ವಿಷಯಕ್ಕೆ ಹೋಗು

ಏಂಜಲ್ ಜಲಪಾತ

Coordinates: 5°58′03″N 62°32′08″W / 5.96750°N 62.53556°W / 5.96750; -62.53556
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

5°58′03″N 62°32′08″W / 5.96750°N 62.53556°W / 5.96750; -62.53556

ಏಂಜಲ್ ಜಲಪಾತ
ಸಾಲ್ಟೊ ಏಂಜಲ್
ಕೆರೆಪಾಕುಪೈ ವೆನ
Angel Falls, Bolívar State, Venezuela
ಸ್ಥಳAuyantepui, Canaima National Park, Venezuela
ಬಗೆPlunge
ಒಟ್ಟು ಉದ್ದ979 m (3,212 ft)
ಒಟ್ಟು ಪ್ರಪಾತಗಳು47
ಉದ್ದವಾದ ಪ್ರಪಾತ807 m (2,648 ft)
ವಿಶ್ವದಲ್ಲಿ ಉದ್ದದ ರ‍್ಯಾಂಕ್1[]

ಏಂಜಲ್ ಜಲಪಾತವು(ಸ್ಪ್ಯಾನಿಷ್: Salto Ángel; ಪೆಮೊನ್ ಭಾಷೆ: ಕೆರೆಪಕುಪೈ ವೆ ನ, ಅಂದರೆ "ಅತ್ಯಂತ ಆಳ ಸ್ಥಳದ ಜಲಪಾತ" ಅಥವಾ ಪರಕುಪ-ವೆನ, ಅರ್ಥ "ಅತ್ಯಂತ ಎತ್ತರ ಸ್ಥಳದ ಜಲಪಾತ) ವೆನೆಜುವೆಲಾದ ಒಂದು ಜಲಪಾತ.

ಇದು ವಿಶ್ವದ ಅತ್ಯಂತದ ಎತ್ತರದ ಜಲಪಾತವಾಗಿದ್ದು, ಇದರ ಎತ್ತರ 979 m (3,212 ft)ರಷ್ಟಿದೆ ಜೊತೆಗೆ ಇದರ ರಭಸವು 807 m (2,648 ft)ರಷ್ಟಿದೆ. ಜಲಪಾತವು ಕಾನೈಮ ರಾಷ್ಟ್ರೀಯ ಉದ್ಯಾನವನದ ಆಯಂತೆಪುಯಿ ಪರ್ವತ ತುದಿಯಿಂದ ಬೀಳುತ್ತದೆ (ಸ್ಪ್ಯಾನಿಶ್: ಪಾರ್ಕ್ಯೂ ನಾಸಿಯೋನಲ್ ಕಾನೈಮ), ಇದು ವೆನೆಜುವೆಲಾದ ಬೋಲಿವರ್ ರಾಜ್ಯದ ಗ್ರಾನ್ ಸಬಾನ ಪ್ರದೇಶದಲ್ಲಿರುವ UNESCO ವಿಶ್ವ ಸ್ಮಾರಕ ಸ್ಥಳವಾಗಿದೆ.

ಜಲಪಾತವು ಎಷ್ಟು ಎತ್ತರವಿದೆಯೆಂದರೆ, ಭೂಮಿಯ ಮೇಲೆ ಅದು ಬೀಳುವುದಕ್ಕೆ ಮುಂಚೆ ಹೆಚ್ಚಿನ ನೀರು ಆವಿಯಾಗಿಹೋಗುತ್ತದೆ ಅಥವಾ ಬಲವಾದ ಗಾಳಿಯು ಅದನ್ನು ಸ್ವಚ್ಚವಾದ ಮಂಜಿನ ರೀತಿಯಲ್ಲಿ ಹೊತ್ತೊಯ್ಯುತ್ತದೆ. ಜಲಪಾತದ ತಳವು ಕೆರೆಪ್ ನದಿಗೆ ನೀರನ್ನು ಪೂರೈಕೆ ಮಾಡುತ್ತದೆ(ಇದನ್ನು ಪರ್ಯಾಯವಾಗಿ ರಿಯೋ ಗುಯ ಎಂದು ಕರೆಯಲಾಗುತ್ತದೆ), ಇದು ಚುರುನ್ ನದಿಗೆ ಹರಿಯುತ್ತದೆ, ಇದು ಕಾರ್ರಯೋ ನದಿಯ ಉಪನದಿಯಾಗಿದೆ.

ಜಲಪಾತದ 3,212 ft (979 m)ರಷ್ಟು ಎತ್ತರವು ಬಹುತೇಕವಾಗಿ ಅದರ ರಭಸವನ್ನು ಒಳಗೊಳ್ಳುವುದರ ಜೊತೆಗೆ ಸುಮಾರು 0.25 mi (400 m)ರಷ್ಟು ಇಳಿಜಾರಿನ ಕಿರುಜಲಪಾತಗಳು ಹಾಗು ಪ್ರಪಾತದ ಕೆಳಗೆ ರಭಸದ ಇಳಿತಗಳನ್ನು ಹಾಗು ಇಳಿಜಾರಿನ ರಭಸದಲ್ಲಿ 100-foot (30 m)ರಷ್ಟು ಅಧಿಕ ರಭಸವನ್ನು ನದಿ ದಿಕ್ಕಿನಲ್ಲಿ ಹೊಂದಿದೆ. ಮುಖ್ಯ ರಭಸವು ನಿಸ್ಸಂದೇಹವಾಗಿ ವಿಶ್ವದ ಅತಿ ಎತ್ತರದ ಏಕೈಕ ಪ್ರಪಾತವೆನಿಸಿದೆ, ಕೆಲವರು ಜಲಪಾತದ ಎತ್ತರದ ಮಾನದಂಡದಲ್ಲಿ [] ಕಡಿಮೆ ಮಟ್ಟದ ಕಿರುಜಲಪಾತಗಳು ಸೇರುತ್ತವೆ ಎಂದು ಭಾವಿಸುತ್ತಾರೆ, ಆದಾಗ್ಯೂ ಜಲಪಾತದ ಮಾಪನಕ್ಕೆ ಸಾರ್ವತ್ರಿಕವಾಗಿ ಗುರುತಿಸಲಾಗುವಂತಹ ಯಾವುದೇ ಮಾನದಂಡಗಳಿಲ್ಲ.[]

ಹೆಸರು

[ಬದಲಾಯಿಸಿ]
ಶುಷ್ಕ ವಾತಾವರಣದಲ್ಲಿ ಏಂಜಲ್ ಜಲಪಾತ

ಜಲಪಾತವು ಇಪ್ಪತ್ತನೆ ಶತಮಾನದಲ್ಲಿ "ಏಂಜಲ್ ಫಾಲ್ಸ್" ಎಂದೇ ಬಹುತೇಕವಾಗಿ ಪರಿಚಿತವಾಗಿತ್ತು, ಏಕೆಂದರೆ US ವಿಮಾನ ಚಾಲಕ ಜಿಮ್ಮಿ ಏಂಜಲ್ ಈ ಜಲಪಾತದ ಮೇಲೆ ವಿಮಾನದಲ್ಲಿ ಹಾರಾಡಿದ ಮೊದಲ ವ್ಯಕ್ತಿಯೆನಿಸಿದ್ದ ಸ್ಪ್ಯಾನಿಶ್ ನ ಸಾಮಾನ್ಯ ಹೆಸರಾದ "ಸಾಲ್ಟೋ ಏಂಜಲ್" ಇಂಗ್ಲಿಷ್ ಭಾಷೆಯಿಂದ ವ್ಯುತ್ಪತ್ತಿಯನ್ನು ಹೊಂದಿದೆ. 2009ರಲ್ಲಿ, ಅಧ್ಯಕ್ಷ ಹ್ಯೂಗೋ ಚಾವೆಜ್, "ಅತ್ಯಂತ ಆಳ ಸ್ಥಳದ ಜಲಪಾತ" ಎಂಬ ಅರ್ಥವನ್ನು ನೀಡುವ ಸ್ಥಳೀಯ ಪೆಮೊನ್ ಹೆಸರು "ಕೆರೆಪಕುಪೈ ಮೇರು" ಎಂದು ಜಲಪಾತದ ಹೆಸರನ್ನು ಬದಲಾವಣೆ ಮಾಡುವ ಉದ್ದೇಶವನ್ನು ಹೊಂದಿದ್ದಾಗಿ ಪ್ರಕಟಿಸಿದರು, ಇವರು ದೇಶದ ಅತ್ಯಂತ ಪ್ರಸಿದ್ಧ ಹೆಗ್ಗುರುತು ಒಂದು ಸ್ಥಳೀಯ ಹೆಸರನ್ನು ಹೊಂದಿರಬೇಕೆಂಬ ಉದ್ದೇಶವನ್ನು ಆಧರಿಸಿ ಈ ರೀತಿ ಪ್ರಕಟಣೆ ನೀಡಿದರು.[] ಹೆಸರು ಬದಲಾವಣೆಯ ಬಗ್ಗೆ ವಿವರಣೆ ನೀಡುತ್ತಾ, ಚಾವೆಜ್, "ಇದು ನಮ್ಮದು, ಏಂಜಲ್ ಈ ಸ್ಥಳಕ್ಕೆ ಬರುವ ಬಹಳ ಮೊದಲಿನಿಂದಲೂ ಇದು ನಮ್ಮದಾಗಿತ್ತು...ಇದು ಸ್ಥಳೀಯ ಆಸ್ತಿ" ಎಂದು ಹೇಳಿಕೆ ನೀಡಿದ್ದು ವರದಿಯಾಯಿತು.[] ಆದಾಗ್ಯೂ, ಅವರು ನಂತರ ಹೆಸರಿನ ಬದಲಾವಣೆಯ ಬಗ್ಗೆ ಶಾಸನ ಮಾಡುವುದಿಲ್ಲ ಆದರೆ ಕೇವಲ ಕೆರೆಪಕುಪೈ ಮೇರು ಎಂಬ ಹೆಸರಿನ ಬಳಕೆಯನ್ನು ಸಮರ್ಥಿಸಿಕೊಳ್ಳುವುದಾಗಿ ಹೇಳಿದರು.[][]

ಜಲಪಾತವನ್ನು ಕೆಲವೊಂದು ಬಾರಿ ಚುರುನ್-ಮೇರು ಎಂದೂ ಸಹ ಸೂಚಿಸಲಾಗುತ್ತದೆ, ಅಂದರೆ "ಪ್ರಚಂಡ ಜಲಪಾತ", ತಪ್ಪು ತಿಳಿವಳಿಕೆಯಿಂದಾಗಿ; ಈ ಹೆಸರು ಕಾನೈಮ ರಾಷ್ಟ್ರೀಯ ಉದ್ಯಾನವನದಲ್ಲಿರುವ ಮತ್ತೊಂದು ಜಲಪಾತಕ್ಕೆ ಹೊಂದಾಣಿಕೆಯಾಗುತ್ತದೆ (ಅಲ್ಲದೆ, ವಾಸ್ತವವಾಗಿ ಆಯಂತೆಪುಯಿಗೂ ಸಹ ಹೊಂದಾಣಿಕೆಯಾಗುತ್ತದೆ).

ಪರಿಶೋಧನೆ

[ಬದಲಾಯಿಸಿ]
ಏಂಜಲ್'ಸ್ ಫಲಕ ವಿಮಾನಗಳು

ಸರ್ ವಾಲ್ಟರ್ ರಾಲಿಗ್ ಸಂಭಾವ್ಯವಾಗಿ ಒಂದು ಟೆಪುಯ್ ಎಂದು ಕರೆಯಲ್ಪಡುವುದರ ಬಗ್ಗೆ ವಿವರಿಸಿದ್ದಾರೆ(ಮೇಜಿನ ಮೇಲ್ಮೈ ಪರ್ವತ), ಜೊತೆಗೆ ಏಂಜಲ್ ಜಲಪಾತವನ್ನು ಮೊದಲ ಬಾರಿಗೆ ವೀಕ್ಷಿಸಿದ ಮೊದಲ ಯುರೋಪಿಯನ್ ಎಂದು ಕೆಲವೊಂದು ಬಾರಿ ಹೇಳುತ್ತಿದ್ದ, ಆದರೆ ಈ ಸಮರ್ಥನೆಗಳು ಸತ್ಯಕ್ಕೆ ದೂರವಾದವೆಂದು ಪರಿಗಣಿಸಲಾಗುತ್ತದೆ.[] ಕೆಲವು ಇತಿಹಾಸಜ್ಞರು ಫರ್ನಾನ್ಡೋ ಡೆ ಬೇರ್ರಿಯೋ ಜಲಪಾತಕ್ಕೆ ಭೇಟಿ ನೀಡಿದ ಮೊದಲ ಯುರೋಪಿಯನ್ ಎಂದು ಹೇಳುತ್ತಾರೆ, ಈತ 16 ಹಾಗು 17ನೇ ಶತಮಾನಗಳಲಿದ್ದ ಒಬ್ಬ ಸ್ಪ್ಯಾನಿಶ್ ಪರಿಶೋಧಕ ಹಾಗು ಗವರ್ನರ್.[] ನಂತರದಲ್ಲಿ, ಇವುಗಳನ್ನು ವಾಸ್ತವವಾಗಿ 1912ರಲ್ಲಿ ವೆನೆಜುವೆಲಾದ ಪರಿಶೋಧಕ ಅರ್ನೆಸ್ಟೊ ಸಾಂಚೆಜ್ ಲಾ ಕ್ರುಜ್ ಗುರುತಿಸಿದ, ಆದರೆ ಈತ ತನ್ನ ಪರಿಶೋಧನೆಯ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಲಿಲ್ಲ. ಅಮೆರಿಕನ್ ವಿಮಾನ ಚಾಲಕ ಜಿಮ್ಮಿ ಏಂಜಲ್ 16 ನವಂಬರ್ 1933ರಲ್ಲಿ ಅತ್ಯಮೂಲ್ಯವಾದ ಅದಿರಿನ ಜಾಡನ್ನು ಹಿಡಿದು ಜಲಪಾತದ ಮೇಲೆ ವಿಮಾನದಲ್ಲಿ ಹಾದು ಹೋಗುವವರೆಗೂ ಇದರ ಬಗ್ಗೆ ಹೊರಗಿನ ಪ್ರಪಂಚಕ್ಕೆ ತಿಳಿದಿರಲಿಲ್ಲ.[][೧೦]

ಅಕ್ಟೋಬರ್ 9, 1937ರಲ್ಲಿ ತನ್ನ ಪರಿಶೋಧನೆಯನ್ನು ಮುಗಿಸಿ ಹಿಂದಿರುಗುವಾಗ, ಏಂಜಲ್ ತನ್ನ ಮೆಟಲ್ ಏರ್ಕ್ರ್ಯಾಫ್ಟ್ ಕಾರ್ಪೋರೇಶನ್ ಫ್ಲೆಮಿಂಗೋದ ಏಕಫಲಕ ವಿಮಾನ ಎಲ್ ರಿಯೋ ಕಾರೋನಿ ಯನ್ನು ಆಯನ್-ತೆಪುಯಿ ಪರ್ವತದ ಮೇಲೆ ನಿಲುಗಡೆ ಮಾಡಲು ಪ್ರಯತ್ನಿಸಿದ, ಆದರೆ ಜವುಗು ಭೂಮಿಯ ಮೇಲೆ ವಿಮಾನದ ಗಾಲಿಗಳು ಹುದುಗಿದ್ದರಿಂದಾಗಿ, ಈತ ಹಾಗು ಈತನ ಪತ್ನಿ ಮರಿಯೇಳನ್ನು ಒಳಗೊಂಡಂತೆ ಈತನ ಮೂವರು ಸಹಚರರು ತೆಪುಯಿ ಪರ್ವತಕ್ಕೆ ಕಾಲ್ನಡಿಗೆಯಲ್ಲಿ ಏರುವಂತಾಯಿತು. ಅವರಿಗೆ ಮತ್ತೆ ಜನನಿಬಿಡ ಪ್ರದೇಶಗಳಿಗೆ ಮರಳಲು 11 ದಿವಸಗಳು ಹಿಡಿಯಿತು, ಆದರೆ ಅವರ ಸಾಹಸಕಾರ್ಯಗಳ ಬಗ್ಗೆ ಸುದ್ದಿಯು ಹರಡಿತು, ಜೊತೆಗೆ ಈತನ ಗೌರವಾರ್ಥವಾಗಿ ಜಲಪಾತಕ್ಕೆ ಏಂಜಲ್ ಜಲಪಾತವೆಂದು ಹೆಸರಿಸಲಾಯಿತು.

ಏಂಜಲ್ ನ ವಿಮಾನವು, ಹೆಲಿಕಾಫ್ಟರ್ ಮೂಲಕ ಮೇಲೆತ್ತುವವರೆಗೂ 33 ವರ್ಷಗಳ ಕಾಲ ಟೆಪುಯ್ ಪರ್ವತದ ಮೇಲಿತ್ತು. ಇದನ್ನು ಮರಕಾಯ್ ನಲ್ಲಿರುವ ವಾಯುಯಾನ ವಸ್ತುಸಂಗ್ರಹಾಲಯದಲ್ಲಿ ರಕ್ಷಿಸಲಾಗಿತ್ತು ಜೊತೆಗೆ ಇದೀಗ ಇದನ್ನು ಸಿಯುಡಾಡ್ ಬೋಲಿವರ್ ವಿಮಾನನಿಲ್ದಾಣದ ಹೊರಭಾಗದಲ್ಲಿ ಸಂರಕ್ಷಿಸಲಾಗಿದೆ.

ಜಲಪಾತಕ್ಕೆ ನೀರನ್ನು ಪೂರೈಸುವ ನದಿಯನ್ನು ತಲುಪಿದ ಮೊದಲ ದಾಖಲಿತ ಪಾಶ್ಚಿಮಾತ್ಯನೆಂದರೆ ಲಾಟ್ವಿಯದ ಪರಿಶೋಧಕ ಅಲೆಕ್ಸಾನ್ಡ್ರಸ್ ಲೈಮೆ, ಈತ ಸ್ಥಳೀಯ ಪೆಮೊನ್ ಸಮುದಾಯದಲ್ಲಿ ಅಲೆಜಾನ್ಡ್ರೋ ಲೈಮೆ ಎಂದೇ ಪರಿಚಿತನಾಗಿದ್ದಾನೆ. ಈತ 1955ರಲ್ಲಿ ಆಯನ್-ಟೆಪುಯಿ ಪರ್ವತವನ್ನು ಆರೋಹಣ ಮಾಡಿದ. ಈತ ಇದೇ ಪರ್ಯಟನದಲ್ಲಿ ಏಂಜಲ್ ನ ವಿಮಾನವನ್ನು ತಲುಪಿದ, ಇದು ವಿಮಾನ ಪರ್ವತದ ಮೇಲೆ ನಿಲುಗಡೆಯಾದ 18 ವರ್ಷಗಳ ನಂತರದ ಅವಧಿಯಾಗಿತ್ತು. ಈತ ಜಲಪಾತಕ್ಕೆ ನೀರನ್ನು ಪೂರೈಕೆ ಮಾಡುವ ನದಿಗೆ ಲಾಟ್ವಿಯಾದ ಒಂದು ನದಿಯ ಜ್ಞಾಪಕಾರ್ಥವಾಗಿ ಗುಜ ಎಂಬ ಹೆಸರನ್ನು ನೀಡಿದ, ಆದರೆ ನದಿಗೆ ಪೆಮೊನ್-ನೀಡಿದ ಹೆಸರಾದ ಕೆರೆಪ್ ಅನ್ನೇ ಇಂದಿಗೂ ಸಹ ವ್ಯಾಪಕವಾಗಿ ಬಳಸಲಾಗುತ್ತದೆ.

ಚುರನ್ ನದಿಯಿಂದ ಜಲಪಾತದ ಅದರ ತಳಕ್ಕೆ ದಾರಿ ಮಾಡಿಕೊಡುವ ಕಾಲುದಾರಿಯನ್ನು ಸ್ವಚ್ಚ ಮಾಡಿದ ಮೊದಲ ವ್ಯಕ್ತಿಯೂ ಸಹ ಲೈಮೆ. ಮಾರ್ಗಮಧ್ಯದಲ್ಲಿ, ಸಾಮಾನ್ಯವಾಗಿ ಛಾಯಚಿತ್ರಗಳಲ್ಲಿ ಸೆರೆಹಿಡಿಯಲಾಗುವ ಜಲಪಾತದ ದೃಶ್ಯಗಳು ಕಂಡುಬರುತ್ತವೆ. ಇದನ್ನು ಆತನ ಗೌರವಾರ್ಥವಾಗಿ ಮಿರಡೋರ್ ಲೈಮೆ (ಸ್ಪ್ಯಾನಿಶ್ ನಲ್ಲಿ "ಲೈಮೆಯ ದೃಶ್ಯಾವಳಿ) ಎಂದು ಕರೆಯಲಾಗುತ್ತದೆ. ಈ ಕಾಲುದಾರಿಯನ್ನು ಈಗ ಹೆಚ್ಚಾಗಿ ಪ್ರವಾಸಿಗಳು ಬಳಕೆಮಾಡುತ್ತಾರೆ, ಇದು ಅವರನ್ನು ಇಸ್ಲಾ ರಾಟನ್ ಶಿಬಿರದಿಂದ ಸಣ್ಣ ಕಾಡು ಜಮೀನಿಗೆ ಕೊಂಡೊಯ್ಯುತ್ತದೆ.

ಜಲಪಾತದ ಅಧಿಕೃತ ಎತ್ತರವನ್ನು ನ್ಯಾಷನಲ್ ಜಿಯೋಗ್ರ್ಯಾಫಿಕ್ ಸೊಸೈಟಿಯ ಸಮೀಕ್ಷೆ ನಿರ್ಧರಿಸಿದೆ, ಈ ಸಮೀಕ್ಷೆಯನ್ನು 1949ರಲ್ಲಿ ಅಮೆರಿಕನ್ ಪತ್ರಕರ್ತ ರುತ್ ರಾಬಿನ್ಸನ್ ನಡೆಸಿದರು.[೧೧]

ಡೇವಿಡ್ ನಾಟ್ಟ್ ರ ಪುಸ್ತಕ ಏಂಜಲ್ಸ್ ಫೋರ್, ಆಯಂತೆಪುಯಿ ಹೊರತಲದ ಮೊದಲ ಯಶಸ್ವಿ ಆರೋಹಣದಿಂದ ಹಿಡಿದು ಜಲಪಾತದ ತುದಿಯ ಬಗ್ಗೆ ವಿವರಣೆ ನೀಡುತ್ತದೆ.

ಪ್ರವಾಸೋದ್ಯಮ

[ಬದಲಾಯಿಸಿ]

ಏಂಜಲ್ ಜಲಪಾತವು ವೆನೆಜುವೆಲಾದ ಮೊದಲ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ, ಆದರೆ, ಇಂದಿಗೂ, ಜಲಪಾತಕ್ಕೆ ವಿಹಾರ ಪ್ರವಾಸ ಹೋಗುವುದು ಒಂದು ಕಷ್ಟಕರ ಸಂಗತಿಯಾಗಿದೆ. ಜಲಪಾತವು ವೆನೆಜುವೆಲಾದ ಏಕಾಂತ ಕಾಡಿನಲ್ಲಿ ನೆಲೆಯಾಗಿದೆ, ಜೊತೆಗೆ ಪೋರ್ಟೊ ಆರ್ಡಾಜ್ ಅಥವಾ ಸಿಯುಡಾಡ್ ಬೋಲಿವರ್ ನಿಂದ ಹೊರಡುವ ವಿಮಾನವು ಕಾನೈಮ ಶಿಬಿರವನ್ನು ತಲುಪುತ್ತದೆ, ಇದು ಜಲಪಾತದ ತಳದಿಂದ ಹೊರಡುವ ನದಿ ವಿಹಾರಗಳ ಆರಂಭಿಕ ಸ್ಥಾನವಾಗಿದೆ. ನದಿ ವಿಹಾರಗಳು ಸಾಧಾರಣವಾಗಿ ಜೂನ್ ನಿಂದ ಡಿಸೆಂಬರ್ ನಡುವಿನ ಅವಧಿಯಲ್ಲಿ ನಡೆಯುತ್ತದೆ, ಆ ಅವಧಿಯಲ್ಲಿ ಪೆಮೊನ್ ಮಾರ್ಗದರ್ಶಕರ ಸಲಹೆಯಂತೆ ನದಿಯಲ್ಲಿನ ನೀರು ಬಳಕೆಯಾಗುವ ಮರದ ಕುರಿಯರಾಗಳು ತೇಲುವಷ್ಟಿರುತ್ತವೆ. ಶುಷ್ಕ ಹವಾಮಾನದಲ್ಲಿ(ಡಿಸೆಂಬರ್ ನಿಂದ ಮಾರ್ಚ್ ವರೆಗೂ) ಇತರ ತಿಂಗಳಿಗಿಂತ ಕಡಿಮೆ ನೀರು ಕಂಡುಬರುತ್ತದೆ.

ಶುಷ್ಕ ಹವಾಮಾನದ ಕಡೆಭಾಗದಲ್ಲಿ ಭಾಗಶಃ ಮೋಡದಿಂದಾವೃತವಾದ ದೃಶ್ಯಾವಳಿ
View of Angel Falls and Auyantepui from Isla Raton camp

ಇವನ್ನೂ ನೋಡಿ

[ಬದಲಾಯಿಸಿ]
  • ಜೀನ್-ಮಾರ್ಕ್ ಬೋಯಿವಿನ್

ಉಲ್ಲೇಖಗಳು

[ಬದಲಾಯಿಸಿ]
  1. Angel Falls. (2006). In Encyclopædia Britannica. Retrieved 28 July 2006, from Encyclopædia Britannica Premium Service: http://www.britannica.com/eb/article-9007543 Archived 2008-11-18 ವೇಬ್ಯಾಕ್ ಮೆಷಿನ್ ನಲ್ಲಿ.
  2. ೨.೦ ೨.೧ "What is considered a Waterfall?". World Waterfall Database. Archived from the original on 2010-12-01. Retrieved 2009-12-02.
  3. Carroll, Rory (2009-12-21). "Hugo Chávez renames Angel Falls". The Guardian. London. Retrieved 2010-04-25.
  4. "ಆರ್ಕೈವ್ ನಕಲು". Archived from the original on 2010-01-14. Retrieved 2010-10-29.
  5. "ಆರ್ಕೈವ್ ನಕಲು". Archived from the original on 2010-04-20. Retrieved 2010-10-29.
  6. "ಆರ್ಕೈವ್ ನಕಲು". Archived from the original on 2010-01-30. Retrieved 2010-10-29.
  7. "The Lost World: Travel and information on the Gran Sabana, Canaima National Park, Venezuela". Archived from the original on 14 ಅಕ್ಟೋಬರ್ 2002. Retrieved 14 Nov 2009.
  8. ಸ್ಯಾನ್ಚೆಜ್ ರಾಮೋಸ್, ವಾಲೆರಿಯನೋ: ಫಾರುವ: ರೆವಿಸ್ಟ ಡೆಲ್ ಸೆಂಟ್ರೋ ವರ್ಜಿಟಾನೋ ಡೆ ಎಷ್ಟುಡಿಯೋಸ್ ಹಿಸ್ಟಾರಿಕೊಸ್ , ISSN 1138-4263, Nº. 8, 2005, ಪೇಜಸ್. 105–142. ಡಿಸ್ಪೋನಿಯಬಲ್ ಎನ್ ಡಯಲ್ನೆಟ್– ಯೂನಿವರ್ಸಿಡಾಡ್ de ಲಾ ರಿಯೋಜ(ಎಸ್ಪನ)
  9. "Jimmie Angel … An Explorer". 2008. Archived from the original on 5 ಅಕ್ಟೋಬರ್ 2013. Retrieved 14 Nov 2009.
  10. Angel, Karen (2001). "The Truth About Jimmie Angel & Angel Falls". Retrieved 14 Nov 2009.
  11. Robertson, Ruth. "Jungle Journey to the World's Highest Waterfall.". In Jenkins, Mark (ed.). Worlds to Explore. National Geographic. ISBN 978-1-4262-0044-1.

ಬಾಹ್ಯ ಕೊಂಡಿಗಳು

[ಬದಲಾಯಿಸಿ]