ಎಸ್. ಬಿ. ಛಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಡತನದ ಬೇಗೆಯಿಂದ ಬೇಯುತ್ತಿರುವ ವ್ಯಕ್ತಿ ನಿಧನನಾದ ಬಳಿಕವೂ ಬೆನ್ನ ಹಿಂದೆ ಕಾಡುವ ಹಣದ ಕೊರತೆಗಳನ್ನು ಅರಿತು ಅದಕ್ಕೊಂದು ಉಪಾಯ ಕಂಡುಹಿಡಿದು ತಾವೂ ಒಬ್ಬ ಮಾದರಿಯ ಮನುಶ್ಯನಾಗಿ ನಗರದ ನಾಗರೀಕರು ನೆನೆಸಿಕೊಳ್ಳುವಂತೆ ನಡೆದುಕೊಂಡ ಮಹಾನ್ ಚೇತನ, 'ಸನತ್.ಬಿ.ಛಾಯ', ಮಹಾರಾಷ್ಟ್ರದ ಮುಂಬೈನಗರಕ್ಕೆ ಹತ್ತಿರದ 'ಅಂಬರ್ ನಾಥ್ ಬಡಾವಣೆ'ಯಲ್ಲಿ ವಾಸಿಸುವ ಒಬ್ಬ ಸಾಮಾನ್ಯ ವ್ಯಕ್ತಿ. ಒಬ್ಬ ಬಡ ಕಾರ್ಮಿಕ, ಅಥವಾ ಮತ್ತೊಬ್ಬ ಧನಹೀನ ವ್ಯಕ್ತಿ ನಿಧನಹೊಂದಿದರೆ, ಕೆಲವೊಮ್ಮೆ ಆತನ ಮೃತದೇಹವನ್ನು ದಹನಕ್ರಿಯೆಗೆ ಒಳಪಡಿಸಲೂ ಬಹಳ ಕಷ್ಟಪಡಬೇಕಾದ ಸಂದರ್ಭಗಳನ್ನು ಮುಂಬೈಯಂತಹ ಮಾಹಾನಗರದಲ್ಲಿ ಕಾಣುತ್ತೇವೆ. ಹೀಗೆ ಇದರಬಗ್ಗೆ ಛಾಯಾರವರು ಆಲೋಚಿಸಿ ಬಡಜನರಿಗೆ ಮರಣಾನಂತರ ದಹನಮಾಡಲು 'ಬಯೋಗ್ಯಾಸ್ ಚಿತಾಗಾರ'ವನ್ನು ಆಯೋಜಿಸಿ ಒಂದು 'ದೊಡ್ಡ ಸಾರ್ವಜನಿಕಸಂಸ್ಥೆ', ಅಥವಾ 'ಎನ್.ಜಿ.ಒ'.ಗಳು ನಿರ್ವಹಿಸುವ ಕಾರ್ಯವನ್ನು ತಾವೊಬ್ಬರೇ ಮಾಡಿತೋರಿಸಿ ಕಣ್ಮರೆಯಾದರು.

ಮನುಕುಲದ ಸೇವಕ[ಬದಲಾಯಿಸಿ]

'ಅಂಬರ್ ನಾಥ್' ನಲ್ಲಿ ವಾಸಿಸುತ್ತಿದ್ದ ೮೫ ವರ್ಷ ಪ್ರಾಯದ ಛಾಯರವರು, ಹಸಿರು ಮರಗಿಡಗಳು, ನದಿಗಳು, ಬೆಟ್ಟಗಳು, ಮತ್ತು ಸ್ವಚ್ಛ ಪರಿಸರದ ಬಗ್ಗೆ ಕನಸು ಕಾಣುತ್ತಿದ್ದ ಮತ್ತು ಅವನ್ನು ಸಾಕಾರಗೊಳಿಸಲು ತನು-ಮನ-ಧನಗಳನ್ನು ಸಮರ್ಪಿಸಿ ಅತ್ಯಂತ ಕಾಳಜಿ ವಹಿಸುತ್ತಿದ್ದ ವ್ಯಕ್ತಿ. ಬಡತನದಲ್ಲಿ ತೊಳಲುತ್ತಿರುವ ಜನರು ಸತ್ತಮೇಲೆ ಅಂತ್ಯಕ್ರಿಯೆ ಮಾಡಲೂ ಅನುಕೂಲವಿಲ್ಲದಾಗ ಸಂಭವಿಸುವ ಸನ್ನಿವೇಶವನ್ನು ಗಮನಿಸಿ ಸುಮಾರು ೪೦ ವರ್ಷಗಳ ಹಿಂದೆಯೇ 'ನಾಗರಿಕ ಸೇವಾ ಮಂಡಲ್' ಎಂಬ ಸಂಸ್ಥೆಯನ್ನು ಹುಟ್ಟಿಹಾಕಿದರು. ಇದನ್ನು ಮೆಚ್ಚಿದ ನಾಗರಿಕರೆಲ್ಲಾ ಸೇರಿ ೧೦ ಲಕ್ಷರೂಪಾಯಿಗಳನ್ನು ಸಂಗ್ರಹಿಸಿದರು. ಪ್ರಮುಖವಾಗಿ ಆರ್ಥಿಕವಾಗಿ ಬಲಹೀನರಾದ ವ್ಯಕ್ತಿಗಳಿಗೋಸ್ಕರವೇ ಶ್ರಮಪಟ್ಟು ಪ್ರಾರಂಭಿಸಿದ ಸಂಸ್ಥೆ ಇದು. ಪ್ರಾರಂಭದ ದಿನಗಳಲ್ಲಿ ಛಾಯರವರು, 'ಅಂಬರ್ನಾಥ್ ನಲ್ಲಿನ ಮುನಿಸಿಪಲ್ ಚಿತಾಗಾರ'ದ ಜವಾಬ್ದಾರಿಯನ್ನು ಕೇಳಿ ತೆಗೆದುಕೊಂಡರು. 'ಚಿತಾಗಾರ' ಬಹಳ ವ್ಯವಸ್ತಿತವಾಗಿರುವುದು ಅತಿ ಮುಖ್ಯ;ಅಲ್ಲದೆ ಶುದ್ಧವಾದ ನೀರು, ಕುಳಿತುಕೊಳ್ಳಲು ಸಾಕಷ್ಟು ಸ್ವಚ್ಛಜಾಗ, ಮತ್ತು ತಕ್ಷಣವೇ ಬೇಕಾಗುವ ಎಲ್ಲಾ ಸಾಮಾನುಗಳೂ ಸಿದ್ಧವಾಗಿ ಕೈಗೆ ಸಿಕ್ಕುವಂತೆ ವ್ಯವಸ್ಥೆಮಾಡಿ ಅದನ್ನು ನಿರ್ವಹಿಸುವ ಸಶಕ್ತ ಯುವ ಜನರೂ ಲಭ್ಯವಾಗಬೇಕು, ಎಂಬ ಮಾತನ್ನು ಅವರು ಸದಾಹೇಳುತ್ತಿದ್ದರು. ಹಣದ ಅಭಾವದಿಂದ ಯಾರೂ ಮಾನಸಿಕ ಯಾತನೆ ಅನುಭವಿಸಬಾರದು. ಈ ತರಹದ ಸೇವಾಮನೋಭಾವಕ್ಕೆ ತಮ್ಮನ್ನು ಪೂರ್ತಿಯಾಗಿ ಸಮರ್ಪಿಸಿಕೊಳ್ಳಲು ತಮ್ಮ ಪರಿವಾರದವರನ್ನು ಒಪ್ಪಿಸಿ, ಅವರ ಮನಸ್ಸನ್ನು ಪ್ರೇರೇಪಿಸಿದ ಮಹಾನ್ ವ್ಯಕ್ತಿ-'ಛಾಯ'. ಮುನಿಸಿಪಲ್ ವ್ಯವಸ್ಥೆಯ ಅಡಿಯಲ್ಲಿದ್ದಾಗ ಯಾವ ಸೌಲಭ್ಯಗಳೂ ಜನರಿಗೆ ತಕ್ಷಣ ದೊರೆಯುತ್ತಿರಲಿಲ್ಲ. ಛಾಯರವರು ಮೇಲ್ವಿಚಾರಣೆ ತೆಗೆದುಕೊಳ್ಳಲು ಆರಂಭಿಸಿದಮೇಲೆ ಪರಿಸ್ಥಿತಿಗಳು ಉತ್ತಮಗೊಂಡವೆಂದು, 'ಅಂಬರ್ ನಾಥ್ ಮುನಿಸಿಪಲ್ ಕೌಸಿಲ್ ನ ಅಧ್ಯಕ್ಷ ಸುನಿಲ್ ಚೌಧರಿ,'ಯವರೇ ಹೇಳುತ್ತಾರೆ.

'ಚಿತಾಗಾರದ ದಹನಕ್ರಿಯೆಯಲ್ಲಿ ಬಯೋಗ್ಯಾಸ್ ಪಾತ್ರ'[ಬದಲಾಯಿಸಿ]

ಸನ್.೧೯೯೦ ಯಲ್ಲಿ ಛಾಯಾರವರು, ಚಿತಾಗಾರದ ದಹನ ಕ್ರಿಯೆ ವಿಧಿಯಲ್ಲಿ ಕಟ್ಟಿಗೆ ಬಿಟ್ಟು ಬೇರೆ ಯಾವುದಾದರೂ ಇಂಥನವನ್ನು ಬಳಸುವ ಸಾಧ್ಯತೆಗಳ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಿದರು. ಆಗ ಅವರ ಮನಸ್ಸಿಗೆ ಬಂದದ್ದು, 'ಬಯೋ ಗ್ಯಾಸ್ ಬಳಕೆ'. ತಕ್ಷಣವೇ ಅವರು, 'ಟಾಟಾ ಎನರ್ಜಿ ರಿಸರ್ಚ್ ಇನ್ಸ್ಟಿಟ್ಯೂಟ್' ಜೊತೆಗೆ (TERI)ಪತ್ರಸಂಪರ್ಕ ಮಾಡಿ,'ಬೈಯೊಗ್ಯಾಸ್' ಬಳಕೆಯ ಬಗ್ಗೆ ಮಾಹಿತಿ ಕೊಡಲು ಬಿನ್ನವಿಸಿಕೊಂಡರು. ಮಾಹಿತಿಗಳು ಲಭ್ಯವಾದಮೇಲೆ ಸಂಸ್ಥೆಯ ಸಹಾಯವನ್ನು ಅಪೇಕ್ಷಿಸಿ ಪುನಃ ಸಂಪರ್ಕಿಸಿದರು. ಸನ್.೧೯೯೯, (TERI) ಈ ಕಾರ್ಯವನ್ನು ಪೂರೈಸಿಕೊಡುವುದಾಗಿ ಆಶ್ವಾಸನೆಇತ್ತರು. ಕೆಲವೇ ತಿಂಗಳುಗಳಲ್ಲಿ 'ಬಯೋಗ್ಯಾಸ್ ಬಳಕೆಯ ಚಿತಾಗಾರ' ಸಿದ್ಧವಾಯಿತು. ಮೃತಶರೀರದ ದಹನ ಕ್ರಿಯೆ ಸಮರ್ಪಕವಾಗಿ ಜರುಗಿತು. ಹಾಗಾಗಿ ಮಹಾರಾಷ್ಟ್ರದ 'ಅಂಬರ್ ನಾಥ್' ಚಿತಾಗಾರ,' 'ಭಾರತದ ಮೊಟ್ಟಮೊದಲ ಬೈಯೊಗ್ಯಾಸ್ ಬಳಕೆಯ ಚಿತಾಗಾರ'ವೆಂಬ ಪಟ್ಟಿಯಲ್ಲಿ ದಾಖಲಾಯಿತು. ಇದೇ ಕೆಲಸವನ್ನು 'ಡೀಸೆಲ್' ಬಳಕೆಯಿಂದ ಮಾಡಿದರೆ, ಬಡಜನರಿಗೆ ಯಾವ ಶುಲ್ಕವೂ ಕೊಡದೆ ಉಚಿತವಾಗಿ ಮಾಡಿಕೊಡಬಹುದು ಎನ್ನುವ ಅಭಿಪ್ರಾಯವಿತ್ತು. ಸಾರ್ವಜನಿಕರು, ಇಂತಹ ಮನುಕುಲಸೇವೆಯಿಂದ ಉಪಕೃತರಾಗಿದ್ದಾರೆ.

ನಿಧನ[ಬದಲಾಯಿಸಿ]

ಸನ್.೨೦೧೩ ರ, ೧೯, ರವಿವಾರ ವಿಧಿವಶರಾದರು. ಸುಮಾರು ೪ ದಶಕಗಳ ನಿಸ್ವಾರ್ಥಸೇವೆ ಸಲ್ಲಿಸಿ ಮರಣಾನಂತರ ತಮ್ಮ ದೇಹದ ಪ್ರತಿಭಾಗಗಳನ್ನೂ ಆಸ್ಪತ್ರೆಗೆ ದಾನನೀಡಿದ 'ಛಾಯ' ಒಬ್ಬ ಆದರ್ಶವ್ಯಕ್ತಿ. ಅವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಬಂದ ವ್ಯಕ್ತಿಗಳು ಈ ವಿಷಯವನ್ನು ಅವರ ಮಗ, ತುಶಾರನಿಂದ ಕೇಳಿ ದಂಗಾದರು. ಮಗ 'ತುಶಾರ'ನ ಮಾತಿನಂತೆ, ಛಾಯರವರು ಮೊದಲೇ ಯಾವವಿಧವಾದ ಸಂತಾಪ ಸಭೆಗಳೂ ತಮಗೆ ಇಷ್ಟವಿಲ್ಲವೆಂದು ಹೇಳಿದ್ದರು. ಮೊದಲೇ ನಿರ್ಧರಿಸಿದಂತೆ ನಿಧನರಾದ ಕೆಲವೇ ನಿಮಿಷಗಳಲ್ಲಿ ವೈದ್ಯರ ತಂಡ ಅವರ ಮನೆಗೆ ಆಗಮಿಸಿ ಶಸ್ತ್ರಚಿಕಿತ್ಸೆಮಾಡಿ ಕಣ್ಣುಗಳನ್ನು ತೆಗೆದುಕೊಂಡು ಹೋದರು. ನಂತರ ಛಾಯರವರ ಪರಿವಾರದವರು 'ಆಂಬ್ಯುಲೆನ್ಸ್'ಗೆ ಕರೆಕಳಿಸಿ ಶರೀರವನ್ನು 'ಕಲ್ವಾ ಆಸ್ಪತ್ರೆ'ಗೆ ದಾನಮಾಡಿದರು. ಇದನ್ನೂ ಓದಿ :