ಉತ್ಸರ್ಗ

ವಿಕಿಪೀಡಿಯ ಇಂದ
Jump to navigation Jump to search

ಉತ್ಸರ್ಗ: (1) ತ್ಯಾಗ, ವರ್ಜನ. (2) ಒಂದು ಮುಖ್ಯವಾದ ಶೋಧನ ಕ್ರಮ. (3) ಅಗ್ನಿಸಾಕ್ಷಿಕವಾಗಿ ಮಾಡುವ ಒಂದು ವಿಹಿತ ಕ್ರಮ. (4) ಶ್ರಾವಣಮಾಸದಲ್ಲಿ ಪ್ರಾರಂಭಿಸಿ ವೇದಾಧ್ಯಯನವನ್ನು ಪುಷ್ಯದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸುವಾಗ ಆಚರಿಸಬೇಕಾದ ಒಂದು ಕರ್ಮ. ಮನುಸ್ಮೃತಿಯಲ್ಲಿ ಹೇಳಿರುವಂತೆ ಪುಷ್ಯಮಾಸ ಬಂದಾಗ ಗ್ರಾಮದ ಹೊರಗೆ ಶಾಸ್ತ್ರಾನುಸಾರವಾಗಿ ಉತ್ಸರ್ಗವೆಂಬ ಕರ್ಮವನ್ನು ಮಾಡಿ ಅನಂತರ ವೇದಾಧ್ಯಯನವನ್ನು ಸ್ವಲ್ಪ ಕಾಲ ನಿಲ್ಲಿಸಬೇಕು. (5) ವ್ಯಾಕರಣಶಾಸ್ತ್ರದಲ್ಲಿ ಒಂದು ಸಾಮಾನ್ಯ ವಿಧಿ; ಇದಕ್ಕೆ ಪ್ರತಿಯಾದುದು ಅಪವಾದ. (ಬಿ.ಕೆ.ಎಸ್.)

"https://kn.wikipedia.org/w/index.php?title=ಉತ್ಸರ್ಗ&oldid=615160" ಇಂದ ಪಡೆಯಲ್ಪಟ್ಟಿದೆ