ಊತಕ ಕೃಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವಿದೇಹದ ಯಾವುದೇ ಊತಕವನ್ನು ಸೋಂಕು ತಗಲದ ಪೋಷಣ ಮಾಧ್ಯಮದಲ್ಲಿ ಬೆಳೆಸಬಹುದಾಗಿದೆ. ಇದುವೇ ಊತಕ ಕೃಷಿ (ಟಿಸ್ಯುಕಲ್ಚರ್). ಅಗಾರ್ ಎಂಬ ಶರ್ಕರ ವಸ್ತುವಿನ ಮಾಧ್ಯಮದಲ್ಲಿ ಬೆಳವಣಿಗೆಗೆ ಪುಷ್ಟಿಕೊಡುವ ಪದಾರ್ಥಗಳು, ಖನಿಜಾಂಶಗಳು, ವಿಟಮಿನ್ ಗಳು ಮತ್ತು ಹಾರ್ಮೋನ್ ಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸಬೇಕು. ಅನಂತರ ಆಮ್ಲೀಯತೆಯ ಮಟ್ಟ pHಅನ್ನು ಸ್ಥಿರಪಡಿಸಿಕೊಳ್ಳಬೇಕು. ನಿಯಮಿತ ಉಷ್ಣತೆ, ಬೆಳಕು ಮತ್ತು ಆರ್ದ್ರತೆಗಳನ್ನು ಕಾಯ್ದುಕೊಳ್ಳಬೇಕು. ಕೋಶ ವಿಭಜನೆ ಮತ್ತು ಅಭಿವರ್ಧನೆಗೆ ಬೇಕಾದ ವಸ್ತುಗಳು ದೊರೆತಾಗ ಕೋಶಗಳ ಸತತ ವಿಭಜನೆ ನಡೆದು ಒಂದೇ ರೀತಿಯ ಕೋಶಗಳ ಗುಂಪು - ಕ್ಯಾಲಸ್ - ಉಂಟಾಗುವುದು. ಇದರಿಂದ ಮುಂದೆ ಊತಕ ಹಾಗು ಅಂಗಗಳ ವಿಭೇದೀಕರಣ ನಡೆಯಲು ಸೈಟೊಕೈನಿನ್ ಹಾಗು ಆಕ್ಸಿನ್ ಎಂಬ ಹಾರ್ಮೋನ್ ಗಳನ್ನು ಸೂಕ್ತಪ್ರಮಾಣದಲ್ಲಿ ಸೇರಿಸಿಕೊಳ್ಳಬೇಕು.

೧೯೫೩ರಲ್ಲಿ ಸ್ಟೀವರ್ಡ್ ಎಂಬುವರು ಮೊದಲಾಗಿ ಕ್ಯಾರೆಟ್ ಗಿಡದ ಬೇರಿನ ಆಹರ ವಾಹಕಕೋಶಗಳ ಊತಕ ಕೃಷಿ ನಡೆಸಿದರು. ಈಗ ಊತಕ ಕೇಷಿಯೊಂದು ಉದ್ಯಮವಾಗಿ ಬೆಳೆದಿದೆ. ತದ್ರೂಪಿ (ಕ್ಲೋನ್)ಗಳೇ ಆಗಿವೆ. ಆದುದರಿಂದ ಉತ್ತಮ ತಳಿಯ ಬಾಳೆ, ಮಾವು, ಕಾಫಿ, ಕಾಳುಮೆಣಸು, ಲವಂಗ, ಏಲಕ್ಕಿ ಮೊದಲಾದ ಗಿಡಗಳನ್ನು ಊತಕ ಕೃಷಿಯಿಂದ ಪಡೆಯುತ್ತಾರೆ. ಅರಣ್ಯ ವಿಸ್ತಾರಕ್ಕೆ ಬೇಕಾಗುವ ನೀಲಗಿರಿ, ಅಕೇಶಿಯಾ, ಬೂರುಗ ಮೊದಲಾದ ಸಸಿಗಳನ್ನು ಕಡಿಮೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಊತಕ ಕೃಷಿಯಿಂದ ಪಡೆಯಬಹುದು. ಆರ್ಕಿಡ್ ನಂಥ ಅಲಂಕಾರ ಸಸ್ಯಗಳ ದೊಡ್ಡ ಪ್ರಮಾಣದ ಉತ್ಪಾದನೆಯಲ್ಲೂ ಊತಕ ಕೃಷಿ ಉಪಯೋಗವಾಗುತ್ತಿದೆ.

"https://kn.wikipedia.org/w/index.php?title=ಊತಕ_ಕೃಷಿ&oldid=818711" ಇಂದ ಪಡೆಯಲ್ಪಟ್ಟಿದೆ