ಎಂ. ಡಿ. ಶೆಟ್ಟಿ
ಮೂಳೂರು ದೇಜು ಶೆಟ್ಟಿ, ಮುಂಬಯಿನ ಕನ್ನಡಿಗರಿಗೆ ಎಂ. ಡಿ. ಶೆಟ್ಟಿಯವರೆಂದು ಹೆಸರುವಾಸಿಯಾಗಿದ್ದಾರೆ. ಮುಂಬಯಿನಗರಕ್ಕೆ ಬಂದ ಸಹಸ್ರಾರು ಬಂಟ ಸಮಾಜದ ಬಾಂಧವರಲ್ಲಿ 'ಎಂ.ಡಿ ಶೆಟ್ಟಿ'ಯವರು ಪ್ರಮುಖರು. 'ಒಳ್ಳೆಯ ಸಮಾಜಸೇವಕ'ರೆಂದು ಜನ್ಮನ್ನಣೆಗಳಿಸಿರುವ ಶೆಟ್ಟಿಯವರು, ಮೇರುವ್ಯಕ್ತಿತ್ವದ, ಛಲವಾದಿ ಮತ್ತು ನುಡಿದಂತೆ ನದೆಯುವ ನಿಸ್ಪೃಹ ಹೋಟೆಲ್ ಉದ್ಯಮಿಯಾಗಿದ್ದಾರೆ. ಅವರು 'ಹಿರಿಯಕನ್ನಡಿಗ', 'ಭೀಷ್ಮಾಚಾರ್ಯ' ಮೊದಲಾದ ಬಿರುದುಗಳನ್ನು ಗಳಿಸಿದ್ದಾರೆ.
ಜನನ ಮತ್ತು ಬಾಲ್ಯ
[ಬದಲಾಯಿಸಿ]ಸನ್ ೧೯೨೮ ರ, ಜೂನ್ ತಿಂಗಳ ೧೪ ನೆಯ ತಾರೀಖು,'ಎಂ. ಡಿ. ಶೆಟ್ಟಿ'ಯವರು, ಉಡುಪಿಜಿಲ್ಲೆಯ ಮೂಳೂರಿನ ಕಂಕಣಗುತ್ತು ಗ್ರಾಮದಲ್ಲಿ 'ಬಂಟ ಪರಿವಾರ'ದಲ್ಲಿ ಜನ್ಮಿಸಿದರು. ಸನ್, ೧೯೪೩ ರಲ್ಲಿ ಬೊಂಬಾಯಿಗೆ ಪಾದಾರ್ಪಣೆಮಾಡಿದ 'ಎಂ. ಡಿ. ಶೆಟ್ಟಿ' ಯವರು, ಹೋಟೆಲ್ ಉದ್ಯಮಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು. ಸಂಘಟನೆಯನ್ನು ಸ್ಥಾಪಿಸಿದರು. ಬಂಟರ ಸಂಘದ ಅಧ್ಯಕ್ಷರಾಗಿ ಮಾಡಿದ ಸೇವೆ ಅನನ್ಯವಾದದ್ದು. 'ಎಂ. ಡಿ. ಶೆಟ್ಟಿ' ಯವರು, ೧೯೪೯ ರಲ್ಲಿ 'ಬೊಂಬಾಯಿನ ಫ್ರೀಪ್ರೆಸ್ ಜರ್ನಲ್ ಆಫೀಸ್ ಕ್ಯಾಂಟಿನ್' ನಡೆಸುತ್ತಿದ್ದ ಸಂದರ್ಭದಲ್ಲಿ ಪತ್ರಿಕಾಕರ್ತರಾಗಿದ್ದ ಡಿ. ಕೆ. ಮೆಂಡನ್, ಒಡನಾಟದಲ್ಲಿ ಮಾಡಿದ ಸಮಾಜಪರ ಚಟುವಟಿಕೆಗಳನ್ನು ಎಲ್ಲರೂ ಸ್ಮರಿಸುತ್ತಾರೆ. 'ಎಂ. ಡಿ. ಶೆಟ್ಟಿ' ರವರು ಶಿವಸೇನೆಯ ಮುಖ್ಯಸ್ಥ 'ಬಾಳಾ ಸಾಹೇಬ್ ಥಾಕರೆ'ಯವರಿಗೆ ನಿಕಟವರ್ತಿಯಾಗಿದ್ದಾರೆ. 'ಇಂದರಾಗಾಂಧಿ'ಯವರ ಕಾಂಗ್ರೆಸ್ (ಐ) ನಲ್ಲಿ ಸಕ್ರಿಯರಾಗಿಗುರುತಿಸಿಕೊಂಡ ಶೆಟ್ಟಿಯವರು, 'ಕಾಂಗ್ರೆಸ್ ಸಮ್ಮೇಳನ'ಗಳಿಗೆ 'ಅತ್ಯುತ್ತಮ ಮಟ್ಟದ ಕೇಟರಿಂಗ್ ಸೇವೆ'ಯನ್ನು ಒದಗಿಸುವ ಮೂಲಕ, ರಾಷ್ಟ್ರಮಟ್ಟದ ನಾಯಕರ ಒಲವಿಗೆ ಪಾತ್ರರಾಗಿದ್ದಾರೆ. ಬಂಟ್ಸ್ ನ್ಯಾಯಮಂಡಳಿಯ ಅಧ್ಯಕ್ಷ,ರಾಗಿ ಶೆಟ್ಟಿಯವರು, ಆಗಿನ ಕರ್ನಾಟಕದ ಮುಖ್ಯಮಂತ್ರಿ, 'ದೇವರಾಜ್ ಅರಸ್' ಮುಂಬಯಿಗೆ ಭೇಟಿಮಾಡಿದ ಸಮಯದಲ್ಲಿ 'ಎಂ. ಡಿ. ಶೆಟ್ಟಿ' ಯವರ ಕಾರ್ಯವೈಖರಿಯನ್ನು ಕಂಡು ಅವರಿಗೆ, ಮುಂಬಯಿ ಕನ್ನಡಿಗರ ರಾಯಭಾರಿಯೆಂದುಬಿರುದನ್ನು ಕೊಟ್ಟಿದ್ದಾರೆ. ಬೊಂಬಾಯಿನ ಹೋಟೆಲ್ ಉದ್ಯಮ, ಭಾರಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾಗ, ಅಧ್ಯಯನ ನಡೆಸಿ, ಸೂಕ್ಷ್ಮ ನಿರ್ಧಾರಗಳಿಂದ ವ್ಯಾಜ್ಯಗಳನ್ನು ಪರಿಹರಿಸುತ್ತಿದ್ದರು. ಕರ್ನಾಟಕ ಉಚಿತ ನಟ್ಸ್ ಹೈಸ್ಕೂಲ್ ಗೆ ಭರ್ತಿಯಾಗಿ, ವಿದ್ಯಾರ್ಜನೆಯನ್ನು ಮಾಡಿ, ಮುಂದೆ, ಬಾಂಬೆ ಟ್ರಸ್ಟ್ ನ ಕ್ಯಾಂಟಿನ್ ನಿರ್ವಾಹಕರಾಗಿ ನಿರ್ವಹಿಸಿದರು. ೩ ದಶಕಗಳ ಕಾಲ ಸೇವೆಸಲ್ಲಿಸಿದರು.
ಹೋಟೆಲಿಗರ ಸಂಘಟನೆ-'ಆಹಾರ್'
[ಬದಲಾಯಿಸಿ]'ಎಂ. ಡಿ. ಶೆಟ್ಟಿ' ಹೋಟೆಲ್ ಸಂಘಟನೆಯ ಸದಸ್ಯರಾಗಿ, ಮುಂದೆ ಅಧ್ಯಕ್ಷರಾಗಿ, 'ಹೋಟೆಲ್ ಫೆಡರೇಷನ್ ನ ಸ್ಥಾಪಕ',ಅಧ್ಯಕ್ಷ, 'ಬಂಟರ ಸಂಘದ ಅಧ್ಯಕ್ಷ, ಹಲವಾರು ಯೋಜನೆಗಳ ಪ್ರವರ್ತಕರಾಗಿ, ಗಮನಾರ್ಹರೀತಿಯಲ್ಲಿ ಸೇವೆಸಲ್ಲಿಸಿದ್ದಾರೆ.
ಹುಟ್ಟುಹಬ್ಬದ ಆಚರಣೆ
[ಬದಲಾಯಿಸಿ]ಜೂನ್ ೧೪ ರಂದು, ತಮ್ಮ 'ಬಾಂದ್ರ ನಿವಾಸ'ದಲ್ಲಿ ಮಕ್ಕಳು, ಮೊಮ್ಮಕ್ಕಳು ಪರಿವಾರದ ಜೊತೆ ತಮ್ಮ ೮೪ ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.