ವಿಷಯಕ್ಕೆ ಹೋಗು

ಉಲ್ಕಾವೃಷ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರಾಯನಿಡ್ ಉಲ್ಕಾವೃಷ್ಟಿಯ ಅವಧಿಯಲ್ಲಿ ರಾತ್ರಿ ಆಕಾಶ

ಉಲ್ಕಾವೃಷ್ಟಿಯು ರಾತ್ರಿ ಆಕಾಶದಲ್ಲಿ ಒಂದು ಬಿಂದುವಿನಿಂದ ಅನೇಕ ಉಲ್ಕೆಗಳು ಉತ್ಪತ್ತಿಯಾದಂತೆ ಕಾಣುವ ಒಂದು ಖಗೋಳ ಘಟನೆ. ಈ ಉಲ್ಕೆಗಳಿಗೆ ಕಾರಣ ಸಮಾನಾಂತರ ಪಥಗಳ ಮೇಲೆ ವಿಪರೀತವಾದ ಅತಿವೇಗದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸುವ, ಉಲ್ಕಾಕಲ್ಪಗಳೆಂದು ಕರೆಯಲಾದ, ಬಾಹ್ಯಾಕಾಶದ ಭಗ್ನಾವಶೇಷಗಳ ಪ್ರವಾಹ. ಬಹುತೇಕ ಉಲ್ಕೆಗಳು ಮರಳಿನ ಒಂದು ಕಣಕ್ಕಿಂತ ಚಿಕ್ಕದಾಗಿರುತ್ತವೆ, ಹಾಗಾಗಿ ಬಹುತೇಕ ಎಲ್ಲವೂ ವಿಘಟಿತವಾಗುತ್ತವೆ ಮತ್ತು ಭೂಮಿಯ ಮೇಲ್ಮೈಯನ್ನು ಎಂದಿಗೂ ಮುಟ್ಟುವುದಿಲ್ಲ.

  • ಯಾವುದೇ ಉಲ್ಕಾವೃಷ್ಟಿಯ ಸಮಯವನ್ನು ಲೆಕ್ಕ ಹಾಕಲು ಬೇರೆ ಬೇರೆ ಮಾಹಿತಿಗಳು ಅಗತ್ಯವಾಗುತ್ತವೆ.ಉದಾಹರಣೆಗೆ ಧೂಮಕೇತುವಿನ ಕಕ್ಷೆಯ ಪರ್ವಬಿಂದುವಿನ ಕನಿಷ್ಟ ದೂರ,ಧೂಳಿನ ಸಮೂಹ ಚಲನೆ,ಅಕಸ್ಮಾತ್ ಗುರುಗ್ರಹದಂತಹ ದೊಡ್ಡ ಕಾಯ ಹಾದುಹೋಗಿದ್ದರೆ ಅದರಿಂದ ಚಲನೆಯಲ್ಲಿ ಉಂಟಾಗುವ ಕ್ಷೋಭೆ-ಹೀಗೆ.ಇವೆಲ್ಲವೂ ಸೇರಿ ಗರಿಷ್ಟ ಉಲ್ಕೆಗಳ ಅಂದರೆ ಧೂಳು ಮತ್ತು ಭೂಮಿಯ ನಡುವಿನ ಕನಿಷ್ಟ ಅಂತರದ ಸಮಯವನ್ನು ಲೆಕ್ಕ ಹಾಕಬಹುದು.ಇದಾದ ಮೇಲೆ ಆ ಸಮಯದಲ್ಲಿ ಯಾವ ಭೂ ಭಾಗದಲ್ಲಿ ಮುಂಜಾವು ಆಗುತ್ತದೆಯೋ ಅಲ್ಲಿ ಮಾತ್ರ ಗರಿಷ್ಟ ಕಾಣುತ್ತದೆ ಎಂದು ಘೋಷಿಸಬಹುದು.
  • ಸಂಜೆಗಿಂತ ಮುಂಜಾವಿನಲ್ಲೇ ಹೆಚ್ಚು ಉಲ್ಕೆಗಳು ಕಾಣುತ್ತವೆ.ಏಕೆಂದರೆ ಉಲ್ಕಾ ಕಣವೊಂದು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಕೂಡಲೇ ಅದಕ್ಕೆ ತನ್ನ ವೇಗದ ಜೊತೆಗೆ ಭೂಮಿಯ ಆವರ್ತನದ ವೇಗವೂ ದೊರಕುತ್ತದೆ.ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವ ಕಾರಣ ಈ ವೇಗವೂ ಅದೇ ದಿಕ್ಕಿನಲ್ಲಿ ಅಂದರೆ ಪೂರ್ವ ದಿಕ್ಕಿಗೆ ಇರುತ್ತದೆ.ಆದ್ದರಿಂದ ಎಲ್ಲ ಉಲ್ಕೆಗಳನ್ನೂ ಪೂರ್ವಕ್ಕೆ ತಳ್ಳಿದಂತಾಗುತ್ತದೆ.ಪೂರ್ವದಲ್ಲಿ ಅಂದರೆ ಸೂರ್ಯೋದಯಕ್ಕೆ ಸಿದ್ಧವಾಗಿರುವ ವೀಕ್ಷಕನಿಗೆ ಪಶ್ಚಿಮದಲ್ಲಿ ನಿಂತ ವೀಕ್ಷಕನಿಗಿಂತ ಹೆಚ್ಚು ಉಲ್ಕೆಗಳನ್ನು ಕಾಣುವ ಅವಕಾಶ ಸಿಗುತ್ತದೆ.



ಉಲ್ಲೇಖ

[ಬದಲಾಯಿಸಿ]


[]

  1. ಬಾಲಂಕ್ರತ ಚುಕ್ಕಿ ಧೂಮಕೇತು,ಬಿ.ಎಸ್.ಶೈಲಜಾ,ನವಕರ್ನಾಟಕ ಪ್ರಕಾಶನ,ಮುದ್ರಣ ೨೦೧೩,ಪುಟ ಸಂಖ್ಯೆ೮೯