ವಿಷಯಕ್ಕೆ ಹೋಗು

ಎಲ್‌ಇಡಿ ಲ್ಯಾಂಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎಲ್‌ಇಡಿ ಲ್ಯಾ೦ಪ್ ಇಂದ ಪುನರ್ನಿರ್ದೇಶಿತ)
ಹೆಚ್ಚು ಶಕ್ತಿಯುತ ಎಲ್‌ಎಡಿ ದೀಪ GU5.3 ಜೊತೆ ಸರಿಹೊಂದುತ್ತದೆ ಮತ್ತು ಅಲ್ಯೂಮಿನಿಯಂ ಉಷ್ಣವಾಹಕ ಶಿಂಕ್ , ಹೊಲೊಜಿನ್ ಪ್ರತಿಫಲಕ ದೀಪಗಳನ್ನು ಸ್ಥಳಾಂತರಿಸಲು ಬಯಸಲಾಗಿದೆ.

ಲೈಟ್-ಎಮಿಟಿಂಗ್-ಡಯೋಡ್ (ಬೆಳಕನ್ನು-ಹೊರಸೂಸುವ-ಡಯೋಡ್) ಲ್ಯಾಂಪ್ ಒಂದು ಘನ-ರೂಪದ ಲ್ಯಾಂಪ್ ಆಗಿದ್ದು, ಇದು ಲೈಟ್-ಎಮಿಟಿಂಗ್-ಡಯೋಡ್‌ಗಳನ್ನು (LEDs) ಬೆಳಕಿನ ಮೂಲಗಳಾಗಿ ಬಳಸಿಕೊಳ್ಳುತ್ತದೆ. ಏಕೆಂದರೆ ವೈಯುಕ್ತಿಕ ಬೆಳಕು-ಹೊರಸೂಸುವ ಡಯೋಡ್‌ಗಳ ಬೆಳಕಿನ ಉತ್ಪಾದನೆಯು ಪ್ರಜ್ವಲಿಸುವ ಮತ್ತು ಸಾಂದ್ರ ಪ್ರತಿದೀಪಕ ಲ್ಯಾಂಪ್‌ಗಳಿಗೆ ಹೋಲಿಸಿದಾಗ ಸಣ್ಣದಾಗಿರುತ್ತವೆ, ಬಹುಘಟಕಗಳುಳ್ಳ ಡಯೊಡ್‌ಗಳು ಒಟ್ಟಿಗೆ ಬಳಸಲ್ಪಡುತ್ತವೆ. ಎಲ್‌ಇಡಿ ಲ್ಯಾಂಪನ್ನು ಇತರ ವಿಧಗಳೊಂದಿಗೆ ಪರಸ್ಪರ ವಿನಿಮಯ ಮಾಡಬಹುದು. ಹೆಚ್ಚಿನ ಎಲ್‌ಇಡಿ ಲ್ಯಾಂಪ್‌ಗಳು ಮಾನದಂಡದ ಎಸಿ ವೋಲ್ಟೇಜುಗಳೊಂದಿಗೆ ಕೆಲಸ ಮಾಡಲು ಆಂತರಿಕ ವಿದ್ಯುತ್‌ಪಥಗಳನ್ನು ಒಳಗೊಂಡಿರಬೇಕು. ಎಲ್‌ಇಡಿ ಲ್ಯಾಂಪ್‌ಗಳು ಹೆಚ್ಚಿನ ಕ್ರಿಯಾಶೀಲ ಅವಧಿ ಮತ್ತು ಹೆಚ್ಚು ಕಾರ್ಯಪಟುತ್ವವನ್ನು ಕೊಡುತ್ತವೆ ಆದರೆ ಪ್ರಾಥಮಿಕ ಬೆಲೆಗಳು ಪ್ರತಿದೀಪಕ ಲ್ಯಾಪ್‌ಗಳಿಗಿಂತ ಹೆಚ್ಚಾಗಿರುತ್ತವೆ.

ತಾಂತ್ರಿಕ ಕಾರ್ಯವಿಧಾನಗಳ ಸ್ಥೂಲ ಸಮೀಕ್ಷೆ

[ಬದಲಾಯಿಸಿ]
ಹೊರಾಂಗಣ ಗಾರ್ಡನ್‌ನ ಎಲ್‌ಇಡಿ ದೀಪಗಳು ಆಗಾಗ ಶಕ್ತಿಯನ್ನು ಸೌರ ಫಲಕ ದಿಂದ ಪಡೆಯುತ್ತದೆ.
ಎಸೆದ ತೆಳುಹಲಗೆಗಳ ಹಾಸಿನಿಂದ ಎಲ್‌ಇಡಿ ದೀಪ

ಸಾಮಾನ್ಯ ಉದ್ದೇಶದ ಬೆಳಕಿನ ವ್ಯವಸ್ಥೆಯು ಬಿಳಿ ಬೆಳಕನ್ನು ಆದೇಶಿಸುತ್ತದೆ. ಎಲ್‌ಇಡಿ ಸ್ವಾಭಾವಿಕವಾಗಿ ಸಣ್ಣ ಪಟ್ಟಿಗಳ ತರಂಗಾಂತರಗಳಲ್ಲಿ ಬೆಳಕನ್ನು ಹೊರಸೂಸುತ್ತದೆ, ಬಲವಾಗಿ ಬಣ್ಣಗಳ ಬೆಳಕನ್ನು ಉತ್ಪಾದಿಸುತ್ತದೆ. ಬಣ್ಣವು ಎಲ್‌ಇಡಿಯನ್ನು ಮಾಡಲು ಬಳಸಿದ ಅರೆವಾಹಕ ಮೂಲವಸ್ತುಗಳ ಶಕ್ತಿಯ ಅಂತರಪಟ್ಟಿಯ ವಿಶೇಷಗುಣ. ಎಲ್‌ಇಡಿಯಿಂದ ಬಿಳಿಯ ಬೆಳಕನ್ನು ಉತ್ಪತ್ತಿ ಮಾಡಲು ಕೆಂಪು, ಹಸಿರು, ಮತ್ತು ನೀಲಿ ಬಣ್ಣಗಳ ಮಿಶ್ರಣವು ಬೇಕಾಗುತ್ತದೆ, ಅಥವಾ ಕೆಲವು ಬೆಳಕುಗಳನ್ನು ಬೇರೆ ಬಣ್ಣಕ್ಕೆ ತಿರುಗಿಸಲು ಫಾಸ್ಫರ್‌ನ್ನು ಬಳಸಬೇಕಾಗುತ್ತದೆ.

ಮೊದಲ ವಿಧಾನವು (ಆರ್‌ಜಿಬಿ- ಎಲ್‌ಇಡಿಗಳು) ಒಂದು ವಿಭಿನ್ನ ತರಂಗಾಂತರವನ್ನು ಹೊರಸೂಸುವ ಬಗೆಬಗೆಯ ಪ್ರತಿಯೊಂದೂ ಎಲ್‌ಇಡಿ ಬಿಲ್ಲೆಗಳನ್ನು (ಚಿಪ್ಪುಗಳನ್ನು)ನಿಕಟ ಸಾಮೀಪ್ಯದಲ್ಲಿ ವಿಶಾಲ ಬೆಳಿ ಬೆಳಕಿನ ವರ್ಣಪಟಲವನ್ನು ತಯಾರಿಸಲು ಬಳಸುತ್ತದೆ. ಈ ವಿಧಾನದ ಪ್ರಯೋಜನವೇನೆಂದರೆ ಒಬ್ಬನು ಪ್ರತಿ ಎಲ್‌ಇಡಿಯ ತೀವ್ರತೆಗಳನ್ನು ಬೆಳಕು ಹೊರಸೂಸಿದ ವೈಶಿಷ್ಟ್ಯದ "ಧಾಟಿ"ಯನ್ನು ಹೊಂದಿಸಿಕೊಳ್ಳಬಹುದು ಎಂಬುದು ಇದರ ನಿಜಾಂಶ. ಪ್ರಮುಖ ಅನನುಕೂಲತೆಯೆಂದರೆ ಹೆಚ್ಚಿನ ಉತ್ಪಾದನಾ ವೆಚ್ಚ, ಇದು ವ್ಯಾಪಾರದ ಸಫಲತೆಯಲ್ಲಿ ಬಹು ಮುಖ್ಯವಾಗಿದೆ.

ಎರಡನೆಯ ವಿಧಾನ, ಫಾಸ್ಫರ್ ಪರಿವರ್ತಿತ ಎಲ್‌ಇಡಿಗಳು (ಪಿಸಿ ಎಲ್‌ಇಡಿಗಳು) ಒಂಟಿ ಕಡಿಮೆ ತರಂಗಾಂತರದ ಎಲ್‌ಇಡಿಗಳನ್ನು ಒಂದು ಫಾಸ್ಫರ್‌ನ ಸಂಯೋಜನೆಯೊಂದಿಗೆ ಬಳಸುತ್ತದೆ, ಅದು ನೀಲಿ ಬೆಳಕಿನ ಒಂದು ಭಾಗವನ್ನು ಹೀರಿಕೊಳ್ಳುತ್ತದೆ ಮತ್ತು ಬಿಳಿ ಬಣ್ಣದ ವಿಶಾಲ ವರ್ಣಪಟಲವನ್ನು ಹೊರಸೂಸುತ್ತದೆ. (ಯಾಂತ್ರಿಕ ರಚನೆಯು ಒಂದು ಪ್ರತಿದೀಪಕ ಲ್ಯಾಂಪ್ ಯುವಿ-ಪ್ರಕಾಶಿತ ಫಾಸ್ಫರ್‌ನಿಂದ ಬಿಳಿ ಬೆಳಕನ್ನು ಉತ್ಪಾದಿಸುವ ಮಾರ್ಗಕ್ಕೆ ಸಮಾನವಾಗಿದೆ.) ಇಲ್ಲಿನ ಪ್ರಮುಖ ಪ್ರಯೋಜನವೆಂದರೆ ಕಡಿಮೆ ವೆಚ್ಚ, ಅದೇ ವೇಳೆಯಲ್ಲಿ ಅನನುಕೂಲತೆಯೆಂದರೆ ಫಾಸ್ಫರ್ ಪದರಗಳನ್ನು ಪೂರ್ತಿಯಾಗಿ ಬದಲಾಯಿಸದೇ ಬೆಳಕಿನ ವೈಶಿಷ್ಟ್ಯವನ್ನು ಚೆನ್ನಾಗಿ ಮಾಡುವಲ್ಲಿ ಇರುವ ಅಸಮರ್ಥತೆ. ಹಾಗಾಗಿ ಯಾವಾಗ ಕೆಲವು ಇತರ ಸಾಮರ್ಥ್ಯಗಳ ಒಡೆತನವನ್ನು ಬಿಟ್ಟುಕೊಡದೇ ಇದು ಹೆಚ್ಚಿನ ಸಿಆರ್‌ಐ(CRI) (ಕಲರ್ ರೆಂಡರಿಂಗ್ ಇಂಡೆಕ್ಸ್, ಬಣ್ಣವನ್ನು ಪ್ರತಿಯಾಗಿ ಕೊಡುವ ಸೂಚಿ)ಮೌಲ್ಯಗಳನ್ನು ಉತ್ಪಾದಿಸುವುದಿಲ್ಲವೋ, ಕಡಿಮೆ ವೆಚ್ಚ ಮತ್ತು ಸಾಕಷ್ಟು ಸಾಮರ್ಥ್ಯಗಳು ಇದನ್ನು ಇಂದಿನ ಸಾಮಾನ್ಯ ಬೆಳಕಿನ ವ್ಯವಸ್ಥೆಗೆ ಹೆಚ್ಚಿನ ಯೋಗ್ಯ ತಾಂತ್ರಿಕತೆಯನ್ನಾಗಿ ಮಾಡುತ್ತದೆ.

ಒಂದು ಕೋಣೆಯಲ್ಲಿ ಬೆಳಕಿನ ಮೂಲವಾಗಿ ಪ್ರಯೋಜನಕಾರಿಯಾಗಲು, ಕೆಲವು ಸಂಖ್ಯೆಗಳ ಎಲ್‌ಇಡಿಯು ಒಂದು ಲ್ಯಾಂಪ್‌ನಲ್ಲ್ಲಿಒಂದಕ್ಕೊಂದು ಹತ್ತಿರವಾಗಿ ಅವುಗಳ ಪ್ರಕಾಶಿಸುವ ಪರಿಣಾಮಕ್ಕೆ ಸೇರಿಸುವಂತೆ ಇಡಲ್ಪಡಬೇಕು. ಇದು ಏಕೆಂದರೆ ಒಂದು ವೈಯುಕ್ತಿಕ ಎಲ್‌ಇಡಿಯು ಕೇವಲ ಸಣ್ಣ ಪ್ರಮಾಣದ ಬೆಳಕನ್ನು ಉತ್ಪಾದಿಸುತ್ತದೆ, ಅಲ್ಲಿಂದ ಬೆಳಕಿನ ಬದಲಿ ಬಳಸುವಿಕೆಯ ಒಂದು ಮೂಲವಾಗಿ ಇದರ ಪರಿಣಾಮಕಾರಿತ್ವವು ಮಿತಿಯಲ್ಲಿಡಲ್ಪಡುತ್ತದೆ. ಬಿಳಿ ಬಣ್ಣದ ಎಲ್‌ಇಡಿಗಳನ್ನು ಬಳಸಿದರೆ, ಅವುಗಳ ಸಿದ್ಧತಾ ವ್ಯವಸ್ಥೆಯು ಬಣ್ಣಗಳ ಸಮತೋಲನಕ್ಕೆ ವಿಮರ್ಶಾತ್ಮಕವಾಗಿರುವುದಿಲ್ಲ. ಬಣ್ಣ-ಮಿಶ್ರಣ ವಿಧಾನವನ್ನು ಬಳಸುವಾಗ, ಸಮಾನ ಲ್ಯಾಂಪ್ ಗಾತ್ರದಲ್ಲಿನ ಬಿಳಿ ಎಲ್‌ಇಡಿಗಳನ್ನು ಬಳಸಿಕೊಂಡು ಉತ್ಪಾದಿಸುವ ಪ್ರಕಾಶಕ್ಕೆ ಹೋಲಿಸಿ ನೋಡಿದರೆ, ಇದರಲ್ಲಿ ಅದೇ ಪ್ರಮಾಣದ ಪ್ರಕಾಶವನ್ನು ಉತ್ಪಾದಿಸುವುದು ಬಹಳ ಕಷ್ಟ. ಅದಕ್ಕಿಂತ ಹೆಚ್ಚಾಗಿ, ಬಣ್ಣ-ಮಿಶ್ರಿತ ಲ್ಯಾಂಪ್‌ಗಳಲ್ಲಿ ವಿವಿಧ ಸಮಯಗಳಲ್ಲಿ ವಿಭಿನ್ನ ಎಲ್‌ಇಡಿಗಳ ಅವನತಿಯು ಅಸಮಾನ ಬಣ್ಣದ ಉತ್ಪಾದನೆಗೆ ತೆಗೆದುಕೊಂಡು ಹೋಗುತ್ತದೆ. ಎಲ್‌ಇಡಿ ಲ್ಯಾಂಪ್‌ಗಳು ಸಾಮಾನ್ಯವಾಗಿ ಎರಡೂ ಎಲೆಕ್ಟ್ರಾನಿಗೆ ಸಂಬಂಧಿಸಿದ ಚಾಲಕಗಳು, ಒಂದು ತಾಪದ ತೊಟ್ಟಿ ಮತ್ತು ದೃಗ್ವಿಜ್ಞಾನ ಎಲ್‌ಇಡಿಗಳ ಗುಂಪನ್ನು ಒಳಗೊಂಡಿರುತ್ತದೆ.

ಅನ್ವಯಿಸುವಿಕೆ

[ಬದಲಾಯಿಸಿ]

ಎಲ್‌ಇಡಿ ಲ್ಯಾಂಪ್‌ಗಳು ಸಾಮಾನ್ಯ ಬೆಳಕು ವ್ಯವಸ್ಥೆಗೆ ಮತ್ತು ವಿಶೇಷ ಉದ್ದೇಶ ಬೆಳಕು ವ್ಯವಸ್ಥೆ ಈ ಎರಡೂ ವ್ಯವಸ್ಥೆಗಳಿಗೂ ಬಳಸಲ್ಪಡುತ್ತವೆ. ಎಲ್ಲಿ ಬಣ್ಣಗಳಿಂದಾವೃತವಾದ ಬೆಳಕು ಬೇಕಾಗಿದೆಯೋ, ಎಲ್‌ಇಡಿಗಳು ವಿವಿಧ ಬಣ್ಣಗಳಲ್ಲಿ ಬರುತ್ತವೆ, ಅವುಗಳು ಶೋಧಕಗಳ ಅವಶ್ಯಕತೆಯಿಲ್ಲದೇ ಉತ್ಪಾದಿಸಲ್ಪಟಿವೆ. ಇದು ಒಂದು ಬಿಳಿ ಬಣ್ಣದ ಮೂಲಕ್ಕಿಂತ ಹೆಚ್ಚು ಶಕ್ತಿಯ ಕಾರ್ಯಪಟುತ್ವವನ್ನು ಉತ್ತಮಗೊಳಿಸುತ್ತದೆ ಅದು ಎಲ್ಲಾ ಬಣ್ಣಗಳ ಬೆಳಕನ್ನು ಸೃಷ್ಟಿಸುತ್ತದೆ ನಂತರ ಶೊಧಕದಲ್ಲಿನ ಕೆಲವೊಂದು ಕಣ್ಣಿಗೆ ಕಾಣುವ ಶಕ್ತಿಗಳನ್ನು ವಿಸರ್ಜಿಸುತ್ತದೆ.

ಬಿಳಿ-ಬೆಳಕು ಬೆಳಕು-ಹೊರಸೂಸುವ ಡಯೋಡ್ ಲ್ಯಾಂಪ್‌ಗಳು ದೀರ್ಘಾವಧಿಯ ನಿರೀಕ್ಷೆ ಮತ್ತು ತುಲನಾತ್ಮಕವಾಗಿ ಕಡಿಮೆ ಶಕ್ತಿಯ ಬಳಕೆಯ ವಿಶೇಷಗುಣಗಳನ್ನು ಹೊಂದಿದೆ. ಎಲ್‌ಇಡಿಯ ಮೂಲಗಳು ಸಾಂದ್ರವಾಗಿವೆ, ಅವು ಬೆಳಕಿನ ಕೂಡಿಕೆಯನ್ನು ಚಿತ್ರಿಸುವಾಗ ಸುಲಭವಾಗಿ ಬಾಗುವ ಗುಣವನ್ನು ನೀಡುತ್ತವೆ ಮತ್ತು ಸಣ್ಣ ಪ್ರತಿಫಲಕಗಳು ಅಥವಾ ಮಸೂರಗಳ ಜೊತೆ ಬೆಳಕನ್ನು ವಿತರಿಸುವಾಗ ಒಳ್ಳೆಯ ಹಿಡಿತವನ್ನು ನೀಡುತ್ತದೆ. ಎಲ್‌ಇಡಿಯ ಸಣ್ಣ ಗಾತ್ರದ ಕಾರಣದಿಂದ, ಪ್ರಜ್ವಲನದ ಪ್ರಾದೇಶಿಕ ವಿತರಣೆಯು ಅತಿಯಾಗಿ ಬದಲಾಗುವ ಸಾಮರ್ಥ್ಯವನ್ನು ಹೊಂದಿರುತ್ತದೆ,[] ಮತ್ತು ಬೆಳಕಿನ ಉತ್ಪಾದನೆ ಮತ್ತು ಎಲ್‌ಇಡಿಗಳ ವ್ಯೂಹಗಳ ಪ್ರಾದೇಶಿಕ ವಿತರಣೆಗಳು ಕಾರ್ಯಪಟುತ್ವದ ನಷ್ಟವಿಲ್ಲದೆಯೇ ಹಿಡಿತಕ್ಕೆ ತೆಗೆದುಕೊಳ್ಳಬಹುದು.

ಎಲ್‌ಇಡಿ ಲ್ಯಾಂಪ್‌ಗಳು ಮುರಿಯಲು ಗ್ಲಾಸಿನ ಕೊಳವೆಗಳನ್ನು ಹೊಂದಿರುವುದಿಲ್ಲ, ಮತ್ತು ಅವುಗಳ ಆಂತರಿಕ ಭಾಗಗಳು ಕಟ್ಟುನಿಟ್ಟಾಗಿ ಬೆಂಬಲಿಸಲ್ಪಡುತ್ತವೆ, ಅವುಗಳನ್ನು ಕಂಪನ ಮತ್ತು ಆಘಾತಗಳಿಗೆ ನಿರೋಧಕವಾಗಿರುವಂತೆ ಮಾಡುತ್ತದೆ. ಸರಿಯಾದ ವಿದ್ಯುಜ್ಜನಿತ ವಾಹಕಗಳ ವಿನ್ಯಾಸದ ಜೊತೆ, ಒಂದು ಎಲ್‌ಇಡಿ ಲ್ಯಾಂಪ್ ಅನ್ನು ಒಂದು ವಿಶಾಲವಾದ ವ್ಯಾಪ್ತಿಯಲ್ಲಿ ಮಸುಕಾಗಿ ಮಾಡಬಹುದು; ಅಲ್ಲಿ ಲ್ಯಾಂಪ್‌ನ ಕಾರ್ಯವನ್ನು ನಿರ್ವಹಿಸಲು ಕನಿಷ್ಠ ವಿದ್ಯುತ್ ಪ್ರವಾಹದ ಅವಶ್ಯಕತೆ ಇಲ್ಲ. ಬಣ್ಣ-ಮಿಶ್ರಣ ತತ್ವವನ್ನು ಬಳಸಿಕೊಂಡ ಎಲ್‌ಇಡಿಗಳು ಪ್ರತಿ ಪ್ರಾಥಮಿಕ ಬಣ್ಣಗಳಲ್ಲಿ ಉತ್ಪಾದಿಸಿದ ಬೆಳಕಿನ ಪ್ರಮಾಣವನ್ನು ಬದಲಾಯಿಸಿ ವಿಶಾಲ ವ್ಯಾಪ್ತಿಯ ಬಣ್ಣಗಳನ್ನು ಉತ್ಪಾದಿಸಬಹುದು. ಇದು ಲ್ಯಾಂಪ್‌ಗಳಲ್ಲಿ ವಿವಿಧ ಬಣ್ಣಗಳ ಎಲ್‌ಇಡಿಗಳ ಜೊತೆ ಪೂರ್ತಿಯಾಗಿ ಬಣ್ಣಗಳ ಮಿಶ್ರಣವನ್ನು ಅನುಮತಿಸುತ್ತದೆ.[] ಎಲ್‌ಇಡಿ ಲ್ಯಾಂಪ್‌ಗಳು ಪಾದರಸವನ್ನು ಒಳಗೊಂಡಿರುವುದಿಲ್ಲ.

ಆದರೂ, ಕೆಲವು ವಿದ್ಯುತ್ ಪ್ರವಾಹದ ನಮೂನೆಗಳು ಮಾನದಂಡದ ಮಸುಕಾಗಿಸುವ ಸಾಧನಗಳ ಜೊತೆ ಸಮಂಜಸವಾಗಿರುವುದಿಲ್ಲ. ಇದು ಈ ಸಮಯದಲ್ಲಿ ಹೆಚ್ಚಿನ ಮಟ್ಟದ ಬೆಳಕನ್ನು ಉತ್ಪಾದಿಸಲು ಮಿತವ್ಯಯಕರವಾಗಿಲ್ಲ. ಅದರ ಪರಿಣಾಮವಾಗಿ, ಲೈಟ್ ಬಲ್ಬುಗಳಲ್ಲಿರುವ ವಿದ್ಯುತ್ ವಾಹಕದ ಎಲ್‌ಇಡಿ ಮೊಳೆಗಳು ಮಧ್ಯಮ ವೆಚ್ಚದಲ್ಲಿ ಕೆಳ ಹಂತದ ಬೆಳಕು, ಅಥವಾ ಹೆಚ್ಚಿನ ವೆಚ್ಚದಲ್ಲಿ ಮಧ್ಯಮ ಮಟ್ಟದ ಬೆಳಕು ಎರಡರಲ್ಲಿ ಒಂದನ್ನು ನೀಡುತ್ತವೆ. ಇತರ ಬೆಳಕಿನ ತಂತ್ರಗಾರಿಕೆಗಳಿಗೆ ವಿರುದ್ಧವಾಗಿ, ಎಲ್‌ಇಡಿ ಬೆಳಕು ದಿಕ್ಕಿಗೆ ಸಂಬಂಧಿತವಾಗಿರಲು ಹವಣಿಸುತ್ತದೆ. ಇದು ಹೆಚ್ಚಿನ ಸಾಮಾನ್ಯ ಬೆಳಕಿನ ಬಳಸುವಿಕೆಗಳಿಗೆ ಒಂದು ಅನನುಕೂಲತೆ, ಆದರೆ ಸ್ಥಾನಿಕ ಅಥವಾ ಉಬ್ಬರದ ಬೆಳಕಿನ ವ್ಯವಸ್ಥೆಗಳಿಗೆ ಪ್ರಯೋಜನಕಾರಿಯಾಗಿದೆ.

ಪ್ರಸ್ತುತ ಬಳಕೆದಾರರು

[ಬದಲಾಯಿಸಿ]

ಜಗತ್ತಿನ ಎಲ್‌ಇಡಿ ಬೆಳಕಿನ ಮೊದಲ ಸಮೂಹ-ಪ್ರತಿಷ್ಠಾಪನೆಯು ಮನಪಕ್ಕಮ್, ಇಂಡಿಯಾದ ಐಟಿ ಕಂಪನಿ ಐಗೇಟ್‌ನ ಚೆನ್ನೈನ ಕಾರ್ಯಾಲಯದಲ್ಲಿ ಮಾಡಲ್ಪಟ್ಟಿತು.[] ಇದು 57,000 ಚದರ ಅಡಿಗಳ ಕಾರ್ಯಾಲಯದ ಪ್ರದೇಶವನ್ನು ಬೆಳಕು ಮಾಡಲು 37 ಲಕ್ಷ ರೂಗಳನ್ನು (U$80,000) ಖರ್ಚು ಮಾಡಿತು. ಎಲ್‌ಇಡಿ ಬೆಳಕು ವ್ಯವಸ್ಥೆಯ ಶಕ್ತಿಯ ಕಾರ್ಯಪಟುತ್ವವವು ಪ್ರತಿದೀಪಕ ಲ್ಯಾಂಪ್‌ಗಳಿಗಿಂತ ಉತ್ಕೃಷ್ಟವಾಗಿರುವ ಕಾರಣದಿಂದ, ಕಂಪನಿಯು 5 ವರ್ಷಗಳೊಳಗೆ ಪೂರ್ತಿಯಾಗಿ ತನ್ನಷ್ಟಕ್ಕೇ ನೀಡಬೇಕು ಎಂದು ಬಯಸುತ್ತದೆ.

2008 ರಲ್ಲಿ, ಎಸ್‌ಎಸ್‌ಎಲ್ (ಸೊಲಿಡ್-ಸ್ಟೇಟ್ ಲೈಟಿಂಗ್, ಘನ-ರೂಪದ ಬೆಳಕು ವ್ಯವಸ್ಥೆ) ತಂತ್ರಗಾರಿಕೆಯು ಒಂದು ಸ್ಥಿತಿಗೆ ಬೆಳೆಯಲ್ಪಟ್ಟಿತು ಅದು ಒಕೊನೊಮೊವಾಕ್‌, ವಿಸ್ಕೊನ್ಸಿನ್, ಯುಎಸ್‌ಎಗಳಲ್ಲಿನ ಪಹರೆ ಸಲಕರಣೆ ನಿಗಮಗಳು ಅವುಗಳ ಪೂರ್ತಿ ಉದ್ದಿಮೆಯನ್ನು, ಆಂತರಿಕವಾಗಿ ಮತ್ತು ಬಾಹ್ಯವಾಗಿ ಎಲ್‌ಇಡಿಗಳಿಂದ ಬೆಳಕುಗೊಳಿಸಲು ಸಮರ್ಥವಾದವು. ಆದಾಗ್ಯೂ ಪ್ರಾಥಮಿಕ ವೆಚ್ಚವು ಪ್ರಕಾಶಮಾನ ಮತ್ತು ಪ್ರತಿದೀಪಕ ಬಲ್ಬುಗಳ ಒಂದು ಸಾಂಪ್ರದಾಯಿಕ ಮಿಶ್ರಣಕ್ಕಿಂತ ಮೂರು ಪಟ್ಟು ಹೆಚ್ಚಾಗಿತ್ತು, ಹೆಚ್ಚಿನ ವೆಚ್ಚವು ವಿದ್ಯುತ್ತಿನ ಉಳಿತಾಯದಿಂದ 2 ವರ್ಷಗಳೋಳಗೆ ಮರುಪಾವತಿಸಲ್ಪಡುತ್ತಿತ್ತು, ಮತ್ತು ಬಲ್ಬುಗಳು 20 ವರ್ಷಗಳ ತನಕ ಬದಲಿ ತರುವಿಕೆಯ ಅವಶ್ಯಕತೆ ಇರುವುದಿಲ್ಲ.[]

ಗೃಹಕೃತ್ಯಕ್ಕೆ ಸಂಬಂಧಿಸಿದ ಎಸಿ ಶಕ್ತಿಯ ಮೇಲೆ ಎಲ್‌ಇಡಿ ಲ್ಯಾಂಪ್‌ಗಳನ್ನು ಬಳಸುವುದು

[ಬದಲಾಯಿಸಿ]
E27 ಎಡಿಸನ್ ಸ್ಕ್ರೂನೊಂದಿಗೆ ಎಲ್‌ಇಡಿ ಲ್ಯಾಂಪ್‌, ಇದನ್ನು ಇನ್‌ಕ್ಯಾಂಡಿಸೆಂಟ್ ಲ್ಯಾಂಪ್‌ಗಳ ಜೊತೆ ಬದಲಿಸಬಹುದಾಗಿದೆ

ಒಂದು ಏಕೈಕ ಎಲ್‌ಇಡಿಯು ಕಡಿಮೆ-ವೋಲ್ಟೇಜಿನ ಘನ ಸ್ಥಿತಿಯ ಉಪಕರಣವಾಗಿರುತ್ತದೆ ಮತ್ತು ಲ್ಯಾಂಪ್‌ನ ಮೂಲಕ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸುವ ಕೆಲವು ವಿದ್ಯುತ್‌ ಪಥಗಳಿಲ್ಲದೇ ಗೃಹಕತ್ಯದ ವಿದ್ಯುತ್ ಪ್ರವಾಹಗಳಲ್ಲಿ ನೇರವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ರೋಧಕಗಳ ಒಂದು ಸರಣಿಯು ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ಬಳಸಲಾಗುತ್ತದೆ, ಆದರೆ ಹೆಚ್ಚಿನ ವೋಲ್ಟೇಜುಗಳು ರೊಧಕಗಳಲ್ಲಿ ನಿರುಪಯುಕ್ತವಾಗುತ್ತವೆ ಅಲ್ಲಿಂದ ಇದು ಅಸಮರ್ಥವಾಗುತ್ತದೆ. ಒಂದು ಏಕೈಕ ತಂತಿಯ ಸರಣಿಗಳು ಡ್ರಾಪರ್‌ಗಳ ನಷ್ಟವನ್ನು ಕಡಿಮೆಗೊಳಿಸುತ್ತವೆ, ಆದರೆ ಒಂದು ಎಲ್‌ಇಡಿಯ ವೈಫಲ್ಯವು ಪೂರ್ತಿ ತಂತಿಗಳನ್ನು ಹಾಳು ಮಾಡುತ್ತದೆ. ಸಮಾನಾಂತರವಾದ ತಂತಿಗಳು ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತವೆ. ಅನುಷ್ಠಾನದಲ್ಲಿ ಸಾಮಾನ್ಯವಾಗಿ 3 ತಂತಿಗಳು ಅಥವಾ ಹೆಚ್ಚಿನ ತಂತಿಗಳು ಬಳಸಲ್ಪಡುತ್ತವೆ.

ಲ್ಯಾಂಪ್‌ನ ಗಾತ್ರಗಳು ಮತ್ತು ಮೂಲಗಳು

[ಬದಲಾಯಿಸಿ]

ಎಲ್‌ಇಡಿ ಲ್ಯಾಂಪ್‌ಗಳು ಪ್ರಕಾಶಮಾನ ಲ್ಯಾಂಪ್‌ಗಳ ಜೊತೆಗೆ ಪರಸ್ಪರ ವಿನಿಮಯವಾಗುವ0ತೆ ಉದ್ದೇಶಿಸಿಲಾಗಿತ್ತು ಅವು ಬೆಳಕಿನ ಬಲ್ಬ್‌ನ ಮಾನದಂಡದಲ್ಲಿ ಮಾಡಲ್ಪಟ್ಟಿವೆ, ಅಂದರೆ ಎಡಿಸನ್ ಮೊಳೆಯ ಆಧಾರದ ಮೇಲೆ, ಒಂದು ಎಮ್‌ಆರ್ 16 ಆಕಾರದ ಎರಡು-ಪಿನ್‌ಗಳ ಆಧಾರದ ಜೊತೆ, ಅಥವಾ ಒಂದು ಜಿಯು 5.3 (ಬಿಪಿನ್ ಕ್ಯಾಪ್) ಅಥವಾ ಜಿಯು1೦ (ಬೊಯೊನೆಟ್ ಸೊಕೆಟ್). ಎಲ್‌ಇಡಿ ಲ್ಯಾಂಪ್‌ಗಳು ಕಡಿಮೆ ವೊಲ್ಟಿಜ್‌ನಲ್ಲಿ (ವಿಶಿಷ್ಟವಾಗಿ 12 ವೋಲ್ಟೇಜ್ ಹಲೊಗನ್-ತರಹ) ವಿಧಗಳಲ್ಲಿ ಮತ್ತು ಸಾಮಾನ್ಯ ಎಸಿ (ಉದಾ. 120 ಅಥವಾ 240 ವೊಲ್ಟೇಜ್ ಎಸಿ) ಬೆಳಕಿಗೆ ಪರಸ್ಪರ ವಿನಿಮಯವಾಗಿ ಮಾಡಲ್ಪಟ್ಟಿರುತ್ತವೆ.

ಎಲ್‌ಇಡಿ ಬೆಳಕಿನ ಬಲ್ಬ್

[ಬದಲಾಯಿಸಿ]

2೦1೦ ತರುವಾಯ, ಸಾಮಾನ್ಯ ಗೃಹಕತ್ಯದ ಪ್ರಕಾಶಮಾನ ಅಥವಾ ಪ್ರತಿದೀಪಕ ಬೆಳಕಿನ ಬಲ್ಬ್‌ಗಳಿಗೆ ಪರಸ್ಪರ ವಿನಿಮಯವಾಗಿ ಕೆಲವೇ ಕೆಲವು ಎಲ್‌ಇಡಿ ಬೆಳಕು ಬಲ್ಬ್‌ಗಳ ಆಯ್ಕೆಯು ದೊರೆಯುತ್ತದೆ. ಅಸ್ತಿತ್ವದಲ್ಲಿರುವ ಎಲ್‌ಇಡಿ ಬಲ್ಬ್‌ಗಳ ಒಂದು ಅನನುಕೂಲತೆಯೆಂದರೆ 45-60 ವಾಟ್ ಇರುವ ಪ್ರಕಾಶಮಾನ ಬಲ್ಬ್‌ಗಳಿಗೆ ಸಮಾನವಾಗಿರುವ ಬಲ್ಬ್‌ಗಳಿಗಿಂತ, ಹೆಚಿನ ಪ್ರಕಾಶಮಾನ ಬಲ್ಬ್‌ಗಳ ಜೊತೆ ಅವುಗಳು ಸೀಮಿತ ಬೆಳಕನ್ನು ನೀಡುತ್ತವೆ.ಹೆಚ್ಚಿನ ಎಲ್‌ಇಡಿ ಬಲ್ಬ್‌ಗಳು ಮಸುಕಾಗಲು ಸಾಧ್ಯವಿರುವುದಿಲ್ಲ, ಮತ್ತು ಅವುಗಳ ಪ್ರಕಾಶತೆಯು ಕೆಲವು ದಿಕ್ಕಿಗೆ ಸಂಬಂಧಿಸಿದ ಮಾರ್ಗವನ್ನು ಉಳಿಸಿಕೊಳ್ಳುತ್ತದೆ. ಬಲ್ಬ್‌ಗಳು ಪ್ರಕಾಶಮಾನ ಲ್ಯಾಂಪ್‌ಗಳ ಜೊತೆ ಹೆಚ್ಚು ಸ್ಪರ್ಧಾತ್ಮಕ ಬೆಲೆಗಳನ್ನು ಪಡೆಯುತ್ತಿವೆ ಸುಮಾರು $15 – $20 ಪ್ರತಿ ಬಲ್ಬ್, ಮತ್ತು ನೇರ ರಿಯಾಯಿತಿ ವಿತರಕರನ್ನು ಒಳಗೊಂಡಂತೆ ಹಲವು ಪ್ರದೇಶಗಳಲ್ಲಿ ದೊರೆಯಲ್ಪಡುತ್ತವೆ. ಆದಾಗ್ಯೂ, ಈ ಬಲ್ಬ್‌ಗಳು ಸ್ವಲ್ಪ ಪ್ರಮಾಣದಲ್ಲಿ ಸಾಂದ್ರ ಪ್ರಕಾಶಮಾನ ಬಲ್ಬ್‌ಗಳಿಗಿಂತ ಹೆಚ್ಚಾಗಿ ಹೆಚ್ಚಿನ ಶಕ್ತಿ ದಕ್ಷತೆಯನ್ನು ಹೊಂದಿದೆ ಮತ್ತು 30,000 ಅಥವಾ ಅದಕ್ಕಿಂತ ಹೆಚ್ಚು ಘಂಟೆಗಳ ಅಸಾಮಾನ್ಯವಾದ ದೀರ್ಘಾವಧಿಯನ್ನು ನೀಡುತ್ತದೆ. ಒಂದು ಎಲ್‌ಇಡಿ ಬಲ್ಬ್ ಸಾಮಾನ್ಯ ಮಟ್ಟದ ಬಳಕೆಯ ಅಡಿಯಲ್ಲಿ 25-30 ವರ್ಷಗಳ ಕಾಲ ಬಾಳಿಕೆಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿದೆ. ಪ್ರಕಾಶಮಾನ ಬಲ್ಬ್‌ಗಳಂತಲ್ಲದೇ, ಎಲ್‌ಇಡಿ ಬಲ್ಬ್‌ಗಳು ಕಾಲ ಕಳೆದಂತೆ ಮಸುಕಾಗುವುದಿಲ್ಲ ಮತ್ತು ಅವುಗಳು ಪಾದರಸದಿಂದ ಹೊರತಾಗಿವೆ. ಇತ್ತೀಚಿನ ಸಂಶೋಧನೆಗಳು ವಿವಿಧ ಬಣ್ಣಗಳ ವಿಶೇಷಗುಣಗಳನ್ನೊಳಗೊಂಡ ಪ್ರತಿದೀಪಕ ಬೆಳಕುಗಳಂತೆ ವಿವಿಧ ಬಗೆಯ ಬಲ್ಬ್‌ಗಳು ದೊರೆಯುವಂತೆ ಮಾಡಿವೆ. ಶಕ್ತಿ ಮತ್ತು ನಿರ್ವಹಣಾ ವೆಚ್ಚಗಳ ಉಳಿತಾಯದ ಜೊತೆ, ಈ ಬಲ್ಬ್‌ಗಳು ಆಕರ್ಷಕವಾಗಿಯೂ ಇರುತ್ತವೆ. ಇದು ನಿರೀಕ್ಷಿತ ಏಕೆಂದರೆ ಹೆಚ್ಚುವರಿ ಅಭಿವೃದ್ಧಿ ಮತ್ತು ಬೆಳೆಯುತ್ತಿರುವ ಜನಪ್ರಿಯತೆಯ ಜೊತೆ, ಈ ಬಲ್ಬ್‌ಗಳ ಬೆಲೆಗಳು ಅಂತಿಮವಾಗಿ ಇಳಿಯುತ್ತವೆ.[]

ನವೀನ ವಿದ್ಯುಜ್ಜನಿತ ನಿಲುಭಾರಗಳ ಜೊತೆ ಪ್ರಕಾಶಮಾನ ಕೊಳವೆಗಳು ಸಾಮಾನ್ಯವಾಗಿ ಒಟ್ಟಾರೆ 50 ರಿಂದ 70 ಲ್ಯುಮೆನ್ಸ್/ವಾಟ್ ಸರಾಸರಿಯಾಗಿರುತ್ತವೆ. ಹೆಚ್ಚಿನ ಸಾಂದ್ರ ಪ್ರತಿದೀಪಕ ಬಲ್ಬ್‌ಗಳು ಎಲ್‌ಇಡಿ ಬಲ್ಬ್‌ಗಳಿಗೆ ಹೋಲಿಸಿದಾಗ 13 ವಾಟ್ ಅಥವಾ ಅದಕ್ಕಿಂತ ಹೆಚ್ಚು ಸಮಗ್ರ ವಿದ್ಯುಜ್ಜನಿತ ನಿಲುಭಾರಗಳ ಜೊತೆ ಸುಮಾರು 60 ಲ್ಯುಮೆನ್ಸ್/ವಾಟ್‌ಗಳನ್ನು ಸಾಧಿಸಲು ಪ್ರಮಾಣಿಸಲಾಗಿದೆ. ಒಂದು 60 ವಾಟ್ ಪ್ರಕಾಶಮಾನ ಬಲ್ಬ್‌ಗಳು 850 ಲ್ಯುಮೆನ್ಸ್ ಅನ್ನು ನೀಡುತ್ತವೆ, ಅಥವಾ 14 ಲ್ಯುಮೆನ್ಸ್/ವಾಟ್ ಅನ್ನು ನೀಡುತ್ತವೆ.

ಹಲವಾರು ಕಂಪನಿಗಳು ಎಲ್‌ಇಡಿ ಲ್ಯಾಂಪ್‌ಗಳನ್ನು ಸಾಮಾನ್ಯ ಬೆಳಕಿನ ಉದ್ದೇಶಗಳಿಗೆ ನೀಡುತ್ತಾರೆ. ಸಿ. ಕ್ರೇನ್ ಕಂಪನಿಯು "ಜಿಯೋಬಲ್ಬ್" ಎಂದು ಕರೆಯಲ್ಪಡುವ ಒಂದು ಉತ್ಪನ್ನವನ್ನು ಹೊಂದಿದೆ. ಜಿಯೋಬಲ್ಬ್ II ಕೇವಲ 7.5 ವಾಟ್ (59 ಲ್ಯುಮೆನ್ಸ್/ವಾಟ್) ಅನ್ನು ಮಾತ್ರ ಬಳಸುತ್ತದೆ.[] ಅಕ್ಟೋಬರ್ 2009 ರಲ್ಲಿ, ಜಿಯೋಬಲ್ಬ್ II ಇದು ಜಿಯೋಬಲ್ಬ್-3 ರಿಂದ ಅತಿಕ್ರಮಿಸಲ್ಪಟ್ಟಿತು ಅದು ಜಿಯೋಬಲ್ಬ್ II ಕ್ಕಿಂತ ಹೆಚ್ಚು ಪ್ರಕಾಶಮಾನ ಮತ್ತು ದೀರ್ಘಕಾಲ ಬಾಳಿಕೆ ಬರುವಂತದ್ದು. ಕಂಪನಿಯು ಕಡಿಮೆ ವೊಲ್ಟೇಜ್ ನೆಲೆವಸ್ತುಗಳ ಪರಸ್ಪರ ವಿನಿಮಯದಲ್ಲಿ ಬೆಣೆಯ-ಆಧಾರದ ಲ್ಯಾಂಪ್‌ಗಳನ್ನು ನೀಡುತ್ತದೆ. ನೆದರ‌ಲ್ಯಾಂಡ್‌ಗಳಲ್ಲಿ, ಲೆಮ್ನಿಸ್ ಲೈಟಿಂಗ್ ಹೆಸರಿನ ಕಂಪನಿಯು ಫರೊಕ್ಸ್ ಎಂದು ಕರೆಯಲ್ಪಡುವ ಒಂದು ಮಸುಕಾಗುವ ಎಲ್‌ಇಡಿ ಲ್ಯಾಂಪ್ ಅನ್ನು ನೀಡಿತು.[][] ಎಟರ್ನೆಲ್ಡ್ಸ್ ಇಂಕ್ ಕಂಪನಿಯು ಹೈಡ್ರಾಲ್ಯುಕ್ಸ್-4 ಎಂದು ಕರೆಯಲ್ಪಡುವ ಬಲ್ಬನ್ನು ಬಿಡುಗಡೆ ಮಾಡಿತು ಅದು ಎಲ್‌ಇಡಿ ಚಿಪ್‌ಗಳ ದ್ರವ ಶೈತ್ಯವನ್ನು ಬಳಸುತ್ತದೆ.[]

ಇತರ ಬೆಳಕಿನ ತಾಂತ್ರಿಕ ಕಾರ್ಯವಿಧಾನಗಳ ಜೊತೆ ಹೋಲಿಕೆ

[ಬದಲಾಯಿಸಿ]

ವಿವಿಧ ತಾಂತ್ರಿಕ ಕಾರ್ಯವಿಧಾನಗಳನ್ನು ಹೋಲಿಸುವ ಒಂದು ಕಾರ್ಯಪಟುತ್ವದ ರೇಖಾಚಿತ್ರಕ್ಕೆ ಪ್ರಕಾಶಕ ಕಾರ್ಯಕಾರಿತ್ವವನ್ನು ನೋಡಿ.

  • ಪ್ರಕಾಶಮಾನ ಲ್ಯಾಂಪ್‌ಗಳು (ಬೆಳಕಿನ ಬಲ್ಬ್‌ಗಳು) ಒಂದು ರೋಧಶೀಲ ತಂತುವಿನ ಮೂಲಕ ವಿದ್ಯುತ್ ಪ್ರವಾಹವನ್ನು ಹರಿಸುವುದರ ಮೂಲಕ ಬೆಳಕನ್ನು ಉತ್ಪತ್ತಿ ಮಾಡುತ್ತವೆ, ಅದರಿಂದಾಗಿ ತಂತುವನ್ನು ಅತಿ ಹೆಚ್ಚಿನ ಶಾಖಕ್ಕೆ ಬರುವಂತೆ ಕಾಯಿಸುತ್ತವೆ ಆದ್ದರಿಂದ ಇದು ಹೊಳೆಯುತ್ತದೆ ಮತ್ತು ದೃಷ್ಟಿ ಗೋಚರವಾದ ಬೆಳಕನ್ನು ಉತ್ಪತ್ತಿ ಮಾಡುತ್ತದೆ. ಒಂದು ವಿಶಾಲ ವ್ಯಾಪ್ತಿಯ ಗೋಚರ ಆವರ್ತನಗಳು ಸ್ವಾಭಾವಿಕವಾಗಿ ಉತ್ಪತ್ತಿಯಾಗಲ್ಪಡುತ್ತವೆ, ಬೆಚ್ಚಗಿನ ಹಳದಿ ಅಥವ ಬಿಳಿ ಬಣ್ಣದ ಗುಣವನ್ನು ನೀಡುತ್ತವೆ. ಪ್ರಕಾಶಮಾನ ಬೆಳಕು ಆದಾಗ್ಯೂ, ಹೆಚ್ಚು ಅಸಮರ್ಥವಾಗಿದೆ, ಹೇಗೆಂದರೆ ಸರಿಸುಮಾರಾಗಿ 98% ಶಕ್ತಿಯ ಮೂಲವು ಶಾಖವಾಗಿ ಹೊರಹಾಕಲ್ಪಡುತ್ತದೆ.[೧೦] ಒಂದು 100 ವಾಟ್ ಬೆಳಕಿನ ಬಲ್ಬ್ ಸುಮಾರು 1,700 ಲ್ಯುಮೆನ್ಸ್ ಅನ್ನು ಉತ್ಪತ್ತಿ ಮಾಡುತ್ತದೆ, ಅಂದರೆ ಸುಮಾರು 17 ಲ್ಯುಮೆನ್ಸ್/ವಾಟ್. ಪ್ರಕಾಶಮಾನ ಲ್ಯಾಂಪ್‌ಗಳು ಉತ್ಪಾತ್ತಿ ಮಾಡಲು ತುಲನಾತ್ಮಕವಾಗಿ ವೆಚ್ಚದಾಯಕವಾಗಿರುತ್ತವೆ. ಒಂದು ಎಸಿ ಪ್ರಕಾಶಮಾನ ಲ್ಯಾಂಪ್‌ನ ಪ್ರಾತಿನಿಧಿಕ ಜೀವಿತ ಅವಧಿಯು ಸುಮಾರು 1,000 ಘಂಟೆಗಳು [೧೧]. ಅವು ಮಬ್ಬಾಗಿಸುವುದರ ಜೊತೆ ಚೆನ್ನಾಗಿ ಕೆಲಸ ಮಾಡುತ್ತವೆ. ಹೆಚ್ಚು ಅಸ್ತಿತ್ವದಲ್ಲಿರುವ ಬೆಳಕಿನ ನೆಲೆವಸ್ತುಗಳು ಈ ಸಾಂಪ್ರದಾಯಿಕ ಬಲ್ಬ್‌ಗಳ ಗಾತ್ರ ಮತ್ತು ಆಕಾರಕ್ಕಾಗಿ ರಚಿಸಲ್ಪಟ್ಟಿವೆ.
  • ಪ್ರತಿದೀಪಕ ಲ್ಯಾಂಪ್‌ಗಳು (ಬೆಳಕಿನ ಬಲ್ಬ್) ಪಾದರಸದ ಆವಿಯ ಮೂಲಕ ವಿದ್ಯುತ್ತನ್ನು ಹರಿಸುವುದರ ಮೂಲಕ ಕೆಲಸ ಮಾಡುತ್ತದೆ, ಅದು ಪ್ರತಿಯಾಗಿ ನೇರಳಾತೀತ ಬೆಳಕನ್ನು ಉತ್ಪತ್ತಿ ಮಾಡುತ್ತದೆ. ನೇರಳಾತೀತ ಬೆಳಕು ನಂತರ ಲ್ಯಾಂಪ್‌ನ ಒಳಗಿರುವ ಫಾಸ್ಫರ್ ಕವಚದಿಂದ ಹೀರಿಕೊಳ್ಳಲ್ಪಡುತ್ತದೆ, ಪ್ರಜ್ವಲನ ಅಥವಾ ಪ್ರಕಾಶಕ್ಕೆ ಕಾರಣವಾಗುತ್ತದೆ. ಯಾವಾಗ ಪ್ರತಿದೀಪಕ ಲ್ಯಾಂಪ್‌ಗಳಿಂದ ಉತ್ಪತ್ತಿಯಾದ ಶಾಖವು ಪ್ರಕಾಶಮಾನ ಸಮಸ್ಥಾನಿಕಗಳಿಗಿಂತ ಕಡಿಮೆಯಿದ್ದರೆ, ಆಗಲೂ ಕೂಡ ಶಕ್ತಿಯು ನೇರಳಾತೀತ ಬೆಳಕನ್ನು ಉತ್ಪಾದಿಸುವುದರಲ್ಲಿ ಮತ್ತು ಈ ಬೆಳಕನ್ನು ಗೋಚರವಾಗುವ ಬೆಳಕಾಗಿ ಪರಿವರ್ತಿಸುವಲ್ಲಿ ನಷ್ಟ ಹೊಂದುತ್ತದೆ. ಲ್ಯಾಂಪ್ ಮುರಿದರೆ, ಪಾದರಸದ ಅನಾವರಣವು ಸಂಭವಿಸುತ್ತದೆ. ರೇಖಾತ್ಮಕ ಪ್ರತಿದೀಪಕ ಲ್ಯಾಂಪ್‌ಗಳು ವಿಶಿಷ್ಟವಾಗಿ ಐದರಿಂದ ಆರು ಪಟ್ಟು ಪ್ರಕಾಶಮಾನ ಲ್ಯಾಂಪ್‌ಗಳ ವೆಚ್ಚಕ್ಕೆ ಸಮವಾಗಿರುತ್ತದೆ ಆದರೆ 10,000 ದಿಂದ 20,000 ಘಂಟಗಳವರೆಗಿನ ದೀರ್ಘಕಾಲಿಕ ಜೀವಿತಾವಧಿಯನ್ನು ಹೊಂದಿರುತ್ತವೆ. ಸಾಂದ್ರ ಪ್ರತಿದೀಪಕ ಲ್ಯಾಂಪ್‌ಗಳ ಜೀವಿತಾವಧಿಯು 1,200 ಘಂಟೆಗಳಿಂದ 20,000 ಘಂಟೆಗಳ ವರೆಗೆ ಬದಲಾಗುತ್ತದೆ. ಹೆಚ್ಚಿನ ಪ್ರತಿದೀಪಕ ಲ್ಯಾಂಪ್‌ಗಳು ಮಬ್ಬಾಗಿಸುವುದರ ಜೊತೆ ಹೊಂದಿಕೆಯಾಗಿರುವುದಿಲ್ಲ. ಅವುಗಳು 100 ಅಥವಾ 200 Hz ಗಳ "ಕಬ್ಬಿಣದ" ನಿಲುಭಾರಗಳ ಕಂಪನದ ಜೊತೆ, ಮತ್ತು ಅವು ಕಡಿಮೆ ಸಮರ್ಥವಾಗಿರುತ್ತವೆ.[ಸೂಕ್ತ ಉಲ್ಲೇಖನ ಬೇಕು] ಒಸ್ರಮ್, ಫಿಲಿಪ್ಸ್, ಕ್ರೊಂಪ್ಟನ್ ಮತ್ತು ಇತರರಿಂದ ಉತ್ಪಾದಿಸಲ್ಪಟ್ಟ ಇತ್ತೀಚಿನ ಟಿ8-ಗಾತ್ರದ ಟ್ರೈಫಾಸ್ಫೇಟ್ ಪ್ರತಿದೀಪಕ ಲ್ಯಾಂಪ್‌ಗಳು, ಬೆಚ್ಚಗಿನ ವಿದ್ಯುಜ್ಜನಕ ನಿಲುಭಾರಗಳಿಂದ ಕೆಲಸ ಆರಂಭಿಸಿದರೆ, ಅವುಗಳು 50,000 ಘಂಟೆಗಳಿಗಿಂತಲೂ ಹೆಚ್ಚು ಅಪೇಕ್ಷಿತ ಜೀವಿತಾವಧಿಯನ್ನು ಹೊಂದಿರುತ್ತವೆ. ಈ ಹೊಸ ಲ್ಯಾಂಪ್‌ಗಳ ದಕ್ಷತೆಯು 100 ಲ್ಯುಮೆನ್ಸ್/ವಾಟ್‌ಗೆ ಸಮೀಪಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಸಂಶೋಧನೆ ಮತ್ತು ಅಭಿವೃದ್ಧಿ

[ಬದಲಾಯಿಸಿ]

ಯುಎಸ್‌ನ ಎನರ್ಜಿ(ಶಕ್ತಿ) ವಿಭಾಗ

[ಬದಲಾಯಿಸಿ]

ಮೇ 2೦೦8 ರಲ್ಲಿ, ಯುನೈಟೆಡ್ ಸ್ಟೇಟ್ಸ್‌ನ ಎನರ್ಜಿ ವಿಭಾಗವು (DOE) ನಾಳೆಯನ್ನು ಉಜ್ವಲಿಸಿರಿ ಬೆಳಕು ವ್ಯವಸ್ಥೆಯ ಬಹುಮಾನದ ಸ್ಸ್ಪರ್ಧೆಯ ಮಾಹಿತಿಗಳನ್ನು ಘೋಷಿಸಿತು. ಬೆಳಕು ವ್ಯವಸ್ಥೆಯ ಬಹುಮಾನವು ಸರ್ಕಾರದಿಂದ- ಪ್ರಾಯೋಜಿಸಲ್ಪಟ್ಟ ಮೊದಲ ತಾಂತ್ರಿಕ ಕಾರ್ಯವಿಧಾನಗಳ ಸ್ಪರ್ಧೆ, ಇದು ಬೆಳಕಿನ ಉತ್ಪಾದಕರಿಗೆ ಉತ್ತಮ ಗುಣಮಟ್ಟವನ್ನು ಅಭಿವೃದ್ಧಿಗೊಳಿಸಲು, ಸಾಮಾನ್ಯ ಬೆಳಕಿನ ಬಲ್ಬ್‌ ಅನ್ನು ಬದಲಾಯಿಸಲು ಉತ್ತಮ ಕಾರ್ಯಪಟುತ್ವವನ್ನು ಹೊಂದಿರುವ ಘನ-ರೂಪದ ಬೆಳಕಿನ ಉತ್ಪನ್ನಗಳನ್ನು ಉತ್ಪಾದಿಸಲು ಉತ್ತೇಜನ ನೀಡಿತು.ಸ್ಪರ್ಧೆಯು ಹಣದ ಬಹುಮಾನಗಳನ್ನು ಘೋಷಿಸಿತು, ಮತ್ತು ಸಂಯುಕ್ತ ಕೊಳ್ಳುವಿಕೆಯ ಒಪ್ಪಂದ, ಪ್ರಯೋಜನಕರತೆಯ ಯೋಜನೆಗಳು, ಮತ್ತು ಗೆಲ್ಲುವ ಉತ್ಪನ್ನಗಳಿಗೆ ಇತರ ಪ್ರೋತ್ಸಾಹಕಗಳು.

2007ರ ಎನರ್ಜಿ ಇಂಡಿಪೆಂಡೆನ್ಸ್ ಮತ್ತು ಸೆಕ್ಯುರಿಟಿ ಆಕ್ಟ್ (EISA)ಎನರ್ಜಿ ವಿಭಾಗಕ್ಕೆ ನಾಳೆಯನ್ನು ಉಜ್ವಲಿಸಿರಿ ಬೆಳಕಿನ ಬಹುಮಾನದ ಸ್ಪರ್ಧೆಯನ್ನು ಆಯೋಜಿಸಲು ಅಧಿಕಾರವನ್ನು ನೀಡಿತು. ಶಾಸನವು ಉದ್ದಿಮೆಗೆ ಹೆಚ್ಚು ಸಾಮಾನ್ಯವಾಗಿ ಬಳಸಲ್ಪಡುವ ಮತ್ತು ಅಸಮರ್ಥ ಉತ್ಪನ್ನಗಳಿಗೆ, 60 ವಾಟ್ ಪ್ರಕಾಶಮಾನ ಲ್ಯಾಂಪ್ ಮತ್ತು PAR 38 ಹಲೊಗನ್ ಲ್ಯಾಂಪ್‌ಗಳಿಗೆ ವಿನಿಮಯ ತಂತ್ರಗಾರಿಕೆಯನ್ನು ಅಭಿವೃದ್ಧಿಪಡಿಸಲು ಆಹ್ವಾನಿಸಿತು. ಬೆಳಕಿನ ಬಹುಮಾನವು ಈ ಎರಡು ಸ್ಪರ್ಧಾತ್ಮಕ ವಿಭಾಗಗಳಿಗೆ ತಾಂತ್ರಿಕ ಅವಶ್ಯಕತೆಯನ್ನು ನಿರ್ದಿಷ್ಟಪಡಿಸಿತು. ಸ್ಪರ್ಧೆಯ ಅವಶ್ಯಕತೆಗಳನ್ನು ತೃಪ್ತಿಗೊಳಿಸುವ ಬೆಳಕಿನ ಉತ್ಪನ್ನಗಳು ಇಂದು ಹೆಚ್ಚಾಗಿ ಬಳಸಲ್ಪಡುವ ಪ್ರಕಾಶಮಾನ ಲ್ಯಾಂಪ್‌ಗಳ ಕೇವಲ 17% ಶಕ್ತಿಯನ್ನು ಬಳಸುತ್ತದೆ. ಭವಿಷ್ಯದ ಬೆಳಕಿನ ಬಹುಮಾನದ ಯೋಜನೆಯ ಘೋಷಣೆಯು ಶಾಸನದಲ್ಲಿ ಅಧಿಕಾರನೀಡಲ್ಪಟ್ಟಂತೆ, ಒಂದು ಹೊಸ "21ನೇ ಶತಮಾನದ ಲ್ಯಾಂಪ್" ಅನ್ನು ಅಭಿವೃದ್ಧಿಗೊಳಿಸುವಲ್ಲಿ ಕರೆ ನೀಡುತ್ತದೆ.

ಎನರ್ಜಿ ಇಂಡಿಪೆಂಡೆನ್ಸ್ ಮತ್ತು ಸೆಕ್ಯುರಿಟಿ ಆಕ್ಟ್ ಶಾಸನವು ಪ್ರತಿ ವಿಭಾಗಕ್ಕೆ ಮುಖ್ಯ ಅವಶ್ಯಕತೆಗಳು ಮತ್ತು ಬಹುಮಾನದ ಮೊತ್ತಗಳನ್ನು ಪ್ರಮಾಣೀಕರಿಸುತ್ತದೆ. ಶಾಸನವು $20 ಮಿಲಿಯನ್ ವರೆಗೆ ಹಣದ ಬಹುಮಾನ ನೀಡುವ ಅಧಿಕಾರ ನೀಡುತ್ತದೆ.[೧೨][೧೩] ಸಪ್ಟೆಂಬರ್ 24, 2009 ರಂದು, ಎನರ್ಜಿ ವಿಭಾಗವು ಮಾನದಂಡ 60 ವಾಟ್ ಎ-19 "ಎಡಿಸನ್" ಬೆಳಕು ಬಲ್ಬ್ ಅನ್ನು ಬದಲಾಯಿಸಲು ಆ ವಿಭಾಗದಲ್ಲಿ ಲ್ಯಾಂಪ್‌ಗಳನ್ನು ಮಂಡಿಸುವುದರಲ್ಲಿ ಫಿಲಿಪ್ಸ್ ಮೊದಲಾಯಿತು.[]

ಮಾನದಂಡ ಮತ್ತು ತಾಂತ್ರಿಕತೆಯ ರಾಷ್ಟ್ರೀಯ ಸಂಸ್ಥೆ

[ಬದಲಾಯಿಸಿ]

ಜೂನ್ 2008 ರಲ್ಲಿ, ಮಾನದಂಡ ಮತ್ತು ತಾಂತ್ರಿಕತೆಯ ರಾಷ್ಟ್ರೀಯ ಸಂಸ್ಥೆಯ (NIST)ವಿಜ್ಞಾನಿಗಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಘನ-ರೂಪದ ಬೆಳಕು ವ್ಯವಸ್ಥೆಗೆ ಮೊದಲ ಎರಡು ಮ್ನದಂಡಗಳನ್ನು ಘೋಷಿಸಿದರು. ಈ ಮಾನದಂಡಗಳು ಎಲ್‌ಇಡಿ ಲ್ಯಾಂಪ್‌ಗಳ ಮತ್ತು ಎಲ್‌ಇಡಿ ಬೆಳಕು ನೆಲೆವಸ್ತುಗಳ ಬಣ್ಣಗಳ ನಿರ್ದಿಷ್ಟ ವಿವರಣೆ, ಮತ್ತು ಒಟ್ಟೂ ಬೆಳಕಿನ ಉತ್ಪಾದನೆಯಲ್ಲಿ ಈ ಘನ-ರೂಪದ ಬೆಳಕಿನ ಉತ್ಪನ್ನಗಳನ್ನು ಪರೀಕ್ಷಿಸುವಾಗ ಉತ್ಪಾದಕರು ಬಳಸಬೇಕಾದ ಪರೀಕ್ಷಣಾ ವಿಧಾನಗಳು, ಶಕ್ತಿಯ ಬಳಕೆ ಮತ್ತು ವರ್ಣೀಯತೆ, ಅಥವಾ ಬಣ್ಣದ ಗುಣಮಟ್ಟ ಇತ್ಯಾದಿಗಳ ವಿವರಣೆಯನ್ನು ನೀಡುತ್ತವೆ.

ಉತ್ತರ ಅಮೇರಿಕಾದ ಇಲ್ಲ್ಯುಮಿನೇಟಿಂಗ್ ಎಂಜಿನಿಯರಿಂಗ್ ಸೊಸೈಟಿ (IESNA)ಒಂದು ದಾಖಲೆಗಳ ಮಾನದಂಡ LM-79 ಅನ್ನು ಬಿಡುಗಡೆ ಮಾಡಿತು, ಅದು ಅವರ ಬೆಳಕಿನ ಉತ್ಪಾದನೆಗಳ ಘನ-ರೂಪದ ಬೆಳಕಿನ ಉತ್ಪನ್ನಗಳನ್ನು ಪರೀಕ್ಷಿಸುವ ವಿಧಾನಗಳನ್ನು (ಲ್ಯುಮೆನ್ಸ್), ಶಕ್ತಿಯ ಕಾರ್ಯಪಟುತ್ವ (ಲ್ಯುಮೆನ್ಸ್ ಪ್ರತಿ ವಾಟ್‌ಗೆ) ಮತ್ತು ವರ್ಣೀಯತೆಗಳನ್ನು ನಿರೂಪಿಸಿತು.

ಅಧ್ಯಯಿಸಲ್ಪಡುವ ಘನ-ರೂಪದ ಬೆಳಕುಗಳು ಸಾಮಾನ್ಯ ಪ್ರಜ್ವಲನವನ್ನು ಬಯಸುತ್ತವೆ, ಆದರೆ ಇಂದಿನ ದಿನಗಳಲ್ಲಿ ಬಳಸಲ್ಪಡುವ ಬಿಳಿ ಬೆಳಕುಗಳು ವರ್ಣೀಯತೆಯಲ್ಲಿ ಹೆಚ್ಚು ಮಾರ್ಪಡುತ್ತವೆ, ಅಥವಾ ನಿರ್ದಿಷ್ಟ ಬೆಳಿ ಬಣ್ಣದ ಛಾಯೆಯಲ್ಲಿ ಮಾರ್ಪಡುತ್ತವೆ. ಅಮೇರಿಕಾದ ರಾಷ್ಟ್ರೀಯ ಮಾನದಂಡಗಳ ಸಂಸ್ಥೆಯು (ANSI) ಮಾನದಂಡ C78.377-2೦೦8 ಅನ್ನು ಬಿಡುಗಡೆ ಮಾಡಿತು, ಅದು ಶೈತ್ಯದಿಂದ ಬೆಚ್ಚಗಿನ ಕಡೆಗೆ ಬಳಸುವ ಸಹ ಸಂಬಂಧಿತ ಬಣ್ಣಗಳ ಉಷ್ಣತೆಯನ್ನು ಬಿಳಿ ಎಲ್‌ಇಡಿಗಳನ್ನು ಬಳಸಿ ಘನ-ರೂಪದ ಬೆಳಕಿನ ಉತ್ಪನ್ನಗಳನ್ನು ನಿರ್ದೇಶಿತ ಬಣ್ಣಗಳ ವ್ಯಾಪ್ತಿಯನ್ನು ನಿರ್ದಿಷ್ಟವಾಗಿರುತ್ತದೆ.[೧೪]

ಎನರ್ಜಿ ಸಂಸ್ಥೆಯು 2008 ರಲ್ಲಿ ಘನ-ರೂಪದ ಬೆಳಕಿನ ಉತ್ಪನ್ನಗಳಿಗೆ ಎನರ್ಜಿ ಸ್ಟಾರ್ ಯೋಜನೆಯನ್ನು ಪ್ರಾರಂಭಿಸಿದರು. ಮಾನದಂಡ ಮತ್ತು ತಾಂತ್ರಿಕತೆಯ ರಾಷ್ಟ್ರೀಯ ಸಂಸ್ಥೆಯ ವಿಜ್ಞಾನಿಗಳು ಸಂಶೋಧನೆಗಳನ್ನು, ತಾಂತ್ರಿಕ ಮಾಹಿತಿಗಳನ್ನು ಮತ್ತು ಎನರ್ಜಿ ಸ್ಟಾರ್ ನಿರ್ದಿಷ್ಟ ವಿವರಣೆಗಳ ಟಿಪ್ಪಣಿಯನ್ನು ಒದಗಿಸುವಲ್ಲಿ, ಎನರ್ಜಿ ಸಂಸ್ಥೆಗೆ ಬೆಂಬಲವನ್ನು ನೀಡುತ್ತದೆ. ಎನರ್ಜಿ ಸ್ಟಾರ್ ಪ್ರಮಾಣೀಕರಣವು ಗ್ರಾಹಕರಿಗೆ ಯಾವ ಭರವಸೆಯನ್ನು ನಿಡುತ್ತದೆಂದರೆ ಉತ್ಪನ್ನಗಳು ಶಕ್ತಿಯನ್ನು ಸಂರಕ್ಷಿಸುತ್ತವೆ ಮತ್ತು ಹೆಚ್ಚಿನ ಗುಣಮಟ್ಟದ್ದಾಗಿರುತ್ತವೆ ಮತ್ತು ಗ್ರಾಹಕರಿಗೆ ಶಕ್ತಿ-ಸಂರಕ್ಷಣಾ ಉತ್ಪನ್ನಗಳನ್ನು ನೀಡುವಲ್ಲಿ ಉತ್ಪಾದಕರಿಗೆ ಒಂದು ಪ್ರೋತ್ಸಾಹಕವನ್ನು ನೀಡುವಲ್ಲಿ ಉಪಕರಿಸುತ್ತದೆ.

ಇತರ ಮಾರ್ಗಗಳು

[ಬದಲಾಯಿಸಿ]

ಫಿಲಿಫ್ಸ್ ಬೆಳಕಿನ ವ್ಯವಸ್ಥೆಯು ಸಾಂದ್ರ ಪ್ರತಿದೀಪಕಗಳ ಮೇಲೆ ಸಂಶೋಧನೆಯನ್ನು ಸಮಾಪ್ತಿಗೊಳಿಸಿತು, ಮತ್ತು ಇದರ ಆರ್.& ಡಿ. ಆಯವ್ಯಯ ಪಟ್ಟಿಯ ಹೆಚ್ಚಿನ ಭಾಗವನ್ನು ಸಮರ್ಪಿಸುತ್ತದೆ, ಕಂಪನಿಯ ಸಮಷ್ಟಿಯ ಬೆಳಕು ವ್ಯವಸ್ಥೆಯ ಅದಾಯದ 5 ಪ್ರತಿಶತವನ್ನು ಘನ-ರೂಪದ ಬೆಳಕು ವ್ಯವಸ್ಥೆಗೆ ಸಹಾಯ ಮಾಡುತ್ತದೆ.[]

ಜನವರಿ 2008 ರಲ್ಲಿ, ಇದು ಕೆಂಬ್ರಿಜ್ ವಿಶ್ವವಿದ್ಯಾಲಯದ ಸಂಶೋಧಕರು £2 ವೆಚ್ಚವನ್ನು ಹೊಂದಿರುವ ಒಂದು ಎಲ್‌ಇಡಿ ಬಲ್ಬನ್ನು ಅಭಿವೃದ್ಧ್ಪಡಿಸಿದರು, ಅದು ಟಂಗ್‌ಸ್ಟನ್ ಬಲ್ಬ್‌ಗಿಂತ 12 ಪಟ್ಟು ಶಕ್ತಿಯ ಕಾರ್ಯಪಟುತ್ವವನ್ನು ಹೊಂದಿದೆ, ಮತ್ತು 1೦೦,೦೦೦ ಘಂಟೆಗಳ ಜೀವಿತಾವಧಿಯನ್ನು ಹೊಂದಿದೆ ಎಂಬುದನ್ನು ವರದಿ ಮಾಡಿದರು.[೧೫]

ಉಳಿದ ಸಮಸ್ಯೆಗಳು

[ಬದಲಾಯಿಸಿ]

ಅಸ್ತಿತ್ವದಲ್ಲಿರುವ ಎಲ್‌ಇಡಿಗಳ ಉತ್ಪಾದನಾ ಪ್ರಕ್ರಿಯೆಯು ವಿಶಾಲ ಬಳಕೆಗೆ ಸಾಕಷ್ಟು ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲು ಅವರು ಸಾಕಷ್ಟು ಪಕ್ವವಾಗಿಲ್ಲ. ಅಲ್ಲಿ ಪರಿಹರಿಸಲೇ ಬೇಕಾದ ವಿವಿಧ ಉತ್ಪಾದನಾತ್ಮಕ ಅಡಚಣೆಗಳಿವೆ. ಎಲ್‌ಇಡಿಯ ಕ್ರಿಯಾಶೀಲ ಸೆಮಿಕಂಡಕ್ಟರ್ ಪದರಗಳ ಶೇಖರಣೆಯ ಬಳಸಲ್ಪಟ್ಟ ಪ್ರಕ್ರಿಯೆಯು ಆದಾಯವನ್ನು ಮತ್ತು ಉತ್ಪಾದನಾ ವಸ್ತುವಿನ ಒಟ್ಟು ಮೊತ್ತವನ್ನು ಉತ್ತಮಗೊಳಸಲ್ಪಡಬೇಕು. ಫಾಸ್ಫರ್ ಜೊತೆಗಿನ ಸಮಸ್ಯೆಗಳು, ಅವುಗಳ ವಿಶಾಲ ಬೆಳಕಿನ ವರ್ಣಪಟಲ ತರಂಗಾಂತರಗಳನ್ನು ಹೊರಸೂಸುತ್ತವೆ, ಎಂಬುದೂ ಕೂಡ ಒಂದು ವಿವಾದಾತ್ಮಕ ವಿಷಯವಾಗಿದೆ. ನಿರ್ದಿಷ್ಟವಾಗಿ, ಹೀರುವಿಕೆ ಮತ್ತು ಹೊರಸೂಸುವಿಕೆಯನ್ನು ಸರಿಯಾಗಿ ಕೆಲಸ ಮಾಡುವಂತೆ ಮಾಡವಲ್ಲಿರುವ ಅಸಮರ್ಥತೆ, ಮತ್ತು ಸುಲಭವಾಗಿ ಹೊಂದಿಕೊಳ್ಳಲಾಗದ ವಿಧಗಳೂ ಕೂಡ ಫಾಸ್ಫರ್‌ನ ಮುಂಬರುವ ಸಾಮರ್ಥ್ಯಗಳ ಉಪಯೋಗವನ್ನು ತೆಗೆದುಕೊಳ್ಳುವಲ್ಲಿ ಒಂದು ವಿವಾದಾತ್ಮಕ ವಿಷಯವಾಗಿದೆ.

ಕೊನೆಯ ಬಳಕೆದಾರರಿಗೆ ಹೆಚ್ಚು ಸ್ಪಷ್ಟ, ಆದಾಗ್ಯೂ, ಅಸ್ತಿತ್ವದಲ್ಲಿರುವ ಎಲ್‌ಇಡಿಗಳ ಕಡಿಮೆ ಬಣ್ಣ ಹೊರಸೂಸುವ ಸೂಚಿ (CRI) ಯಾಗಿದೆ. ಎಲ್‌ಇಡಿಗಳ ಪ್ರಸ್ತುತ ಪೀಳಿಗೆ, ಅದು ಹೆಚ್ಚಾಗಿ ನೀಲಿ ಎಲ್‌ಇಡಿ ಚಿಪ್ + ಹಳದಿ ಫಾಸ್ಫರ್‌ಗಳನ್ನು ಬಳಸಿಕೊಳ್ಳುತ್ತದೆ, ಇದು ಸುಮಾರು 70 ಬಣ್ಣ ಹೊರಸೂಸುವ ಸೂಚಿಯನ್ನು ಹೊಂದಿದೆ, ಇದು ಆಂತರಿಕ ಬೆಳಕು ವ್ಯವಸ್ಥೆಯಲ್ಲಿನ ವಿಶಾಲ ಬಳಕೆಗೆ ಬಹಳ ಕಡಿಮೆಯಾಗುತ್ತದೆ. (ಬಣ್ಣ ಹೊರಸೂಸುವ ಸೂಚಿಯು ಸೂರ್ಯನ ಬೆಳಕಿಗೆ ಹೋಲಿಸಿದಾಗ ಬೆಳಕಿನ ಮೂಲವು ಎಷ್ಟು ಖಚಿತವಾಗಿ ಭೌತಿಕವಸ್ತುಗಳು ಬಣ್ಣವನ್ನು ಹೊರಸೂಸುತ್ತವೆ ಎಂಬುದನ್ನು ಅಳತೆ ಮಾಡಲು ಬಳಸಲ್ಪಡುತ್ತದೆ. ಸೂರ್ಯನ ಬೆಳಕು 100 ಬಣ್ಣ ಹೊರಸೂಸುವ ಸೂಚಿಗಳನ್ನು ಹೊಂದಿದೆ ಎಂದು ನಿರೂಪಿಸಲ್ಪಡುತ್ತದೆ, ಆದರೆ ಬಿಳಿ ಪ್ರತಿದೀಪಕ ಲ್ಯಾಂಪ್‌ಗಳು 50 ರಿಂದ 98 ರವರೆಗೆ ಬದಲಾಗುವ ಬಣ್ಣ ಹೊರಸೂಸುವ ಸೂಚಿಗಳನ್ನು ಹೊಂದಿವೆ.) ಉತ್ತಮ ಬಣ್ಣ ಹೊರಸೂಸುವ ಸೂಚಿಗಳು ಹೆಚ್ಚು ವೆಚ್ಚದಾಯಕ, ಮತ್ತು ಅವುಗಳ ವೆಚ್ಚವನ್ನು ಕಡಿಮೆ ಮಾಡಲು ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿಯು ಅವಶ್ಯಕವಾಗಿದೆ.

ಸಿಸಿಟಿ(ಬಣ್ಣ ಸಹಸಂಬಂಧಿತ ತಾಪಮಾನ)ದ ಬದಲಾವಣೆಗಳು ವಿವಿಧ ನೋಡುವ ಕೋನಗಳಲ್ಲಿ ಬಿಳಿ ಎಲ್‌ಇಡಿಯ ವಿಶಾಲ ಬಳಕೆಯ ವಿರುದ್ಧ ಮತ್ತೊಂದು ಅಡಚಣೆಯಾಗಿದೆ. ಬಣ್ಣ ಸಹಸಂಬಂಧಿತ ತಾಪಮಾನಗಳ ಬದಲಾವಣೆಗಳು 500 ಕೆ ಯನ್ನು ಮೀರಬಹುದು ಎಂಬುದನ್ನು ತೋರಿಸಲಾಗಿದೆ, ಅದು ಮಾನವ ಪ್ರೇಕ್ಷಕನಿಂದ ಸ್ಪಷ್ಟವಾಗಿ ನೋಡಲ್ಪಡುತ್ತದೆ, ಅವನು ಸಾಮಾನ್ಯವಾಗಿ 2000 ಕೆ ಯಿಂದ 6000 ಕೆಗಳ ವರೆಗಿನ ವ್ಯಾಪ್ತಿಯಲ್ಲಿನ 50 ರಿಂದ 100 ಕೆಗಳ ಬಣ್ಣ ಸಹಸಂಬಂಧಿತ ತಾಪಮಾನಗಳ ಬದಲಾವಣೆಗಳನ್ನು ವಿಂಗಡಿಸಲು ಸಮರ್ಥನಾಗಿರುತ್ತಾನೆ, ಅದು ಹಗಲು ಬೆಳಕಿನಲ್ಲಿ ಬಣ್ಣ ಸಹಸಂಬಂಧಿತ ತಾಪಮಾನಗಳ ಬದಲಾವಣೆಯ ವ್ಯಾಪ್ತಿಯಾಗಿರುತ್ತದೆ.

ಎಲ್‌ಇಡಿಯು ನಿಯಮಿತ ತಾಪಮಾನ ಸಹಿಷ್ಣುತೆಯನ್ನು ಹೊಂದಿದೆ ಮತ್ತು ತಾಪಮಾನವು ಹೆಚ್ಚಿದಂತೆ ಕಾರ್ಯಪಟುತ್ವವು ಕಡಿಮೆಯಾಗುತ್ತದೆ. ಇದು ಒಟ್ಟೂ ಎಲ್‌ಇಡಿ ಶಕ್ತಿಯನ್ನು ಸೀಮಿತಗೊಳಿಸುತ್ತದೆ ಅದು ನಿರ್ದಿಷ್ಟವಾಗಿ ಲ್ಯಾಂಪ್‌ನಲ್ಲಿ ಹೊಂದಿಕೊಳ್ಳಲ್ಪಡುತ್ತದೆ ಅದು ಭೌತಿಕವಾಗಿ ಅಸ್ತಿತ್ವದಲ್ಲಿರುವ ತಂತುವನ್ನು ಮತ್ತು ಸಾಂದ್ರ ಪ್ರತಿದೀಪಕ ವಿಧಗಳನ್ನು ಪರಸ್ಪರ ವಿನಿಮಯ ಮಾಡುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿ ಶಾಖದ ವಿಶಿಷ್ಟ ಗುಣಗಳ ಸುಧಾರಣೆಯಲ್ಲಿ ಅವಶ್ಯಕವಾಗಿದೆ. ಹೆಚ್ಚಿನ-ಶಕ್ತಿಯ ಎಲ್‌ಇಡಿಗಳ ಶಾಖದ ಆಡಳಿತವು ಬೆಳಕಿನ ಉಪಕರಣಗಳನ್ನು ರಚಿಸುವಲ್ಲಿನ ಒಂದು ಅತಿ ಮುಖ್ಯ ಸಂಗತಿಯಾಗಿದೆ.

ಘನ-ರೂಪದ ಬೆಳಕು ವ್ಯವಸ್ಥೆಯ ಉತ್ಪನ್ನಗಳ ದೀರ್ಘಾವಧಿಯು, ಹೆಚ್ಚಿನ ಸಾಮಾನ್ಯ ಪ್ರಕಾಶಮಾನ ಬಲ್ಬ್‌ಗಳ 50 ಪಟ್ಟು ಹೆಚ್ಚಿರುತ್ತದೆ ಎಂದು ಭಾವಿಸಲಾಗಿದೆ, ಬಲ್ಬ್ ತಯಾರಕರಿಗೆ ದಿಕ್ಕು ತೋಚದಂತೆ ಮಾಡುತ್ತದೆ, ಅವರ ಪ್ರಸ್ತುತ ಗ್ರಾಹಕರು ನಿಯಮಿತ ವಿನಿಮಯವನ್ನು ಕೊಳ್ಳುತ್ತಾರೆ.[]

ಉಪಯೋಗಗಳು

[ಬದಲಾಯಿಸಿ]
ಈ ಗಾರ್ಡನ್ ದೀಪಗಳನ್ನು ಸೌರ ಶಕ್ತಿ ಹಿಡಿದಿಡಲು ಬಳಸಬಹುದು ಎಕೆಂದರೆ ಇದರ ಎಲ್‌ಇಡಿ ಕಡಿಮೆ ಸಾಮರ್ಥ್ಯ ಬಳಸಿಕೊಳ್ಳುತ್ತದೆ.

ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. Ivan Moreno, Maximino Avendaño-Alejo, and Rumen I. Tzonchev. "Designing light-emitting diode arrays for uniform near-field irradiance" (PDF). Applied Optics. 45 (10): 2265–2272. doi:10.1364/AO.45.002265. Archived from the original (PDF) on 2011-07-22. Retrieved 2010-05-28.{{cite journal}}: CS1 maint: multiple names: authors list (link)
  2. Ivan Moreno, Ulises Contreras (2007). "Color distribution from multicolor LED arrays". Optics Express. 15 (6): 3607. doi:10.1364/OE.15.003607. PMID 19532605.
  3. ಲೆಡ್ಡಿಂಗ್ ದ ವೇ, ನಿತ್ಯಾ ವರದರಾಜನ್,ಅಕ್ಟೋಬರ್ 5, 2009
  4. ೪.೦ ೪.೧ ೪.೨ ಎರಿಕ್.ಎ ತೌಬ್‌ರಿಂದ ಫ್ಯಾನ್ಸ್ ಆಫ್ ಎಲ್.ಇ.ಡಿಸ್ ಸೇ ದಿಸ್ ಬಲ್ಬ್ಸ್ ಟೈಮ್ ಹ್ಯಾಸ್ ಕಮ್ ಪ್ರಕಟಣೆ: ಜುಲೈ 28, 2008 - ಎನ್‌ವೈ ಟೈಮ್ಸ್
  5. ೫.೦ ೫.೧ Taub, Eric (2009-09-24). "Build a Better Bulb for a $10 Million Prize". New York Times. Retrieved 2010-02-06. {{cite news}}: Unknown parameter |coauthor= ignored (|author= suggested) (help)
  6. "GeoBulb Cool White Lab Report" (PDF). Archived from the original (PDF) on 2011-07-11. Retrieved 2010-05-28.
  7. Broydo Vestel, Leora (2009-05-06). "Racing to Build a Better Light Bulb". New York Times. Retrieved 2010-02-06.
  8. Woody, Todd (2009-10-02). "Energy-efficient LED bulbs to light U.S. homes". Los Angeles Times. Retrieved 2010-02-06.
  9. ಹೈಡ್ರಾಲಕ್ಸ್-4 ರಿಪೊರ್ಟೇಡ್ ಬೈ ಎಂಗಾಜೆಟ್
  10. Keefe, T.J. (2007). "The Nature of Light". Archived from the original on 2012-04-23. Retrieved 2009-09-10.
  11. ವಿದ್ಯುತ್ ದೀಪಗಳ ಸಣ್ಣ ಇತಿಹಾಸ , ದ ಇನ್ಕ್ಯಾಂಡೆಸೆಂಟ್ ಲ್ಯಾಪ್, 1900 ರಿಂದ 1920
  12. ಪ್ರೊಗ್ರೆಸ್ ಅಲರ್ಟ್ - 2010, ಯುಎಸ್ ಶಕ್ತಿ ವಿಭಾಗ
  13. "ಟ್ರಾನ್‌ಫಾರ್ಮಿಂಗ್ ದ ಲೈಟಿಂಗ್ ಲ್ಯಾಂಡ್‌ಸ್ಕೇಪ್". Archived from the original on 2010-07-22. Retrieved 2010-05-28.
  14. ಅಮೆರಿಕನ್ ನ್ಯಾಷನಲ್ ಸ್ಟಾಂಡರ್ಡ್ ಫಾರ್ ಸ್ಪೇಸಿಫಿಕೇಶನ್ ಫಾರ್ ದ ಕ್ರೊಮಾಟಿಸಿಟಿ ಆಫ್ ಸಾಲಿಡ್-ಸ್ಟೇಟ್ ಲೈಟಿಂಗ್ (ಎಸ್‌ಎಸ್‌ಎಲ್(ಪ್ರೊಡಕ್ಟ್ಸ್
  15. ಗ್ರೇಟ್ ಬ್ರೈಟ್ ಹೋಪ್ ಟು ಎಂಡ್ ಬ್ಯಾಟಾಲ್ ಆಫ್ ದ ಲೈಟ್ ಬಲ್ಬ್ಸ್, ದ ಡೇಲಿ ಮೇಲ್,ಜನವರಿ 29, 2009


ಹೆಚ್ಚಿನ ಮಾಹಿತಿಗಾಗಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:ArtificialLightSources