ಎ.ಎಸ್. ಪುತ್ತಿಗೆ

ವಿಕಿಪೀಡಿಯ ಇಂದ
Jump to navigation Jump to search

ವಾತಾ೯ ಭಾರತಿ ಮಂಗಳೂರು ಮತ್ತು ಬೆಂಗಳೂರುನಿಂದ ಪ್ರಕಾಶಿತವಾಗುತ್ತಿರುವ ಪ್ರಮುಖ ಕನ್ನಡ ದಿನಪತ್ರಿಕೆ. ೨೦೦೩ರಲ್ಲಿ ವಾತಾ೯ ಭಾರತಿಯನ್ನು ಎ.ಎಸ್. ಪುತ್ತಿಗೆಯವರು (ಅಬ್ದುಲ್ ಸಮದ್ ಪುತ್ತಿಗೆ)ಮಂಗಳೂರಿನಿಂದ ಪ್ರಾರಂಭಿಸಿದರು. ಸಮೃದ್ಧ ಭಾಷೆ, ಸರಳ ನಿರೂಪಣೆ ಪತ್ರಿಕೆಯನ್ನು ಜನಸಾಮಾನ್ಯರೆಡೆಗೆ ಒಯ್ಯಿತು. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಉದುಪಿ, ಉತ್ತರ ಕನ್ನಡ ಮಾತ್ರವಲ್ಲದೆ ನೆರೆಯ ಕಾಸರಗೋಡು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲೂ ಪತ್ರಿಕೆ ಅಲ್ಪಾವಧಿಯಲ್ಲಿ ಅಪಾರ ಜನಮನ್ನಣೆ ಪಡೆಯಿತು. ಪತ್ರಿಕೆ ಆರಂಭವಾದ ಮೂರನೇ ವರ್ಷಕ್ಕೆ ಬೆಂಗಳೂರು ಆವೃತ್ತಿಯನ್ನು ಆರಂಭಿಸಲಾಯಿತು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ತುಮಕೂರು, ಕೋಲಾರ, ಹಾಸನ - ಹೀಗೆ ವಾರ್ತಾಭಾರತಿಯ ಪ್ರಸಾರ ರಾಜ್ಯಾದ್ಯಂತ ವ್ಯಾಪಿಸಿದೆ. ಕರ್ನಾಟಕದ ಹೊರಗೂ ಸಹ ವಾರ್ತಾಭಾರತಿ ಜನಪ್ರಿಯವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಕುವೈತ್ ಮತ್ತಿತರ ಪರ್ಶಿಯನ್ ಗಲ್ಫ್ ರಾಷ್ಟ್ರಗಳ ಅನಿವಾಸಿ ಭಾರತೀಯರನ್ನು ವಾರ್ತಾಭಾರತಿ ತಲುಪುತ್ತಿದೆ. ಮಾತ್ರವಲ್ಲ, ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಂತ ಹೆಚ್ಚು ಓದುಗ ಬಳಗವನ್ನು ಹೊಂದಿರುವ ಕನ್ನಡ ದೈನಿಕವಾಗಿದೆ.