ಉದ್ಯಾವರ ಮಾಧವ ಆಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದ್ಯಾವರ ಮಾಧವ ಆಚಾರ್ಯ ಕಥೆಗಾರರಾಗಿ,ಲೇಖಕರಾಗಿ,ಸಹೃದಯ ಕವಿಗಳಾಗಿ,ಯಕ್ಷಲೋಕದ ಯಾತ್ರಿಕರಾಗಿ,ನಟ,ನಿರ್ದೇಶಕರಾಗಿ,ಮೋಡಿ ಮಾಡುವ ಮಾತುಗಾರರಾಗಿ,ಅರ್ಥಶಾಸ್ತ್ರ ಉಪನ್ಯಾಸಕರಾಗಿ ನಾಡಿನಾದ್ಯಂತ ಪ್ರಸಿದ್ಧರು.೨೫-೦೩-೧೯೪೧ರಲ್ಲಿ ಜನಿಸಿದ ಇವರ ತಂದೆ ದಿ. ಲಕ್ಷ್ಮೀನಾರಾಯಣ ಆಚಾರ್ಯ‍ರು ತಮಿಳುನಾಡಿನಲ್ಲಿ ಸಂಸ್ಕೃತ ಉಪನ್ಯಾಸಕಾರಾಗಿದ್ದು, ಸಂಸ್ಕೃತದಲ್ಲಿ 'ರಾಸವಿಲಾಸ'ಎಂಬ ಕೃತಿಯನ್ನು ರಚಿಸಿದ್ದರು.ತಾಯಿ ಯು.ಲಲಿತಾಲಕ್ಮೀ ಕುಶಲಕಲೆಗಳಲ್ಲಿ ಪರಿಣಿತರು. ಮಗನ ಕಲಾ ಬದುಕಿಗೆ ಅಚ್ಚಳಿಯದ ಪ್ರಭಾವ ಬೀರಿದವರು. ಅಲ್ಲಿಂದ ಯಕ್ಷಗಾನ,ಕೋಲ,ನಾಗಮಂಡಲ,ಢಕ್ಕೆಬಲಿ ಮುಂತಾದ ಆರಾಧ್ಯ ಕಲೆಗಳಿಂದ ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಿಕೊಂಡವರು.[೧][೨][೩]

ವಿದ್ಯಾಭ್ಯಾಸ[ಬದಲಾಯಿಸಿ]

ಉಡುಪಿಯ ಸಮೀಪದ ಕಲ್ಯಾಣಪುರದಲ್ಲಿ ಆರಂಭಿಕ ವಿದ್ಯಾಭ್ಯಾಸ ಪಡೆದು, ಎಂಜಿಎಂ ಕಾಲೇಜಿನಿಂದ ಬಿ.ಎ ಪದವಿಯನ್ನೂ,ಬೆಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.[೪]

ವೃತ್ತಿ ಜೀವನ[ಬದಲಾಯಿಸಿ]

ಕುಂದಾಪುರದ ಭಂಡಾರ್ಕಸ್‍ ಕಾಲೇಜಿನಲ್ಲಿ ತಮ್ಮ ಉಪನ್ಯಾಸ ವೃತ್ತಿಯನ್ನು ಆರಂಭಿಸ, ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು,ಕುಂದಾಪುರದ ಬಿ.ಬಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇದೀಗ ಪೂರ್ಣ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.

ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕೊಡುಗೆ[ಬದಲಾಯಿಸಿ]

ಅಧ್ಯಾಪನ ವೃತ್ತಿಗೆ ವಿದಾಯ ಹೇಳಿದ್ದರೂ ಸಾಹಿತ್ಯಿಕವಾಗಿ,ಸಾಂಸ್ಕೃತಿಕವಾಗಿ ಆಚಾರ್ಯರು ಇಂದಿಗೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಮಾಧವ ಆಚಾರ್ಯರು ತಮ್ಮನ್ನು ಕಂಡುಕೊಂಡಿದ್ದು ಸಣ್ಣಕಥೆಗಳ ಮೂಲಕ.

ಕಥಾ ಸಂಕಲನಗಳು

  • ಬಾಗಿದ ಮರ
  • ಭಾಗದೊಡ್ಡಮ್ಮನ ಕಥೆ
  • ಅಪರಾಧ ಸಹಸ್ರಾಣಿ ಕಥೆ[೫]

ಪ್ರಬಂಧ ಸಂಕಲನಗಳು

  • ಬೆಳಕಿನೆಡೆಗೆ
  • ಹಾಡಿ
  • ನೀಡು ಪಾಥೇಯವನು
  • ಸೀಳು ಬಿದಿರಿನ ಸಿಳ್ಳು
  • ರಂಗಪ್ರಬಂಧಗಳು
  • ನೃತ್ಯ ಪ್ರಬಂಧಗಳು
  • ಯಕ್ಷಪ್ರಬಂಧಗಳು
  • ಸಾಹಿತ್ಯ ಸ್ಪಂದನ
  • ಲಘು ಬಿಗು ಪ್ರಬಂಧಗಳು

ಕವನ ಸಂಕಲನಗಳು

  • ರಂಗಸ್ಥಳದ ಕನವರಿಕೆಗಳು
  • ಹೂ ಮಿಡಿ ಹಾಡು

ನಾಟಕಗಳು

  • ಇದ್ದಕ್ಕಿದ್ದಂತೆ ನಾಟಕ
  • ಎದೆಯೊಳಗಣ ದೀಪ
  • ಗೋಡೆ
  • ಕೃಷ್ಣನ ಸೋಲು
  • ರಾಣಿ ಅಬ್ಬಕ್ಕ ದೇವಿ
  • ಗಾಂಧಾರಿ
  • ರಾಧೆ ಎಂಬ ಗಾಥೆ
  • ನೆನಪೆಂಬ ನವಿಲುಗರಿ

ರಂಗಭೂಮಿಯ ಸಾಧನೆ[ಬದಲಾಯಿಸಿ]

ಸಮೂಹ ಎಂಬ ಪರಿಕಲ್ಪನೆಯಲ್ಲಿ ಒಂದು ಲಾಂಛನವನ್ನು ರೂಪಿಸಿ ಸುಮಾರು ೧೯೫೦-೫೧ರಿಂದ ಇದುವರೆಗೆ ಸಂಯೋಜಿಸಿದ, ನಿರ್ದೇಶಿಸಿದ, ನಿರ್ಮಿಸಿದ ರಂಗಪ್ರಯೋಗಗಳು, ರಂಗಭೂಮಿಯ ಅಂಶಗಳನ್ನು ಯಕ್ಷಗಾನದೊಡನೆ ಮೇಳೈಸಿ ಕಲಾತ್ಮಕವಾಗಿ ರೂಪಿಸಿದ ಹಿರಿಮೆ ಇವರದು.

ನೃತ್ಯರೂಪಕಗಳು ಮತ್ತು ನಾಟಕಗಳು[ಬದಲಾಯಿಸಿ]

  • ಅಂಧಯುಗ
  • ಬ್ರಹ್ಮಕಪಾಲ
  • ಅರುಂಧತಿ
  • ಹಂಸ ದಮಯಂತಿ
  • ಶಬರಿ
  • ಅಶ್ವತ್ಥಾಮನ್
  • ಹೆಬ್ಬೆರಳು
  • ಸತ್ಯಾಯನ ಹರಿಶ್ಚಂದ್ರ
  • ಅಹಲ್ಯೆ
  • ಶ್ರೀಹರಿಚರಿತೆ
  • ಹರಿಣಾಭಿಸರಣ
  • ಕುಚೇಲ ಕೃಷ್ಣ
  • ಸೀತಾಪಹರಣ
  • ಚಿತ್ರಾಂಗದೆ
  • ವೃಂದಾವನ
  • ಹರಿದಾಸ ವಿಜಯ
  • ಅವತಾರ ವೈಭವ
  • ಶ್ರೀ ಮನೋಹರ ಬಿಲ್ಲಹಬ್ಬ
  • ಆನಂದ ಮುಕುಂದ
  • ಭಗವದ್ಗೀತಾ ನೃತ್ಯ ವೈಭವ
  • ನವನೀತ ಲಹರಿ
  • ಸಾಕ್ಷಾತ್ಕಾರ
  • ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ
  • ಅರಗಿನ ಬೆಟ್ಟ
  • ಋತುಗೀತೆ
  • ಮುಕ್ತದ್ವಾರ
  • ಶ್ವಮೇಧ
  • ಮಾದ್ರಿಯ ಚಿತೆ
  • ಹೊನ್ನಿಯ ಮದುವೆ
  • ಹಿಡಿಂಬೆ
  • ಮಹಾಯೋಗಿ
  • ಮತ್ತೆ ರಾಮನ ಕತೆ
  • ರುಕ್ಮಿಣೀಶ ವಿಜಯ
  • ನಾರದ ಕೊರವಂಜಿ
  • ಕೀಚಕ ವಧೆ ರೂಪಕ
  • ಉಪನಿಷದುದ್ಯಾನಂ
  • ವಲ್ಮೀಕ ನಿನಾನದ
  • ತಿರುನೀಲಕಂಠ
  • ನೆನಪಾದಳು ಶಕುಂತಲೆ
  • ಕುವರ ಭಸ್ಮಾಸುರ
  • ಪಾಂಚಾಲಿ
  • ಭೀಷ್ಮ ಸತ್ಯವ್ರತನಾದದ್ದು[೬]
  • ಅಂಬೆ
  • ಜ್ವಾಲೆ

ವಿಶೇಷ ಸಾಧನೆಗಳು[ಬದಲಾಯಿಸಿ]

ಮಂಗಳೂರು ಆಕಾಶವಾಣಿಯ ಕಲಾವಿದರಾಗಿರುವ ಇವರ ಸಣ್ಣ ಕಥೆಗಳು, ಗೀತರೂಪಕಗಳು, ಚಿಂತನಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಅಲ್ಲದೆ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದು ಅವುಗಳಲ್ಲಿ ಗುಡ್ಡದ ಭೂತ ಧಾರವಾಹಿಯಲ್ಲಿಯೂ ಪಾತ್ರ ನಿರ್ವಹಿಸಿದ್ದಾರೆ.[೭]

ಗೌರವಗಳು[ಬದಲಾಯಿಸಿ]

  1. ೧೯೯೭ರಲ್ಲಿ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ
  2. ರಂಗಭೂಮಿ ಕಲಾಸಂಸ್ಥೆಯಿಂದ 'ರಂಗವಿಶಾರದ' ಬಿರುದು
  3. ೧೯೯೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ[೮]
  4. ಅಷ್ಟೇ ಅಲ್ಲದೆ ಅನೇಕ ರಂಗಭೂಮಿ, ಸಾಹಿತ್ಯಿಕ,ನೃತ್ಯ ಕಾರ್ಯಕ್ರಮಗಳಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. http://www.thehindu.com/todays-paper/tp-national/tp-karnataka/alleviate-poverty-by-2015-writer/article3062863.ece
  2. http://www.thehindu.com/todays-paper/tp-national/tp-karnataka/sahitya-sammelan-cultural-programmes-begin/article731914.ece
  3. http://www.thehindu.com/todays-paper/tp-national/tp-karnataka/i-took-criticism-in-my-stride-seer/article3241304.ece
  4. http://www.thehindu.com/todays-paper/tp-national/tp-karnataka/udupi-needs-a-museum/article3253011.ece
  5. http://karnatakatemples.kar.nic.in:8080/homepage/html/Karnataka/culture2.htm[ಶಾಶ್ವತವಾಗಿ ಮಡಿದ ಕೊಂಡಿ] Recognized by Karnataka Govt
  6. http://www.thehindu.com/todays-paper/tp-national/tp-karnataka/mulia-award-for-kedlaya/article2862404.ece
  7. http://www.thehindu.com/todays-paper/tp-features/tp-fridayreview/cultural-fiesta/article2272323.ece
  8. "ಆರ್ಕೈವ್ ನಕಲು" (PDF). Archived from the original (PDF) on 2016-03-22. Retrieved 2018-01-05.