ಎಂ. ಎಸ್. ಆಶಾದೇವಿ
ಗೋಚರ
ಎಂ. ಎಸ್. ಆಶಾದೇವಿ | |
---|---|
ಜನನ | ೨೬ ಫೆಬ್ರವರಿ ೧೯೬೬ ನೇರಳಿಗೆ, ದಾವಣಗೆರೆ, ಕರ್ನಾಟಕ |
ವೃತ್ತಿ |
|
ಭಾಷೆ | ಕನ್ನಡ |
ಪ್ರಮುಖ ಪ್ರಶಸ್ತಿ(ಗಳು) | ಸಾಹಿತ್ಯಶ್ರೀ ಪುರಸ್ಕಾರ |
ಎಂ. ಎಸ್. ಆಶಾದೇವಿ, ಕನ್ನಡ ಭಾಷೆಯ ಈಗಿನ ಪ್ರಮುಖ ವಿಮರ್ಶಕಿ, ಲೇಖಕಿ, ಅನುವಾದಕಿ ಮತ್ತು ಪ್ರಾಧ್ಯಾಪಕಿ. ಮಹಿಳಾವಾದದ ನೆಲೆಯಲ್ಲಿ ಸಾಹಿತ್ಯವನ್ನು ಪರಾಂಬರಿಸುವ ಆಶಾದೇವಿ ಅವರಿಗೆ ೨೦೨೦ನೇ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಸಾಹಿತ್ಯಶ್ರೀ ಪ್ರಶಸ್ತಿ ದೊರೆತಿದೆ.
ಶಿಕ್ಷಣ
[ಬದಲಾಯಿಸಿ]ಕನ್ನಡದಲ್ಲಿ ಎಂ.ಎ ಹಾಗೂ ‘ನವೋದಯ ವಿಮರ್ಶೆಯ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ’ ಎನ್ನುವ ವಿಷಯದ ಮೇಲೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.
ಅಂಕಣ
[ಬದಲಾಯಿಸಿ]ಪ್ರಜಾವಾಣಿಯ ಭಾನುವಾರದ ಪುರವಣಿ 'ಮುಕ್ತಛಂದ'ದಲ್ಲಿ ನಾರಿಕೇಳಾ ಎಂಬ ಅಂಕಣವನ್ನು ಬರೆಯುತ್ತಿದ್ದರು. ಈ ಅಂಕಣದಲ್ಲಿ ಅವರು ಸ್ತ್ರೀವಾದದ ಬಗ್ಗೆ ಬರೆಯುತ್ತಿದ್ದರು.
ಕೃತಿಗಳು
[ಬದಲಾಯಿಸಿ]೧. ಸ್ತ್ರೀಮತವನುತ್ತರಿಸಲಾಗದೆ ? (ಸಾಹಿತ್ಯ- ಸಂಸ್ಕೃತಿಯನ್ನು ಕುರಿತ ಲೇಖನಗಳ ಸಂಗ್ರಹ)
೨. ಹುದುಗಲಾರದ ದುಃಖ.(ಅನುವಾದ)
೩. ನಡುವೆ ಸುಳಿವ ಆತ್ಮ.
೪. ಭಾರತದ ಬಂಗಾರ.
ಪ್ರಶಸ್ತಿ
[ಬದಲಾಯಿಸಿ]- ೨೦೨೦ - ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡುವ ಸಾಹಿತ್ಯಶ್ರೀ ಪ್ರಶಸ್ತಿ [೧]
- ಜಿಎಸ್ಸೆಸ್ ಪ್ರಶಸ್ತಿ
- ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ
- ದೇವದುರ್ಗದ ಖೇಣೆದ್ ಮುರಿಗೆಪ್ಪ ಪ್ರತಿಷ್ಠಾನದಿಂದ ಖೇಣೆದ್ ಮುರಿಗೆಪ್ಪ ಸ್ಮಾರಕ ಪ್ರಶಸ್ತಿ
ಉಲ್ಲೇಖಗಳು
[ಬದಲಾಯಿಸಿ]- ↑ "Annual awards announced". Prajavani. 26 February 2021. Retrieved 14 April 2021.