ಎಂ. ಎಸ್. ಶೇಷಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಸರಾಂತ ಸಂಗೀತಗಾರರ ಪರಂಪರೆಯಲ್ಲಿ ಜನಿಸಿದ 'ಎಂ. ಎಸ್. ಶೇಷಪ್ಪ ನವರು, ತಮ್ಮ ತಂದೆ, ಶ್ರೀ. ಎಂ. ಎಸ್. ಸುಬ್ಬಣ್ಣನವರ ತರಹ ತಾವೂ, ತಬಲಾ ವಾದನದಲ್ಲಿ ಅಭಿರುಚಿಯನ್ನು ಬೆಳೆಸಿಕೊಂಡು, ಅದರಲ್ಲಿ ಸಿದ್ಧಿ ಪಡೆದರು. ಮಡಕೇರಿಯ ಸಂಗೀತ ನಾಟಕ ಅಕ್ಯಾಡೆಮಿಯಲ್ಲಿ ಕೆಲಕಾಲ ಶಿಕ್ಷಕರಾಗಿದ್ದ ಶೇಷಪ್ಪನವರು, ಕರ್ನಾಟಕ ಶಾಸ್ತ್ರಿಯ ಸಂಗಿತವಲ್ಲದೆ ಹಿಂದುಸ್ತಾನಿ ಸಂಗೀತ, ಭಾವಗೀತೆ, ಹರಿಕಥೆ ನೃತ್ಯ ನಾಟಕ ಯಕ್ಷಗಾನಗಳಿಗೂ ಪಕ್ಕ ವಾದ್ಯದ ನೆರವನ್ನು ಕೊಡುತ್ತಿದ್ದರು. ಇತರ ಪಕ್ಕವಾದ್ಯಗಳಾದ, ಮೃದಂಗ, ಧೋಲಕ್, ಖಂಜರಿ, ಘಟಿ ವಾದ್ಯಗಳಲ್ಲೂ ಸಿದ್ಧ ಹಸ್ತರು.

ಜನನ[ಬದಲಾಯಿಸಿ]

೧೯೩೨ ರಲ್ಲಿ ಎಂ. ಎಸ್. ಸುಬ್ಬಣ್ಣನವರ ಮಗನಾಗಿ ಜನಿಸಿದರು. ಅಂದಿನ ದಿನದ ಶ್ರೇಷ್ಠ ತಬಲಾ ವಾದಕರಾಗಿದ್ದ ಶ್ರೀನಿವಾಸಳು ನಾಯ್ಡು, ಗೋವಿಂದ ಸ್ವಾಮಿ ಅಣ್ಣ, ಎಮ್. ಎಸ್. ರಾಮಯ್ಯ ನವರ ಬಳಿ ತಬಲಾ ವಿದ್ಯೆಯನ್ನು ಕಲಿತು, ಮುಂದೆ, ಡಾ. ದೇವೇಂದ್ರಪ್ಪ ನವರ ಮಾರ್ಗದರ್ಶನದಲ್ಲಿ ಹಲವಾರು ಸಂಗೀತ ಕಚೇರಿಗಳಲ್ಲಿ ಭಾಗವಹಿಸಿದರು. ಆಗಿನ ಕಾಲದ 'ಮೈಸೂರು ರಾಜಾಸ್ಥಾನ ನೃತ್ಯ ಪಟು,' ಜಟ್ಟಿ ತಾಯಮ್ಮ, ಅವರ ನಂತರ ಅವರ ಶಿಷ್ಯೆ,, ಡಾ. ವೆಂಕಟಲಕ್ಷಮ್ಮ, ಸುಂದರಮ್ಮ, ಜೇಜಮ್ಮ, ಸೋಹನ್ ಲಾಲ್, ಹೀರಾಲಾಲ್, ಜಯಶಂಕರ್, ಮುಂತಾದ ಕಲಾವಿದರ ನೃತ್ಯ ಮೇಳಗಳಲ್ಲಿ ಲಯ ವಾದ್ಯ ನುಡಿಸಿ ಮೆಚ್ಚುಗೆಗಳಿಸಿದರು.

ಪ್ರಶಸ್ತಿಗಳು[ಬದಲಾಯಿಸಿ]

  • ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯ, ೧೯೯೦-೯೧ ರ ಸಾಲಿನ ಪ್ರಶಸ್ತಿಯ ಜೊತೆಗೆ, 'ಕರ್ನಾಟಕ ಕಲಾ ತಿಲಕ' ಬಿರುದನ್ನೂ ಪ್ರದಾನ ಮಾಡಿ ಗೌರವಿಸಲಾಯಿತು.