ಋತುಸಂಹಾರಮ್
ಋತುಸಂಹಾರಮ್ ಮಹಾಕವಿ ಕಾಳಿದಾಸನ ಆರಂಭಿಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಒಂದು ಸಂಸ್ಕೃತ ಖಂಡಕಾವ್ಯವಾಗಿದೆ. ಪ್ರತಿ ಋತುವಿಗೆ ಒಂದು ಸರ್ಗದಂತೆ ೬ ಸರ್ಗಗಳನ್ನು ಹೊಂದಿರುವ ಈ ಕಾವ್ಯವು ಗ್ರೀಷ್ಮ ಋತುವಿನಿಂದ ಹಿಡಿದು ವಸಂತ ಋತುವಿನವರೆಗಿನ ವರ್ಣನೆಗಳನ್ನು ಹೊಂದಿದೆ.ಈ ಕಾವ್ಯ ಆರು ಸರ್ಗಗಳು ಮತ್ತು 155 ಪದ್ಯಗಳನ್ನು ಒಳಗೊಂಡಿದೆ. ಇದನ್ನು ಸಾಮಾನ್ಯವಾಗಿ ಕಾಳಿದಾಸನ ಮೊದಲ ಕೃತಿ ಎಂದು ಪರಿಗಣಿಸಲಾಗಿದೆ.[೧][೨][೩] ಈ ಕೃತಿ ಲ್ಯಾಟಿನ್, ಫ್ರೆಂಚ್ ಮತ್ತು ಜರ್ಮನ್‌ನಂತಹ ವಿದೇಶಿ ಭಾಷೆಗಳಲ್ಲಿ ಮತ್ತು ಹಿಂದಿ, ಬಂಗಾಳಿ ಮತ್ತು ಮಲೆಯಾಳದಂಥ ದೇಶಿ ಭಾಷೆಗಳಲ್ಲಿ ಮತ್ತು ಕನ್ನಡದಲ್ಲಿ ಅತ್ಯಂತ ವಿದ್ವತ್ಪೂರ್ಣವಾಗಿ ಅನುವಾದಿಸಲ್ಪಟ್ಟಿದೆ.[೪]
ವಿಷಯವಸ್ತು
[ಬದಲಾಯಿಸಿ]ಈ ಕಾವ್ಯದ ಕಥಾವಸ್ತು ಪ್ರೇಮಿಯೊಬ್ಬನು ತನ್ನ ಪ್ರೇಯಸಿಗೆ ಭಾರತೀಯ ಹಿನ್ನೆಲೆಯ ಋತುಮಾನಗಳಾದ ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಮತ್ತು ವಸಂತ ಎಂಬ ಆರು ಋತುಗಳನ್ನು ವಿವರಿಸುವ ಬಗೆಗಿದೆ. ಈ ಕಾವ್ಯವು ಪ್ರತಿ ಋತುವಿಗೆ ಒಂದರಂತೆ ಆರು ಚರಣಗಳನ್ನು ಒಳಗೊಂಡಿದೆ. ಋತುಗಳ ಬದಲಾವಣೆ ಪುರುಷರು ಮತ್ತು ಮಹಿಳೆಯರ ಭಾವನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅದು ಪ್ರೇಮಿಗಳ ಪ್ರೇಮಸಂಬಂಧಕ್ಕೆ ಯಾವ ರೀತಿಯಲ್ಲಿ ಅವಕಾಶಗಳನ್ನು ಒದಗಿಸುತ್ತದೆ ಎಂಬುದನ್ನು ಈ ಕಾವ್ಯ ವಿವರಿಸುತ್ತದೆ.
ಇಲ್ಲೊಬ್ಬಳು ತರುಣಿ,
ಪರಿಮಳವ ಸೂಸಿ ಬಾಡಿದ
ಹೂದಂಡೆಯನು ದಟ್ಟ ಮೋಡದ ಹಾಗಿರುವ
ಕೂದಲ ರಾಶಿಯ ತುರುಬಿಂದ ತೆಗೆಯುತಲಿಹಳು.
ಎದೆಯ ಭಾರಕೆ ನಲುಗಿ ಬಾಗುತಿರುವಂತೆ
ಬಗ್ಗಿಸಿದ ತಲೆಯನೆತ್ತಿ ಮತ್ತೊಮ್ಮೆ
ತುರುಬನ್ನು ಕಟ್ಟಿಕೊಳ್ಳುತಲಿಹಳು!
ಅನುವಾದ: ಕೇಶವ ಮಳಗಿ
ಉಲ್ಲೇಖಗಳು
[ಬದಲಾಯಿಸಿ]- ↑ Ritusamhara, transl. Manish Nandy, Dialogue Publications, Calcutta, 1970
- ↑ Rajendra Tandon (translator) (2008). Ritusamhara (The garland of seasons). Rupa & co.
{{cite book}}:|author=has generic name (help) - ↑ Lienhard, Siegfried (1984). A History of Classical Poetry: Sanskrit, Pali, Prakrit (A History of Indian Literature Vol. III), pp. 107-108. Otto Harrassowitz, Wiesbaden.
- ↑ "Rutugala henige : Kalidasana Rutusamharam (Kannada)".
- ↑ "ಋತುಸಂಹಾರ: ನಿಸರ್ಗ ಲೀಲೆಯ ಭಾವಗೀತೆ".