ಎನ್. ಅಪರ್ಣಾ

ವಿಕಿಪೀಡಿಯ ಇಂದ
Jump to navigation Jump to search

ಅಚ್ಚಕನ್ನಡವನ್ನು ಸ್ವಚ್ಛವಾಗಿ ಆಡುವ ಕಲಾವಿದೆಯೆಂದು ಅಪರ್ಣಾರು ಗುರುತಿಸಲ್ಪಟ್ಟಿದ್ದಾರೆ. ರೇಡಿಯೋ ಮತ್ತು ಕಿರುತೆರೆಯ ಕಲಾವಿದೆಯಾಗಿ ತಮ್ಮ ವೃತ್ತಿಜೀವನ ಆರಂಭವಾಯಿತು. ಕನ್ನಡ ಟೆಲಿವಿಶನ್ ನಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ನಿರೂಪಕಿಯಾಗಿ ಎನ್. ಅಪರ್ಣಾ ಬಹಳ ಯಶಸ್ವಿಯಾಗಿದ್ದಾರೆ. ಕನ್ನಡ ಟೆಲಿವಿಶನ್ ನ ಎಳವೆಯ ದಿವಸಗಳಿಂದ ಇಂದಿನವರೆಗೆ ಕಾರ್ಯಕ್ರಮಗಳನ್ನು ನಿರೂಪಿಸುತ್ತಾ ಕಿರುತೆರೆಯನ್ನು ಬೆಳೆಸಿ ತಾವೂ ಬೆಳೆದ ವ್ಯಕ್ತಿ. ನಿರೂಪಣೆಗೆ ಒಂದು ಬದ್ಧತೆ ಇದೆ. ಅದೊಂದು ಕಲೆ. ನಿರೂಪಣೆಯ ಸಮಯದಲ್ಲಿ ಕಂಠವನ್ನು ಸರಿಯಾಗಿ ಅಳವಡಿಸಿಕೊಳ್ಳಬೇಕು. ಕಲಾವಿದರ ಬಗ್ಗೆ ವಿಪರೀತ ಹೊಗಳಿಕೆ ಸಲ್ಲದು. ಸಭಾ ಮರ್ಯಾದೆ ಕಾಪಾಡಬೇಕು ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಆಧುನಿಕ ಆದರೆ ಸಭ್ಯ ಉಡುಪು ಧರಿಸುವುದು ಅತಿಮುಖ್ಯ..

ಪರಿವಾರ[ಬದಲಾಯಿಸಿ]

ತಂದೆ, ಕೆ.ಎಸ್.ನಾರಾಯಣ ಸ್ವಾಮಿ, ಪತ್ರಕರ್ತರು. ಪತಿ, ನಾಗರಾಜ ವಸ್ತಾರೆ. ಬಾಲ್ಯದಿಂದ ಸರಳ, ಸಹಜ ಕನ್ನಡ ಭಾಷಾ ಶೈಲಿಯ ಪತ್ರಿಕೆಗಳನ್ನು ಓದುತ್ತಾ ಬಂದಿದ್ದಾರೆ.

ನಿರೂಪಕಿಯಾಗಿ[ಬದಲಾಯಿಸಿ]

ನಿರೂಪಣೆ ಆವರಿಗೆ ಬಹು ಪ್ರಿಯ. ಅದೊಂದು ಕಲೆ . ಕೆಲವು ಅರ್ಹತೆಗಳು ನಿರೂಪಕರಿಗೆ ಬೇಕು. ಔಚಿತ್ಯಪ್ರಜ್ಞೆ, ಸಮಾರಂಭದ ಮಹತ್ವ,, ಅತಿಥಿಗಳಿಗೆ ಹೆಚ್ಚು ಮಾತಾಡಲು ಅವಕಾಶಕೊಡುವ ಜಾಣ್ಮೆ, ಹಾಗೂ ಅರ್ನಿವಾರ್ಯತೆ, ವಿಷಯಗಳು ಪುನರಾವರ್ತನೆಯಾಗದ ಹಾಗೆ ನಿಗವಹಿಸುವುದು ಇತ್ಯಾದಿ. ಆಗಲೇ ಸಭಿಕರು ಚೆನ್ನಾಗಿ ಗ್ರಹಿಸಿರುವ ಮಾತನ್ನು ಪದೇ ಪದೇ ಒತ್ತಿಹೇಳುವುದನ್ನು ಮಾಡಬಾರದು. ನಿರಂತರ ಅಧ್ಯಯನ ಶೀಲತೆ, ಅಗತ್ಯ...ಪ್ರಥಮ ಪುರುಷ ಬಳಕೆಯನ್ನು ಜನ ಇಷ್ಟಪಡುವುದಿಲ್ಲ.

ಅಭಿನಯದಲ್ಲಿ ತಮ್ಮ ಛಾಪು ಕೊಟ್ಟಿದ್ದಾರೆ[ಬದಲಾಯಿಸಿ]

ಇದುವರೆಗೆ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಟಿವಿಯೇತರ (ದೇಖಾವೆ )ಶೋಗಳನ್ನು ನಿರ್ವಹಿಸಿದ ಪ್ರತಿಭಾವಂತೆ. ಸನ್. ೨೦೦೪ ರಲ್ಲಿ ಮತ್ತೆ ಅಭಿನಯದೆಡೆಗೆ ಗಮನ ಹರಿಸಿ ಜನಪ್ರಿಯ ಧಾರಾವಾಹಿ 'ಮುಕ್ತ ಮುಕ್ತ'ದ ಮನೆಮಾತಾದರು. ಕಣಗಾಲ್ ಪುಟ್ಟಣ್ಣರವರ ಚಿತ್ರ 'ಮಸಣದ ಹೂ' ಎಂಬ ಕನ್ನಡ ಚಲನಚಿತ್ರದ ಮೂಲಕವೇ ನಾಯಕಿಯ ಪಾತ್ರದಲ್ಲಿ ಅವರು ರಂಗಪ್ರವೇಶ ಮಾಡಿದರು. ಚಿಕ್ಕ ತೆರೆ, ದೊಡ್ಡ ತೆರೆಗಳಲ್ಲಿ ಅವುಗಳದೇ ಆದ ಆದ್ಯತೆಗಳಿವೆ. ಸೃಜನಶೀಲತೆಯ ಅನಿವಾರ್ಯತೆ ಎರಡೂ ಕ್ಷೇತ್ರಗಳಲ್ಲಿ ಅನಿವಾರ್ಯ.ಧಾರಾವಾಹಿ,'ಮುಕ್ತ ಮುಕ್ತ'ದ ಶೀಲಾ ಪ್ರಸಾದ್, 'ಪ್ರೀತಿ ಇಲ್ಲದ ಮೇಲೆ' , 'ಪಲ್ಲವಿ', (ಅನಂತ್ ನಾಗ್ ಮಗಳು) ಝೀವಾಹಿನಿಯ 'ಜೋಗುಳ'ದ ಪ್ರಧಾನ ಭೂಮಿಕೆಯಲ್ಲಿ ಪದ್ಮ ಳಾಗಿ, 'ಶುಭಮಂಗಳ'ದ ನಮ್ರತಾ ಸೇರಿದಂತೆ, ಹಲವಾರು ಪಾತ್ರಗಳಲ್ಲಿ ಜನಪ್ರಿಯತೆ ಗಳಿಸಿದ್ದಾರೆ.

ಬಿಗ್ ಬಾಸ್ ನಲ್ಲಿ ಭಾಗವಹಿಸಿದರು[ಬದಲಾಯಿಸಿ]

'ಬಿಗ್ ಬಾಸ್ 'ನಲ್ಲಿ ಎನ್. ಅಪರ್ಣಾರವರು, ಟಿ.ವಿ.ಧಾರಾವಾಹಿ ಕ್ಷೇತ್ರವನ್ನು ಪ್ರತಿನಿಧಿಸಿದರು. ಅನುಶ್ರೀ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಿರೂಪಕಿಯರು ಇದ್ದರು. ಸಿನಿಮಾ ಗ್ಲಾಮರ್ ಲೋಕದ ವನಿತೆಯರು ಹೆಚ್ಚಾಗಿದ್ದರು.

ಅಂಕಣಕಾರ್ತಿಯಾಗಿ[ಬದಲಾಯಿಸಿ]

  • 'ಕನ್ನಡ ಪ್ರಭ ಪತ್ರಿಕೆಯ ಸಾಪ್ತಾಹಿಕದ 'ಸಖೀಗೀತದ ಅಂಕಣ ಕಾರ್ತಿ'

ಪ್ರಶಸ್ತಿಗಳು[ಬದಲಾಯಿಸಿ]

  • 'ಜೋಗುಳಾ ಧಾರಾವಾಹಿ'ಯ ಪ್ರಧಾನ ಭೂಮಿಕೆಯಲ್ಲಿ ಪದ್ಮಳಾಗಿ ನಟಿಸಿದ ಎನ್. ಅಪರ್ಣಾರಿಗೆ ಪ್ರಶಸ್ತಿ ದೊರೆಯಿತು.
  • 'ಪ್ರೀತಿಯಿಲ್ಲದ ಮೇಲೆ ಧಾರಾವಾಹಿ'ಯ ಪಲ್ಲವಿ ಪಾತ್ರಕ್ಕೆ ಶ್ರೇಷ್ಠ ನಟಿ ಪ್ರಶಸ್ತಿ ದೊರೆಯಿತು.
  • ಝೀ ವಾಹಿನಿಯಿಂದ ನಿರೂಪಣೆಗಾಗಿ ಅತ್ಯುತ್ತಮ ಪ್ರಶಸ್ತಿ
  • ಕಿರುತೆರೆಯ ಮಾಧ್ಯಮದಲ್ಲಿ ಈವರೆಗೆ ಮಾಡಿದ ಕೆಲಸವನ್ನು ಗಮನಿಸಿ ಸರ್ವೋಚ್ಚ ಪ್ರಶಸ್ತಿ

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]