ಎಕೆ - ೪೭
ಗೋಚರ
ಎಕೆ -೪೭ ಎಂಬ ಬಂದೂಕು ೧೯೪೭ರಲ್ಲಿ ಇದು ಮೊದಲ ಬಾರಿಗೆ ಬಳಕೆ ಬಂದಿದ್ದು, ಹಾಗಾಗಿ ಎಕೆ -೪೭ ಎಂಬ ಹೆಸರೂ ಈ ಬಂದೂಕಿಗೆ ಬಂದಿದೆ. ಎಕೆ ಎಂಬುದುರಷ್ಯಾದ ಅವ್ಟೊಮಾಟ್ ಕಲಾಶ್ನಿಕೋವ ಪದದ ಸಂಕ್ಷಿಪ್ತರ ರೂಪ. ಇದನ್ನು ರಷ್ಯಾದ ಇಝೆವಕ್ ಮೆಕ್ಯಾನಿಕಲ್ ವರ್ಕ್ಸ್ ಘಟಕ ಸಿದ್ಧ ಮಾಡಿತು. ಮಿಖೈಲ್ ಕಲಶ್ನಿಕೋವ್ ಇದನ್ನು ವಿನ್ಯಾಸ ಮಾಡಿದವನು.
ಎರಡನೆಯ ಮಹಾಯುದ್ಧದ ಸಮಯದಲ್ಲಿ ಜರ್ಮನಿ ಅಸಲ್ಟ್ ಬಂದೂಕುಗಳನ್ನು ಬಳಕೆಗೆ ತಂದಿತ್ತು. ಆಗ ಬಳಕೆಯಲ್ಲಿದ್ದ ಬಂದೂಕುಗಳು ೧೦೦ ಮೀಟರ್ ದೂರದವರೆಗೆ ತಲುಪಲು ಸಮರ್ಥವಾಗಿತ್ತು. ಆದರೆ ಇದರಿಂದ ಆಗುತ್ತಿದ್ದ ಪ್ರಾಣಿ ಹಾನಿ ಅತ್ಯಧಿಕ. ಹಾಗಾಗಿ ಅಸಲ್ಟ್ ಬಂದೂಕುಗಳನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನವನ್ನು ಜರ್ಮನಿ ಮಾಡಿತು. ಆಗ ಸಿದ್ಧವಾಗಿದ್ದೇ ಎಕೆ-೪೭. ೪.೩ ಕೆ.ಜಿ. ತೂಕದ ಈ ಬಂದ್ದೂಕು ಸುಮಾರು ೩೦೦ ಮೀಟರ್ವರೆಗೆ ನಿಖರವಾಗಿ ದಾಳಿ ಮಾಡುವಷ್ಟು ಸಮರ್ಥವಾಯಿತು. ನಂತರ ಎಕೆ ಸರಣಿಯಲ್ಲಿ ೭೪, ೧೦೧, ೧೦೨, ೧೦೩, ೧೦೭, ೧೦೮ ಬಂದೂಕುಗಳು ಬಳಕೆ ಬಂದವು.