ವಿಷಯಕ್ಕೆ ಹೋಗು

ಉದರದರ್ಶಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉದರದರ್ಶಕ ಶಸ್ತ್ರಚಿಕಿತ್ಸೆಯಲ್ಲಿ ಉಪಯೋಗಿಸುವ ಸಾಧನ

ಉದರದರ್ಶಕ ಉದರ(ಹೊಟ್ಟೆ)ದೊಳಗೆ ನೋಡಲು ಮತ್ತು ಶಸ್ತ್ರಕ್ರಿಯೆ ನಡೆಸಲು ನೆರವಾಗುವ ಸಾಧನ. ಹೊಟ್ಟೆಯ ಭಾಗದಲ್ಲಿ ೧ ರಿಂದ ೧.೫ ಮಿ.ಮೀಟರ್‍ನಷ್ಟು ದೊಡ್ಡದಾದ ತೂತು ಮಾಡಿ, ಹೊಟ್ಟೆಯ ಒಳಭಾಗವನ್ನು ವೀಕ್ಷಿಸಲು ಮತ್ತು ಶಸ್ತ್ರಕ್ರಿಯೆ ನಡೆಸಲು ಉಪಯೋಗಿಸುತ್ತಾರೆ. ಇದರಲ್ಲಿ ಮೂರು ರೀತಿಯ ಕೊಳವೆಯಂತಹ ಸಾಧನವಿರುತ್ತದೆ. ಒಂದರಲ್ಲಿ ಬೆಳಕಿನ ಮೂಲ ಹಾಗೂ ಕ್ಯಾಮರವಿದ್ದರೆ,ಉಳಿದೆರಡು ಕೊಳವೆಗಳಲ್ಲಿ ಶಸ್ತ್ರಕ್ರಿಯೆ ನಡೆಸಲು ಉಪಯೋಗಿಸುವ ಸಾಧನಗಿಳಿರುತ್ತವೆ. ಉದರದ ಮೂರುಕಡೆಗಳಲ್ಲಿ ರಂಧ್ರಗಳನ್ನು ಮಾಡಿ ಈ ಕೊಳವೆಗಳನ್ನು ತೂರಿಸಿ ಶಸ್ತ್ರಕ್ರಿಯೆಯನ್ನು ಮಾಡುತ್ತಾರೆ. ನೋವನ್ನು ಕನಿಷ್ಠ ಗೊಳಿಸುವ, ಸೀಳುವ ಅಗತ್ಯವಿಲ್ಲದ, ಬೇಗ ಗುಣವಾಗುವ ಶಸ್ತ್ರಕ್ರಿಯೆಯನ್ನು ಇದರ ಮೂಲಕ ಮಾಡಬಹುದಾಗಿದೆ. ಆದುದರಿಂದ ಇದು ಬಹೂಪಯೋಗಿಯಾಗಿ ವ್ಯಾಪಕವಾಗಿ ಬಳಕೆಯಲ್ಲಿದೆ.

ಹ್ಯಾನ್ಸ್ ಕ್ರಿಶ್ಚಿಯನ್ ಜಾಕೋಬಸ್

ಈ ವಿಧಾನವನ್ನು ಮನುಷ್ಯರಲ್ಲಿ ಪ್ರಯೋಗಿಸಿದವರಲ್ಲಿ ಸ್ವೀಡನ್ ದೇಶದ ಹ್ಯಾನ್ಸ್ ಕ್ರಿಶ್ಚಿಯನ್ ಜಾಕೋಬಸ್ ಪ್ರಥಮರು.[೧]

ಉಲ್ಲೇಖಗಳು

[ಬದಲಾಯಿಸಿ]
  1. Journal of Endourology Hans Christian Jacobaeus: Inventor of Human Laparoscopy and Thoracoscopy

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]