ವಿಷಯಕ್ಕೆ ಹೋಗು

ಉಪ್ಪುನೀರಿನ ಮಾವಿನಕಾಯಿ ಚಟ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾವಿನಕಾಯಿ ಚಟ್ನಿ ಇದು ನೀರಲ್ಲಿ ಹಾಕಿಟ್ಟ ಕಾಯಿ ಮಾವಿನಕಾಯಿಯನ್ನು ಉಪಯೋಗಿಸಿ ಮಾಡುವ ಒಂದು ಬಗೆಯ ಚಟ್ನಿ. ತುಳುನಾಡಲ್ಲಿ ಮಾವಿನಕಾಯಿ ಆಗುವ ಸಮಯದಲ್ಲಿ ಅದನ್ನು ಉಪ್ಪು ನೀರಲ್ಲಿ ಹಾಕಿ ಮಳೆಗಾಲಕ್ಕೆ ಶೇಖರಿಸಿ ಇಡುತ್ತಿದ್ದರು ಅದನ್ನು ಮಳೆಗಾಲದಲ್ಲಿ ಬೇಕಾದಾಗ ತೆಗೆದು ಚಟ್ನಿ ಮಾಡುತ್ತಾರೆ.

ಉಪ್ಪುನೀರಿನ ಮಾವಿನಕಾಯಿ

[ಬದಲಾಯಿಸಿ]

ಬೇಸಿಗೆಯಲ್ಲಿ ಮಾವಿನಕಾಯಿ ಜಾಸ್ತಿ ಸಿಗುವ ಸಮಯದಲ್ಲಿ ಮಾವಿನಕಾಯಿನ್ನು ಕಿತ್ತು ತಂದು ಕುದಿಯುವ ಉಪ್ಪು ನೀರಲ್ಲಿ ಹಾಕಿ ಜಾಸ್ತಿ ಬೇಯುವ ಮೊದಲೆ ತೆಗೆದು ಚೆನ್ನಾಗಿ ಆರಲು ಬಿಡಬೇಕು ಉಪ್ಪು ನೀರನ್ನೂ ತಣ್ಣಗಾಗಲು ಬಿಟ್ಟು ಎರಡೂ ಚೆನ್ನಾಗಿ ತಣ್ಣಗಾದ ಮೇಲೆ ಭರಣಿಯಲ್ಲಿ ಆ ಮಾವಿನಕಾಯಿಯನ್ನು ತುಂಬಿಸಿ ಅದರ ಮೇಲೆ ತಣ್ಣಗಾದ ಉಪ್ಪು ನೀರನ್ನು ಹೊಯ್ಯಿದು ಭರಣಿಯ ಮುಚ್ಚಳ ಗಟ್ಟಿ ಮುಚ್ಚಿ ಬಟ್ಟೆಯಿಂದ ಕಟ್ಟಿ ಇಡಬೇಕು ಮಳೆಗಾಲದಲ್ಲಿ (ಆಟಿಡ್) ಉಪಯೋಗ ಮಾಡ ಬಹುದು.

ಬೇಕಾದ ಸಾಮಾನುಲು

[ಬದಲಾಯಿಸಿ]

ಮಾಡುವ ವಿಧಾನ

[ಬದಲಾಯಿಸಿ]

ಮೊದಲು ಒಂದು ಬಾಣಲೆಯಲ್ಲಿ ಮೆಣಸಿನ ಕಾಯಿಯನ್ನು ಹುರಿದು ಜೀರಿಗೆ ಸೇರಿಸಿ ನೀರು ಹಾಕದೆ ರುಬ್ಬಿ ಕೊಳ್ಳಬೇಕು . ಆಮೇಲೆ ಅದಕ್ಕೆ ತೆಂಗಿನ ತುರಿ ಸೇರಿಸಿ ರುಚಿಗೆ ಬೇಕಾದಷ್ಟು ಉಪ್ಪು, ಅರಶಿನ ಸೇರಿಸಿ ರುಬ್ಬಿ ಕೊಳ್ಳಬೇಕು ರುಬ್ಬಿದ ಮೇಲೆ ಅದನ್ನು ಒಂದು ಪಾತ್ರೆಗೆ ಹಾಕಿ ಉಪ್ಪುನೀರಿನ ಮಾವಿನಕಾಯಿಯನ್ನು ಸಣ್ಣಗೆ ತುಂಡು ಮಾಡಿ ಚಟ್ನಿಗೆ ಹಾಕಿ ಚೆನ್ನಾಗಿ ಕಲಸಿ ನಾದಬೇಕು.

ಬೇರೆ ಬಾಷೆಯಲ್ಲಿ ಮಾವಿನಕಾಯಿ ಚಟ್ನಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. "Indian Mango Chutney Recipe". The Daring Gourmet. 5 March 2020. Retrieved 16 July 2022.
  2. "कच्चे आम की हरी चटनी रेसिपी - Green Mango Chutney Banane Ki Vidhi Hindi Me". Hindi Foodviva (in ಹಿಂದಿ). Retrieved 16 July 2022.