ವಿಷಯಕ್ಕೆ ಹೋಗು

ಎರೆಂತಮಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Eranthemum pulchellum
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
Eranthemum
ಪ್ರಜಾತಿ:
E. pulchellum
Binomial name
Eranthemum pulchellum
Synonyms

Eranthemum nervosum

ಎರೆಂತಮಮ್: ಅಕ್ಯಾಂತೇಸಿ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಪುಷ್ಪ. ಉಷ್ಣ ಪ್ರದೇಶಗಳಲ್ಲಿ ಬೆಳೆಯುತ್ತದೆ. ಎರೆಂತಮಮ್ ಎಂದರೆ ಸುಂದರ ಪುಷ್ಪವೆಂದೇ ಅರ್ಥ. ಈ ಸಸ್ಯವನ್ನು ಕುಂಡ, ಅಂಚು, ಕಲ್ಲೇರಿ ಸಸ್ಯಗಳಾಗಿ ಬೆಳೆಸುತ್ತಾರೆ. ಎಲೆಗಳು ಪ್ರಭೇದಗಳಿಗೆ ಅನುಸಾರವಾಗಿ ಕೆಂಪು, ಹಸಿರಿನ ಮೇಲೆ ಬಿಳುಪು ಹಳದಿ ಮತ್ತು ಇತರ ಬಣ್ಣದ ಮಚ್ಚೆಗಳಿಂದ ಕೂಡಿದ್ದು ಬಹಳ ಸುಂದರವಾಗಿ ಕಾಣುತ್ತವೆ.

ಲಕ್ಷಣಗಳು[ಬದಲಾಯಿಸಿ]

ಎಲೆಯ ಆಕಾರ ಕರನೆಯಂತೆ. ನಾಳರಚನೆ ಗರಿರೂಪದ್ದು. ಅಂಚು ನಯ ಇಲ್ಲವೆ ಗರಗಸದ ಹಲ್ಲಿನಂತೆ. ಹೂಗೊಂಚಲು ಸ್ಪೈಕ್ ಮಾದರಿಯದು. ಹೂಬಣ್ಣ ನೀಲಿ ಇಲ್ಲವೆ ಕಿತ್ತಳೆ. ಹೂದಳಗಳು ಕೂಡಿದೆ. ಹೂವಿನ ಆಕಾರ ಕೊಳವೆಯಂತೆ. ತುದಿ ವಿಶಾಲವಾಗಿ ಹರಡಿ ಐದು ಭಾಗಗಳಾಗಿ ಒಡೆದಿದೆ. ಪುಷ್ಪಪತ್ರ ಉಪದಳಗಳಿಂದ ಆವೃತ. ಹೂದಳದ ಮೇಲೆ ಅಂಟಿರುವ ಎರಡು ಕೇಸರಗಳಿವೆ. ದೀರ್ಘ ವೃತ್ತಾಕಾರ ಅಥವಾ ಆಯತಾಕಾರದ ಮೇಲು ಅಂಡಾಶಯ ನಾಲ್ಕು ಬೀಜವಿರುವ ಕ್ಯಾಪ್ಸೂಲ್ ಮಾದರಿಯದು. ಕಾಂಡದ ತುಂಡುಗಳಿಂದ ಹೊಸ ಗಿಡಗಳನ್ನು ಪಡೆಯಬಹುದು. ಜೌಗಿಲ್ಲದ ಒಳ್ಳೆಯ ನೆಲದಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಅರ್ಧ ನೆರಳಿದ್ದರಂತೂ ಇನ್ನೂ ಹಸನು.

ಪ್ರಭೇದಗಳು[ಬದಲಾಯಿಸಿ]

  • ಎರೆಂತಮಮ್ ಸಿನವಾರಿನಮ್ ಪ್ರಭೇದ ಸುಮಾರು 2 ಅಡಿ ಎತ್ತರ ಬೆಳೆಯುತ್ತದೆ. ಮೂತ್ರಪಿಂಡಾಕಾರದ ಎಲೆಗಳು ಅರಿ ಹಸಿರು ಬಣ್ಣವಾಗಿದ್ದು ಹಳದಿ ಬಣ್ಣದ ನಾಳಗಳಿಂದ ಕೂಡಿವೆ.
  • ಎರೆಂತಮಮ್ ಎಲ್ಡೊರ್ಯಾಡೊ ಪ್ರಭೇದವೂ 2 ಅಡಿ ಎತ್ತರ ಬೆಳೆಯುತ್ತದೆ. ಹಳದಿ ಮಚ್ಚೆ ಮತ್ತು ಹಸಿರು ನಾಳಗಳಿರುವ ಎಲೆಗಳು ಬಹಳ ಸುಂದರವಾಗಿವೆ.
  • ಎರೆಂತಮಮ್ ಗೊಲ್ಡಿಯಾನ್ ಪ್ರಭೇದ ಸುಮಾರು 3 ಅಡಿ ಎತ್ತರ ಬೆಳೆಯುವುದರಿಂದ ಅಲಂಕಾರ ಬೇಲಿಗಳಲ್ಲಿ ಬೆಳೆಸಲು ಯೋಗ್ಯವಾಗಿದೆ.
  • ಎರೆಂತಮಮ್ ನೊಬಿಲಿಸ್ ಪ್ರಭೇದ 3-4 ಅಡಿ ಎತ್ತರ ಬೆಳೆಯುತ್ತದೆ. ಅತಿ ಹಸಿರಾದ ಎಲೆಗಳಲ್ಲಿ ಹಳದಿ ಬಣ್ಣದ ನಾಳಗಳಿರುವುದರಿಂದ ಬಹಳ ಸುಂದರವಾಗಿ ಕಾಣುತ್ತದೆ.
  • ಎರೆಂತಮಮ್ ವರ್ ಸಿಕೊಲೊರ್ ಪ್ರಭೇದದ ಎಲೆಗಳಲ್ಲಿ ಬಿಳಿಯ ಮತ್ತು ಹಸಿರು ಬಣ್ಣದ ಮಚ್ಚೆಗಳಿವೆ.
  • ಎರೆಂತಮಮ್ ಅಟ್ರೊಪರ್ಫ್ಯೂರಿಯಮ್ ಪ್ರಭೇದದ ಎಲೆಗಳ ಮೇಲೆ ಕಂಚು ಅಥವಾ ಕಡುಗೆಂಪು ಬಣ್ಣದ ಮಚ್ಚೆಗಳಿವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • "Eranthemum pulchellum". Integrated Taxonomic Information System.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: