ಉಮಾನಾಥ ಎ. ಕೋಟ್ಯಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಮಾನಾಥ ಎ. ಕೋಟ್ಯಾನ್

ಶಾಸಕರು, ಕರ್ನಾಟಕ ವಿಧಾನಸಭೆ
ಹಾಲಿ
ಅಧಿಕಾರ ಸ್ವೀಕಾರ 
2018
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ
ಪೂರ್ವಾಧಿಕಾರಿ ಅಭಯಚಂದ್ರ ಜೈನ್
ಮತಕ್ಷೇತ್ರ ಮೂಡುಬಿದಿರೆ
ವೈಯಕ್ತಿಕ ಮಾಹಿತಿ
ಜನನ 15-06- 1951
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ವೃತ್ತಿ ರಾಜಕಾರಣಿ

ಉಮಾನಾಥ ಎ. ಕೋಟ್ಯಾನ್ ಅವರು ಕರ್ನಾಟಕ ವಿಧಾನಸಭೆಯ ಶಾಸಕರು ಹಾಗೂ ಭಾರತೀಯ ಜನತಾ ಪಕ್ಷದ ಸದಸ್ಯರು. ಪ್ರಸ್ತುತ ಮೂಲ್ಕಿ ಮೂಡುಬಿದಿರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಜೂನ್ 15, 1960 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಬ್ಬೆಟ್ಟು ಮೇರಮಜಲು ಎಂಬಲ್ಲಿ ಇವರ ಜನನವಾಯಿತು. ಇವರ ತಂದೆ ಐತಪ್ಪ ಕೋಟ್ಯಾನ್ ಹಾಗೂ ತಾಯಿ ನಾಗಮ್ಮ. ಅವರು ಕೃಷಿ ಜೀವನ ನಡೆಸುತ್ತಿದ್ದರು. ಸ್ಥಳೀಯ ಶಾಲೆಯಲ್ಲೇ ಶಾಲಾ ಶಿಕ್ಷಣ ಪಡೆದ ಅವರು, ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ತಮ್ಮ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದರು.

ವೃತ್ತಿ ಜೀವನ[ಬದಲಾಯಿಸಿ]

ಚೆನ್ನೈನಲ್ಲಿ ಭಾರತೀಯ ಸೇನೆಯ MEG ವಿಂಗ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು, ಅಲ್ಲಿ ನಡೆದ ಒಂದು ಅಪಘಾತದ ಬಳಿಕ, ನಿವೃತ್ತಿ ಪಡೆದು ಮಂಗಳೂರಿಗೆ ವಾಪಾಸಾದರು. ನಂತರ ಊರಿನಲ್ಲಿಯೇ ಇದ್ದುಕೊಂಡು ಗುತ್ತಿಗೆದಾರರಾಗಿ ವೃತ್ತಿ ಜೀವನ ಮುಂದುವರೆಸಿದರು.

ರಾಜಕೀಯ ಜೀವನ[ಬದಲಾಯಿಸಿ]

ಅವರು ಉತ್ತಮ ಭಾಷಣಕಾರರಾಗಿದ್ದರು ಮತ್ತು ಪ್ರಮುಖವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಷಣಗಳನ್ನು ನೀಡುತ್ತಿದ್ದರು. ಇದನ್ನು ಗಮನಿಸಿದ ಅಂದಿನ ಸಚಿವ ಕೃಷ್ಣ ಜೆ. ಪಾಲೇಮಾರ್, ಅವರನ್ನು ರಾಜಕೀಯಕ್ಕೆ ಎಳೆತಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಕೆಲವೇ ಸಮಯದಲ್ಲಿ ಇವರನ್ನು ಬಿಜೆಪಿಯ ಮಂಗಳೂರು ಉತ್ತರ ಕ್ಷೇತ್ರದ ಅಧ್ಯಕ್ಷರಾಗಿ ನಿಯುಕ್ತಿಗೊಂಡರು.[೧]

2011 ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದ ಇವರು, 2013 ರವರೆಗೆ ಆ ಜವಾಬ್ದಾರಿಯನ್ನು ವಹಿಸಿಕೊಂಡರು. ಅದೇ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಮೂಲ್ಕಿ ಮೂಡುಬಿದಿರೆ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅವರು, ಅಭಯಚಂದ್ರ ಜೈನ್ ವಿರುದ್ಧ ಸೋತರು. 2018 ರಲ್ಲಿ ಮತ್ತೊಮ್ಮೆ ಬಿಜೆಪಿ ಟಿಕೆಟ್ ಪಡೆದ ಅವರು, ಮಾಜಿ ಸಚಿವ ಅಭಯಚಂದ್ರ ಜೈನ್ ವಿರುದ್ಧ 30 ಸಾವಿರ ಮತಗಳ ಅಂತರದಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾದರು. 2023ರಲ್ಲಿ ಮತ್ತೊಮ್ಮೆ ಗೆದ್ದು, ಸತತ ಎರಡನೇ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು.

ಕಲೆ-ನಟನೆ[ಬದಲಾಯಿಸಿ]

ಬದುಕೊಂಜಿ ಕಬಿತೆ, ಚಾಲಿಪೊಲಿಲು, ಎಕ್ಕಸಕ ಸೇರಿದಂತೆ 10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಇವರು, 100 ಕ್ಕೂ ಹೆಚ್ಚು ನಾಟಕಗಳಲ್ಲೂ ಅಭಿನಯಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. https://myneta.info/karnataka2018/candidate.php?candidate_id=6617