ಎಲಿಜ಼ಾ ಎಸ್ ಕ್ರಾವೆನ್ ಗ್ರೀನ್
ಇವರು ಒಬ್ಬ ಇಂಗ್ಲಿಷ್ ಕವಿಯತ್ರಿ, ನಟಿ ಮತ್ತು ಬರಹಗಾರರೌ. ಇವರು ೧೮೦೩ ರಿ೦ದ ೧೮೬೬ವರೆಗೆ ಬದುಕಿದರು.[೧]
ಜೀವನ
[ಬದಲಾಯಿಸಿ]ಎಲಿಜ಼ಾ ೧೦ ಡಿಸೆಂಬರ್ ೧೮೦೩ ರಂದು ಲೀಡ್ಸ್ನ ಕಿರ್ಕ್ ಗೇಟ್ನಲ್ಲಿ ಜನಿಸಿದರು.ಇವರು ಎಲಿಜ಼ಬೆತ್ ಮತ್ತು ಜಾನ್ ಕ್ರೇವೆನಿನ ಮೊದಲ ಮಗಳು. ತ೦ದೆ ಲೀಡ್ಸಿನ ಒಬ್ಬ ಹರಾಜುಗಾರರಾಗಿದ್ದರಿ೦ದ, ಅವರು ಬಹಳ ಉತ್ಸಾಹದಿ೦ದ ವ್ಯಾಪಾರದಲ್ಲಿ ತೊಡಗಿಸಿಕೊ೦ಡರು. ಅದೇ ಸಮಯ, ಸುಶಿಕ್ಷಿತಳಾದ ಅವರ ತಾಯಿ, ಒ೦ದು ಶಾಲೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದರು. ಆದರೆ ಎಲಿಜಾ ಜೀವನದ ಈ ಆರಾಮದಾಯಕ ಆರಂಭವು ಆಘಾತದಲ್ಲಿ ಕೊನೆಗೊಂಡಿತು. ೧೮೦೯ರಲ್ಲಿ, ಅವರ ತ೦ದೆ ಸಾಲದ ಕಾರಣ ತಮ್ಮ ಕುಟು೦ಬವನ್ನು ಬಿಟ್ಟು ಓಡಿ ಹೋದರು. ಎಲಿಜ಼ಾ ತನ್ನ ಯೌವ್ವನವನ್ನು ತನ್ನ ತ೦ಗಿ, ಅನ್ನ್ ಜೊತೆ ಕಲೆದರು. ಇಬ್ಬರು ಹುಡುಗಿಯರು, ತಮ್ಮ ಯೌವ್ವನದಲ್ಲೇ ಡೌಗ್ಲಾಸಿನ ಪ್ರಸಿದ್ದ ನಟಿಯರಾದರು. ತರುವಾಯ, ಅವರು ಮ್ಯಾಂಚೆರಲ್ಲಿಸ್ಟರ್ನಲ್ಲಿ ವಾಸಿಸುತ್ತಿದ್ದರು, ಆದರೆ ಅವರು ಲೀಡ್ಸ್ಗೆ ಮರಳಿ, ಅಲ್ಲಿ ಅವರು ಅನೇಕ ವರ್ಷಗಳ ಕಾಲ ವಾಸಿಸುತ್ತಿದ್ದರು. ಅವರು ೧೮೩೦ರಲ್ಲಿ ವಿವಾಹವಾದರು, ಆ ಸಮಯದಲ್ಲಿ ಆಕೆಯ ಕವನವನ್ನು "ಎಲಿಜ಼ಾ ಕ್ರಾವೆನ್" ಎಂದು ಪ್ರಕಟಿಸಲು ಪ್ರಾರಂಭಿಸಿದರು, ಆದರೆ ಅದನ್ನು "ಎಲಿಜಾ ಕ್ರಾವೆನ್ ಗ್ರೀನ್" ಎಂದು ಪ್ರಕಟಿಸಿದರು.[೨]
ಕೃತಿಗಳು
[ಬದಲಾಯಿಸಿ]ಅವರ ಮೊದಲ ಪುಸ್ತಕ 'ಎ ಲೆಜೆಂಡ್ ಆಫ್ ಮೋನಾ, ಎ ಟೇಲ್, ಇನ್ ಟೂ ಕಾಂಟೊಸ್,' ಡಗ್ಲಸ್ ೧೮೨೫, ಮತ್ತು ಅವರ ಎರಡನೆಯ ಮತ್ತು ಕೊನೆಯದಾದ, 'ಸೀ ವೀಡ್ಸ್ ಅ೦ಡ್ ಹೆಲ್ತ್ ಫ್ಲವರ್, ಅಥವಾ ಮೋನಳ ನೆನಪುಗಳು'.ನಿಯತಕಾಲಿಕ ಪತ್ರಿಕೆಗೆ ತಮ್ಮ ಕಾವ್ಯ ಮತ್ತು ಗದ್ಯ ರೇಖಾಚಿತ್ರಗಳನ್ನು ಆಗಾಗ್ಗೆ ನೀಡಿದ್ದರು. ಅವರು 'ಫೋನಿಕ್ಸ್,' ೧೮೨೮ರ೦ದು, ಮತ್ತು 'ಫಾಲ್ಕನ್,' ೧೮೩೧ರ೦ದು, ಮ್ಯಾಂಚೆಸ್ಟರ್ ನಿಯತಕಾಲಿಕೆ ಮತ್ತು ೧೮೪೧ರಲ್ಲಿ 'ಓಡ್ಫೆಲೋಸ್ ' ನಿಯತಕಾಲಿಕೆಗೆ ಬರೆದಿದ್ದರು;ಅದಲ್ಲದೆ 'ಲೀಡ್ಸ್ ಇಂಟೆಲಿಜೆನ್ಸರ್', 'ಲೆ ಫೋಲೆಟ್', 'ಹಾಗ್ಸ್ ಇನ್ಸ್ಟ್ರಕ್ಟರ್' ಮತ್ತು 'ಚೇಂಬರ್ಸ್ ಜರ್ನಲ್' ಗಾಗಿಯು ತಮ್ಮ ಕೃತಿಗಳನ್ನೂ ನೀಡಿದರು. ೧೮೪೨ ರಲ್ಲಿ ಮ್ಯಾಂಚೆಸ್ಟರ್ನಲ್ಲಿ ಪ್ರಕಟವಾದ 'ದಿ ಫೆಸ್ಟಿವ್ ವ್ರೆತ್' ಎಂಬ ಶೀರ್ಷಿಕೆಯ ಪದ್ಯಗಳನ್ನು ಬರೆದಿದ್ದರು .
೧೮೪೫ ರಲ್ಲಿ "ಇಲೆನ್ ವನ್ನಿನ್" ಕವಿತೆ ಬರೆದಿರುವುದಕ್ಕಾಗಿ ಇಂದು ಅವರು ಹೆಸರುವಾಸಿಯಾಗಿದ್ದರೆ. ಅದು "ಐಲ್ ಆಫ್ ಮ್ಯಾನ"ಗಾಗಿ "ರಾಷ್ಟ್ರಗೀತೆ" ಯನ್ನು ರೂಪಿಸುವುದು. ಅವಳ ಸಾವಿನ ಕೆಲವು ವರ್ಷಗಳ ಮುಂಚೆ ರಾಣಿಯ ಖಾಸಗಿ ಆದಾಯದಿ೦ದ ಅವರು ಉಡುಗೊರೆಗಳನ್ನು ಪಡೆದರು.
ಮರಣ
[ಬದಲಾಯಿಸಿ]ಅವರು ೧೧ ಮಾರ್ಚ್ ೧೮೬೬ ರಂದು ಲೀಡ್ಸ್ನಲ್ಲಿ ನಿಧನರಾದರು.