟಆ ಸಮಾರಂಭದಲ್ಲಿ ೫೦೦ ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದರು. ಅದರಲ್ಲಿ ಸುಮಾರು ೪೦೦ ಒಡಿಸ್ಸೀ ಕಲಾವಿದರು ಭಾಗವಹಿಸಿದ ಕಳಿಂಗ ಯುದ್ದ ಮತ್ತು ಕರವೇಳ ರಾಜನ ಬಗೆಗಿನ ನೃತ್ಯರೂಪಕ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು.

ಪದಕ ಪಟ್ಟಿ

[ಬದಲಾಯಿಸಿ]

೨೦೧೭ : ೨೦೧೭ರ ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟ