ವಿಷಯಕ್ಕೆ ಹೋಗು

ಎಮ್.ಆರ್ ಶ್ರೀನಿವಾಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಮ್.ಆರ್ ಶ್ರೀನಿವಾಸನ್

[ಬದಲಾಯಿಸಿ]

ಮಾಲೂರು ರಾಮಸ್ವಾಮಿ ಶ್ರೀನಿವಾಸನ್ ಅವರು ಪರಮಾಣು ವಿಜ್ಣಾನಿ ಹಾಗು ಪ್ರಸಿದ್ಧ ಎಂಜಿನಿಯರ್.ಇವರು ಭಾರತದ ಪರಮಾಣು ವಿದ್ಯುತ್ ಯೋಜನೆ, ಹಾಗು ಪಿ.ಹೆಛ್.ವಿ.ವಿ.ಆರ್.ಅನ್ನು ಅಭಿವೃದ್ಧಿಗೊಳಿಸುವುದರಲ್ಲಿ ಬಹಳ ಉನ್ನತ ಪಾತ್ರವನ್ನು ವಹಿಸಿದರು. ಇವರು ಪದ್ಮ ವಿಭೂಷಣ ಪುರಸ್ಕಾರವನ್ನು ಪಡೆದ ಮಹಾನ್ ವಿಜ್ಣಾನಿ.

M R Srinivasan

ಬಾಲ್ಯ ಜೀವನ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ಶ್ರೀನಿವಾಸನ್‌ರವರು ಬೆಂಗಳೂರಿನಲ್ಲಿ ೧೯೩೦ರಲ್ಲಿ ಜನಿಸಿದರು. ಇವರ ಬಾಲ್ಯ ವಿದ್ಯಾಭ್ಯಾಸವನ್ನು ಮೈಸೂರಿನ ಇಂಟರ್ ಮೀಡಿಯೆಟ್ ಕಾಲೇಜುನಲ್ಲಿ ಮುಗಿಸಿ ಅದ ನಂತರ ವಿಜ್ಣಾನವನ್ನೇ ಅವರ ಮುಂದಿನ ವಿಷಯವನ್ನಾಗಿಟ್ಟುಕೊಂಡು ತಮ್ಮ ಓದನ್ನು ಕೊಣೆಸಾಗಿಸಿದರು. ಇವರು ವಿಜ್ಣಾನದ ಜೊತೆಗೆ ಆಂಗ್ಲ ಮತ್ತು ಸಂಸ್ಕೃತ ಭಾಷೆಗಳನ್ನೂ ಅಭ್ಯಸಿಸುತ್ತಿದ್ದರು.ಭೌತಶಾಸ್ತ್ರವೇ ಇವರ ಪ್ರಿಯ ವಿಷಯವಾಗಿದ್ದು ಇವರು ಸರ್.ಎಮ್.ವಿಸ್ವೇಶ್ವರಯ್ಯ ಸ್ಥಾಪಿಸಿದ ಯು.ವಿ.ಸಿ.ಯಿ.ಎಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡರು.ಈ ಸಂಸ್ಥೆಯಿಂದಲೇ ಇವರಿಗೆ ಯಾಂತ್ರಿಕ ಎಂಜಿನಿಯರಿಂಗ್ ಪದವಿ ಸಿಕ್ಕಿತು. ಅದರ ತರುವಾಯ ೧೯೫೨ರಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದು, ಕೆನೆಡದ ಎಂ.ಸೀ.ಗಿಲ್.ವಿಶ್ವವಿದ್ಯಾಲಯದಿಂದ ಪೀ.ಹೆಚ್.ಡೀ.ಪದವಿಪಡೆದು ಉತ್ತೀರ್ಣರಾದರು.ಅದನಂತರ ಅನಿಲ ಟರ್ಬೈನ್ ತಂತ್ರಜ್ಣಾನ ರಂಗವೇ ಇವರ ವಿಶೇಷ ರಂಗವಾಗಿ ರೂಪುಗೊಂಡಿತು.

ವೃತ್ತಿ ಜೀವನ

[ಬದಲಾಯಿಸಿ]

ಎಮ್.ಆರ್ ಶ್ರೀನಿವಾಸನ್ ರವರು ೧೯೫೫ರಲ್ಲಿ ಪರಮಾಣು ಶಕ್ತಿ ಇಲಾಖೆಯನ್ನು ಸೇರಿದರು.ಅಲ್ಲಿ ಅವರು ಡಾಕ್ಟರ್.ಹೋಮೀ ಬಾಬ ಅವರ ಜೊತೆಗೆ ಭಾರತದ ಮೊದಲ ಪರಮಾಣು ಸಂಶೋಧನಾ ರಿಯಾಕ್ಟರ್ ಆದ "ಅಪ್ಸರ" ಬಗೆಗೆ,ಅದರ ನಿರ್ಮಾಣದ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದರು.೧೯೫೯ರಲ್ಲಿ ಎಮ್.ಆರ್ ಶ್ರೀನಿವಾಸನ್ ಭಾರತದ ಮೊದಲ ಪರಮಾಣು ವಿದ್ಯುತ್ ಸ್ಥಾವರದ ನಿರ್ಮಾಣದಲ್ಲಿ ಪ್ರಧಾನ ಪ್ರಾಜೆಕ್ಟ್ ಇಂಜಿನಿಯರಾಗಿ ಆಯ್ಕೆಯಾದರು.ತರುವಾಯ ೧೯೬೭ರಲ್ಲಿ ಇವರು ಮದರಾಸಿನ ಪರಮಾಣು ವಿದ್ಯುತ್ ಸ್ಥಾವರಕ್ಕೆ ಮುಖ್ಯ ಪ್ರಾಜೆಕ್ಟ್ ಇಂಜಿನಿಯರಾಗಿ ಆಯ್ಕೆಯಾದರು.

೧೯೭೪ರಲ್ಲಿ ವಿದ್ಯುತ್ ಯೋಜನೆಗಳ ಎಂಜಿನಿಯರಿಂಗ್ ವಿಭಾಗ,ಡಿ.ಯೆ.ಯಿ.ದ ನಿರ್ದೇಶಕರಾಗಿ ನೇಮಕವಾದರು ನಂತರ ೧೯೮೪ರಲ್ಲಿ ಭಾರತದ ಪರಮಾಣು ಪವರ್ ಬೋರ್ಡಿನ ಅಧ್ಯಕ್ಷರಾಗಿ ನೇಮಕವಾದರು. ಇಂತಹ ಸಾಮರ್ಥ್ಯಗಳನ್ನು ಒಳಗೊಂಡಿದ್ದ ಇವರು ಭಾರತದ ಎಲ್ಲಾ ಪರಮಾಣು ವಿದ್ಯುತ್ ಯೋಜನೆಗಳ ಯೋಜನೆ , ನಿರ್ವಹಣೆ, ಮತ್ತು ಕಾರ್ಯಾಚರಣೆ ನಡೆಸುವ ಉನ್ನತ ವಿಜ್ಣಾನಿಯಾಗಿ ನೇಮಕವಾದರು.

Crimean Atomic Energy Station

೧೯೮೭ರಲ್ಲಿ ಇವರು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾಗಿ ಮತ್ತು ಅಣುಶಕ್ತಿ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕವಾದರು.ಎಲ್ಲಾ ವಿಷಯಗಳ ಜವಾಬ್ದಾರಿಯನ್ನು ತೆಗೆದುಕೊಂಡು ಇವರು ಭಾರತದ ಪರಮಾಣು ಯೋಜನೆಯನ್ನೂ ಸಹ ನೋಡಿಕೊಂಡರು. ೧೯೮೭ರಲ್ಲಿ ಎಮ್.ಆರ್ ಶ್ರೀನಿವಾಸನ್ ರವರ ಸ್ಥಾಪಕ ಅಧ್ಯಕ್ಷತೆಯಿಂದ ಭಾರತದ ಮೊದಲ ಪರಮಾಣು ಪವರ್ ಕಾರ್ಪೊರೇಷನನ್ನು ಸ್ಥಾಪಿಸಲಾಯಿತು. ಇವರ ಜವಾಬ್ದಾರಿಯಿಂದ ೧೮ ಪರಮಾಣು ವಿದ್ಯುತ್ ಘಟಕಗಳು ಈಗ ಪ್ರಸ್ತುತವಾಗಿ ಕಾರ್ಯ ನಿರ್ವಹಿಸುತ್ತಿವೆ.ಇವರು ಪರಮಾಣು ಶಕ್ತಿಗೆ ನೀಡಿದ ಕೊಡುಗೆ ಅಪಾರವಾದುದ್ದು.

ಇನ್ನಿತರ ಜವಾಬ್ದಾರಿಗಳು

[ಬದಲಾಯಿಸಿ]

ಎಮ್.ಆರ್ ಶ್ರೀನಿವಾಸನ್ ರವರು ೧೯೯೦ ರಿಂದ ೧೯೯೨ವರೆಗೆ "ವಿಯೆನ್ನಾ" ದ ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿದಲ್ಲಿ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ಇಂಧನ ಮತ್ತು ವಿಜ್ಞಾನ ಬಂಡವಾಳದ ಜೊತೆ ಜೊತೆಗೆ ಇವರು ೧೯೯೬ ರಿಂದ ೧೯೯೮ರವರೆಗೆ ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಇವರು ೨೦೦೨ರಿಂದ ೨೦೦೮ರ ವರಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹಾಬೋರ್ಡಿನ ಸದಸ್ಯರಾಗಿ ಕೆಲಸ ಮಾಡಿದರು. "ವಿಶ್ವದ ವಿಭಕ್ತ ಆಪರೇಟರ್ಸ್ ಅಸೋಸಿಯೇಷನ್"ದಲ್ಲಿ ಸ್ಥಾಪಕ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.ಇವರು ೨೦೦೨ ರಿಂದ ಕರ್ನಾಟಕದ ಉನ್ನತ ಶಿಕ್ಷಣದ ಕಾರ್ಯಪಡೆಗೆ ಅಧ್ಯಕ್ಷರಾಗಿ ನೇಮಕವಾದವರು.

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]
  1. ಪದ್ಮ ವಿಭೂಷನ್ (೨೦೧೫)
  2. ಪದ್ಮ ಭೂಷನ್(೧೯೯೦)
  3. ಪದ್ಮ ಶ್ರೀ(೧೯೮೪)
  4. ಸಂಜೈ ಗಾಂಧಿ ಬಹುಮಾನ.
  5. ಓಂ ಪ್ರಕಾಶ್ ಭಾಸಿನ್ ಬಹುಮಾನ.
  6. ಹೋಮೀ ಬಾಬದ ಚಿನ್ನದ ಪದಕ.
  7. ಭರತದ ಪರಮಾಣು ಸಮಾಜದಿಂದ ಹೋಮೀ ಬಾಬ ಜೀವನ ಪುರಸ್ಕಾರ.
  8. ಎಂಜಿನಿಯರ್ಗಳ ಶಿಕ್ಷಣಸಂಸ್ಥೆಯಿಂದ ಅತ್ಯುತ್ತಮ ಡಿಸೈನರ್ ಪ್ರಶಸ್ತಿ .
  9. ನೀರಾವರಿ ಮತ್ತು ವಿದ್ಯುತ್ ಮಂಡಳಿಯಿಂದ ಡೈಮಂಡ್ ಜುಬಿಲಿ ಪ್ರಶಸ್ತಿ.

ವಯಕ್ತಿಕ ಜೀವನ

[ಬದಲಾಯಿಸಿ]

ಎಮ್.ಆರ್ ಶ್ರೀನಿವಾಸನ್ ಪ್ರಕೃತಿ ಸಂರಕ್ಷಕಿ ಮತ್ತು ವನ್ಯಜೀವಿಗಳ ಕಾರ್ಯಕರ್ತಳಾದ ಶ್ರೀಮತಿ.ಗೀತಾ ಶ್ರೀನಿವಾಸನ್ ರವರನ್ನು ವಿವಾಹವಾಡಿದರು. ಶ್ರೀಮತೀಯವರು ನೀಲಗಿರಿಯ ವನ್ಯಜೀವಿಗಳ ಮತ್ತು ಪರಿಸರ ಅಸೋಸಿಯೇಷನ್ನ ಅಧ್ಯಕ್ಷೆ, ಹಾಗು ಸೀ.ಪಿ.ರಾಮಸ್ವಾಮಿಯರ ಮಮ್ಮಗಳು ಸಹ ಆಗಿದ್ದಳು.ಈ ದಂಪತಿಗೆ ಎರಡು ಮಕ್ಕಳು ರಘುವೀರ್ ಶ್ರೀನಿವಾಸನ್ ಮತ್ತು ಶಾರದಾ ಶ್ರೀನಿವಾಸನ್.ಇವರು ೧೯೯೦ರಲ್ಲಿ ನಿಧನವಾದರು. ಭಾರತದ ಪರಮಾಣು ಯೋಜನೆಯಲ್ಲಿ ಇವರಿನ ಪ್ರಾಮಾಣಿಕ ಸತ್ಯಗಳು ಕಠಿಣ ವಾಸ್ತವಗಳು ವ್ಯಕ್ತವಾದವು. ಫ್ಯೂಕಿಶಿಮದ ಮುಂದಿನ ಪರಮಾಣು ಶಕ್ತಿಯ ಬಗೆಗೆ ಇವರು ಪ್ರಸ್ತುತಿಯನ್ನು ನೀಡಬೇಕಾದವರು. ಇವರ ಪ್ರತಿ ಭಾಷಣೆಯೂ ಪರಮಾಣು ಶಕ್ತಿಯದ ಮೇಲೇಯೇ ,ಇವರ ಜೀವನ ಪೂರ್ಥಿಯೂ ಪರಮಾನು ಶಕ್ತಿಯನ್ನು ಉಳಿಸುವುದರ ಕಡೆಯೇ ಸಾಗಿತ್ತು. ಅವರು ತಮ್ಮ ಜೀವನ ಪೂರ್ತಿಯೂ ಪರಮಾಣು ಶಕ್ತಿಯ ಕಡೆಗೆಯೇ ಕಾರ್ಯ ನಿರ್ವಹಿಸುತ್ತಿದ್ದರು.

ಹೊರಗಿನ ಸಂಪರ್ಕ

[ಬದಲಾಯಿಸಿ]