ಉಷಾ ಪ್ರಸಾದ್

ವಿಕಿಪೀಡಿಯ ಇಂದ
Jump to navigation Jump to search

ಪರಿಚಯ[ಬದಲಾಯಿಸಿ]

  1. ಮೂಲತಃ ಬೆಂಗಳೂರುವರಾದ ಶ್ರೀಮತಿ ಉಷಾ ಪ್ರಸಾದ್ ಬಿ.ಎ. ಪದವೀಧರೆ.
  2. ಇವರ ತಂದೆ ಕರ್ನಾಟಕದ ಡೆಪ್ಯುಟಿ ಆಫ್ ಹೆಲ್ತ್ ಆಗಿದ್ದ ಡಾ.ಬಿ.ಎಸ್.ವೆಂಕಟಶಾಮಣ್ಣನವರು.
  3. ೧೯೯೬ರಲ್ಲಿ ಸುಪ್ರಸಿದ್ಧ ನಿರ್ಮಾಪಕ, ನಿರ್ದೇಶಕ, ನಟರಾಗಿದ್ದ ಪದ್ಮಶ್ರೀ ಆರ್.ನಾಗೇಂದ್ರರಾವ್ ಇವರ ದ್ವಿತೀಯ ಪುತ್ರ.
  4. ಖಾತ್ಯ ಛಾಯಾಗ್ರಾಹಕ ಆರ್.ಎನ್.ಕೃಷ್ಣಪ್ರಸಾದ್ ಕೈಹಿಡಿದ ಮೇಲೆ ಚೆನ್ನೈ ಇವರ ವಾಸಸ್ಥಳವಾಯಿತು.

ಕೃತಿಗಳು[ಬದಲಾಯಿಸಿ]

  1. 'ಸ್ಲಿಮ್ ಸುಂದರಿ', 'ಮೌನವೇ ಆಭರಣ', ‘ಅತಿಥಿ ದೇವೋಭವ' ಮೊದಲಾದ ಹಾಸ್ಯ ಲೇಖನಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
  2. ಈ ಲೇಖಕಿ ರಚಿಸಿದ 'ಬಿರುಗಾಳಿ' ನಾಟಕ ಚೆನ್ನೈ ಕನ್ನಡ ಕೂಟದಲ್ಲಿ ಪ್ರದರ್ಶಿತವಾಗಿ ಅಪಾರ ಯಶಸ್ಸುಗಳಿಸಿದೆ. ಇದೇ ನಾಟಕ 'ನೈವೇಲಿ ಕನ್ನಡ ನಾಟಕ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಗಳಿಸಿ ಹಿರಿಯ ಸಾಹಿತಿಗಳಾದ ದಿ.ದಾಶರಥಿ ದೀಕ್ಷಿತ್ ಹಾಗೂ ನಾ.ಡಿಸೋಜ ಇವರಿಂದ ಶ್ಲಾಘಿಸಲ್ಪಟ್ಟಿದೆ.
  3. ಉಷಾರವರ ಕಥೆಗಳು, ನಾಟಕಗಳು, ಹಾಸ್ಯಲೇಖನಗಳು ಕಿರುಕಾದಂಬರಿಗಳು ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕತವಾಗಿದೆ.
  4. 'ಕರ್ತವ್ಯ', 'ನನ್ನ ಸಂಸಾರ ಆನಂದಸಾಗರ', 'ಬಿರುಗಾಳಿ', 'ಶುಭಸ್ಯ ಶೀಘ್ರಂ' ಚೆನ್ನೈ ಹಾಗೂ ಬೆಂಗಳೂರು ದೂರದರ್ಶನಗಳಲ್ಲಿ ಪ್ರಸಾರವಾಗಿದೆ.
  5. ಇವರ ಕಾದಂಬರಿಗಳು 'ಹಂಸರಾಗ' ಹಾಗೂ 'ತರಂಗ'ಗಳಲ್ಲಿ ಪ್ರಕಟವಾಗಿವೆ.
  6. 'ಜರತಾರಿಲಂಗ ' ಕಥಗೆ ತುಷಾರ - ಎಚ್.ಎಂ.ಟಿ. ಬಹುಮಾನ ದೊರಕಿದೆ.