ಏಕಶೃಂಗಿ

Wild woman with unicorn, c. 1500–1510 (Basel Historical Museum)

Unicorn seal of Indus Valley, Indian Museum

Youths riding goats (a Dionysiac motif in antiquity) on 12th-century capitals from the abbey of Mozac in the Auvergne. The goats are indistinguishable from unicorns.

Virgin Mary holding the unicorn (c. 1480), detail of the Annunciation with the Unicorn Polyptych, National Museum, Warsaw
ಏಕಶೃಂಗಿಯು ಅದರ ಹಣೆಯಿಂದ ಚಾಚಿಕೊಂಡಿರುವ ಒಂದು ದೊಡ್ಡ, ಮೊನಚಾದ, ಸುರುಳಿಯಾಕಾರದ ಕೊಂಬು, ಮತ್ತು ಕೆಲವೊಮ್ಮೆ ಒಂದು ಆಡಿನ ಗಡ್ಡ ಹಾಗು ಸೀಳಿದ ಗೊರಸುಗಳಿರುವ ಬಿಳಿ ಕುದುರೆಯನ್ನು ಹೋಲುವ ಐರೋಪ್ಯ ಜಾನಪದದ ಒಂದು ಪೌರಾಣಿಕ ಪ್ರಾಣಿ.
ಇತಿವೃತ್ತ[ಬದಲಾಯಿಸಿ]
- ಪುರಾತನ ಗ್ರೀಕ್‍ರಿಂದ ಮೊದಲು ಪ್ರಸ್ತಾಪಿತವಾದ ಅದು ಮಧ್ಯಯುಗ ಮತ್ತು ಪುನರುಜ್ಜೀವನ ಕಾಲದ ಅತ್ಯಂತ ಪ್ರಮುಖ ಕಾಲ್ಪನಿಕ ಪ್ರಾಣಿಯಾಯಿತು ಮತ್ತು ಆ ಅವಧಿಯಲ್ಲಿ ಅದನ್ನು ಸಾಮಾನ್ಯವಾಗಿ ಒಂದು ಅತಿ ವನ್ಯ ಕಾಡು ಪ್ರಾಣಿ, ಪರಿಶುದ್ಧತೆ ಹಾಗು ಸೊಬಗಿನ ಸಂಕೇತ, ಮತ್ತು ಕೇವಲ ಒಬ್ಬ ಕನ್ಯೆಯಿಂದ ಮಾತ್ರ ಸೆರೆಹಿಡಿಯಬಲ್ಲದ್ದೆಂದು ವರ್ಣಿಸಲಾಯಿತು. ವಿಶ್ವಕೋಶಗಳಲ್ಲಿ ಅದರ ಕೊಂಬಿಗೆ ವಿಷಕಾರಿ ನೀರನ್ನು ಕುಡಿಯಲರ್ಹ ಮಾಡುವ ಮತ್ತು ಕಾಯಿಲೆಯನ್ನು ಗುಣಪಡಿಸುವ ಶಕ್ತಿಯಿದೆ ಎಂದು ಹೇಳಲಾಗಿತ್ತು.
- ಒಂದು ಕೊಂಬಿನ ಕಾಲ್ಪನಿಕ ಪ್ರಾಣಿ (ಯೂನಿಕಾರ್ನ್). ಕುದುರೆಯಂತಹ ತಲೆ, ಜಿಂಕೆಯ ಕಾಲು, ಸಿಂಹದ ಬಾಲ, ಹೋತದ ಗಡ್ಡ ಹೊಂದಿರುವ ಹಾಗೆ ಪ್ರತಿನಿಧಿಸಲಾಗಿದೆ. ಇದರ ತಲೆ ಮತ್ತು ದೇಹ ಕುದುರೆಯಂತಿದ್ದು ಹಿಂಗಾಲುಗಳ ಜಿಂಕೆಯ ಕಾಲಿನಂತಿವೆ. ಬಾಲ ಸಿಂಹದ ಬಾಲದಂತೆ. ಕುದುರೆಯ ಬಾಲದಂತೆ ಚಿತ್ರಿತವಾಗಿರುವುದೂ ಉಂಟು. ಹೋತನಂತೆ ಗಡ್ಡವಿದೆ. ಹಣೆಯಲ್ಲಿ ತಿರುಚಿಕೊಂಡು ನೇರಚಾಚಿರುವ ಒಂದು ಕೊಂಬಿದೆ. ಈ ಪ್ರಾಣಿ ಶೌಚಗುಣದ ಪ್ರತೀಕವಾಗಿತ್ತು. ಶುದ್ದ ಕನ್ಯೆಗಲ್ಲದೆ ಬೇರಾರಿಗೂ ವಶವಾಗುತ್ತಿರಲಿಲ್ಲ.
ಪುರಾತನ ಸಾಹಿತ್ಯಗಳಲ್ಲಿ[ಬದಲಾಯಿಸಿ]
- ಭಾರತದಲ್ಲಿ ಕೆಲವು ಬಿಳಿಕತ್ತೆಗಳಿಗೆ ಏಕಶೃಂಗವಿತ್ತೆಂದು ಟೆಸಿಯಸ್ ತಿಳಿಸುತ್ತಾನೆ. ಇದರ ಕೊಂಬಿನಿಂದಾದ ಪಾನಪಾತ್ರೆ ವಿಷಾಪಹಾರಿಯೆಂದು ಅವನ ಹೇಳಿಕೆ. ಏಕಶೃಂಗಿಗಳಾದ ಓರಿಕ್ಸ್ ಮತ್ತು ಭಾರತದ ಕತ್ತೆಗಳ ವಿಷಯವನ್ನು ಅರಿಸ್ಟಾಟಲ್ ಪ್ರಸ್ತಾಪಮಾಡಿದ್ದಾನೆ. ಪ್ಲಿನಿ ಇದರ ಉಲ್ಲೇಖ ಮಾಡಿದ್ದಾನೆ. ಬೈಬಲ್ಲಿನಲ್ಲಿ ಇಂಥದೊಂದು ಪ್ರಾಣಿಯ ಉಲ್ಲೇಖವಿದೆ. ಏಕಶೃಂಗಿಯ ವಿಷಪರಿಹಾರಕ ಗುಣದಲ್ಲಿ ನಂಬಿಕೆ ಇದ್ದ ಮಧ್ಯಯುಗದವರು ತಮ್ಮ ಪಾನಪಾತ್ರೆಗಳ ಮೇಲೆ ಅದರ ಚಿತ್ರ ಬಿಡಿಸುತ್ತಿದ್ದರು.
- ಈ ಪರಿಪಾಟಿ ಎರಡನೆಯ ಚಾರ್ಲ್ಸ್‍ನ ಕಾಲದವರೆಗೂ ಪ್ರಚಲಿತವಾಗಿತ್ತು. ರಾಜಭೋಜನವನ್ನು ಪರೀಕ್ಷಿಸಲು ಫ್ರಾನ್ಸಿನವರು 1789ರ ವರೆಗೂ ಏಕಶೃಂಗಿಯ ಕೊಂಬಿನಿಂದ ಮಾಡಿದ ಒಂದು ವಸ್ತುವನ್ನು ಬಳಸುತ್ತಿದ್ದರು. ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡಿನ ರಾಜಲಾಂಛನಗಳಲ್ಲಿ ಏಕಶೃಂಗಿಯ ಚಿತ್ರವಿದೆ.
ಪ್ರಪಂಚದೆಲ್ಲೆಡೆ[ಬದಲಾಯಿಸಿ]
- ಮೆಕ್ಸಿಕೋದ ಒಂದು ಗಿಡಕ್ಕೆ ಏಕಶೃಂಗಿ ಎಂಬ ಹೆಸರಿದೆ. ಇದನ್ನು ಭೂತದ ಕೈ ಎಂದೂ ಕರೆಯುತ್ತಾರೆ. ಮಾರ್ಟಿನಿಯೇಸಿ ಕುಟುಂಬಕ್ಕೆ ಸೇರಿದ ಈ ಸಸ್ಯದ ಕಾಯಿ ಬಾಗಿರುವ ಕೊಂಬಿನಂತಿದ್ದು ತೊಟ್ಟಿನಿಂದ ಕೆಳಗೆ ನೇತುಬಿದ್ದಿರುತ್ತದೆ. ನರ್ವ್ಹಾಲ್ ಎಂಬ ತಿಮಿಂಗಿಲ ಒಂದಕ್ಕೆ ಮೂತಿಯ ತುದಿಯಲ್ಲಿ ಈಟಿಯಂಥ ಮೂಳೆಯೊಂದಿದೆ.
- ಇದು ಶೀತವಲಯದ ಸಮುದ್ರಗಳಲ್ಲಿ ವಾಸಿಸುತ್ತದೆ. ಇದರ ಶರೀರ 7 ಮೀ ಉದ್ದ. ಮೂತಿಯಲ್ಲಿನ ಶೃಂಗ 3 ಮೀಗಳವರೆಗೂ ಬೆಳೆಯಬಲ್ಲುದು. ಈ ತಿಮಿಂಗಿಲದ ಮೂಳೆಗಳೇ ಏಕಶೃಂಗಿಯ ಕಲ್ಪನೆಗೆ ಕಾರಣವಾಗಿರ ಬಹುದೆಂದು ಹೇಳಲಾಗಿದೆ.
ಛಾಯಾಂಕಣ[ಬದಲಾಯಿಸಿ]
Unicorns as heraldic charges:
Arms of John, King of Hungary (16th century) Arms of Líšnice, Czech Republic
Arms of Ramosch, Switzerland Arms of Schwäbisch Gmünd, ಜರ್ಮನಿ
Unicorns as supporters:
Royal arms of Queen Elizabeth II, as used in England
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: