ಎಸ್. ಮೀನಾಕ್ಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೃತ್ಯಾಂಗನೆ, ಎಸ್. ಮೀನಾಕ್ಷಿ, ತಮ್ಮ ಸೋದರತ್ತೆ, ವಿಶಾಲಾಕ್ಷಿಯವರಿಂದ ಚಿಕ್ಕವಯಸ್ಸಿನಲ್ಲೇ ವೀಣಾವಾದನ ಮತ್ತು ಭರನಾಟ್ಯ ಕಲೆಗಳನ್ನು ಕಲಿತರು. ಎಸ್.ಮೀನಾಕ್ಷಿಯವರು, 'ಶ್ರೀ ರಾಮ್ ಗೋಪಾಲ್' ಮತ್ತು 'ಶ್ರೀಮತಿ.ಮೃಣಾಲಿನಿ ಸಾರಾಭಾಯ್' ರವರಿಂದ ನೃತ್ಯದಲ್ಲಿ ಮಾರ್ಗದರ್ಶನ ಪಡೆದರು. ರಾಮ್ ಗೋಪಾಲ್ ಆಗ ತಮ್ಮ ತಂಡದೊಂದಿಗೆ ಬ್ರಿಟನ್ ಹಾಗೂ ಯೂರೊಪಿನ ಹಲವು ನಗರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೊಡುತ್ತಿದ್ದರು. ಮೀನಾಕ್ಷಿಯವರು ಮತ್ತು ಮೃಣಾಲಿನಿ ಸಾರಾಭಾಯ್ ಆ ತಂಡದಲ್ಲಿ ಭಾಗವಹಿಸಿದ್ದರು. 'ಋಷಿ ವ್ಯಾಲಿ ನೃತ್ಯಶಾಲೆ'ಯಲ್ಲಿ ಸುಮಾರು ಎರಡು ದಶಕಕ್ಕೂ ಮೀರಿ ನರ್ತನ ಶಿಕ್ಷಣ ನೀಡಿದ್ದಾರೆ. ಹಲವಾರು ನೃತ್ಯನಾಟಕಗಳನ್ನು ಸಂಯೋಜಿಸಿ ನಿರ್ದೇಶಿಸಿ ಪ್ರಸ್ತುತಪಡಿಸಿದ್ದಾರೆ.

ನಿರ್ವಹಿಸಿದ ಕಾರ್ಯಗಳು, ಹಾಗೂ ಪ್ರಶಸ್ತಿಗಳು[ಬದಲಾಯಿಸಿ]

  • 'ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ ನಾಟಕ ಸಂಗೀತ ವಿಭಾಗದಲ್ಲಿ ಬೋಧಕಿ'ಯಾಗಿ ಕೆಲವು ಸಮಯ ದುಡಿದರು.
  • ಬೆಂಗಳೂರು ನಗರದಲ್ಲಿ 'ವೀಣಾ ವಿಶಾಲಾಕ್ಷಿ ನೃತ್ಯಶಾಲೆ'ಯನ್ನು ಸ್ಥಾಪಿಸಿ ಅಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು.
  • ೧೯೯೦-೯೧ನೇ ವರ್ಷದಲ್ಲಿ ಮೀನಾಕ್ಷಿಯವರಿಗೆ 'ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ', ಹಾಗೂ “ಕರ್ನಾಟಕ ಕಲಾ ತಿಲಕೆ” ಬಿರುದನ್ನು ನೀಡಿ ಗೌರವಿಸಿದೆ.