ಎಲಿಸಾ ಲಿಯೋನಿಡಾ ಜಾಮ್‌ಫೈರ್‌ಸ್ಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಎಲಿಸಾ ಲಿಯೋನಿಡಾ ಜಾಮ್‌ಫೈರ್‌ಸ್ಕು
Elisa Leonida Zamfirescu
Elisa Leonida Zamfirescu.jpg
ಜಾಮ್‌ಫೈರ್‌ಸ್ಕು ರವರ ಚಿತ್ರ
ಜನನ
ಎಲಿಸಾ ಲಿಯೊನಿಡಾ

(೧೮೮೭-೧೧-೧೦)೧೦ ನವೆಂಬರ್ ೧೮೮೭
ಮರಣNovember 25, 1973(1973-11-25) (aged 86)
ರಾಷ್ಟ್ರೀಯತೆರೊಮೇನಿಯನ್
ಉದ್ಯೋಗEngineer
Engineering career
Disciplineಎಂಜಿನಿಯರಿಂಗ್

ಎಲಿಸಾ ಲಿಯೋನಿಡಾ ಜಾಮ್‌ಫೈರ್‌ಸ್ಕು(ನವೆಂಬರ್ 10, 1887 - ನವೆಂಬರ್ 25, 1973) ವಿಶ್ವದ ಮೊದಲ ಮಹಿಳಾ ಎಂಜಿನಿಯರುಗಳಲ್ಲಿ ಒಬ್ಬರು.[೧][೨]

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಜಾಮ್‌ಫೈರ್‌ಸ್ಕು ಅವರು ನವೆಂಬರ್ 10, 1887 ರಂದು ರೊಮೇನಿಯಾದ ಗ್ಯಾಲಿಟಿನಲ್ಲಿ ಜನಿಸಿದರು. ಆಕೆಯ ತಂದೆ, ಅಟಾನೇಸ್ ಲಿಯೊನಿಡಾ, ವೃತ್ತಿ ಅಧಿಕಾರಿಯಾಗಿದ್ದರು.ಅವರ ತಾಯಿ ಮಾಟಿಲ್ಡಾ ಗಿಲ್, ಫ್ರೆಂಚ್ ಮೂಲದ ಎಂಜಿನಿಯರ್ನ ಮಗಳು. ಅವಳ ಸೋದರ ಎಂಜಿನಿಯರ್ ಡಿಮಿಟ್ರಿ ಲಿಯೊನಿಡಾ.[೩]

ವಿಜ್ಞಾನದಲ್ಲಿ ಮಹಿಳೆಯರ ವಿರುದ್ಧದ ಪೂರ್ವಾಗ್ರಹದಿಂದಾಗಿ, ಬ್ರಿಡ್ಜ್ಸ್ ಅಂಡ್ ರೋಡ್ಸ್ ಇನ್ ಬುಕಾರೆಸ್ಟ್ ನಲ್ಲಿ ತಿರಸ್ಕರಿಸಲಾಯಿತು. 1909 ರಲ್ಲಿ ಅವರು ಚಾರ್ಲ್ಟನ್‌ಬರ್ಗ್‌ನ ಟೆಕ್ನಾಲಜಿಯ ರಾಯಲ್ ಅಕಾಡೆಮಿಯಲ್ಲಿ ಅಂಗೀಕರಿಸಲ್ಪಟ್ಟರು.ಅವರು 1912 ರಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದರು. ಜಾಮ್‌ಫೈರ್‌ಸ್ಕು ಅವರು ವಿಶ್ವದ ಮೊದಲ ಮಹಿಳಾ ಎಂಜಿನಿಯರ್ ಆಗಿದ್ದಾರೆ ಎಂದು ಹೇಳಲಾಗಿದೆ, ಆದರೆ ಐರಿಶ್ ಎಂಜಿನಿಯರ್ ಆಲಿಸ್ ಪೆರ್ರಿ 1906 ರಲ್ಲಿ ಜಾಮ್‌ಫೈರ್‌ಸ್ಕುರಿಗಿಂತ ಆರು ವರ್ಷಗಳ ಮೊದಲು ಪದವಿ ಪಡೆದರು.[೪]

ವೃತ್ತಿಜೀವನ[ಬದಲಾಯಿಸಿ]

ರೊಮೇನಿಯಾಕ್ಕೆ ಮರಳಿದ ಜಾಮ್‌ಫೈರ್‌ಸ್ಕು ಅವರು ಜಿಯಾಲಾಜಿಕಲ್ ಇನ್ಸ್ಟಿಟ್ಯೂಟ್ ಆಫ್ ರೊಮೇನಿಯಾದಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ವಿಶ್ವ ಸಮರ I ರ ಸಮಯದಲ್ಲಿ, ಅವರು ರೆಡ್‌ ಕ್ರಾಸ್ ಸೇರಿದರು.ಈ ಸಮಯದಲ್ಲಿ, ಅವರು ರಸಾಯನಶಾಸ್ತ್ರಜ್ಞ ಕಾನ್ಸ್ಟಾಂಟಿನ್ ಜಾಮ್‌ಫೈರ್‌ಸ್ಕು ಅವರನ್ನು ಭೇಟಿಯಾದರು ಮತ್ತು ವಿವಾಹವಾದರು. ಯುದ್ಧದ ನಂತರ, ಜಾಮ್‌ಫೈರ್‌ಸ್ಕು ಅವರು ಭೂವೈಜ್ಞಾನಿಕ ಇನ್ಸ್ಟಿಟ್ಯೂಟ್ಗೆ ಹಿಂದಿರುಗಿದರು. ಅವರು ಹಲವಾರು ಭೂವಿಜ್ಞಾನ ಪ್ರಯೋಗಗಳನ್ನು ನಡೆಸಿದರು ಮತ್ತು ಕಲ್ಲಿದ್ದಲು, ಜೇಡಿಪದರಗಲ್ಲು, ನೈಸರ್ಗಿಕ ಅನಿಲ, ಕ್ರೋಮಿಯಂ, ಬಾಕ್ಸೈಟ್ ಮತ್ತು ತಾಮ್ರದ ಹೊಸ ಸಂಪನ್ಮೂಲಗಳನ್ನು ಗುರುತಿಸಿದ ಕೆಲವು ಕ್ಷೇತ್ರ ಅಧ್ಯಯನಗಳಲ್ಲಿ ಭಾಗವಹಿಸಿದರು. ಜಾಮ್‌ಫೈರ್‌ಸ್ಕು ಅವರು ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರವನ್ನು ಕಲಿಸಿದರು.

ನಂತರದ ಜೀವನ ಮತ್ತು ಸಾವು[ಬದಲಾಯಿಸಿ]

ಜಾಮ್‌ಫೈರ್‌ಸ್ಕು ತಮ್ಮ 75 ವಯಸ್ಸಿನಲ್ಲಿ 1963 ರಲ್ಲಿ ನಿವೃತ್ತರಾದರು. ನವೆಂಬರ್ 25, 1973 ರಂದು 86 ನೇ ವಯಸ್ಸಿನಲ್ಲಿ ನಿಧನರಾದರು.

ಗೌರವಗಳು ಮತ್ತು ಪ್ರಶಸ್ತಿಗಳು[ಬದಲಾಯಿಸಿ]

ರೊಮೇನಿಯನ್ ಇಂಜಿನಿಯರ್ಸ್ ಜನರಲ್ ಅಸೋಸಿಯೇಷನ್ ನ ಮೊದಲ ಮಹಿಳಾ ಸದಸ್ಯರಾಗಿದ್ದರು . ಬುಕಾರೆಸ್ಟ್‌ನ ಸೆಕ್ಟರ್ 1 ರಲ್ಲಿರುವ ರಸ್ತೆಗೆ ಅವರ ಹೆಸರನ್ನು ಇಡಲಾಗಿದೆ . ನವೆಂಬರ್ 10, 2018 ರಂದು ಗೂಗಲ್, ಡೂಡಲ್ ಪ್ರದರ್ಶಿಸಿ ಗೌರವಿಸಿದೆ.[೫][೬]

ಹೆಚ್ಚುವರಿ ಮೂಲಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "The first woman-engineer in Europe". True Romania. Retrieved 10 June 2013.
  2. Marcu, George. "ROMÂNCE CARE NE FAC CINSTE: ELIZA LEONIDA-ZAMFIRESCU". Archived from the original on 13 ಅಕ್ಟೋಬರ್ 2018. Retrieved 10 June 2013. Check date values in: |archive-date= (help)
  3. Cociuban, Anca. "Elisa Leonida Zamfirescu – First female engineer in the world". Amazing Romanians. Archived from the original on 8 February 2015. Retrieved 8 February 2015. Unknown parameter |deadurl= ignored (help)
  4. Cociuban, Anca. "Elisa Leonida Zamfirescu – First female engineer in the world". Amazing Romanians. Archived from the original on 8 February 2015. Retrieved 8 February 2015. Unknown parameter |deadurl= ignored (help)
  5. "ELISA LEONIDA ZAMFIRESCU: 5 THINGS YOU SHOULD KNOW ABOUT ONE OF THE WORLD'S FIRST FEMALE ENGINEERS ೧0 ನವೆಂಬರ್ 2018". pp. www.independent.co.uk.
  6. "Google Doodle Celebrates Elisa Leonida Zamfirescu's 131st Birthday". www.ndtv.com 10 ನವೆಂಬರ್ 2018.