ಎಡ್ವರ್ಡ್ ಎಮರ್‌ಸನ್ ಬರ್ನಾರ್ಡ್

ವಿಕಿಪೀಡಿಯ ಇಂದ
Jump to navigation Jump to search
ಎಡ್ವರ್ಡ್ ಎಮರ್‌ಸನ್ ಬರ್ನಾರ್ಡ್
EdwardEmersonBarnard.jpg
ಎಡ್ವರ್ಡ್ ಎಮರ್‌ಸನ್ ಬರ್ನಾರ್ಡ್
ಜನ್ಮನಾಮ
ಎಡ್ವರ್ಡ್ ಎಮರ್‌ಸನ್ ಬರ್ನಾರ್ಡ್

೧೮೫೭ ಡಿಸೆಂಬರ್ ೧೬
ಅಮೇರಿಕ
ರಾಷ್ಟ್ರೀಯತೆಅಮೇರಿಕ

ಅಮೇರಿಕದ ಖಗೋಳವಿಜ್ಞಾನಿಯಾಗಿದ್ದ ಎಡ್ವರ್ಡ್ ಎಮರ್‌ಸನ್ ಬರ್ನಾರ್ಡ್‌ರವರು ೧೮೫೭ರ ಡಿಸೆಂಬರ್ ೧೬ರಂದು ಟೆನ್ನೆಸ್ಸೀಯ ನಾಶ್‌ವಿಲ್ಲೆಯಲ್ಲಿ ಜನಿಸಿದರು. ೧೮೮೯ರಲ್ಲಿ ಅವರು ಶನಿಗ್ರಹದ ಉಂಗುರಗಳ ವೃತ್ತಾಕಾರದ ಕಕ್ಷೆಗೆ ಸಮಾಂತರವಾಗಿರುವ ಕಪ್ಪು ಛಾಯೆಗಳನ್ನು ಕಂಡುಹಿಡಿದರು. ಆಗ ಆ ಸಂಶೋಧನೆ ಚರ್ಚೆಗೆ ಎಡೆಮಾಡಿದರೂ, ನಂತರ ವ್ಯೋಮನೌಕೆ ವಾಯೇಜರ್-೧ ಅವರ ಸಂಶೋಧನೆಯನ್ನು ದೃಢಪಡಿಸಿತು. ತಾರೆಗಳ ಸ್ಪೋಟದ ಸಮಯದಲ್ಲಿ ಸೃಷ್ಟಿಯಾಗುವ ಅನಿಲ ಉತ್ಸರ್ಜನೆಯನ್ನು ಅವರು ೧೮೯೨ರಲ್ಲಿ ಕಂಡುಹಿಡಿದರು. ಅದೇ ವರುಷ ಅವರು ಗುರುಗ್ರಹದ ಐದನೆಯ ಚಂದ್ರವಾದ ’ಅಮಾಲ್‌ಥಿಯಾ’ವನ್ನು ಕಂಡುಹಿಡಿದರು. ಗೆಲಿಲಿಯೋ ಗೆಲಿಲೈ (೧೫೬೪-೧೬೪೨) ೧೬೦೯ರಲ್ಲಿ ಗುರುಗ್ರಹದ ಮೊದಲ ನಾಲ್ಕು ಚಂದ್ರರನ್ನು ಕಂಡುಹಿಡಿದಿದ್ದರು.[೧] ನಂತರ ಗುರುಗ್ರಹದ ಚಂದ್ರನನ್ನು ಕಂಡುಹಿಡಿದ ಮೊದಲ ವ್ಯಕ್ತಿ ಬರ್ನಾರ್ಡ್ ಆಗಿದ್ದಾರೆ. ೧೮೯೫ರಲ್ಲಿ ಬರ್ನಾರ್ಡ್‌ರವರು ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಅವರು ಆ ಅವಧಿಯಲ್ಲಿ ಕ್ಷೀರ ಪಥದ ಛಾಯಾಚಿತ್ರಗಳನ್ನು ತೆಗೆದರು. ನಂತರ ಅವರು ಜರ್ಮನಿಯ ಖಗೋಳವಿಜ್ಞಾನಿ ಮ್ಯಾಕ್ಸ್ ವುಲ್ಫ್‌ರವರ (೧೮೬೩-೧೯೩೨) ಜೊತೆಗೂಡಿ ಗೆಲಕ್ಸಿಯ ಕಪ್ಪು ಪ್ರದೇಶಗಳು ವಾಸ್ತವವಾಗಿ ಅನಿಲ ಮತ್ತು ಧೂಳಿನ ಮೋಡಗಳಾಗಿವೆ ಎಂಬುದಾಗಿ ಕಂಡುಹಿಡಿದರು.[೨] ಅವರು ೧೯೧೬ರಲ್ಲಿ ಮುಂದೆ ’ಬರ್ನಾರ್ಡ್ ನಕ್ಷತ್ರ’ ಎಂಬುದಾಗಿ ನಾಮಕರಣ ಮಾಡಲಾದ ನಕ್ಷತ್ರವನ್ನು ಕಂಡುಹಿಡಿದರು. ಬರ್ನಾರ್ಡ್ ನಕ್ಷತ್ರವ್ಯವಸ್ಥೆ ನಮ್ಮ ಸೂರ್ಯನಿಗೆ ಹತ್ತಿರವಾಗಿರುವ ಆಲ್ಫಾ ಸೆಂಟಾರಿ ನಕ್ಷತ್ರವ್ಯವಸ್ಥೆಯ ನಂತರದ ನಕ್ಷತ್ರ ವ್ಯವಸ್ಥೆಯಾಗಿದೆ. ಬರ್ನಾರ್ಡ್‌ರವರು ೧೯೨೩ರ ಫೆಬ್ರವರಿ ೬ರಂದು ವಿಸ್ಕೋಸಿನ್‌ನ ವಿಲಿಯಂಸ್ ಬೇಯಲ್ಲಿ ನಿಧನರಾದರು.

ಉಲೇಖಗಳು[ಬದಲಾಯಿಸಿ]