ಎಂ.ಪ್ರಭಾಕರ ಜೋಶಿ

ವಿಕಿಪೀಡಿಯ ಇಂದ
Jump to navigation Jump to search

ಡಾ.ಎಂ.ಪ್ರಭಾಕರ ಜೋಶಿ[ಬದಲಾಯಿಸಿ]

ಯಕ್ಷಗಾನದ ಪ್ರಮುಖ ವಿಮರ್ಶಕರೂ, ಸಂಶೋಧಕರೂ ಆಗಿರುವ ಡಾ.ಜೋಶಿಯವರು ಯಕ್ಷಗಾನಕ್ಕೆ ಅಕಾಡೆಮಿಕ್ ರೂಪು ನೀಡಲು ಶ್ರಮಿಸುತ್ತಿರುವವರು. ಕಾರ್ಕಳ ತಾಲೂಕಿನ ಮಾಳ ಇವರ ಹುಟ್ಟೂರು. ಮಂಗಳೂರಿನ ಬೆಸೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ,ಪ್ರಾಂಶುಪಾಲರಾಗಿ ಈಗ ನಿವ್ರತ್ತರು. ಆದರೆ ಯಕ್ಷಗಾನದ ವಿವಿದ ನೆಲೆಗಳಲ್ಲಿ ಪ್ರವ್ರತ್ತರು.ಕರಾವಳಿ ಕರ್ನಾಟಕ ಭಾಗದ ಯಕ್ಷಗಾನ ತಾಳಮದ್ಡಳೆಯ ಪ್ರಸಿದ್ದ ಅರ್ಥದಾರಿಗಳೂ ಹೌದು ಕ್ರಷ್ಣಸಂಧಾನ:ಪ್ರಸಂಗ ಮತ್ತು ಪ್ರಯೋಗ ಎಂಬ ಸಂಶೋಧನಾ ಮಹಾಪ್ರಬಂದಕ್ಕೆ ಮಂಗಳೂರು ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದರು. ಜಾಗರ,ಕೇದಗೆ,ಮಾರುಮಾಲೆ,ಪಸ್ತುತ , ಯಕ್ಷಗಾನ ಪದಕೋಶ ,ಮಂದಾರಕೇಶವ ಬಟ್ರ್(ತುಳು),ಭಾರತೀಯ ತತ್ವಶಾಸ್ತ್ರ ತಾಳಮದ್ದಳೆ,ವಾಗರ್ಥ, ಕ್ರಷ್ಣಸಂಧಾನ:ಪ್ರಸಂಗ ಮತ್ತು ಪ್ರಯೋಗ -ಇವು ಡಾ.ಪ್ರಭಾಕರ ಜೋಶಿ ಯವರ ಕೃತಿಗಳು.