ಎಲೆ ಮಲ್ಲಪ್ಪ ಶೆಟ್ಟಿ
ರಾವ್ ಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟಿ | |
---|---|
ಎಲೆ ಮಲ್ಲಪ್ಪ ಶೆಟ್ಟಿಯವರ ಭಾವಚಿತ್ರ | |
ವೈಯಕ್ತಿಕ ಮಾಹಿತಿ | |
ಜನನ | ಮರಿ ಮಲ್ಲಪ್ಪ ಶೆಟ್ಟಿ 1815 ಬೆಂಗಳೂರು, ಮೈಸೂರು ಸಾಮ್ರಾಜ್ಯ (ಈಗ ಕರ್ನಾಟಕ) |
ಮರಣ | 1887 ಬೆಂಗಳೂರು |
ರಾಷ್ಟ್ರೀಯತೆ | Indian |
ಸಂಗಾತಿ(ಗಳು) | ಶರ್ವಣಮ್ಮ (ಅವರ ಸಾವಿನವರೆಗೂ) ಹೊನ್ನಮ್ಮ |
ಮಕ್ಕಳು | 2 |
ವೃತ್ತಿ | ಲೋಕೋಪಕಾರಿ, ವೀಳ್ಯದೆಲೆ ವ್ಯಾಪಾರಿ ಮತ್ತು ರೈತ |
ರಾವ್ ಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟಿ (ಇಂಗ್ಲೀಷ್: Yele Mallappa Shetty), (1815-1887), ಒಬ್ಬ ಭಾರತೀಯ ವ್ಯಾಪಾರಿ ಮತ್ತು ಲೋಕೋಪಕಾರಿಯಾಗಿದ್ದರು. 19 ನೇ ಶತಮಾನದ ಉತ್ತರಾರ್ಧದಲ್ಲಿ ಬೆಂಗಳೂರು ಪ್ರದೇಶವು ಭೀಕರ ಬರಗಾಲದಿಂದ ಬಳಲುತ್ತಿದ್ದಾಗ, ಅವರು ಮಳೆನೀರನ್ನು ಶೇಕರಣೆ ಮಾಡಲು ಹಾಗೂ ಜನರಿಗೆ ಸಹಾಯ ಮಾಡಲು ದೊಡ್ಡ ಕೆರೆಯ ನಿರ್ಮಾಣಕ್ಕೆ ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ಉದಾರವಾಗಿ ದಾನ ಮಾಡಿದರು, ಈಗ ಅದನ್ನು ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಎಂದು ಕರೆಯಲಾಗುತ್ತದೆ.[೧] ಇವರು 1880 ರಲ್ಲಿ ಬೆಂಗಳೂರಿನ ಮೊದಲ ಹೆರಿಗೆ ಆಸ್ಪತ್ರೆಯನ್ನು ಸ್ಥಾಪಿಸಲು ಹಣಕಾಸಿನ ನೆರವು ನೀಡಿದರು.[೨][೩]
ಅವರ ಲೋಕೋಪಕಾರಕ್ಕಾಗಿ ಬ್ರಿಟಿಷ್ ಸರ್ಕಾರವು "ರಾವ್ ಬಹದ್ದೂರ್" ಎಂಬ ಬಿರುದನ್ನು ನೀಡಿ ಗೌರವಿಸಲಾಗಿತ್ತು.
ಆರಂಭಿಕ ದಿನಗಳು
[ಬದಲಾಯಿಸಿ]ಎಲೆ ಮಲ್ಲಪ್ಪ ಶೆಟ್ಟರು 17 37ರ ಯುವ ಸಂವತ್ಸರದ ಏಕಾದಶಿ ದಿನ ಮರಿ ಸಿದ್ದಪ್ಪ ಶೆಟ್ಟರು ಮತ್ತು ಚೆನ್ನಮ್ಮ ಇವರ ಮೂರನೇ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು ಇವರ ಪಾರಂಪರಿಕ ವೃತ್ತಿ ಅಡಿಕೆ ಮತ್ತು ಎಲೆ ಮಾರಾಟ. ಮರಿ ಸಿದ್ದಪ್ಪ ಶೆಟ್ಟರು ಅಬಕಾರಿ ಕಂಟ್ರಾಕ್ಟರ್ ಸಹ ಆಗಿದ್ದರು
ಬಳ್ಳಾರಿಯ ಶ್ರೀ ಸಕ್ಕರೆ ಕರಡಪ್ಪನವರು ಮತ್ತು ಜಗಜ್ಯೋತಿ ಬಸವಣ್ಣನವರು, ಎಲೆ ಮಲ್ಲಪ್ಪ ಶೆಟ್ಟರ ಬಾಲ್ಯದಿಂದಲೇ ಆದರ್ಶವಾಗಿದ್ದರು. [೪]
ಶೆಟ್ಟಿಯವರು ಶರ್ವಣಮ್ಮ ಅವರನ್ನು ವಿವಾಹವಾದರು, ಅವರಿಗೆ ನಂಜಮ್ಮ ಮತ್ತು ನಿರ್ವಾಣಮ್ಮ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಪತ್ನಿ ಶರ್ವಣಮ್ಮ ತೀರಿಕೊಂಡ ನಂತರ ಹೊನ್ನಮ್ಮ ಎಂಬುವರನ್ನು ಮದುವೆಯಾಗಿದ್ದರು.
ಸಾಮಾಜಿಕ ಕಾರ್ಯಗಳು
[ಬದಲಾಯಿಸಿ]1876-1878ರಲ್ಲಿ ಧಾತು ಈಶ್ವರದ ದೊಡ್ಡ ಬರಗಾಲ ಎಂದೇ ಕುಖ್ಯಾತವಾದ ಮಹಾ ಕ್ಷಾಮ ಆವರಿಸಿತು. ಆ ಸಮಯದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಭೀಕರ ಬರಗಾಲದಿಂದ ಬಳಲಿದವು. ಅಲ್ಲಿ ಅಸ್ತಿತ್ವದಲ್ಲಿರುವ ಕೆರೆಗಳು ಮತ್ತು ಕೊಳಗಳು ಬತ್ತಿಹೋದವು. ಬ್ರಿಟಿಷ್ ಸರ್ಕಾರ ಮತ್ತು ಮೈಸೂರು ಸಾಮ್ರಾಜ್ಯವು ಸವಾಲನ್ನು ಎದುರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿತು. ತೊಂದರೆಗೊಳಗಾದ ನಿವಾಸಿಗಳಿಗೆ ನೀರು ಒದಗಿಸುವ ಸಲುವಾಗಿ, ಎಲೆ ಮಲ್ಲಪ್ಪ ಶೆಟ್ಟಿಯವರು ತಮ್ಮ ಸಂಪತ್ತಿನ ಬಹುಭಾಗವನ್ನು
- ಎರಡು ವರ್ಷಗಳ ಕಾಲ, ದಿನನಿತ್ಯವೂ ಅನ್ನ ಮತ್ತು ಗಂಜಿ ವ್ಯವಸ್ಥೆ
- ಬೃಹತ್ ಕೆರೆಯ ನಿರ್ಮಾಣ
ಇವಕ್ಕೆ ಉದಾರವಾಗಿ ದಾನ ಮಾಡಿದರು, ಈಗ ಅದನ್ನು ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಎಂದು ಕರೆಯಲಾಗುತ್ತದೆ.[೧] ತೀವ್ರ ಬರದ ಪರಿಣಾಮ ಸ್ಥಳೀಯ ರೈತರು ಆಹಾರದ ಕೊರತೆಯಿಂದ ಬಳಲುತ್ತಿದ್ದರು, ಮಲ್ಲಪ್ಪ ಶೆಟ್ಟರು ಅಂತಹ ಜನರನ್ನು ದಿನಗೂಲಿ ಕಾರ್ಮಿಕರನ್ನಾಗಿ ಬಳಸಿಕೊಂಡು ಆರ್ಥಿಕ ನೆರವು ನೀಡುವ ಮೂಲಕ, ಅಂದಿನ ವೀರನ ಹಳ್ಳಿ ಬಳಿ ಕೆರೆಯನ್ನು ನಿರ್ಮಿಸಿದರು. ಅಂದಿನ ವೀರನಹಳ್ಳಿ ಇಂದು ಆವಲಹಳ್ಳಿ ಎಂದು ಕರೆಯಲ್ಪಡುತ್ತದೆ. 1940 ರಿಂದ 2 ದಶಕಗಳ ಕಾಲ ಬೆಂಗಳೂರು ನಗರ ಕೆ ಈ ಕೆರೆಯಿಂದಲೇ ನೀರು ಸರಬರಾಜು ಮಾಡಲಾಗುತ್ತಿತ್ತು. 260 ಎಕರೆ ವಿಸ್ತೀರ್ಣದ, ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಬೆಂಗಳೂರಿನ ದೊಡ್ಡ ಕೆರೆಗಳಲ್ಲಿ ಒಂದಾಗಿದೆ.[೫].[೬][೪] ಕೆರೆ ನಿರ್ಮಾಣದ ಮುಕ್ತಾಯದ ನಂತರ, 1877ರ ಜನವರಿ ಒಂದರಂದು ಬ್ರಿಟಿಷ್ ಸರ್ಕಾರ ಮಲ್ಲಪ್ಪ ಶೆಟ್ಟರಿಗೆ ರಾವ್ ಬಹದ್ದೂರ್ ಎಂಬ ಬಿರುದನ್ನು ನೀಡಿ ಪೌರ ಸನ್ಮಾನ ಮಾಡಿತು.
1880 ರಲ್ಲಿ, ಹೆರಿಗೆಯ ಸಮಯದಲ್ಲಿ ಕೆರೆಯ ನಿರ್ಮಾಣ ಕೆಲಸಗಾರರೊಬ್ಬರು ಮರಣ ಹೊಂದಿದ ನಂತರ, ಬೆಂಗಳೂರಿನಲ್ಲಿ ಹೆರಿಗೆ ಆಸ್ಪತ್ರೆ ಇಲ್ಲದ ಕಾಲದಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರಿಗೆ ಸಹಾಯ ಮಾಡಲು ಸುಸಜ್ಜಿತ ಹೆರಿಗೆ ಆಸ್ಪತ್ರೆಯನ್ನು ಸ್ಥಾಪಿಸಲು ಶೆಟ್ಟರು ನಿರ್ಧರಿಸಿದರು. ಎಲೆ ಮಲ್ಲಪ್ಪ ಶೆಟ್ಟಿಯವರ 35,000 ಆರ್ಥಿಕ ನೆರವಿನ ಮೂಲಕ ಬೆಂಗಳೂರಿನ ಮೊದಲ ಸರ್ಕಾರಿ ಹೆರಿಗೆ ಆಸ್ಪತ್ರೆಯನ್ನು 90 ಹಾಸಿಗೆಗಳೊಂದಿಗೆ ಸಿನೋಟಾಫ್ ರಸ್ತೆಯಲ್ಲಿ (ನೃಪತುಂಗ ರಸ್ತೆಯಲ್ಲಿರುವ ಈಗಿನ ಐಜಿಪಿ ಕಚೇರಿ ಸ್ಥಳದಲ್ಲಿ) ಸ್ಥಾಪಿಸಲಾಯಿತು. ಈ ಆಸ್ಪತ್ರೆಯನ್ನು ಎಲೆ ಮಲ್ಲಪ್ಪ ಶೆಟ್ಟಿ ಹೆರಿಗೆ ಆಸ್ಪತ್ರೆ ಎಂದು ಕರೆಯಲಾಗುತ್ತಿತ್ತು, 1935 ರಲ್ಲಿ ಈ ಆಸ್ಪತ್ರೆಯನ್ನು ಸ್ಥಳಾಂತರಿಸಲಾಯಿತು ಮತ್ತು ಪ್ರಸ್ತುತ ವಾಣಿ ವಿಲಾಸ ಆಸ್ಪತ್ರೆಯೊಂದಿಗೆ ವಿಲೀನಗೊಳಿಸಲಾಯಿತು.[೨][೩]
ಮಲ್ಲಪ್ಪ ಶೆಟ್ಟರು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ 40,000 ವೆಚ್ಚದಲ್ಲಿ ಧರ್ಮಛತ್ರ ಮತ್ತು ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯ ಇವುಗಳನ್ನು ಕಟ್ಟಿಸಿದರು. ಇಂದಿಗೂ ಈ ಎರಡು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಮಲ್ಲಪ್ಪ ಶೆಟ್ಟರು ಸಾಹಿತ್ಯ ಪ್ರೇಮಿ ಆಗಿದ್ದರು. ಗಮಕಲಾವಿದ ಮತ್ತು ಅಭಿನವ ಕಾಳಿದಾಸ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಸವಪ್ಪ ಶಾಸ್ತ್ರಿಗಳನ್ನು ಪ್ರೋತ್ಸಾಹಿಸಿ ಅವರಿಂದ ಕಾವ್ಯ ವಾಚನ ಕಮ್ಮಟಗಳನ್ನು ನಡೆಸುತ್ತಿದ್ದರು.
ಬೆಂಗಳೂರಿನ ಪುರಾತನ ದೇಗುಲಗಳಾದ ಬಸವನಗುಡಿಯ ದೊಡ್ಡ ಬಸವೇಶ್ವರ ಗವಿಪುರಂ ಗುಡ್ಡ ಹಳ್ಳಿಯ ಗವಿ ಗಂಗಾಧರೇಶ್ವರ, ಪ್ರಳಯಕಾಲ ರುದ್ರೇಶ್ವರ ದೇವಾಲಯ ಬೆಳ್ಳಿ ಬಸವೇಶ್ವರ ದೇವಸ್ಥಾನ ಹಲಸೂರು ಸೋಮೇಶ್ವರ ದೇವಸ್ಥಾನ ಈ ಈ ದೇವಾಲಯಗಳು ಜೀವನೋದ್ಧಾರಕ್ಕೆ ಧನ ಸಹಾಯ ಮಾಡಿದರು.
ಶೆಟ್ಟರು ೧೭೯೮ರಿಂದ ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇಗುಲದ ಜೀರ್ಣೋದ್ಧಾರಕ್ಕೆ ನೀಡಿ ಗರ್ಭಗುಡಿ ಮತ್ತು ಕಲ್ಯಾಣಿಯನ್ನು ಕಟ್ಟಿಸಿದರು ದೇವಾಲಯದ ಮುಂಭಾಗದಲ್ಲಿ ಕಲ್ಲಿನ ಸೋಪಾನಗಳಿಂದ ಅಲಂಕೃತವಾದ ಕೊಳದಲ್ಲಿ ಪ್ರಶಭ ಮೂರ್ತಿಯನ್ನು ಸ್ಥಾಪಿಸಿದರು ಈ ವೃಷಭದ ಬಾಯಿಂದ ತೀರ್ಥವು ಹೊರಬರುವುದನ್ನು ಇಂದಿಗೂ ಕಾಣಬಹುದು[7]
ಕಾಡು ಮಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರಕಾರಿಯವು ಮಲ್ಲಪ್ಪ ಶೆಟ್ಟರ ನಿಧನ ನಂತರ ಸಂಪೂರ್ಣವಾಯಿತು
ಗೌರವಗಳು
[ಬದಲಾಯಿಸಿ]- ಆಗಿನ ಬ್ರಿಟೀಷ್ ರಾಣಿ ವಿಕ್ಟೋರಿಯಾ, ೧೮೭೭ ಜನವರಿ ಒಂದರಂದು, ಎಲೆ ಮಲ್ಲಪ್ಪ ಶೆಟ್ಟಿಯವರಿಗೆ "ರಾವ್ ಬಹದ್ದೂರ್" ಎಂಬ ಬಿರುದುನ್ನು ನೀಡಿದರು.
- ಬಂಗಾರಪೇಟೆಯ (ಆಗಿನ ಬೌರಿಂಗ್‌ಪೇಟೆ) ರಸ್ತೆಯೊಂದಕ್ಕೆ ಎಲೆ ಮಲ್ಲಪ್ಪ ಶೆಟ್ಟಿಯವರ ಹೆಸರಿಡಲಾಗಿತ್ತು.[೭]
ನಿಧನ
[ಬದಲಾಯಿಸಿ]ಎಲೆ ಮಲ್ಲಪ್ಪ ಶೆಟ್ಟಿಯವರು 1887 ರ ಸರ್ವಜಿತ ಸಂವತ್ಸರದ ಜೇಷ್ಠ ತದಿಗೆ ದಿನ, ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ಪುಸ್ತಕ: Random Harvest : Biographical Sketches (Memoir 60) - ಬೆಂಗಳೂರು ಪುಟ್ಟಯ್ಯ ರಾಧಾಕೃಷ್ಣ, ಪ್ರಕಟಿಸಿದವರು: ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, 2005, ISBN:9788185867656.ಪುಟ-155
- ಮೈಸೂರು ಗೆಜೆಟಿಯರ್ Vol-v (1930) - ಸಿ.ಹಯವದನ ರಾವ್,1930
- ಉದಾರಚರಿತರು ಉದಾತ್ತಪ್ರಸಂಗಗಳು - ಟಿ ವಿ ವೆಂಕಟಾಚಲ ಶಾಸ್ತ್ರಿ, 2013, ASIN:B0733GTWX6
- ‘ಎಲೆ ಮಲ್ಲಪ್ಪ ಶೆಟ್ಟರ’ ಜೀವನ ಚರಿತ್ರೆ- ಜಯ ರಾಜಶೇಖರ್
- ↑ ೧.೦ ೧.೧ "The spirit of sharing". The Hindu (in Indian English). rainwaterclub.org. 2013-03-22. Retrieved 2023-02-18.
{{cite news}}
: CS1 maint: others (link) - ↑ ೨.೦ ೨.೧ "The health heritage of Bangalore". deccanherald (in Indian English). Michael Patrao. 2013-09-03. Retrieved 2023-02-18.
{{cite news}}
: CS1 maint: others (link) - ↑ ೩.೦ ೩.೧ "Medical and public health services" (PDF). gazetteer.karnataka.gov.in (in Indian English). C. Hayavadana Rao. 1930-01-01. Archived from the original (PDF) on 2023-02-18. Retrieved 2023-02-18.
{{cite news}}
: CS1 maint: others (link) - ↑ ೪.೦ ೪.೧ "Karnataka CM Basavaraj Bommai's budget pledge ups hope of lake revival near KR Puram". timesofindia.indiatimes.com (in Indian English). MRINALINI BHAT. 2022-03-26. Retrieved 2023-02-18.
{{cite news}}
: CS1 maint: others (link) - ↑ "Yele Mallappa Shetty Lake on Google Maps". Google Maps. Retrieved 15 March 2020.
- ↑ "Resident Rendezvoyeur: A large heart". bangaloremirror.indiatimes.com (in Indian English). Aliyeh Rizvi. 2015-02-08. Retrieved 2023-02-18.
{{cite news}}
: CS1 maint: others (link) - ↑ "Home to all faiths". thehindu.com (in Indian English). K. CHANDRAMOULI. 2022-08-29. Archived from the original on 2007-09-27. Retrieved 2023-02-18.
{{cite news}}
: CS1 maint: others (link)