ಎಳ್ಳು ಕೃಷಿ

ವಿಕಿಪೀಡಿಯ ಇಂದ
Jump to navigation Jump to search

ಪ್ರಸ್ತಾವನೆ[ಬದಲಾಯಿಸಿ]

ಬೇಸಿಗೆಯಲ್ಲಿ ಸಾಮಾನ್ಯವಾಗಿ ಯಾವಾಗಲೂ ತಂಪುಪಾನೀಯವನ್ನು ಕುಡಿದು ದಿನ ಕಳೆಯಬೇಕಾಗುತ್ತದೆ. ಕುಂದಾಪುರ ಹಾಗೂ ನಮ್ಮ ಕರಾವಳಿ ಪ್ರದೇಶದಲ್ಲಿ ಎಳ್ಳು ನೀರು, ರಾಗಿನೀರು, ಹೆಸರುನೀರು ಹೀಗೆ ಮುಂತಾದ ಬಗೆಯ ಪಾನೀಯಗಳು ಸಿಗುತ್ತವೆ. ಇವು ದೇಹದ ಉಷ್ಣತೆಯನ್ನು ತಗ್ಗಿಸಿ ದೇಹವನ್ನು ತಂಪಾಗಿಡುವುದಲ್ಲದೇ ಪೋಷಕಾಂಶವನ್ನು ಒದಗಿಸುತ್ತದೆ. ಪತಂಜಲಿ ಯೋಗ ಕೇಂದ್ರದ ಶ್ರೀರಾಮಕೃಷ್ಣಜಿಯವರ ಪ್ರಕಾರ ಮನೆಯ ಹತ್ತಿರ ಮಣ್ಣಿನಲ್ಲಾಗಲಿ,ಕುಂಡದಲ್ಲಾಗಲಿ ಎಳ್ಳಿನ ಗಿಡವನ್ನು ಸಾವಯವ ರೀತಿಯಲ್ಲಿ ಬೆಳೆಸಬೇಕು. ಬೆಳಗಿನ ಸಮಯ ಎಳ್ಳು ಗಿಡದ ಹೂಗಳಲ್ಲಿ ಸಂಚಯವಾಗಿರುವ ಹಿಮವನ್ನು ಒಂದು ಶುಭ್ರವಾದ ಬಾಟಲಿಯಲ್ಲಿ ಸಂಗ್ರಹಿಸಿಟ್ಟು ಪ್ರತಿದಿನ ಒಂದೆರಡು ಹನಿಯಷ್ಟು ಬಿಟ್ಟುಕೊಳ್ಳುತ್ತಿದ್ದರೆ ಕಣ್ಣಿನ ದೃಷ್ಟಿಶಕ್ತಿ ಚೆನ್ನಾಗಿರುತ್ತದೆ. ಆಯುರ್ವೇದದ ನೂರಾರು ಔಷಧಗಳಲ್ಲಿ ಇತರ ಎಣ್ಣೆಗಳಿಗಿಂತ ಎಳ್ಳೆಣ್ಣೆಯನ್ನೇ ಬಳಸುತ್ತಾರೆ. ಎಳ್ಳಿನಿಂದ ಮಾಡಿದ ಎಳ್ಳುಂಡೆಯೊಂದು ಸ್ವಾದಿಷ್ಟಕರವಾದ ತಿನಿಸಾಗಿದೆ. ಎಳ್ಳು ಮತ್ತು ಎಳ್ಳಿನ ಉತ್ಪನ್ನಗಳು ಸ್ವದೇಶೀ ಭಾವನೆಯ ಸಂಕೇತವಾಗಿದೆ.

ಇತಿಹಾಸದ ಪುಟದಲ್ಲಿ ಎಳ್ಳು[ಬದಲಾಯಿಸಿ]

ಭಾರತೀಯ ಪ್ರಾಚೀನ ನಾಗರಿಕತೆಯ ಕೇಂದ್ರವಾದ ಹರಪ್ಪಾದಲ್ಲಿ ಎಳ್ಳಿನ ಒಂದು ಮುದ್ರೆ ಸಿಕ್ಕಿದೆ. ವೇದಕಾಲದಲ್ಲಿ ಸತ್ತವರ ಕುರಿತಾದ ಸಂಸ್ಕಾರ ಕಾರ್ಯದಲ್ಲಿ ಎಳ್ಳನ್ನು ಬಳಸುತ್ತಾರೆ. ಈ ಕಾಲದಲ್ಲಿ ಆರ್ಯನ್ನರು ಬಳಸಿದ್ದ ಏಕೈಕ ತೈಲಬೀಜವೆಂದರೆ ಎಳ್ಳು. ಬೆಬಿಲೋನಿಯನ್ನರು ಎಳ್ಳನ್ನು ಮೃತ್ಯುನಿವಾರಕ ಬೀಜವೆಂದು ಕರೆದಿದ್ದಾರೆ. ಈ ಕಾಲ ದಲ್ಲಿ ಮಹಿಳೆಯರು ತಮ್ಮ ಯೌವನ ಮತ್ತು ಸೌಂದರ್ಯಕ್ಕಾಗಿ ಎಳ್ಳನ್ನು ಬಳಸುತ್ತಿದ್ದರು. ಪ್ರಾಚೀನ ರೋಮನ್ ಸೈನಿಕರು ಸಮರದಲ್ಲಿ ಶಕ್ತಿಯನ್ನು ಹೊಂದಲು ಎಳ್ಳಿಗೆ ಜೇನನ್ನು ಬೆರೆಸಿ ಸವಿಯುತ್ತಿದ್ದರು. ಅಸ್ಸೀರಿಯನ್ನರು ಎಳ್ಳನ್ನೆಯನ್ನು ಆಹಾರವಾಗಿ ಮತ್ತು ಮದ್ದುಗಳಲ್ಲಿ ಬಳಸುತ್ತಿದ್ದರು. ಹಿಂದೂ ಧರ್ಮದ ಆಚರಣೆಯಲ್ಲಿ ಎಳ್ಳಿಗೆ ಧಾರ್ಮಿಕ ಮಹತ್ವವಿದೆ. ಆಂಜನೇಯನ ಗುಡಿಯಲ್ಲಿ ಎಳ್ಳೆಣ್ಣೆಯನ್ನು ದೀಪಕ್ಕೆ ಬಳಸುತ್ತಾರೆ.

ಸಸ್ಯ ಪರಿಚಯ[ಬದಲಾಯಿಸಿ]

ಎಳ್ಳು ಪೆಡಾಲಿಯೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ೧೭ ಜಾತಿ ಮತ್ತು ೯೪ ಪ್ರಭೇದದ ಸಸ್ಯಗಳಿವೆ. ಇವು ಹೆಚ್ಚಾಗಿ ಮೂಲಿಕೆಗಳು. ಈ ಸಸ್ಯದ ಕಾಂಡವು ಮೃದುವಾಗಿರುತ್ತವೆ. ಇವುಗಳ ಎಲೆಗಳು ಸರಳ ಅಭಿಮುಖ ಜೋಡನೆಯಲ್ಲಿರುತ್ತವೆ. ಇದರ ಹೂಗಳು ದ್ವಿಲಿಂಗಿಯಾಗಿರುತ್ತವೆ. ಹಣ್ಣುಗಳು ರೆಕ್ಕೆ ಮತ್ತು ಮುಳ್ಳುಗಳಿಲ್ಲದ ಕ್ಯಾಪ್ಸ್ಯುಲ್ ರೂಪದಲ್ಲಿರುತ್ತವೆ. ಎಳ್ಳು ಒಂದು ಏಕ ವಾರ್ಷಿಕ ಗಿಡವಾಗಿರುತ್ತದೆ ಹಾಗೂ ಈ ಗಿಡ ೧ ಮೀ. ಉದ್ದ ಬೆಳೆಯುತ್ತದೆ. ಇದು ಸಣ್ಣ ಆಕಾರದಲ್ಲಿರುತ್ತದೆ ಹಾಗೂ ಸೂಕ್ಷ್ಮ ರೋಮಗಳಿ೦ದ ಕೂದಿರುತ್ತದೆ. ಇದರ ಹೂವುಗಳು ನೀಲಿ ಮಿಶ್ರಿತ ಕಪ್ಪು ಬಣ್ಣದಿ೦ದ ಕೂಡಿರುತ್ತದೆ. ಎಳ್ಳಿನಲ್ಲಿ ಮುಖ್ಯವಾದ ೨ ವಿಧಗಳು-

  • ಸಿಡಿಯುವ ವಿಧದ ತಳಿಗಳಲ್ಲಿ ಕವಲುಗಳು ಕಡಿಮೆ ತೈಲಾಂಶಗಳು ಹೆಚ್ಚಿರುತ್ತವೆ ಮತ್ತು ಈ ತೈಲಕ್ಕೆ ಸ್ವಲ್ಪ ಕಹಿ ರುಚಿಯಿರುತ್ತದೆ.
  • ಸಿಡಿಯದ ವಿಧದ ತಳಿಗಳಲ್ಲಿ ತೈಲಾಂಶಗಳು ಕಡಿಮೆಯಿರುತ್ತವೆ ಮತ್ತು ತೈಲದ ಗುಣಮಟ್ಟ ಹೆಚ್ಚಾಗಿರುತ್ತದೆ.

ಕೃಷಿ[ಬದಲಾಯಿಸಿ]

ಪ್ರಪಂಚದಲ್ಲಿ ಅತಿ ಹೆಚ್ಚು ಎಳ್ಳನ್ನು ಉತ್ಪಾದಿಸುವ ದೇಶವೆಂದರೆ ಭಾರತ ಮತ್ತು ಚೀನಾ. ೨೬% ಭಾರತ ಎಳ್ಳನ್ನು ಉತ್ಪಾದಿಸುತ್ತಾರೆ. ಪ್ರತಿ ವರ್ಷ್ ೬.೫ಲಕ್ಷಟನ್ ಉತ್ಪಾದನೆಯಾಗುತ್ತಿದೆ. ಅಲ್ಲದೆ ೧.೮೨ಲಕ್ಷಟನ್ ಎಳ್ಳನ್ನು ವಿದೇಶಿಗಳಿಗೆ ರಪ್ತು ಮಾಡಿ ೫೧೮ ಕೋಟಿ ಸಂಪಾದಿಸಲಾಗಿದೆ. ಕಡಲು ಮಟ್ಟದಿಂದ ೪೦೦೦ಅಡಿ ಎತ್ತರದ ಪ್ರದೇಶದಲ್ಲಿ ಎಳ್ಳನ್ನು ಬಳಸಬಹುದು. ಈ ಪ್ರದೇಶದಲ್ಲಿ ಹಿಮ, ಮಂಜು ಇಲ್ಲದ ೯೦-೧೨೦ ದಿನಗಳಾದರೂ ಇರಬೇಕು. ಉಷ್ಣತೆಯು ೭೭ಡಿಗ್ರಿ-೮೦ಡಿಗ್ರಿ. ಮಳೆಗಾಲದಲ್ಲಿ ೫೦೮-೬೬೦ಮಿ.ಮೀ.ನಷ್ಟು ಮಳೆ ಬೀಳುವ ಪ್ರದೇಶಗಳು ಎಳ್ಳಿನ ಬೆಳೆಗೆ ಸೂಕ್ತ. ಎಳ್ಳು ಬೆಳೆಯುವ ಜಾಗದಲ್ಲಿ ನೀರು ನಿಲ್ಲಬಾರದು. ಬಿತ್ತನೆಯ ಮೊದಲು ಎಳ್ಳು ಬೆಳೆಯುವ ಭೂಮಿಯನ್ನು ೨-೩ ಬಾರಿ ಚೆನ್ನಾಗಿ ಉಳುಮೆ ಮಾಡಬೇಕು. ಎಳ್ಳನ್ನು ಮಣ್ಣಿಗೆ ಎರಚುವ ಬದಲು ಹೆಚ್ಚಿನ ಇಳುವರಿ ಪಡೆಯಲು ಸಾಲು ಬಿತ್ತನೆ ಮಾಡುವುದು ಒಳ್ಳೆಯದು. ಬರಡುಭೂಮಿಯಲ್ಲಿ ಕೃಷಿಯನ್ನು ಮಾಡುವಾಗ ಒಳ್ಳೆಯ ಇಳುವರಿಯನ್ನು ಪಡೆಯುವ ಮಣ್ಣಿಗೆ ಸಾವಯವ ಗೊಬ್ಬರವನ್ನು ಮಿಶ್ರಗೊಳಿಸಬೇಕು. ಬಿತ್ತನೆಯಾದ ೧೫-೨೦ ದಿನಗಳಲ್ಲಿ ಒಮ್ಮೆ ಕಳೆಕೀಳಬೇಕು. ಬಿತ್ತನೆಯಾದ ೩೦-೩೫ ದಿನಗಳಲ್ಲಿ ಎರಡನೇ ಬಾರಿ ಕಳೆಕೀಳಬೇಕು.ಎಳ್ಳಿನ ಗಿಡಗಳಿಗೆ ಗಿಡಹೇನುಗಳು, ದುಂಬಿಗಳು, ಕೆಂಪುಜೇಡ, ಮಿಡತೆಗಳು ಕಾಟ ಕೊಡುತ್ತವೆ. ಎಳ್ಳನ್ನು ಬಿತ್ತನೆ ಮಾಡಿದ ೬೦-೧೫೦ ದಿನಗಳಲ್ಲಿ ಬೆಳೆಯು ಕೊಯ್ಲಿಗೆ ಸಿದ್ಡವಾಗುತ್ತದೆ. ಕೊಯ್ಲು ಮಾಡಿದ ಎಳ್ಳನ್ನು ಉಷ್ಣತೆಯಿರುವ ಕೊಠಡಿಗಳಲ್ಲಿ ಹಾಳಾಗದಂತೆ ೫ ವರ್ಷದವರೆಗೆ ಇಡಬಹುದು. ಎಳ್ಳೆಣ್ಣೆಯನ್ನು ಒಂದು ಖಾದ್ಯ ತೈಲವಾಗಿ ಬಳಸುತ್ತಾರೆ. ಕೈಗಾರಿಕೆಗಳಲ್ಲಿ ಕಚ್ಚಾವಸ್ತುವಾಗಿ ಬಳಸುತ್ತಾರೆ. ಸಾಬೂನು, ಪೈಂಟ್, ಸುಗಂಧದ್ರವ್ಯವನ್ನು ತಯಾರಿಸಲು ಬಳಸುತ್ತಾರೆ.

ಆಯುರ್ವೇದದಲ್ಲಿ ಎಳ್ಳು[ಬದಲಾಯಿಸಿ]

ಆಯುರ್ವೇದ ಮತ್ತು ಗ್ರಾಮೀಣ ವೈದ್ಯರ ಪ್ರಕಾರ ಕರಿ ಎಳ್ಳು ಹೆಚ್ಚು ಗುಣ ಔಷಧದಿಂದ ಕೂಡಿದೆ. ಬಿಳಿ ಎಳ್ಳಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿರುತ್ತದೆ. ಇದು ಹಲ್ಲು ಮತ್ತು ಮೂಳೆ ಸಮಸ್ಯೆಗಳಿಗೆ ಪ್ರಯೋಜನವಾಗುತ್ತದೆ. ಕೆಂಪು ಬಣ್ಣದ ಎಳ್ಳಿನಲ್ಲಿ ಕಬ್ಬಿಣಾಂಶ ಸಮೃದ್ಡವಾಗಿರುತ್ತದೆ. ಇದು ರಕ್ತದ ಕೊರತೆಯಿರುವವರಿಗೆ ಉಪಯುಕ್ತವಾಗಿದೆ. ವೈದ್ಯಕಿಯ ಪದ್ಡತಿಯಲ್ಲಿ ಎಳ್ಳನ್ನು ಗರ್ಭಪಾತ ಮಾಡಲು ಬಳಸುತ್ತಾರೆ. ವಾತದೋಷವನ್ನು ನಿವಾರಿಸಲು ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಲು, ನರಮಂಡಲಕ್ಕೆ ಪೋಷಕಾಂಶವನ್ನು ಲಭಿಸಲು ಎಳ್ಳನ್ನು ಬಳಸುತ್ತಾರೆ. ಇದು ನಿರೋಧಕ ಶಕ್ತಿಯನ್ನು ಗಳಿಸಲು ಸಹಕರಿಸುತ್ತದೆ. ಆಯುರ್ವೇದ ಹಾಗೂ ವಿಜ್ನಾನದ ಪ್ರಕಾರ ಎಳ್ಳು ಧಾನ್ಯ ವರ್ಗಕ್ಕೆ ಸೇರಿದ ಸಸ್ಯವಾಗಿದೆ. ಇದಕ್ಕೆ ಸಂಸ್ಕ್ರತದಲ್ಲಿ ತಿಲ,ಹೋಮಧಾನ್ಯ, ಪವಿತ್ರ, ಪಿತೃತರ್ಪಣ, ಪಾಪಘ್ನ, ಪುತಧಾನ್ಯ, ಜಟಿಲ, ಸ್ನೆಹಫಲ, ತೈಲಫಲ ಎಂದು ಹೆಸರಿಸಲಾಗಿದೆ. ಎಳ್ಳಿನ ಗುಣವು ಕಹಿ, ಕಡು, ಮಧುರ, ಕಷಾಯ, ಗುರು, ಪಚನದಲ್ಲಿ ಕಹಿ, ಸ್ವಾದ, ಸ್ನಿಗ್ದ, ಉಷ್ಣ, ಕಫಪಿತ್ತಕಾರಕ, ಬಲವರ್ಧಕ, ಕೇಶಕ್ಕೆ ಹಿತಕಾರಿ, ಸ್ಪರ್ಶಕ್ಕೆ ಶೀತಲ, ಚರ್ಮಕ್ಕೆಹಿತಕಾರಿ, ಸ್ತನ್ಯ ಉತ್ಪತ್ತಿಕಾರಕ, ವಾತವಿನಾಶಕ, ಮಲರೊಧಕ, ಬುದ್ಡಿಕಾರಕ.

ಎಳ್ಳು ಅಡಿಗೆಗೆ[ಬದಲಾಯಿಸಿ]

ಭಾರತದಲ್ಲಿ ಎಳ್ಳನ್ನು ನೂರಾರು ಬಗೆಯ ಆಹಾರ ವಸ್ತುಗಳ ತಯಾರಿಕೆಯಲ್ಲಿ ಬಳಸುತ್ತೇವೆ. ಎಳ್ಳಿನ ಮಿಟಾಯಿ,ಎಳ್ಳುಂಡೆ,ಎಳ್ಳು ಜ್ಯೂಸ್,ಚಿಕ್ಕಿನುಂಡ, ಕಜ್ಜಾಯ ಇತ್ಯಾದಿ.

ಮನೆ ಔಷಧಿಯಾಗಿ ಎಳ್ಳು[ಬದಲಾಯಿಸಿ]

ಆಯಿಲ್ ಪುಲ್ಲಿಂಗನಲ್ಲಿಎಳ್ಳೆಣ್ಣೆ, ಚರ್ಮದ ಸಮಸ್ಯೆ, ತಲೆನೋವು, ತಲೆಕೂದಲಿನ ಸಮಸ್ಯೆ, ಮಾನಸಿಕ ಸಮಸ್ಯೆ, ನಿಶಕ್ತಿ, ಕಾಲಿನ ಸಮಸ್ಯೆ, ಕಣ್ಣಿನ ಸಮಸ್ಯೆ, ಕಿವಿ, ಮೂಗು ಮತ್ತು ಬಾಯಿಯ ಸಮಸ್ಯೆ, ನೆಗಡಿ, ಕೆಮ್ಮು, ದಮ್ಮು,ರಕ್ತದೊತ್ತಡದ ಸಮಸ್ಯೆ, ಬೊಜ್ಜು, ಹೊಟ್ಟೆಯ ಸಮಸ್ಯೆ, ಅಲ್ಸರ್, ಮಲಬದ್ಡತೆ, ಮಧುಮೇಹ, ಸಂದಿವಾತ ಇತ್ಯಾದಿ.