ಎಂ. ಮೋಹನ ಆಳ್ವ

ವಿಕಿಪೀಡಿಯ ಇಂದ
Jump to navigation Jump to search
ಡಾ. ಎಂ. ಮೋಹನ ಆಳ್ವ
ಜನನ೩೧-೫-೧೯೫೨
ಮಿಜಾರುಗುತ್ತು, ಮಂಗಳೂರು
ವೃತ್ತಿಆಯುರ್ವೇದ ವೈದ್ಯ
ರಾಷ್ಟ್ರೀಯತೆಭಾರತೀಯ
ವಿಷಯಕರ್ನಾಟಕ

ಮಿಜಾರುಗುತ್ತು ಡಾ|ಎಂ.ಮೋಹನ್ ಆಳ್ವಅವರು ಶ್ರೀ ಆನಂದ ಆಳ್ವ ಮತ್ತು ಶ್ರೀಮತಿ ಸುಂದರಿ ಆನಂದ ಆಳ್ವ ದಂಪತಿಗಳ ಮಗನಾಗಿ ೩೧-೫-೧೯೫೨ ರಲ್ಲಿ ಜನಿಸಿದರು. ವೈದ್ಯರಾಗಿ, ಕ್ರೀಡಾಪಟುವಾಗಿ, ಕಲಾವಿದರಾಗಿ, ಸಂಘಟಕರಾಗಿ, ಶಿಕ್ಷಣತಜ್ಞರಾಗಿ, ಸಮಾಜಶಾಸ್ತ್ರಜ್ಞರಾಗಿ ಪ್ರಸಿದ್ಧರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಗೌರವಾರ್ಥ ಆಳ್ವಾಸ್ ನುಡಿಸಿರಿ, ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್, ರಾಷ್ಟ್ರೀಯ ಚಿತ್ರಕಲೆಯ ಚಿತ್ರಸಿರಿ ಮತ್ತು ಶಿಲ್ಪಕಲೆಯ ವರ್ಣವಿರಾಸತ್, ಕ್ರೀಡೆಯ `ಏಕಲವ್ಯ' ಕ್ರೀಡಾಸಂಸ್ಥೆಗಳ ಜನಕರು. ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೂಲಕ ೨೨ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.[೧] ಈ ಶಿಕ್ಷಣ ಸಂಸ್ಥೆಗಳಲ್ಲಿ ಆಧುನಿಕ ಶಿಕ್ಷಣದ ಎಲ್ಲಾ ಸೌಲಭ್ಯಗಳನ್ನೂ ಒದಗಿಸಿಕೊಡುವುದರ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಇವರ ಶಿಕ್ಷಣದ ಕುರಿತ ಹೊಸ ಯೋಚನೆ, ಹೊಸ ಯೋಜನೆಗಳು, ಕ್ರಾಂತಿಕಾರಕ ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾದುವು. ಶಿಕ್ಷಣ ಕ್ಷೇತ್ರದಲ್ಲಿ ಬುದ್ಧಿಮತ್ತೆ, ಕ್ರೀಡೆ, ಸಾಂಸ್ಕೃತಿಕ ಪ್ರತಿಭೆ, ವಿಶೇಷ ಚೇತನರು ಹಾಗೂ ಸಮಾಜದ ಹಿಂದುಳಿದ ವರ್ಗಗಳಾದ ಕೊರಗ, ಜೇನುಕುರುಬ,ಸಿದ್ಧಿ ಮೊದಲಾದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಸೌಲಭ್ಯವನ್ನು ಒದಗಿಸಿದ್ದಾರೆ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ, ಆಳ್ವಾಸ್ ವಿಶೇಷ ಚೇತನ ವಿದ್ಯಾರ್ಥಿಗಳ ಶಾಲೆಯು ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡುತ್ತಿದೆ.

ಉಲ್ಲೇಖಗಳು[ಬದಲಾಯಿಸಿ]