ವಿಷಯಕ್ಕೆ ಹೋಗು

ಎಡೆಯೂರು ಸಿದ್ಧಲಿಂಗೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಸವ ಕಲ್ಯಾಣದಲ್ಲಿ ಶರಣರ ಕ್ರಾಂತಿಯನ್ನಂತರ, ಮತ್ತೆ ಅಂತಹ ಕ್ರಾಂತಿಯನ್ನು ಮಾಡಿದವರು ಎಡೆಯೂರು ಸಿದ್ಧಲಿಂಗೇಶ್ವರರು. ಅವನತಿಯ ಹಾದಿ ಹಿಡಿದ ಧರ್ಮವನ್ನು ಪುರ್ನಸ್ಥಾಪಿಸಲು, ನಾಡಿನಾದಂತ್ಯ ಸಂಚರಿಸಿದರಿದ್ದಾರೆ. ಕನ್ನಡ ಭಾಷೆಯಲ್ಲಿ ಇವರು ಅನೇಕ ವಚನಗಳನ್ನು ಮತ್ತು ಗ್ರಂಥಗಳನ್ನು ರಚಿಸಿದ್ದಾರೆ. ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು, ಗದಗಿನ ಸಿದ್ಧಲಿಂಗ ಸ್ವಾಮಿಗಳು, ಸುತ್ತೂರು ಮತ್ತು ಮಹದೇಶ್ವರ ಮಠಗಳ ಸ್ವಾಮಿಗಳು, ಎಡೆಯೂರು ಸಿದ್ಧಲಿಂಗೇಶ್ವರರ ಶಿಷ್ಯ ಪರಂಪರೆಗೆ ಸೇರಿದವರಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿರುವ ಎಡೆಯೂರುನಲ್ಲಿ ಇವರು ಜೀವಂತ ಸಮಾಧಿ ಹೊಂದಿದ್ದಾರೆ. ಎಡೆಯೂರಿನ ಬಳಿ ಇರುವ ಕಗ್ಗೆರೆ, ಇವರು ಧೀರ್ಘ ಕಾಲ ತಪಸ್ಸು ಮಾಡಿದ ಪುಣ್ಯ ಭೂಮಿಯಾಗಿದೆ. ಎಡೆಯೂರು ಮತ್ತು ಕಗ್ಗೆರೆಯಲ್ಲಿರುವ ದೇವಸ್ಥಾನಗಳಲ್ಲಿ ದಿನ ನಿತ್ಯ, ಜಾತಿ-ಧರ್ಮದ ಭೇದವಿಲ್ಲದೆ ಸಾವಿರಾರು ಜನರಿಗೆ ಉಚಿತ ಅನ್ನದಾಸೋಹ ನೆಡೆದಿರುವುದು ವಿಶೇಷವಾಗಿದೆ. ಸಿದ್ಧಲಿಂಗೇಶ್ವರ ಸಾಹಿತ್ಯ ಪ್ರಕಟಣೆ ಮತ್ತು ಸಂಶೋಧನಾ ಕೇಂದ್ರವನ್ನು ಎಡೆಯೂರಿನ ದೇವಸ್ಥಾನದಲ್ಲಿ, ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ ಸ್ಥಾಪಿಸಿದ್ದಾರೆ.