ಎಲ್.ಟಿ.ತಿಮ್ಮಪ್ಪ ಹೆಗಡೆ

ವಿಕಿಪೀಡಿಯ ಇಂದ
Jump to navigation Jump to search

ಪರಿಚಯ[ಬದಲಾಯಿಸಿ]

 • ಎಲ್.ಟಿ.ತಿಮ್ಮಪ್ಪ ಹೆಗಡೆ ಲಿಂಗದಹಳ್ಳಿ ಸಾಗರ ತಾ|| -ಮಾಜಿ ವಿಧಾನ ಸಭಾ ಸದಸ್ಯರು
 • ಎಲ್.ಟಿ.ತಿಮ್ಮಪ್ಪ ಹೆಗಡೆಯವರು ( ಜನನ : ಮೇ, ೧೯೨೯) ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಲಿಂಗದ ಹಳ್ಳಿ ಗ್ರಾಮದವರು. ಸಾಗರದಿಂದ ಸೊರಬಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಇವರು ತಂದೆಯವರ ಅಕಾಲ ಮರಣದ ಕಾರಣ ತಮ್ಮ ವಿದ್ಯಾಭ್ಯಾಸವನ್ನು ಎಸ್.ಎಸ,ಎಲ್.ಸಿ. ಗೇ ಮುಕ್ತಾಯಗೊಳಿಸಿದರು. ಈವರು ಪ್ರೌಢಶಾಲಾ ವಿದ್ಯಾಥಿಯಾಗಿದ್ದಾಗ ಕರನಿರಾಕರಣೆ ಚಳುವಳಿ ನಡೆಯುತ್ತಿತ್ತು. ಇದರಿಂದ ಪ್ರಭಾವಿತರಾದ ಇವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
 • ಅವರಿಗೆ ಇಬ್ಬರು ಗಂಡು ಮಕ್ಕಳು ಹಿರಿಯವರಾದ ತಿಮ್ಮಪ್ಪನವರು ಕೃಷಿಕಾರ್ಯವನ್ನೂ ಮಾಡುತ್ತಾ ತಂದೆಯಂತೆ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.

ಗ್ರಾಮದಲ್ಲಿ ಸಮಾಜ ಸೇವೆ :[ಬದಲಾಯಿಸಿ]

 • ಅವರು (ಎಲ್.ಟಿ.ತಿಮ್ಮಪ್ಪನವರು) ತಮ್ಮ ಪ್ರೌಢಶಾಲಾ ಶಿಕ್ಷಣ ಮುಗಿದ ನಂತರ ತಮ್ಮ ಮನೆಯಲ್ಲಿಯೇ ವೇದ ಪಾಠಶಾಲೆಯನ್ನು ತರೆದರು. ಖಾಸಗಿಯಾಗಿ ಸರಸ್ವತೀ ಗ್ರಂಥ ಬಂಢಾರ ಸ್ಥಾಪಿಸಿ ಸಾಹಿತ್ಯ ಪ್ರಸಾರ ಮಾಡಿದರು. ಊರಿನ ಕೆರೆ ದುರಸ್ತಿ, ರಸ್ತೆ ನಿರ್ಮಾಣ , ಲಿಂಗದ ಹಳ್ಳಿಯಲ್ಲಿ ಮಾದ್ಯಮಿಕ ಶಾಲೆಯ ಆರಂಭ ಮತ್ತು ಅದಕ್ಕೆ ಕಟ್ಟಡ ನಿರ್ಮಾಣದ ಹೊಣೆ ಹೊತು ಅದರ ಕಾರ್ಯ ನಿರ್ವಹಿಸಿದರು.

ರಾಜಕೀಯ ಪ್ರವೇಶ ಮತ್ತು ಸೇವೆ :[ಬದಲಾಯಿಸಿ]

 • ೧೯೫೦ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರಸ್ ಪಕ್ಷದ ಸಾಮಾನ್ಯ ಸದಸ್ಯರಾಗಿ, ಸಕ್ರಿಯ ಕಾರ್ಯಕರ್ತರಾಗಿ ನಂತರ ಸಾಗರ ತಾಲ್ಲೂಕಿನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷರಾಗಿಯೂ ಕೆಲಸ ಮಾಡಿದರು.
 • ವಿಧಾನ ಸಭಾ ಸದಸ್ಯರಾಗಿ ಸೇವೆ
 • ೧೯೭೮ ರಲ್ಲಿ ಸಾಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಶ್ರೀ ಕಾಗೋಡು ತಿಮ್ಮಪ್ಪ (ಜನತಾಪಕ್ಷ ) ವಿರುದ್ಧ ನಿಂತು ಕರ್ನಾಟಕ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು . ಪುನಃ ೧೯೮೩ ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲೇ ಏಕೈಕ ಕಾಂಗ್ರೆಸ್ ಸದಸ್ಯರಾಗಿ ಸಾಗರ ಕ್ಷೇತ್ರದಿಂದ ಎರಡನೇಬಾರಿ ವಿಧಾನ ಸಭೆಗೆ ಶಾಸಕರಾಗಿ ಶ್ರೀ ಧರ್ಮಪ್ಪ (ಜ.ಪ.) ವಿರುದ್ಧ ನಿಂತು ಆಯ್ಕೆಯಾದರು.
 • ಪ್ರಥಮ ಬಾರಿಗೆ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯನ್ನು (ಆರ್.ಎಫ್.ಸಿ.) ಸಾಗರ ತಾಲ್ಲೂಕಿಗೆ ಮಂಜೂರು ಮಾಡಿಸಿ ಕರೂರು ಭಾರಂಗೀ ಹೋಬಳಿಯ ಕುಗ್ರಾಮಗಳ ಜನರೂ ಬೆಳಕನ್ನ ಕಾಣುವಂತೆ ಆಯಿತು.
 • ಸಣ್ಣ ಹಿಡುವಳಿ ಅಡಿಕೆ ಬೆಳೆಗಾರರಿಗೆ ಕೃಷಿ ಆದಾಯ ತೆರಿಗೆ ಹೇರಲು ಸರ್ಕರ ಮುಂದಾಗಿ , ಶಾಸನ ಸಭೆಯಲ್ಲಿ ಶಾಸನ ಮಂಡನೆ ಆದಾಗ ಅದನ್ನು ಕೈಬಿಡುವಂತೆ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಸಾಗರ ನಗರ ಅಭಿವೃದ್ಧಿಗಾಗಿ ಸಮಗ್ರ ಪಟ್ಟಣ ಅಭಿವೃದ್ಧಿ ಯೋಜನೆಗೆ ಸಾಗರವನ್ನೂ ಸೇರಿಸಿ, ನಿವೇಶನಗಳ ನಿರ್ಮಾಣ, ತರಕಾರಿ ಮಾರ್ಕೆಟ್ ಕಟ್ಟಡ ರಸ್ತೆಗಳ ನಿರ್ಮಾಣ ಇತ್ಯಾದಿ ಅಭಿವೃದ್ಧಿಕೆಲಸಗಳಿಗೆ ಕಾರಣರಾದರು. ಸಾಗರದಲ್ಲಿ ಎ.ಆರ್.ಟಿ.ಒ. ಕಛೇರಿ, ಕೆ.ಇ.ಬಿ.ವಿಭಾಗೀಯ ಕಛೇರಿ. ಸಿವಿಲ್ ಜಡ್ಜ್ ನ್ಯಾಯಾಲಯ ಮಂಜೂರಾತಿ, ಅಗ್ನಿ ಅಪಘಾತ ತಡೆ ಕೇಂದ್ರ, ಶರಾವತಿ ಹಿನ್ನೀರಿಗೆ ಹೊಸ ಲಾಂಚ್ ಮಂಜೂರಾತಿ, ಸಾಗರದಲ್ಲೇ ಜಲ ಸಾರಿಗೇ ಕಛೇರಿ ಆರಂಭ, ನ್ಯಾಯಲಯಕ್ಕೆ ಸಂಕೀರ್ಣಕಟ್ಟಡ ಮಂಜೂರಾತಿ, *ಶ್ರೀಗಂಧ ಕುಶಲ ಕರ್ಮಿಗಳಿಗೆ ೨೦ ಶೆಡ್ ನರ್ಮಾಣ ಮೊದಾಲಾದ ಅಭಿವೃದ್ಧಿ ಕಾರ್ಯಗಳಿಗೆ ಕಾರಣಕರ್ತರಾದರು. ಇವರ ಕಾಲದಲ್ಲೇ ಅರಣ್ಯ ಇಲಾಖೆಗೆ ನೂತನ ಕಟ್ಟಡ ಮತ್ತು ತಾಲ್ಲೂಕುಕಛೇಇಗೆ ನೂತನ ಕಟ್ಟಡ ಮಂಜೂರಾಯಿತು. ಪಶ್ಚಿಮ ಘಟ್ಟ ಯೋಜನೆಯಡಿ ಅನೇಕ ಅಭಿವೃದ್ಧಿ ಕಾರ್ಯಗಳು ನೆಡದವು ಚೈಲ್ಡ ಡೆವಲಪ್ ಮೆಂಟ್ ಯೋಜನೆಯಲ್ಲಿ ೧೨೦ ಅಂಗನವಾಡಿಗಳ ಮಂಜೂರಾತಿ ಮತ್ತು ಅವುಗಳಿಗೆ ಕಟ್ಟಡಗಲಾದವು.
 • ಭೂ ಸುಧಾರಣೆಯ ಫಲಾನುಭವಿಗಳು ಸರ್ಕಾರಕ್ಕೆ ಕಟ್ಟುವ ಪರಿಹಾರ ಧನವನ್ನು ರದ್ದುಗೊಳಿಸುವಲ್ಲಿ , ಶಾಸನ ಸಭೆಯಲ್ಲಿ ಪ್ರಸ್ಥಾಪಿಸಿ ಯಶಸ್ವಿಯಾದರು.

ಸಮಾಜ ಸೇವೆ :[ಬದಲಾಯಿಸಿ]

 • ತೀರ್ಥಹಳ್ಳಿಯಲ್ಲಿ ನೆಡೆದ ಅಖಿಲ ಹವ್ಯಕ ಸಮ್ಮೇಳನದಲ್ಲಿ ಸ್ವಾಗತ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೧೯೮೨ ರಲ್ಲಿ ನಡೆದ ೨ನೇ ಅಖಿಲ ಹವ್ಯಕ ಸಮ್ಮೇಳನದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಪುತ್ತೂರಿನಲ್ಲಿ ನಡೆದ ಪ್ರಥಮ ಹವ್ಯಕ ವಿಶ್ವ ಸಮ್ಮೇಳನಕ್ಕೆ ಸಮ್ಮೇಲನಾದ್ಯಕ್ಷರನ್ನಾಗಿ ಆಯ್ಕೆ ಮಾಡಿ ಇವರ ಸೇವೆಯನ್ನುಸಮಾಜ ಗುರುತಿಸಿತು.
 • ೧೯೫೭ ರಲ್ಲಿ ಶಿವಮೊಗ್ಗ ಚಿಕ್ಕಮಗಳೂರು ಎರಡೂ ಜಿಲ್ಲಾ ವ್ಯಾಪ್ತಿಯ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ (ಮ್ಯಾಮ್‌ಕೋಸ್) ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
 • ೧೯೬೦ರಲ್ಲಿ ಶರಾವತಿ ಜಲವಿದ್ಯುತ್ ಯೋಜನೆಯಲ್ಲಿ ಮುಳುಗಡೆ ಸಂತ್ರಸ್ತರ ಹಿತರಕ್ಷಣೆಗಾಗಿ ಸಂಘಟನೆ ಮಾಡಿದರು. ಈ ಸಂಬಂಧ ಸರ್ಕಾರ ನೇಮಿಸಿದ ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಅದ್ಯಕ್ಷತೆಯ ಹೈಪವರ್ ಕಮಿಟಿಯಲ್ಲಿ ಸದಸ್ಯರಾಗಿದ್ದರು. ಪುನರ್ವಸತಿ ಸಮಿತಿಯಲ್ಲಿ ಕಾರ್ಯನಿರ್ವಹಿಸಿದರು.
 • ೧೯೬೩ ರಲ್ಲಿ ಸಾಗರ ಫಸ್ಟ್ ಗ್ರೇಡ್ ಕಾಲೇಜು ಕಟ್ಟುವ ಸಂದರ್ಭದಲ್ಲಿ ಸಾಗರ ಪ್ರಾಂತ್ಯದ ವಿದ್ಯಾವರ್ಧಕ ಸಂಘದ ಕಟ್ಟಡ ಸಮಿತಿಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. ಈದೇ ಮುಂದೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಆದಾಗ ದಶಕಕ್ಕೂ ಹೆಚ್ಚು ಕಾಲ ಅದರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಸಾಗರದಲ್ಲಿ ಗಾಂಧೀ ಮಂದಿರ ನಿರ್ಮಾಣ ಸಮಿತಿಯ ಸಂಚಾಲಕರಾಗಿ ಗಾಂಧೀಮಂದಿರ ನಿರ್ಮಾಣಕ್ಕೆ ರೂವಾರಿಯಾಗಿದ್ದರು.

ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದನ:[ಬದಲಾಯಿಸಿ]

 • ೧೯೭೦ ರ ದಶಕದಲ್ಲಿ ಮಲೆನಾಡಿನ ಅಡಿಕೆ ಬೆಳೆಗಾರರಿಗೆ ನೀರಿನ ತೆಇಗೆ ವಿಧಿಸಿದ್ದರ ವಿರುದ್ಧ ಮತ್ತು ಕಂದಾಯ ಪುನರ್ ವಿಮರ್ಶಿಸಿ ಪೂರ್ವಾನ್ವಯ ಅಧಿಕ ಕಂದಾಯ ವಸೂಲಿಮಾಡುವ್ಯದರ ವಿರುದ್ಧ ಹೋರಾಟ ಪ್ರಾರಂಬಿಸಿ ಆಸಮಸ್ಯೆಯನ್ನು ಪರಿಹರಿಸಲು ಯಶಸ್ವಿಯಾದರು.

ಅಡಿಕೆ ಬೆಳೆಗಾರರ ವಿಶಿಷ್ಠ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಗರ , ಸೊರಬ, ಹೊಸನಗರ ತಾಲ್ಲೂಕುಗಳ ಬೆಳೆಗಾರರನ್ನು ಸಂಘಟಿಸಿ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘವನ್ನು ಹುಟ್ಟುಹಾqದರು. ಇದರ ಸಂಸ್ಥಾಪಕ ಅಧ್ಯಕ್ಷರಾಗಿ ದಶಕಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದರು.

 • ದಿ. ೯-೭-೧೯೭೨ರಲ್ಲಿ ಸಾಗರದಲ್ಲಿ ಅಡಿಕೆ ಬೆಳೆಗಾರರ ಸಂಘದ ಬೃಹತ್ ಸಮ್ಮೇಳನವನ್ನು ಸಂಘಟಿಸಿದರು. ಈ ಸವ್ಮ್ಮೇಳನದಲ್ಲಿ ಕೇರಳ , ಕರ್ನಾಟಕ, ಎರಡೂ ರಾಜ್ಯಗಳ ಬೆಳೆಗಾರ ಪ್ರದೇಶದ ಸಂಸದರು, ಶಾಸಕರು, ಬೆಳೆಗಾರ ಸಂಘಗಳು , ಅನೇಕ ಪ್ರತಿಷ್ಠಿತರು ಭಾಗವಕಿಸಿದ್ದರು. ಈಸವ್ಮ್ಮೇಳನ ಅಡಿಕೆ ಬೆಳೆಗಾರರ ಹಿತ ಕಾಯುವ ಸಂಸ್ಥೆ ಕ್ಯಾಮ್ಕೋ ಸಂಸ್ಥೆಯ ಹುಟ್ಟಿಗೆ ನಾಂದಿಯಾಯಿತು . ಹಿತ ಕಾಯುವ ಸಂಸ್ಥೆ ಕ್ಯಾಮ್ಕೋ ಅಖಿಲ ಭಾರತ ಅಡಿಕೆ ಮತ್ತು ಕೋಕೊ ಮಾರಾಟ ಸಹಕಾರಿ ಸಂಸ್ಥೆಯನ್ನು ಪ್ರಾರಂಭಿಸಲು ಪ್ರಮುಖ ಪಾತ್ರವಹಿಸಿದವರಲ್ಲಿ ಇವರೂ ಒಬ್ಬರು. ಈಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.
 • ೧೯೭೪ರಲ್ಲಿ ಸಾಗರ , ಸೊರಬ, ಹೊಸನಗರ, ಅಡಿಕೆ ಬೆಳೆಗಾರರಿಗೆ ವ್ಯವಸ್ಥಿತ ಮಾರುಕಟ್ಟೆ ಸ್ಥಾಪಿಸಲು ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘವನ್ನು ಅನೇಕರ ಸಹಕಾರ ಪಡೆದು ಸ್ಥಾಪಿಸಿದರು. ಅದರ ಸಂಸ್ಥಾಪಕ ಅಧ್ಯಕ್ಷರಾಗಿ ೧೯೮೩ರ ರ ವರೆಗೂ ಕಾರ್ಯನಿರ್ವಹಿಸಿದರು. ಕ್ಯಾಮ್ಕೋ ಸಂಸ್ಥೆ ಯು ಇವರ ಕಾಲದಲ್ಲಿ ಚಾಕೋಲೇಟ್ ತಯಾರಿಕೆಯನ್ನೂ ಮಾಡಲು ಪ್ರಾರಂಭಿಸಿತು. ಇವರ ಒತ್ತಾಸೆಯ ಮೇಲೆ ಸಾಗರದಲ್ಲಿ ಅಡಿಕೆ ಬೆಳೆಗಾರರಿಗೆ ಅಗತ್ಯವಾದ ಮೈಲುತುತ್ತ ತಯಾರಿಸುವ ಕಾಖಾನೆ ಆರಂಭವಾಯಿತು.
 • ಬೆಳೆಗಾರರ ಹಣಕಾಸು ಅಗತ್ಯ ಪೂರೈಸಲು ಸಾಗರದಲ್ಲಿ ತೋಟಗಾರರ್ಸ್ ಕ್ರೆಡಿಟ್ ಕೋಆಪರೇಟಿವ್ ಸೊಸ್ಶೆಟಿಸ್ಥಾಪಿಸಿದರು. ಅದರ ಅಧ್ಯಕ್ಷರಾಗಿ ಹತ್ತುವರ್ಷಗಳಗೂ ಹೆಚ್ಚುಕಾಲ ಕೆಲಸ ಮಾಡಿದರು.
 • ಅಡಿಕೆ ತೋಟಗಳಲ್ಲಿ ಸಿಗುವ ಕಚ್ಚಾವಸ್ತು ಉಪಯೋಗಿಸುವ ಕಸದಿಂದ ರಸ ಯೋಜನೆಯ ಅಡಿಯಲ್ಲಿ ಕೈಕಾಗದ ತಯಾರಿಕಾಘಟಕವನ್ನು ಸಾಗರದಲ್ಲಿ ಆರಂಭಿಸಿದರು. ಹಾಗೆಯೇ ಅಡಿಕೆ ಹಾಳೆಯಿಂದ ಅಡಿಕೆ ದೊನ್ನೆ ತಯಾರಿಕಾ ಯಂತ್ರವನ್ನು ಸಿದ್ಧಗೊಳಿಸುವ ಯಂತ್ರವನ್ನು ೧೯೭೫ ರಲ್ಲಿ ಪ್ರಾರಂಭಿಸಿದರು..

ಮಂಡಳಿಗಳಲ್ಲಿ ಕಾರ್ಯ :[ಬದಲಾಯಿಸಿ]

 • ಸಾಗರದ ಭೂ ನ್ಯಾಯಮಂಡಳಿಯಲ್ಲಿ ಸದಸ್ಯರಾಗಿ ೧೯೭೩ ರಿಂದ ೧೯೭೮ ರ ವರೆಗೆ ಕೆಲಸ ನಿರ್ವಹಿಸದರು. ಮತ್ತು ಅದರಲ್ಲಿ ಭೂಮಾಲೀಕರು ಮತ್ತು ಗೇಣಿದಾರರಿಗೆ ಅನ್ಯಾಯವಾಗದಂತೆ ನ್ಯಾಯಯುತ ತೀರ್ಮಾನ ಕೊಡಲು ಶ್ರಮಿಸಿದರು. ಇದಲ್ಲದೆ ಸಾಗರದ ಲ್ಯಾಂಡ್ ಗ್ರ್ಯಾಂಟ್ ಸಮಿತಿಯಲ್ಲೂ ಕೆಲಸ ಮಾಡಿದರು.
 • ಸೊಪ್ಪಿನ ಬೆಟ್ಟಗಳನ್ನು ಅರಣ್ಯ ಇಲಾಖೆಗೆ ವರ್ಗಾಯಿಸವ ವಿಚಾರದ ಸರ್ಕಾರದ ಪ್ರಸ್ತಾಪಕ್ಕೆ ಶಾಸನ ಸಭೆಯಲ್ಲಿ ವಿರೋಧಸಿ ಗೆಲವು ಕಂಡರು.

ಧಾರ್ಮಿಕ ಮತ್ತು ವಿದ್ಯಾಸೇವೆ :[ಬದಲಾಯಿಸಿ]

 • ಹವ್ಯಕರ ಮಠವಾದ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಪ್ರಧಾನ Pಕಟ್ಟಡದ ಕಾಮಗಾರಿಯನ್ನು ನಿರ್ವಹಿಸಿದರು.ದಿ.೧೫ ಏಪ್ರಿಲ್ ೧೯೯೩ ರಲ್ಲಿ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳ ಅನಾರೋಗ್ಯ ಸಂದರ್ಭ ಬೆಂಗಳೂರಲ್ಲೇ ಶಿಷ್ಯ ಸ್ವೀಕಾರವಾಗಿ ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಸನ್ಯಾಸ ಸ್ವೀಕಾರ ಮಾಡಿದ ಸಮಾರಂಭದ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
 • ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಪೀಠಾರೋಹಣ ಸಮಿತಿ ಅಧ್ಯಕ್ಷರಾಗಿ ಏಪ್ರಿಲ್ ೧೯೯೯ ರಲ್ಲಿ ಆ ಸಮಾರಂಭವನ್ನು ಅಭೂತ ಪೂರ್ವವಾಗಿ ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ೧೯೮೭ ರಲ್ಲಿ ಅಮೇರಿಕಾ ಕೆನಡಾ ಪ್ರವಾಸ ಮಾಡಿ ಅಲ್ಲಿಯ ವಿದ್ಯಾ ಅಭಿವೃದ್ಧಯನ್ನು ನೋಡಿ, ಹಟ್ಟಿಯಂಗಡಿ ಕ್ಷೇತ್ರದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಸಂಸ್ಥೆಯ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಗಾಗಿ ಶ್ರಮಿಸುತ್ತಿದ್ದಾರೆ. ಈ ಕ್ಷೇತ್ರದ ಅಭಿವೃದ್ಧಿಯನ್ನೂ ,ಇಲ್ಲಿ ಗುರುಕುಲ ಮಾದರಿ ಪಾಠಶಾಲೆ , ಕೇಂದ್ರೀಯ ಪಾಠಶಾಲೆ , ಹೀಗೆ ಅನೇಕ ಕ್ರಮಗಳನ್ನು ಜೋಡಿಸಿದ್ದಾರೆ.
 • ಹಟ್ಟಿಯಂಗಡಿ ಶ್ರೀಸಿದ್ದಿವಿನಾಯಕ ಕ್ಷೇತ್ರಾಭಿವೃದ್ಧಿ ಟ್ರಸ್ಟ್ (ರಿ) , ಮತ್ತು ಶ್ರೀ ಸಿದ್ಧಿ ಶಿಕ್ಷಣ ಪ್ರತಿಷ್ಠಾನ (ರಿ) ಈ ಎರಡೂ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಸಾಗರದಲ್ಲಿರುವ ಶ್ರೀ ನರಹರಿ ಸದ್ಗುರು ಆಶ್ರಮದ ಅದ್ಯಕ್ಷರಾಗಿಯೂ ಕೆಲಸಮಾಡುತ್ತಿದ್ದಾರೆ. ಈವರು ಅನೇಕ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡಿದ್ದಾರೆ.

ಪ್ರವಾಸಾನುಭವ :[ಬದಲಾಯಿಸಿ]

ಇವರು ಅನೇಕ ಸ್ನೇಹಿತರೊಡಗೂಡಿ ಉತ್ತರ ಭಾರತ ಯಾತ್ರೆ/ ಪ್ರವಾಸ ಮಾಡಿದರು. ಜುಲೈ ೨೦೦೦ ದಲ್ಲಿ ಕೈಲಾಸ, ಮಾನಸ ಸರೋವರ, ಮತ್ತು ನೇಪಾಳ ಯಾತ್ರೆ ಕೈಗೊಂಡರು. ಒಮ್ಮೆ ಅಮೇರಿಕಾ ಕೆನಡಾ ವಿದೇಶ ಪ್ರವಾಸಮಾಡಿದ ಕೆಲವು ವರ್ಷಗಳ ನಂತರ , ೨೦೦೨ ರಲ್ಲಿ ಯೂರೋಪು -ಇಟಲಿ, ಜರ್ಮನಿ,ಫ್ರಾನ್ಸ್, ಮತ್ತು ಇಂಗ್ಲೆಂಡ್ ಪ್ರವಾಸ ಮಾಡಿದರು

ವೈಯುಕ್ತಿಕ ಸೇವಾ ಟ್ರಸ್ಟ್ ಗಳು ಮತ್ತು ಸೇವೆ :[ಬದಲಾಯಿಸಿ]

೧೯೯೯ ರಲ್ಲಿ ಸಾವಿತ್ರಮ್ಮ ಮತ್ತು ಎಲ್.ಟಿ.ತಿಮ್ಮಪ್ಪ ಹೆಗಡೆ ಪ್ರತಿಷ್ಠಾನ (ರಿ) ಎಂಬ ಟ್ರಸ್ಟನ್ನು ನೊಂದಣಿ ಮಾಡಿದರು. ಇದರ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವೈದ್ಯಕೀಯ ನೆರವು, ಜನೋಪಯೋಗಿ ಕೆಲಸ. ಸಾಂಸ್ಸೃತಿಕ ಮತ್ತು ಸೇವಾ ಚಟುವಟಿಕೆಗಳಿಗೆ ಸಹಾಯ ಧನ ನೀಡುವುಉ ಮೊದಲಾದ ಕೆಲಸ ಮಾಡಲಾಗುತ್ತಿದೆ.

 • ಹಾಗೆಯೇ ವಯೋವೃದ್ಧರಾದ ಶ್ರೀಧರಪುರದ ಲಕ್ಷ್ಮಯ್ಯನವರ ಕೋರಿಕೆ ಮೇಲೆ ಅವರ ಹೆಸರಿನಲ್ಲಿ ಶ್ರೀಧರಪುರ ಗೌರಮ್ಮ ಲಕ್ಷ್ಮಯ್ಯ ಟ್ರಸ್ಟ್ (ರಿ) ಸ್ಥಾಪನೆ ಮಾಡಿ ಅದರ ಮೂಲಕ ವಿದ್ಯಾರ್ಥಿವೇತನ , ವೈದ್ಯಕೀಯ ನೆರವು ಇತ್ಯಾದಿ ಸಮಾಜ ಸೇವೆಗೆ ವ್ಯವಸ್ಥೆ ಮಾಡಿದರು.

ಆಧಾರ :[ಬದಲಾಯಿಸಿ]

ಹೆಜ್ಜೆ ಗುರುತು : ಸಾಧನೆಗಳ ಕರ ಪತ್ರ (ಬ್ರೋಚರ್)