ಉಷಾ ಪ್ರಸಾದ್
ಗೋಚರ
ಪರಿಚಯ
[ಬದಲಾಯಿಸಿ]- ಮೂಲತಃ ಬೆಂಗಳೂರುವರಾದ ಶ್ರೀಮತಿ ಉಷಾ ಪ್ರಸಾದ್ ಬಿ.ಎ. ಪದವೀಧರೆ.
- ಇವರ ತಂದೆ ಕರ್ನಾಟಕದ ಡೆಪ್ಯುಟಿ ಆಫ್ ಹೆಲ್ತ್ ಆಗಿದ್ದ ಡಾ.ಬಿ.ಎಸ್.ವೆಂಕಟಶಾಮಣ್ಣನವರು.
- ೧೯೯೬ರಲ್ಲಿ ಸುಪ್ರಸಿದ್ಧ ನಿರ್ಮಾಪಕ, ನಿರ್ದೇಶಕ, ನಟರಾಗಿದ್ದ ಪದ್ಮಶ್ರೀ ಆರ್.ನಾಗೇಂದ್ರರಾವ್ ಇವರ ದ್ವಿತೀಯ ಪುತ್ರ.
- ಖಾತ್ಯ ಛಾಯಾಗ್ರಾಹಕ ಆರ್.ಎನ್.ಕೃಷ್ಣಪ್ರಸಾದ್ ಕೈಹಿಡಿದ ಮೇಲೆ ಚೆನ್ನೈ ಇವರ ವಾಸಸ್ಥಳವಾಯಿತು.
ಕೃತಿಗಳು
[ಬದಲಾಯಿಸಿ]- 'ಸ್ಲಿಮ್ ಸುಂದರಿ', 'ಮೌನವೇ ಆಭರಣ', ‘ಅತಿಥಿ ದೇವೋಭವ' ಮೊದಲಾದ ಹಾಸ್ಯ ಲೇಖನಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
- ಈ ಲೇಖಕಿ ರಚಿಸಿದ 'ಬಿರುಗಾಳಿ' ನಾಟಕ ಚೆನ್ನೈ ಕನ್ನಡ ಕೂಟದಲ್ಲಿ ಪ್ರದರ್ಶಿತವಾಗಿ ಅಪಾರ ಯಶಸ್ಸುಗಳಿಸಿದೆ. ಇದೇ ನಾಟಕ 'ನೈವೇಲಿ ಕನ್ನಡ ನಾಟಕ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಗಳಿಸಿ ಹಿರಿಯ ಸಾಹಿತಿಗಳಾದ ದಿ.ದಾಶರಥಿ ದೀಕ್ಷಿತ್ ಹಾಗೂ ನಾ.ಡಿಸೋಜ ಇವರಿಂದ ಶ್ಲಾಘಿಸಲ್ಪಟ್ಟಿದೆ.
- ಉಷಾರವರ ಕಥೆಗಳು, ನಾಟಕಗಳು, ಹಾಸ್ಯಲೇಖನಗಳು ಕಿರುಕಾದಂಬರಿಗಳು ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕತವಾಗಿದೆ.
- 'ಕರ್ತವ್ಯ', 'ನನ್ನ ಸಂಸಾರ ಆನಂದಸಾಗರ', 'ಬಿರುಗಾಳಿ', 'ಶುಭಸ್ಯ ಶೀಘ್ರಂ' ಚೆನ್ನೈ ಹಾಗೂ ಬೆಂಗಳೂರು ದೂರದರ್ಶನಗಳಲ್ಲಿ ಪ್ರಸಾರವಾಗಿದೆ.
- ಇವರ ಕಾದಂಬರಿಗಳು 'ಹಂಸರಾಗ' ಹಾಗೂ 'ತರಂಗ'ಗಳಲ್ಲಿ ಪ್ರಕಟವಾಗಿವೆ.
- 'ಜರತಾರಿಲಂಗ ' ಕಥಗೆ ತುಷಾರ - ಎಚ್.ಎಂ.ಟಿ. ಬಹುಮಾನ ದೊರಕಿದೆ.