ವಿಷಯಕ್ಕೆ ಹೋಗು

ಏರ್ ಮಾರ್ಷಲ್ ಸುಬ್ಬಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏರ್ ಮಾರ್ಷಲ್ ಸುಬ್ಬಯ್ಯ
ಜನನ೧೯೨೪
ವೃತ್ತಿಭಾರತೀಯ ವಾಯು ಪಡೆ

ಏರ್ ಮಾರ್ಷಲ್ ಸುಬ್ಬಯ್ಯ ಅವರು ೧೯೨೪ನೆಯ ಮಾರ್ಚ್ ೬ ರಂದು ಹುಟ್ಟಿದರು , ಇವರ ಪೂರ್ಣ ಹೆಸರು ಚೆಪ್ಪುಡಿರ ದೇವಯ್ಯ ಸುಬ್ಬಯ್ಯ, ಇವರನ್ನು ಸಿ.ಡಿ ಸುಬ್ಬಯ್ಯ ಎಂದು ಕರಿಯುತ್ತಿದ್ದರು. ಇವರು ಕಾಪಿ ನಾಡಾದ ಕೊಡಗು ನಲ್ಲಿ ಜನಿಸಿದ್ದರು. ಇವರು ೧೮ನೇ ವಯಸ್ಸಿನಲ್ಲಿ ವಾಯು ಪಡೆಗೆ ಸೇರಿಕೊಂಡರು.

ವೃತ್ತಿ ಜೀವನ

[ಬದಲಾಯಿಸಿ]

ಇವರ ವಾಯು ಪಡೆಯ ಸೇವೆ ಸಂಖೆ ೧೮೬೬ ಆಗ್ಗಿತ್ತು. ಇವರು ವಿಶ್ವ ಸಮಾರ ೨ರಲ್ಲಿ ಪ್ರಸ್ಸಿದ್ಧವಾದ ಪೈಲೆಟ್ ಆಗಿದ್ದರು.ಆ ಸಮಯದಲ್ಲಿ ಭಾರತವನ್ನು ಬ್ರಿಟಿಷರು ಕೈಹಿಡಿತದಲ್ಲಿ ಇಟ್ಟಿಕೊಂಡಿದ್ದರು.ಆಗ ಬ್ರಿಟಿಷರು ಸೆಪ್ಟೆಂಬರ್ ೧೯೩೯ ರಲ್ಲಿ ನಾಜಿ ಜರ್ಮನಿಯ ಮೇಲೆ ಯುದ್ಧ ಸಾರಲು ಸಿದ್ದತೆ ಮಾಡಿಕೊಳ್ಳುತ್ತಿದರು.ಇವರು ೨ನೇಯ ವಿಶ್ವ ಸಮರದಲ್ಲಿ ಭಾರತೀಯ ವಾಯು ಪಡೆಯ ೮ನೇಯ ಸ್ಕ್ವಾಡ್ರನ್ ಅನ್ನು ಹಾರಿಸುವ ಅಧಿಕಾರಿ ಆಗಿದ್ದರು.ಅದೇ ಯುದ್ಧದಲ್ಲಿ ಅರಕಾನ್ ಅಭಿಯಾನದ ಸಮಯದಲ್ಲಿ, ಅವರು ಸ್ಪಿಟ್ಫಯರ್ ಪೈಲಟ್ ಆಗಿದ್ದರು.ಆರಂಭಿಕ ೪೦ ರಲ್ಲಿ ಇವರು ಹುರಿಕೇನ್ ಫೈಟರ್ಸ್ ಹಾಗು ಟೆಂಪೆಸ್ಟ್ ಫೈಟರ್ಸ್ ವಿಮಾನವನ್ನು ಹಾರಿಸುತ್ತಿದ್ದರು.೨ನೇಯ ವಿಶ್ವ ಸಮರ ೧೯೩೯-೧೯೪೫ ನಡಿಯಿತ್ತು.ಡಿಸೆಂಬರ್ ೧೯೩೯ರಲ್ಲಿ ವಾಯು ಪಡ್ಡೆಯನ್ನು ಬ್ರಿಟಿಷ್ ಕಾಮನ್ವೆಲ್ತ್ ಏರ್ ಯೋಜನೆಯಲ್ಲಿ ತರಬೇತಿ ಕೊಂಡರು. ಪ್ರದಾನವಾಗಿ ಯೂರೋಪ್ ಮತ್ತು ಏಷ್ಯಾ ಖಂಡದಲ್ಲಿ ನೆಡೆಯಲ್ಪಟ್ಟ ಈ ಯುದ್ದದಲ್ಲಿ ಮಿತ್ರ ರಾಷ್ಟ್ರಾ(ಫ್ರಾನ್ಸ್, ರಶಿಯಾ, ಇಂಗ್ಲೆಂಡ್ ಮತ್ತು ಅಮೆರಿಕಾ) ಮತ್ತು ಅಕ್ಷ ರಾಷ್ಟ್ರ(ಜರ್ಮನಿ, ಇಟಲಿ ಮತ್ತು ಜಪಾನ್)ಎಂಬ ಎರಡು ಬಣಗಳಿದ್ದವು..ಈ ಯುದ್ಧದಲ್ಲಿ ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದುದರಿಂದ ಬ್ರಿಟಿಷರ ಪರವಾಗಿ ಹೊರಾಡಿದರು.ಅವರು ಒಂದುವರೆ ತಿಂಗಳಲ್ಲಿ ೭೦ ವಿಮಾನಗಳನ್ನು ಹಾರಿಸಿದರು.೧೯೪೮ರಲ್ಲಿ ೩ ವ್ಯಾಂಪೈರ್ ಬಂದರು ಅವರು ಎಟಿಯು ಎಂಬ ಘಟಕ್ಕೆ ಸೇರಿದರು ಈ ಘಟದಲ್ಲಿ ಇವರೆ ಮೇಲಿನ ಅದಿಕಾರಿ ಆಗಿದ್ದರು.ಅವರು ಗ್ರೂಪ್ ಕ್ಯಾಪ್ಟನ ಹಾಗಿ ೧೯೬೨-೧೯೬೩ರಲ್ಲಿ ಹೈದರಾಬಾದ್ ಮತ್ತು ಬೇಗಮ್ನಲ್ಲಿ ಉನ್ನತ ಅಧಿಕಾರಿ ಆಗಿ ಕಾರ್ಯ ರ್ನಿವಹಿಸಿದರು.ನಂತರ ಅವರನು ಏರ್ ವೈಸ್ ಮಾರ್ಷಲ್ ಅನ್ನಾಗಿ ಮಾಡಿದರು ಹಾಗು ಅವರು ಪಶ್ಚಿಮ ಏರ್ ಕಮಾಂಡ್ ಮೇಲೆ ಆಜ್ಞೆಯನ್ನು ಪಡೆದರು.[]

ಸೇವೆಗಳು

[ಬದಲಾಯಿಸಿ]

ಸಿ ಡಿ ಸುಬ್ಬಯ್ಯನವರು ನೇತ್ರುತ್ವದಲ್ಲಿದ ಸ್ಕ್ವಾಡ್ರನ್ ತಮ್ಮ ಶಕ್ತಿಯನ್ನು ತೋರಿಸಿ ಬ್ರಿಟಿಷರ ವಿರುದ್ಧ ಜಯಕ್ಕೆ ಕೊಡುಗೆ ನೀಡಿದ್ದರು.ಇವರು ಕಾರ್ಯಚರಣೆಗಳಿಗೆ ಬೇಕಾದ ಅವಶ್ಯಕತೆಗಳನ್ನು ಮುಂಚಿತವಾಗಿಹೆ ಸಂಶೋಧನೆ ಮಾಡ್ದಿದರು. ಅವರು ಬಹಳ ಸಮಯದ ತನಕ ತಮ ಸ್ಕ್ವಾಡ್ರನ್ ಗಳಿಗೆ ಕಡಿಮೆ ಶ್ರಮ ಅಥವ ಸಮಯದಲ್ಲಿ ಬಹಳ ನಾಶಗಳನ್ನು ಮಾಡುವುದು ಹೇಳೀಕೊಡುತಿದ್ದರು.ಅವರು ತಮ್ಮ ತರಬೇತಿಯಲ್ಲಿ ಬಹಳ ಕಟ್ಟುನಿಟ್ಟಾಗಿರುತತ್ತಿದರು.ತಮ್ಮ ಯೋಜನೆಗಳಲ್ಲಿ ಅವರು ತಮ್ಮ ಎಲ್ಲಾ ಹಂತಗಳಲ್ಲಿ ಘಟಕಗಳು ಎದುರಿಸಲು ಪೂರ್ಣ ಕಾರ್ಯಾಚರಣೆ ಸಾಮರ್ಥ್ಯವನ್ನು ಉಳಿಸಿಕೊಳ್ಳಲಾಗಿದೆ. ಶತ್ರುಗಳ ಯಾವುದೆ ತಂತ್ರವು ಇವರ ಸ್ಕ್ವಾಡ್ರನ್ ಅನ್ನು ಅಶಕ್ತಿಯಾಗಿ ಮಾಡಲಾಗದಂತೆ ತರಬೇತಿಯನ್ನು ನೀಡಿ ಅದರಂತೆ ನೆಡೆಯುವಂತೆ ನೊಡಿಕೊಳ್ಳುತ್ತಿದರು.ಅವರು ಅಲ್ಪ ಅವಧಿಯಲ್ಲಿ ಗಮನಾರ್ಹವಾದ ಸಂಘಟನಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದರು.ತನ್ನ ಕಾರ್ಯಾಚರಣೆಯನ್ನು ಪೂರ್ತಿ ಅವರು ಎಚ್ಚರಿಕೆಯಿಂದ ಎಲ್ಲಾ ಕಾರ್ಯಚಟುವಟಿಕೆಗಳನ್ನು ಹೊಂದಾಣಿಕೆ ಇಂದ ನೆಡೆಯುಸುತ್ತಿದರು,ಅದರಲೂ ರಾತ್ರಿಯ ಮುಷ್ಕರ ಕಾರ್ಯಗಳಲ್ಲಿ ಇನ್ನೂ ಬಹಳ ಎಚ್ಚರಿಕೆಯಿಂದ ನೆಡೆಯುಸುತ್ತಿದರು. ತಮ್ಮ ಎಚ್ಚರಿಕೆಯ ಯೋಜನೆ ಮತ್ತು ಧನಾತ್ಮಕ ಮುನ್ನೋಟದ ಕಾರಣಗಳಿಂದ ಎಲ್ಲಾ ಕಾರ್ಯಗಳಲ್ಲಿ ಯಶಸ್ವಿಯಾಗಿ ಯಾವುದೇ ಅಪಘಾತಗಳನ್ನು ಇಲ್ಲದೆ ಪೂರ್ಣಗೊಂಡವು. ತಮ್ಮ ಹರ್ಷಚಿತ್ತದಿಂದ ಮತ್ತು ಆತ್ಮವಿಶ್ವಾಸದಿಂದ ತಮ್ಮ ಸಿಬ್ಬಂದಿಗಳಿಗೆ ಸ್ಫೂರ್ತಿಯಾಗಿದರು. ಇವರ ಶೌರ್ಯ ಮತ್ತು ಪೈಲೆಟಿಂಗ್ ಕೌಶಲ್ಯವನ್ನು ಎಲ್ಲರು ಮೆಚ್ಚಿದಿರು.ಇವರ ವೃತ್ತಿಯ ಅವದಿಯಲ್ಲಿ ಅವರು ತಮ್ಮಿಂದ ನಿರೀಕ್ಷಿಸಬಹುದಾದಂತಕೂ ಅತೀ ಹೆಚ್ಚು ಸೇವೆಯನ್ನು ಸಲ್ಲಿಸಿದ್ದಾರೆ.೧೯೭೧ ಭಾರತ-ಪಾಕಿಸ್ತಾನ್ ಯುದ್ಧದ ಸಮಯದಲ್ಲಿ ಇವರನು ಪಶ್ಚಿಮ ವಲಯದ ಕಾರ್ಯಗಳಲ್ಲಿ ವಾಯು ಕಾರ್ಯಾಚರಣೆಗಳ ಅಧ್ಯಯನ ಯೋಜನೆಗಳಲ್ಲಿ ಒಳಗೊಂಡಿಸಿದರು.ಇವರು ಜಪಾನ್ ವಿರುದ್ಧ ನಡೆದ ಸ್ಕ್ವಾಡ್ರನ್ ೪ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.[]

ವಿಮಾನ ವಿ ೬೪೩ ಪುಷ್ಪಕ್

[ಬದಲಾಯಿಸಿ]

ನವೆಂಬರ್ ೪, ೧೯೭೭ ರಂದು ಪ್ರಧಾನಿ ಮೊರಾರ್ಜಿ ದೇಸಾಯಿಯವರು ಪ್ರಯಾಣಿಸುತ್ತಿದ ವಿಮಾನ ವಿ ೬೪೩ ಪುಷ್ಪಕ್ ನೆಲಕ್ಕೆ ಕುಸಿದಿತ್ತು,ಅವರ ವಿಮಾನ ಕುಸಿತದ ತನಿಖೆಯನು ಸುಬ್ಬಯ್ಯರಿಗೆ ಕೊಡಲಾಗಿತ್ತು.ಮುರಾರ್ಜಿಯವರು ಭಾರತದ ಪ್ರಧಾನ ಮಂತ್ರಿಯಾಗಿ ೧೯೭೭ ರಿಂದ ೧೯೭೯ ರ ತನಕ ಸೇವೆ ಸಲ್ಲಿಸಿದರು.ಮುರಾರ್ಜಿಯವರು ಬಾಂಬೆ ರಾಜ್ಯದ ಮುಖ್ಯಮಂತ್ರಿಯಾಗಿ , ಗೃಹ ಸಚಿವರಾಗಿ , ಹಣಕಾಸು ಸಚಿವರಾಗಿ ಮತ್ತು ಭಾರತದ ಉಪ ಪ್ರಧಾನಿಯಾಗಿಯೂ ಸೇವೆಯನ್ನು ಸಲ್ಲಿಸಿರುವರು. ವಿಚಾರಣೆ ನೇತೃತ್ವ ವಹಿಸಿದ್ದ ಏರ್ ಮಾರ್ಷಲ್ ಡಿ ಸುಬ್ಬಯ್ಯರು "ವಿಮಾನ ರನ್ವೇ ಸಮೀಪಿಸುತ್ತಿದ್ದಂತೆ ಹತ್ತಿರವಿದ್ದ ಮರಗಳಿಗೆ ತಾಗಿದ ಪರಿಣಾಮವಾಗಿ, ವಿಮಾನ ಕುಸಿದಿತು ಎಂದು ಹೇಳಿಕೆ ಕೊಟ್ಟಿದರು.

ಪ್ರಶಸ್ತಿಗಳು

[ಬದಲಾಯಿಸಿ]

ಸಿ ಡಿ ಸುಬ್ಬಯ್ಯರವರಿಗೆ ವೀರ ಚಕ್ರ ಹಾಗು ಪರಮ ಸೇವ ಪದಕ ಸಿಕ್ಕಿದೆ. .ಅವರನು ೧೯೪೭-೧೯೪೮ ಕಾಶ್ಮಿರ ಯುದ್ದದ ಸಮಯದಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ನೇಮಕ ಮಾಡಿದರು. ಇವರು ಗುರಿಯಾಸ ಅವರ ವಿರುದ್ದ ಗೆದ್ದಿದ ಕಾರಣದಿಂದ ಇವರಿಗೆ ಮೊದಲನೆಯ ಗಣರಾಜ್ಯೋತ್ಸವ ದಿನದಂದು ವೀರ ಚಕ್ರ ಪದಕವನ್ನು ಕೊಟ್ಟರು. ಅವರಿಗೆ ಪರಮ ವಿಶಿಶ್ಟ ಸೇವ ಪದಕವನ್ನು ೧೯೭೨ರಲ್ಲಿ ಕೊಟ್ಟರು. ಇವರು ೧೯೭೭-೧೯೭೮ ನಾಗ್ ಪುರದಲ್ಲಿ ಎಂ ಸಿ ಗೆ ಆಜ್ಞಾಧಿಕಾರಿಯಾಗಿ ಕಾರ್ಯ ನೆರವಹಿಸಿದರು.ಅವರು ಪೂರ್ಣ ಅಧಿಕಾರಾವಧಿಯನ್ನು ಸಲ್ಲಿಸಿದ ನಂತರ ೧೯೭೮ ರಲ್ಲಿ ಏರ್ ಮಾರ್ಷಲ್ ಸುಬ್ಬಯ್ಯರು ನಿವೃತ್ತಿ ಹೊಂದಿದರು. ಇವರು ಕೊಡಗಿನ ಅಪ್ರತ್ತಿಮ ಹಾಗು ಬಲಶಾಲಿ ವೀರಗಳಲ್ಲಿ ಒಬ್ಬರು. ಇವರನ್ನು ಕೊಡಗಿನ ಜನ ಈವಾಗಲೂ ತುಂಬ ಗೌರವನ್ನು ಕೊಡುತ್ತಾರೆ. ಇವರ ಸಾದನೆಗಳು ಅನೇಕ ಯುವಜನಗಳಿಗೆ ಮಾದರಿ ಆಗಿದೆ.[][]

ಉಲ್ಲೇಖಗಳು

[ಬದಲಾಯಿಸಿ]
  1. http://www.revolvy.com/main/index.php?s=C%20D%20Subbaiah&item_type=topic
  2. "ಆರ್ಕೈವ್ ನಕಲು". Archived from the original on 2013-11-06. Retrieved 2016-09-16.
  3. http://www.bharat-rakshak.com/IAF/Database/1866
  4. "ಆರ್ಕೈವ್ ನಕಲು". Archived from the original on 2014-04-13. Retrieved 2016-09-16.