ಎನ್.ಶಂಕರಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎನ್.ಶಂಕರಯ್ಯ

ತಮಿಳುನಾಡು ವಿಧಾನಸಭೆ ಸದಸ್ಯ
ಅಧಿಕಾರ ಅವಧಿ
೧೯೬೭–೧೯೭೧
ಮತಕ್ಷೇತ್ರ ಮಧುರೈ ಪಶ್ಚಿಮ
ಅಧಿಕಾರ ಅವಧಿ
೧೯೭೭–೧೯೮೦; ೧೯೮೦–೧೯೮೪
ಮತಕ್ಷೇತ್ರ ಮಧುರೈ ಪೂರ್ವ

ತಮಿಳುನಾಡು ರಾಜ್ಯ ಸಮಿತಿಯ ಕಾರ್ಯದರ್ಶಿ ಸಿಪಿಐ(ಎಂ)
ಅಧಿಕಾರ ಅವಧಿ
೧೯೯೫–೨೦೦೨
ಪೂರ್ವಾಧಿಕಾರಿ ಎ.ನಲ್ಲಶಿವನ್
ಉತ್ತರಾಧಿಕಾರಿ ಎನ್. ವರದರಾಜನ್
ವೈಯಕ್ತಿಕ ಮಾಹಿತಿ
ಜನನ (೧೯೨೧-೦೭-೧೫)೧೫ ಜುಲೈ ೧೯೨೧
ಕೋವಿಲ್ಪಟ್ಟಿ, ಮದ್ರಾಸ್ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ
(ಈಗ ತಮಿಳುನಾಡು,

ಭಾರತ)

ಮರಣ 15 November 2023(2023-11-15) (aged 102)
ಚೆನ್ನೈ, ತಮಿಳುನಾಡು, ಭಾರತ
ರಾಜಕೀಯ ಪಕ್ಷ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) (೧೯೬೪–೨೦೨೩)
ಇತರೆ ರಾಜಕೀಯ
ಸಂಲಗ್ನತೆಗಳು
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (೧೯೪೭–೧೯೬೪)

ಎನ್. ಶಂಕರಯ್ಯ (೧೫ ಜುಲೈ ೧೯೨೧ - ೧೫ ನವೆಂಬರ್ ೨೦೨೩)ಒಬ್ಬ ಭಾರತೀಯ ಕಮ್ಯುನಿಸ್ಟ್ ಪಕ್ಷದ ರಾಜಕಾರಣಿ ಮತ್ತು ಸ್ವಾತಂತ್ರ್ಯ ಹೋರಾಟಗಾರ.

ಆರಂಭಿಕ ಜೀವನ[ಬದಲಾಯಿಸಿ]

ಮೆಟ್ರಿಕ್ಯುಲೇಷನ್ ನಂತರ, ಶಂಕರಯ್ಯ ಮಧುರೈನ ಅಮೇರಿಕನ್ ಕಾಲೇಜಿನಿಂದ ೧೯೩೭ರಲ್ಲಿ ಇತಿಹಾಸವನ್ನು ಅಧ್ಯಯನ ಮಾಡಿದರು. ಅವರು ಮದ್ರಾಸ್ ವಿದ್ಯಾರ್ಥಿಗಳ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು ಮತ್ತು ಮಧುರೈ ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಈ ಸಮಯದಲ್ಲಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ೧೯೪೧ ರಲ್ಲಿ ಅವರ ಅಂತಿಮ ವರ್ಷದ ಅಧ್ಯಯನದಲ್ಲಿ ಅವರನ್ನು ಮೊದಲು ಬಂಧಿಸಲಾಯಿತು. [೧]

ಅವರ ರಾಜಕೀಯ ಜೀವನವು ಏಳು ದಶಕಗಳವರೆಗೆ ಮುಂದುವರಿದಿತ್ತು ಮತ್ತು ಸುಮಾರು ಎಂಟು ವರ್ಷಗಳ ಜೈಲುವಾಸವನ್ನು ಒಳಗೊಂಡಿತ್ತು. ಆಗಸ್ಟ್ ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನಾ ದಿನ ಬಿಡುಗಡೆಯಾದ ಅನೇಕ ಕಮ್ಯುನಿಸ್ಟರಲ್ಲಿ ಒಬ್ಬರಾಗಿದ್ದ ಶಂಕರಯ್ಯ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಮ್ಯುನಿಸ್ಟ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರು. [೨] ೧೧ ಎಪ್ರಿಲ್ ೧೯೬೪ ರಂದು ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನ್ಯಾಷನಲ್ ಕೌನ್ಸಿಲ್ ಸಭೆಯಿಂದ ಹೊರನಡೆದ ೩೨ ರಾಷ್ಟ್ರೀಯ ಕೌನ್ಸಿಲ್ ಸದಸ್ಯರಲ್ಲಿ ಅವರೂ ಒಬ್ಬರಾಗಿದ್ದರು.[೩]

ನಂತರ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)ದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದರು. ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)ದ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು. ಅವರು ಅಖಿಲ ಭಾರತ ಕಿಸಾನ್ ಸಭಾದ ನಾಯಕತ್ವದ ಭಾಗವಾಗಿದ್ದರು. ಅವರು ೧೯೯೫ ರಿಂದ ೨೦೦೨ ರವರೆಗೆ ಸಿಪಿಐ(ಎಂ) ತಮಿಳುನಾಡು ರಾಜ್ಯ ಕಾರ್ಯದರ್ಶಿಯಾಗಿದ್ದರು. [೪] [೫]

ಶಂಕರಯ್ಯ ಅವರು ೧೯೬೭ ರಲ್ಲಿ ಮಧುರೈ ಪಶ್ಚಿಮ ಕ್ಷೇತ್ರದಿಂದ ಮತ್ತು ೧೯೭೭ ಮತ್ತು ೧೯೮೦ ರಲ್ಲಿ ಮಧುರೈ ಪೂರ್ವ ಕ್ಷೇತ್ರದಿಂದ ಎರಡು ಬಾರಿ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾದರು. [೬] ಅವರು ೧೯೬೨ ಮತ್ತು ೧೯೫೭ ರ ಚುನಾವಣೆಗಳಲ್ಲಿ ಮಧುರೈ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿ ವಿಫಲರಾದರು. [೭]

ವೈಯಕ್ತಿಕ ಜೀವನ ಮತ್ತು ಸಾವು[ಬದಲಾಯಿಸಿ]

ಶಂಕರಯ್ಯ ಅವರು ನವಮಣಿ ಅವರನ್ನು ವಿವಾಹವಾದರು. [೮] ಅವರ ಇಬ್ಬರು ಪುತ್ರರಾದ ಚಂದ್ರಶೇಖರ್ ಮತ್ತು ನರಸಿಮ್ಮನ್ ಪಕ್ಷದ ನಾಯಕರಾಗಿದ್ದರು. ಜುಲೈ ೨೦೨೧ ರಲ್ಲಿ ಅವರು ೧೦೦ ನೇ ವರ್ಷಕ್ಕೆ ಕಾಲಿಟ್ಟರು. [೯]

ಶಂಕರಯ್ಯ ಅವರು ೧೫ ನವೆಂಬರ್ ೨೦೨೩ ರಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ೧೦೨ನೇ ವಯಸ್ಸಿನಲ್ಲಿ ನಿಧನರಾದರು.[೧೦] [೧೧] ಅವರು ಜ್ವರ ಮತ್ತು ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯುತ್ತಿದ್ದರು. [೧೨] [೧೩]

ಉಲ್ಲೇಖಗಳು[ಬದಲಾಯಿಸಿ]

  1. Narayan, Pushpa; Mayilvaganan, V (15 November 2023). "Sankaraiah, CPM veteran and freedom fighter, dies in Chennai". The Times of India. Retrieved 16 November 2023.
  2. Kolappan, B. (2014-04-19). "At 93, Sankaraiah still an 'untiring lion'". The Hindu (in Indian English). ISSN 0971-751X. Retrieved 2020-07-15.
  3. Bose, Shanti Shekar (2005). A Brief Note on the Contents of Documents of the Communist Movement in India. Kolkata: National Book Agency. p. 37.
  4. "Veteran communist Sankaraiah turns 100 today". The Hindu. 2021-07-15. Retrieved 2021-07-17.
  5. "A Day with Comrade Sankaraiah". NewsClick (in ಇಂಗ್ಲಿಷ್). 2020-07-15. Retrieved 2020-07-15.
  6. "Archived copy" (PDF). Archived from the original (PDF) on 13 July 2018. Retrieved 21 November 2009.{{cite web}}: CS1 maint: archived copy as title (link)
  7. "Sankaraiah envisages role for India in ending Sri Lankan crisis". The Hindu. 10 January 2006. Archived from the original on 5 November 2012.
  8. "A Day with Comrade Sankaraiah". NewsClick (in ಇಂಗ್ಲಿಷ್). 2020-07-15. Retrieved 2020-07-15."A Day with Comrade Sankaraiah". NewsClick. 15 July 2020. Retrieved 15 July 2020.
  9. "Veteran communist Sankaraiah turns 100 today". The Hindu. 2021-07-15. Retrieved 2021-07-17.
  10. "Sankaraiah, CPM veteran and freedom fighter, dies in Chennai". Pushpa Narayan & V Mayilvaganan. The Times of India. 15 November 2023. Retrieved 16 November 2023.
  11. "RIP Sankaraiah: கம்யூனிஸ்ட் தலைவர் சங்கரய்யா காலமானார்! அவருக்கு வயது 102!". hindustantimes. 15 November 2023. Retrieved 15 November 2023.
  12. "സിപിഎമ്മിന്റെ സ്ഥാപകനേതാക്കളില്‍ ഒരാളായ എന്‍.ശങ്കരയ്യ അന്തരിച്ചു". www.manoramaonline.com (in ಮಲಯಾಳಂ). Retrieved 2023-11-15.
  13. "Veteran CPM leader N Sankaraiah passes away". OnManorama. Retrieved 2023-11-15.

ಬಾಹ್ಯ ಕೊಂಡಿಗಳು[ಬದಲಾಯಿಸಿ]