ವಿಷಯಕ್ಕೆ ಹೋಗು

ಉಚ್ಛಿಷ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎಂಜಲು ಇಂದ ಪುನರ್ನಿರ್ದೇಶಿತ)
ಡಬ್ಬಿಕಟ್ಟಲಾದ ಉಚ್ಛಿಷ್ಟ

ಉಚ್ಛಿಷ್ಟ ಎಂದರೆ ಊಟವಾದ ನಂತರ ಮತ್ತು ಎಲ್ಲರೂ ತಿನ್ನುವುದು ಮುಗಿಸಿದ ಮೇಲೆ ಉಳಿದುಕೊಂಡ ಊಟದ ತಿನ್ನದಿರದ ಬಿಸಿ ಅಥವಾ ತಣ್ಣಗಿನ ಶೇಷ. (ಮೂಳೆಗಳು ಅಥವಾ ಕೆಲವು ತರಕಾರಿಗಳು ಹಾಗೂ ಹಣ್ಣುಗಳ ಸಿಪ್ಪೆಗಳಂತಹ) ತಿನ್ನಲರ್ಹವಲ್ಲವೆಂದು ಪರಿಗಣಿಸಲಾದ ಆಹಾರ ತುಣುಕುಗಳನ್ನು ಉಚ್ಛಿಷ್ಟವೆಂದು ಪರಿಗಣಿಸಲಾಗುವುದಿಲ್ಲ, ಬದಲಾಗಿ ತ್ಯಾಜ್ಯ ವಸ್ತುವೆಂದು ಪರಿಗಣಿಸಲಾಗುತ್ತದೆ. ಯಾವುದನ್ನಾದರೂ "ಉಚ್ಛಿಷ್ಟ"ವೆಂದು ಸೂಕ್ತವಾಗಿ ವರ್ಗೀಕರಿಸಬೇಕಾದರೆ, ಅದು ಸ್ವಂತವಾಗಿ ಊಟವೆಂದನಿಸಿಕೊಳ್ಳಬೇಕು, ಮತ್ತು ಹಾಗಾಗಿ ಕೇವಲ ಮೂಲದ ಭಾಗಗಳಿಗೆ (ಪಕ್ಕಖಾದ್ಯಗಳು, ಅಲಂಕಾರಕಗಳು, ಇತ್ಯಾದಿ) ಸೀಮಿತವಾಗಿರಬಾರದು.

ಉಚ್ಛಿಷ್ಟದ ಅಂತಿಮ ಗತಿಯು ಊಟವನ್ನು ಎಲ್ಲಿ ಮಾಡಲಾಯಿತು, ಊಟ ಮಾಡುವವನ ಇಷ್ಟಗಳು, ಮತ್ತು ಚಾಲ್ತಿಯಲ್ಲಿರುವ ಸಾಮಾಜಿಕ ಸಂಸ್ಕೃತಿಯನ್ನು ಅವಲಂಬಿಸಿರುತ್ತದೆ. ಮನೆ ಅಡಿಗೆಯ ಉಚ್ಛಿಷ್ಟವನ್ನು ಸಾಮಾನ್ಯವಾಗಿ ಆಮೇಲೆ ತಿನ್ನಲು ಉಳಿಸಲಾಗುತ್ತದೆ. ಖಾಸಗಿ ಪರಿಸರದಲ್ಲಿರುವುದರಿಂದ, ಗಾಳಿತೂರದ ಧಾರಕಗಳು ಮತ್ತು ಶೈತ್ಯೀಕರಣದಂತಹ ಆಹಾರ ಸಂರಕ್ಷಣಾ ಸೌಲಭ್ಯಗಳು ಹತ್ತಿರ ಇರುವುದರಿಂದ ಇದು ಸುಗಮವಾಗುತ್ತದೆ. ಸ್ವಲ್ಪ ಉಚ್ಛಿಷ್ಟ ಆಹಾರವನ್ನು ಶೀತಕದಿಂದ ತಣ್ಣಗೆಯೇ ತಿನ್ನಬಹುದು, ಇತರ ಉಚ್ಛಿಷ್ಟವನ್ನು ಮೈಕ್ರೊವೇವ್ ಅಥವಾ ಸಾಂಪ್ರದಾಯಿಕ ಅವನ್‍ನಲ್ಲಿ ಮತ್ತೆ ಬಿಸಿಮಾಡಬಹುದು, ಅಥವಾ ಹೆಚ್ಚುವರಿ ಘಟಕಾಂಶಗಳೊಂದಿಗೆ ಮಿಶ್ರಣ ಮಾಡಿ ಪುನಃ ಬೇಯಿಸಿ ಹೊಸ ಭಕ್ಷ್ಯವನ್ನು ತಯಾರಿಸಬಹುದು.

ಉಚ್ಛಿಷ್ಟವನ್ನು ಹಿಂದೂ ದೇವತೆಗೆ ಎಂದೂ ಅರ್ಪಿಸಲಾಗುವುದಿಲ್ಲವಾದರೂ, ಮಾತಂಗಿ ದೇವತೆಗೆ ಈ ನಿಷೇಧಿತ ನೈವೇದ್ಯವನ್ನು ಅರ್ಪಿಸಬೇಕೆಂದು ವಿಧಿಸಲಾಗಿದೆ. ಇದು ಪರಮ ಜ್ಞಾನ ಮತ್ತು ಅಲೌಕಿಕ ಶಕ್ತಿಗಳನ್ನು ಸಾಧಿಸುವ ಸಲುವಾಗಿ ತನ್ನ ಘನತೆಯನ್ನು ಪಡೆಯಲು ಮಾತಂಗಿಯು ಇಚ್ಛಿಸುತ್ತಾಳೆ.

ಉಚ್ಛಿಷ್ಟದಿಂದ ತಯಾರಿಸಲಾದ ಹೊಸ ಖಾದ್ಯಗಳು ವಿಶ್ವ ಪಾಕಪದ್ಧತಿಯಲ್ಲಿ ಸಾಕಷ್ಟು ಸಾಮಾನ್ಯವಾಗಿ, ಮತ್ತು ಇಂತಹ ಅನೇಕ ಖಾದ್ಯಗಳನ್ನು ಶೈತ್ಯೀಕರಣ ಹಾಗೂ ವಿಶ್ವಸನೀಯ ಗಾಳಿತೂರದ ಧಾರಕಗಳು ಅಸ್ತಿತ್ವದಲ್ಲಿರುವುದಕ್ಕೆ ಮುಂಚಿನ ದಿನಗಳಲ್ಲಿ ಸೃಷ್ಟಿಸಲಾಯಿತು. ಅನ್ಯಥಾ ತಿನ್ನಲರ್ಹವಲ್ಲದ ಮೂಳೆಗಳಿಂದ ಪೌಷ್ಟಿಕತೆಯನ್ನು ಗ್ರಹಿಸುವುದರ ಜೊತೆಗೆ, ಸ್ವತಃ ಒಂದು ಊಟವೆಂದೆನಿಸೊಳ್ಳಲು ಬಹಳ ಸಣ್ಣದಾದ ಉಚ್ಛಿಷ್ಟ ತುಣುಕುಗಳನ್ನು ಸೇರಿಸಲು ಸ್ಟಾಕ್‍ಗಳು ಮತ್ತು ಬ್ರಾತ್‍ಗಳು ಅತ್ಯುತ್ತಮ ಅಡಿಪಾಯವಾಗಿರುತ್ತವೆ. ಕ್ಯಾಸರೋಲ್‍ಗಳು, ಪಾಯೇಯಾ, ಫ಼್ರೈಡ್ ರೈಸ್, ಶೆಪರ್ಡ್ ಪೈಸ್, ಮತ್ತು ಪೀಟ್ಸಾವನ್ನು ಕೂಡ ಈ ಉದ್ದೇಶಕಾಗಿ ಬಳಸಬಹುದು, ಮತ್ತು ಇವನ್ನು ಉಚ್ಛಿಷ್ಟವನ್ನು ಮರುಬಳಸುವ ಸಾಧನವಾಗಿ ಆವಿಷ್ಕರಿಸಲಾಗಿರಬಹುದು. ಅಮೇರಿಕನ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಲ್ಲಿ, ಉಚ್ಛಿಷ್ಟ ಪೀಟ್ಸಾ ಸ್ವತಃ ವಿಶಿಷ್ಟ ಗುಂಪಿನೊಳಗಿನ ಮಹತ್ವವನ್ನು ಪಡೆದುಕೊಂಡಿದೆ.