ಎಳೆತ

ಭೌತಶಾಸ್ತ್ರದಲ್ಲಿ, ಎಳೆತವನ್ನು (ಕರ್ಷಣ) ದಾರ, ತಂತಿ, ಸರಪಳಿ, ಅಥವಾ ಹೋಲುವ ಏಕ ಆಯಾಮದ ಅಖಂಡ ವಸ್ತು, ಅಥವಾ ಕೋಲು, ಆಸರೆಕಟ್ಟಿನ ಸದಸ್ಯ, ಅಥವಾ ಹೋಲುವ ಮೂರು ಆಯಾಮದ ವಸ್ತುವಿನ ಪ್ರತಿ ತುದಿಯ ಮೂಲಕ ಅಕ್ಷೀಯವಾಗಿ ಪ್ರಸಾರವಾಗುವ ಎಳೆಯುವ ಬಲವೆಂದು ವಿವರಿಸಬಹುದು; ಎಳೆತವನ್ನು ಮೇಲೆ ಹೇಳಿದ ಘಟಕಗಳ ಪ್ರತಿ ತುದಿಯಲ್ಲೂ ಕಾರ್ಯಮಾಡುವ ಬಲಗಳ ಕ್ರಿಯೆ-ಪ್ರತಿಕ್ರಿಯೆ ಜೋಡಿ ಎಂದೂ ವಿವರಿಸಬಹುದು.[೧] ಎಳೆತವು ಸಂಕೋಚನದ ವಿರುದ್ಧಾರ್ಥಕ ಪದವಾಗಿರಬಹುದು.
ಪರಮಾಣು ಸ್ತರದಲ್ಲಿ, ಪರಮಾಣುಗಳು ಅಥವಾ ಅಣುಗಳನ್ನು ಪರಸ್ಪರವಾಗಿ ಬೇರೆಬೇರೆ ಮಾಡಿ ಎಳೆಯಲಾದಾಗ ಅವು ಅಂತಸ್ಥ ಶಕ್ತಿಯನ್ನು ಪಡೆಯುತ್ತವೆ ಆದರೆ ಒಂದು ಮರುಸ್ಥಾಪನ ಬಲವು ಆಗಲೂ ಇರುತ್ತದೆ. ಈ ಮರುಸ್ಥಾಪನ ಬಲವು ಎಳೆತವೆಂದು ಕರೆಯಲ್ಪಡುವ ಬಲವನ್ನು ಸೃಷ್ಟಿಸಬಹುದು. ಅಂತಹ ಎಳೆತ/ಕರ್ಷಣವನ್ನು ಹೊಂದಿರುವ ತಂತಿ ಅಥವಾ ದಂಡದ ಪ್ರತಿ ತುದಿಯು, ಆ ತಂತಿ/ದಂಡವನ್ನು ಅದರ ವಿಶ್ರಾಂತ ಲಂಬಕ್ಕೆ ತರಲು ಅದು ಜೋಡಣೆಗೊಂಡಿರುವ ವಸ್ತುವನ್ನು ಎಳೆಯಬಹುದು.