ವಿಷಯಕ್ಕೆ ಹೋಗು

ಎಚ್.ಎನ್.ಗಿರೀಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಚ್.ಎನ್.ಗಿರೀಶ್
Girisha Nagarajegowda
Personal information
Full nameಗಿರೀಶ್ ಹೊಸನಗರ ನಾಗರಾಜೇಗೌಡ
Born (1988-01-26) ೨೬ ಜನವರಿ ೧೯೮೮ (ವಯಸ್ಸು ೩೭)
Sport
Country ಭಾರತ
Sportಅಥ್ಲೆಟಿಕ್ಸ್
Eventಹೈ ಜಂಪ್ - ಎಫ್೪೨
Achievements and titles
Paralympic finals೨೦೧೨ ಬೇಸಿಗೆ ಪ್ಯಾರಒಲಂಪಿಕ್ಸ್: ಹೈ ಜಂಪ್(ಎಫ್೪೨) – ಬೆಳ್ಳಿ
Medal record
Representing  ಭಾರತ
ಪುರುಷರ ಅಥ್ಲೆಟಿಕ್ಸ್
ಪ್ಯಾರಒಲಂಪಿಕ್ಸ್ ಸ್ಪರ್ಧೆಗಳು
Silver medal – second place ೨೦೧೨ ಲಂಡನ್ ಹೈ ಜಂಪ್(ಎಫ್೪೨)
ಜೂನಿಯರ್ ವಿಶ್ವ ಚಾಂಪಿಯನ್ಶಿಪ್‌ಗಳು
Bronze medal – third place ೨೦೦೬ ಐಡಬ್ಲುಎ‌ಎಸ್ ಜೂನಿಯರ್ ವಿಶ್ವ ಚಾಂಪಿಯನ್ಶಿಪ್‌ಗಳು ಪುರುಷರ ಹೈ ಜಂಪ್
ಓಪನ್ ಪ್ಯಾರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್‌ಗಳು
Gold medal – first place ೨೦೧೨ ಕುವೈತ್ ಪ್ಯಾರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್‌ಗಳು ಪುರುಷರ ಹೈ ಜಂಪ್
Gold medal – first place ೨೦೧೨ ಮಲೇಷಿಯನ್ ಪ್ಯಾರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್‌ಗಳು ಪುರುಷರ ಹೈ ಜಂಪ್

ಹೊಸನಗರ ನಾಗರಾಜೇಗೌಡ ಗಿರೀಶ್ , ( ಹುಟ್ಟು -೨೬ ಜನವರಿ ೧೯೮೮) ಕ್ರೀಡಾಪಟುವಾಗಿದ್ದಾರೆ. ಅವರ ಎಡಗಾಲು ಹುಟ್ಟಿನಿಂದಲೇ ಊನವಾಗಿದೆ. ಇವರು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊಸನಗರದವರು. ಗಿರೀಶ್ ೨೦೦೬ರಿಂದ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುತ್ತಾ ಬಂದಿದ್ದಾರೆ.. ಅಂತರರಾಷ್ಟ್ರೀಯ ಕೂಟಗಳಲ್ಲೂ ಪದಕದ ಸಾಧನೆ ಮಾಡಿದ್ದಾರೆ. ಅವರು ಲಂಡನ್ನಲ್ಲಿ ನಡೆದ ೨೦೧೨ರ ಪ್ಯಾರಾಲಿಂಪಿಕ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ F-42 ವರ್ಗದಲ್ಲಿ ಪುರುಷರ ಎತ್ತರದ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.[] ಕತ್ತರಿ ತಂತ್ರವನ್ನು ಬಳಸಿಕೊಂಡು ೧.೭೪ ಮೀಟರ್ ಜಿಗಿದು ಫೈನಲ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅವರು ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ಎಂಟನೇ ಭಾರತೀಯರಾದರು.

ಆರಂಭಿಕ ಯಶಸ್ಸು

[ಬದಲಾಯಿಸಿ]

ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟವೊಂದರಲ್ಲಿ ಅವರು ಸಾಮಾನ್ಯ ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಿ ಒಂದು ಬಹುಮಾನ ಪಡೆದು ಗಿರೀಶರು ಯಶಸ್ಸಿನ ಮೊದಲ ರುಚಿಯನ್ನು ನೋಡಿದರು. ನಂತರ ಮೈಸೂರು ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಒಂದು ಕಂಚಿನ ಪದಕ ಗೆದ್ದಿದ್ದಾರೆ. ನಂತರ ರಾಷ್ಟ್ರೀಯ ಎತ್ತರ ಜಿಗಿತದ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅವರು ೨೦೦೬ ರಲ್ಲಿ ಐರ್ಲೆಂಡ್ ನಲ್ಲಿ ಅಂಗವಿಕಲರ ಕಿರಿಯ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮೊದಲ ಸಾಧನೆಯನ್ನು ಮಾಡಿದರು. ನಂತರ ಈ ಕುವೈಟ್ ಮತ್ತು ಮಲೇಷ್ಯಾ ರಲ್ಲಿ ಅಥ್ಲೆಟಿಕ್ ಕೂಟಗಳಲ್ಲಿ ಚಿನ್ನದ ಪದಕಗಳನ್ನು ಪಡೆದರು.[] ೨೦೧೩ ರಲ್ಲಿ ಗಿರೀಶ್‌ಗೆ ಪದ್ಮಶ್ರೀ ಗೌರವ ಒಲಿದಿದೆ.

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]

೨೦೧೩ ರಲ್ಲಿ ಗಿರೀಶ್‌ಗೆ ಪದ್ಮಶ್ರೀ ಗೌರವ ಒಲಿದಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2012-09-07. Retrieved 2013-01-26.
  2. http://www.deccanherald.com/content/276476/girisha-turns-parents-regret-pride.html